ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

February 2, 2019

ಮೈಸೂರು: ಸಮಾಜದ ಕಟ್ಟ ಕಡೆಯ ಸಮುದಾಯಗಳಲ್ಲಿ ಒಂದಾಗಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಸಾಮಾ ಜಿಕ ನ್ಯಾಯ ಕಲ್ಪಿಸಿಕೊಡುವ ಅಗತ್ಯವಿದ್ದು, ಈ ಸಂಬಂಧ ಮುಖ್ಯಮಂತಿಗಳ ಗಮ ನಕ್ಕೆ ತರುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿ ದೇವರ ಜಯಂತ್ಯೋತ್ಸವ ಸಮಿತಿ ಸಂಯು ಕ್ತಾಶ್ರಯದಲ್ಲಿ ನಡೆದ `ಶ್ರೀ ಮಡಿವಾಳ ಮಾಚಿದೇವರ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಳಿದ ವರ್ಗಗಳಲ್ಲಿ ಒಂದಾಗಿರುವ ಮಡಿ ವಾಳ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಸಮು ದಾಯದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದು ಳಿದಿದ್ದು, ಇಂದಿಗೂ ಸ್ವತಃ ಸೂರಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಸಮುದಾಯದ ಶೇ.90ರಷ್ಟು ಜನ ಭೂಮಿ ಹೊಂದಿಲ್ಲ. ಈ ಸಮಾಜಕ್ಕೆ ಸರ್ಕಾರದ ನೆರವು ಅಗತ್ಯ. ಒಬ್ಬ ಸಚಿವನಾಗಿ ನಾನು ಸಹ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸುತ್ತೇನೆ. ಈ ಸಂಬಂಧ ಸಿಎಂಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಡಿವಾಳ ಮಾಚಿದೇವರು, ಸಮಾಜ ಕ್ಕಾಗಿ ಶ್ರಮಿಸಿದ ದಾರ್ಶನಿಕರು. ಕೇವಲ ಬಟ್ಟೆ ಶುದ್ಧಿ ಮಾಡದೆ ಸಮಾಜದಲ್ಲಿನ ಕೊಳ ಕನ್ನು ನೀಗಲು ಪಣ ತೊಟ್ಟಿದ್ದರು. ಸಮಾಜ ದಲ್ಲಿನ ಯಾವುದೇ ಶುಭ ಹಾಗೂ ಪುಣ್ಯ ಕಾರ್ಯ ಯಶಸ್ವಿಯಾಗಬೇಕಾದಲ್ಲಿ ಮಡಿ ವಾಳರ ಸಹಕಾರ ಅಗತ್ಯ. ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗುವವರೆಗೂ ಹೋರಾಡಬೇಕು. ಎಲ್ಲ ಸಮಾಜವನ್ನು ಈ ಸಮುದಾಯ ಸಮಾನವಾಗಿ ಕಾಣು ತ್ತದೆ. ಆದರೆ ಏಳಿಗೆ ಸಾಧಿಸುವಲ್ಲಿ ಹಿಂದು ಳಿದಿದೆ. ನಿಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರದ ಸಹಕಾರ ಅನಿವಾರ್ಯ. ಈ ನಿಟ್ಟಿನಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಕೆಲ ಸಮುದಾಯಗಳು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ದೂರ ಉಳಿಯುತ್ತವೆ. ಹಾಗಾಗಿ ಸಂಘ ಟನೆ ಕೊರತೆಯಿಂದ ತಮ್ಮ ಹಕ್ಕು ಪಡೆ ಯಲು ಸಾಧ್ಯವಾಗಿಲ್ಲ. ಒಂದು ಸಮು ದಾಯ ಸಂಘಟನೆಯಲ್ಲಿ ಗಟ್ಟಿಯಾಗಿದ್ದರೆ, ಅದು ಹಕ್ಕುಗಳನ್ನು ಸುಲಭವಾಗಿ ಪಡೆದು ಕೊಳ್ಳಬಹುದು. ಮುಂದಿನ ದಿನಗಳಲ್ಲಿ ಮಡಿವಾಳ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು.ಆಗ ಅವರು ಉನ್ನತ ಹುದ್ದೆ ಅಲಂಕರಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಲ್.ನಾಗೇಂದ್ರ ವಹಿಸಿದ್ದರು. ಜಿ¯್ಲÁ ಪಂಚಾಯತಿ ಹಂಗಾಮಿ ಅಧ್ಯP್ಷÀ ಸಾ.ರಾ. ನಂದೀಶ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಸಾಹಿತಿಗಳಾದ ಶ್ಯಾಮ್ ಸುಂದರ್, ಎಂ.ರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಪಾಲಿಕೆ ಸದಸ್ಯರಾದ ಚಂಪಕ, ನಿರ್ಮಲ ಹರೀಶ್, ಮಡಿವಾಳ ಸಮಾ ಜದ ಅಧ್ಯಕ್ಷ ಚಂದ್ರಶೇಖರ್ ಭೈರಿ ಹಾಗೂ ಸಮಾಜದ ಇನ್ನಿತರೆ ಮುಖಂಡರು ಪಾಲ್ಗೊಂಡಿದ್ದರು.

Translate »