ಪಠ್ಯದ ವಿಷಯಗಳ ರಂಗ ಪ್ರಯೋಗದಿಂದ ಮಕ್ಕಳಲ್ಲಿ ಕೌಶಲ-ಕಲಿಕೆ ವೃದ್ಧಿ
ಮೈಸೂರು

ಪಠ್ಯದ ವಿಷಯಗಳ ರಂಗ ಪ್ರಯೋಗದಿಂದ ಮಕ್ಕಳಲ್ಲಿ ಕೌಶಲ-ಕಲಿಕೆ ವೃದ್ಧಿ

January 22, 2019

ಮೈಸೂರು: ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನೇ ರಂಗ ಪ್ರಯೋಗಕ್ಕೆ ಒಳಪಡಿಸಿ ಅಭಿನಯ ಸೇರಿದಂತೆ ನಾಟಕ ನಿರ್ಮಾಣದ ವಿವಿಧ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಿದರೆ ಅವರಲ್ಲಿ ಕೌಶಲದ ಬೆಳವಣಿಗೆಯೊಂದಿಗೆ ಪರಿಣಾಮಕಾರಿ ಕಲಿಕೆ ಸಾಧ್ಯವಾಗಲಿದೆ ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನಮನ’ ಸಾಂಸ್ಕೃತಿಕ ಸಂಘಟನೆ ಹಾಗೂನೆಲೆ ಹಿನ್ನೆಲೆ’ ಸಂಘಟನೆ ಸಹಕಾರದೊಂದಿಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ಮೈಸೂರು ವಿಭಾಗೀಯ `ಚಿಣ್ಣರ ಚಿಲುಮೆ-ಮಕ್ಕಳ ನಾಟಕೋತ್ಸವ’ಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಒಂದೊಂದು ಪಾಠಗಳನ್ನು ರಂಗ ಪ್ರಯೋಗಕ್ಕೆ ಅಳ ವಡಿಸಲು ಅವಕಾಶವಿದ್ದು, ಇದು ಮಕ್ಕಳ ಕಲಿಕೆಯ ಗುಣ ಮಟ್ಟ ಹೆಚ್ಚಿಸಲಿದೆ. ಜೊತೆಗೆ ಪ್ರತಿ ಶಾಲೆಯಲ್ಲಿ ನಾಟಕ ಕಲೆಯ ಶಿಕ್ಷಕರನ್ನು ನೇಮಿಸಲು ಸರ್ಕಾರ ಕ್ರಮ ವಹಿಸ ಬೇಕು. ಮುಂದುವರೆದ ಅನೇಕ ದೇಶಗಳಲ್ಲಿ ಶಾಲಾ-ಕಾಲೇಜಿನ ಪಠ್ಯಕ್ಕೆ ಸಂಬಂಧಿಸಿದಂತೆ ರಂಗ ಚಟು ವಟಿಕೆ ನಡೆಸುವ ಪರಿಪಾಠವಿದೆ ಎಂದು ತಿಳಿಸಿದರು.

ರಂಗಭೂಮಿ ಜೀವನದ ಅತ್ಯಂತ ದೊಡ್ಡ ಪಾಠಶಾಲೆ. ನಾಟಕ ಪ್ರದರ್ಶನದಿಂದ ಹಿಡಿದು ಪ್ರದರ್ಶನದ ಟಿಕೆಟ್ ನೀಡುವವರೆಗೂ ಹತ್ತು ಹಲವು ಹಂತಗಳಲ್ಲಿ ರಂಗಭೂಮಿ ಯಲ್ಲಿ ಕೆಲಸ ಮಾಡಬೇಕಾಗುತ್ತದೆ. ರಂಗಭೂಮಿ ನೀಡುವ ಅನುಭವ ಎಲ್ಲಾ ಪದವಿಗಳಿಗಿಂತಲೂ ಹೆಚ್ಚು. ನಾನೂ ಕೂಡ 4 ದಶಕಗಳ ರಂಗ ಚಟುವಟಿಕೆಗಳಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಯಿತು. ಹೀಗಾಗಿ ಶಾಲೆಗಳಲ್ಲಿ ಮಕ್ಕಳ ನಾಟಕಗಳಿಗೆ ಉತ್ತೇಜನ ನೀಡಬೇಕಿದೆ ಎಂದರು.

ಮಕ್ಕಳಲ್ಲಿ ನಾಟಕ ಕಲೆಯ ಬಗ್ಗೆ ಆಸಕ್ತಿ ಬೆಳೆಸಿದರೆ ಅವ ರಲ್ಲಿ ಚಿಂತಿಸುವ ಹಾಗೂ ಅನ್ವೇಷಿಸುವ ಮನೋಭಾವ ಬೆಳೆಯಲಿದೆ. ರಂಗಭೂಮಿಯ ಒಂದೊಂದು ಚಟುವಟಿಕೆ ಗಳೂ ಒಂದೊಂದು ರೀತಿಯಲ್ಲಿ ಸೃಜನಶೀಲತೆ ವೃದ್ಧಿಸು ವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಚಿಣ್ಣರ ಚಿಲುಮೆ ಒಂದು ಉತ್ತಮ ಯೋಜನೆ. ಹೀಗಾಗಿ ನಾಟಕೋತ್ಸವ ವನ್ನು ಕಲಾಮಂದಿರದಲ್ಲಿ ನಡೆಸಿದರೆ ಮಕ್ಕಳೇ ಅಭಿನಯಿ ಸುವ ನಾಟಕಗಳನ್ನು ಹೆಚ್ಚು ಮಕ್ಕಳು ವೀಕ್ಷಿಸಲು ಅನುಕೂಲ ವಾಗಲಿದೆ. ಇದರಿಂದ ಹೆಚ್ಚಿನ ಮಕ್ಕಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಮೂಡಲಿದೆ ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಸ್. ಮಮತಾ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣದಲ್ಲಿ ಈಗಾಗಲೇ ರಂಗಕಲೆಯನ್ನು ಒಂದು ಬೋಧನಾ ವಿಧಾನವಾಗಿ ಅಳವಡಿಸಿಕೊಳ್ಳಲಾಗಿದೆ. ಆದರೆ ಅದರ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವ ರಿಯಾಲಿಟಿ ಶೋಗಳಲ್ಲಿ ಅಭಿನಯಿಸುವ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಭಾವತೀವ್ರತೆ ಕಂಡುಬರುತ್ತಿದೆ.

ಈ ರೀತಿಯ ಮಕ್ಕಳ ನಾಟಕಕ್ಕೆ ವಯಸ್ಸಿಗೆ ಮೀರಿದ ಭಾವ ತೀವ್ರತೆ ಅಭಿನಯ ಅನಿವಾರ್ಯವೇನಲ್ಲ ಎಂದು ಗಮನ ಸೆಳೆದರು. ಕರ್ನಾಟಕ ಬಾಲವಿಕಾಸ ಅಕಾ ಡೆಮಿ ಮಾಜಿ ಅಧ್ಯಕ್ಷರೂ ಆದ ಚಿಣ್ಣರ ಚಿಲುಮೆ ಯೋಜ ನೆಯ ಧಾರವಾಡ ವಿಭಾಗದ ಸಂಚಾಲಕ ಶಂಕರ್ ಹಲಗತ್ತಿ ಮಾತನಾಡಿ, ಮಕ್ಕಳು ಇಂದು ಒತ್ತಡದಲ್ಲಿ ಬಾಲ್ಯ ಕಳೆಯುವಂತಾಗಿದೆ. ಬೆಳಗಾಗುತ್ತಿದ್ದಂತೆ `ಶಾಲೆಗೆ ಹೋಗಲು ಸಮಯ ಮೀರುತ್ತಿದೆ, ಮೇಲೇಳು’ ಎನ್ನುವ ಮಾತು ಗಳಿಂದ ಆರಂಭಗೊಳ್ಳುವ ಒತ್ತಡ ರಾತ್ರಿ ಮಲಗುವವ ರೆಗೂ ಒಂದಲ್ಲಾ ಒಂದು ವಿಚಾರಕ್ಕೆ ಇದ್ದೇ ಇರುತ್ತದೆ. ಇಂತಹ ಒತ್ತಡಮಯ ಬಾಲ್ಯದಲ್ಲಿ ನಲಗುತ್ತಿರುವ ಮಕ್ಕಳನ್ನು ಅದರಿಂದ ಹೊರತರಲು ರಂಗ ಚಟುವಟಿಕೆ ಪೂರಕ ವಾಗಲಿದೆ. ಈ ನಾಟಕೋತ್ಸವ ಮಕ್ಕಳ ರಂಗಭೂಮಿ ಶ್ರೀಮಂತಗೊಳ್ಳಲು ವೇದಿಕೆಯಾಗಲಿದೆ ಎಂದರು.

ಚಿಣ್ಣರ ಚಿಲುಮೆ ಮೈಸೂರು ವಿಭಾಗೀಯ ಸಂಚಾ ಲಕ ಹೆಚ್.ಜನಾರ್ಧನ್ (ಜನ್ನಿ), ಸಂಚಾಲಕ ಕೆ.ಆರ್. ಗೋಪಾಲಕೃಷ್ಣ, ರಂಗಕರ್ಮಿ ಹಾಗೂ ಕಿರುತೆರೆ ನಟ ಶಿವಾಜಿ ರಾವ್ ಜಾಧವ್ ಮತ್ತಿತರರು ಹಾಜರಿದ್ದರು.

Translate »