ಜಾತಿ ಜಯಂತಿಗಳಾಗುತ್ತಿವೆ ಮಹಾತ್ಮರ ಜಯಂತಿಗಳು
ಮೈಸೂರು

ಜಾತಿ ಜಯಂತಿಗಳಾಗುತ್ತಿವೆ ಮಹಾತ್ಮರ ಜಯಂತಿಗಳು

February 13, 2019

ಮೈಸೂರು: ಮಹಾ ತ್ಮರ ಜಯಂತಿಗಳು ಇಂದು ಮಾನ ವೀಯ ಜಯಂತಿಗಳಾಗದೇ ಜಾತಿ ಜಯಂತಿಗಳಾಗುತ್ತಿವೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಮಂಗಳವಾರ ಮೈಸೂರಿನ ಕಲಾಮಂದಿರ ದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಮಹನೀಯರ ಜಯಂತಿಗಳು ಜಾತಿ ಜಯಂತಿಗಳಾದರೆ ಮುಂದಿನ ದಿನ ಗಳಲ್ಲಿ ಇದು ಅಪಾಯಕಾರಿ ಎಂದರು.

ಸವಿತಾ ಮಹರ್ಷಿಗಳು ಸಾಮವೇದ ಬರೆದಿದ್ದಾರೆ. ಆಯುರ್ವೇದ ಮತ್ತು ಗಾಯತ್ರಿ ಮಂತ್ರವನ್ನು ಬರೆದಿದ್ದಾರೆ. ಸೂರ್ಯ ತನ್ನ ಪಥ ಬದಲಿಸಲು ಇವರೇ ಕಾರಣ. ಸವಿತಾ ಸಮಾಜದವರ ಚರ್ಮ ವಾದ್ಯ ಇಲ್ಲದಿದ್ದರೆ ದೇವರು ಕೂಡ ಬರು ವುದಿಲ್ಲ. ದೇವರಿಗೂ ದಾರಿ ತೋರು ವವರು ಸವಿತಾ ಸಮಾಜದವರು ಎಂದು ಅಭಿಪ್ರಾಯಪಟ್ಟರು.

ಕ್ಷೌರಿಕನ ಮಗ ಕ್ಷೌರಿಕನಾಗದೇ ದೇಶ ಆಳುವಂತವರಾಗಬೇಕು. ಹೀಗಾಗಿ ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತ ನಾಡಿ, ಸರ್ಕಾರ ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಇದು ಕೇವಲ ಮೆರವಣಿಗೆಗೆ ಸೀಮಿತವಾಗದೆ ಮಹಾತ್ಮರ ವಿಚಾರಗಳನ್ನು ಅರಿತು ಅವರ ಮಾರ್ಗದಲ್ಲಿ ನಡೆದರೆ ಅದು ಮಹಾತ್ಮ ರಿಗೆ ನೀಡುವ ಗೌರವವಾಗುತ್ತದೆ ಎಂದರು.

ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಸವಿತಾ ಮಹರ್ಷಿ ಗಳು ಬ್ರಹ್ಮನ ನಯನದಿಂದ ಜನಿಸಿದ್ದ ರಿಂದ ಬ್ರಹ್ಮ ಅವರಿಗೆ ಸವಿತಾ ಮಹರ್ಷಿ ಎಂದು ನಾಮಕರಣ ಮಾಡಿದರು. ಆಯುಷ್ಕರ್ಮ, ಸಂಗೀತ ನುಡಿಸುವ ಸಾಧನ ಮತ್ತು ಆಯುರ್ವೇದ ಪರಿಕರ ವನ್ನು ಸವಿತಾ ಮಹರ್ಷಿಗಳಿಗೆ ಉಡು ಗೊರೆಯಾಗಿ ನೀಡಿದರು. ಅಂದಿನಿಂದ ಅವರು ಸವಿತಾ ಮಹರ್ಷಿಯಾದರು ಎಂದು ಹೇಳಿದರು.

ಹಿಂದುಳಿದ ಸವಿತಾ ಸಮಾಜಕ್ಕೆ ಮೀಸಲಾತಿ ಬಗ್ಗೆ ಹಿಂದಿನ ಸಿದ್ದರಾ ಮಯ್ಯ ಸರ್ಕಾರ ನೆರವಾಗಿದೆ. ಹಡಪದ ಅಪ್ಪಣ್ಣ ಜಯಂತಿಗೆ ಅವಕಾಶ ನೀಡಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಒತ್ತು ನೀಡಿದ್ದಾರೆ. ಬಜೆಟ್‍ನಲ್ಲಿ ನಿಗಮಕ್ಕೆ ಕನಿಷ್ಟ 25 ಕೋಟಿ ರೂ. ನಿಧಿ ನೀಡ ಬೇಕು. ಒಳಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಸಮಾಜದ ವಿವಿಧ ಸಂಘಟನೆಗಳ ಮುಖಂಡರಾದ ವಿ.ಮಂಜುನಾಥ್, ವಿ.ರಾಜ್‍ಕುಮಾರ್, ಹರೀಶ್, ರಾಮ್‍ಪ್ರಕಾಶ್, ರಾಜೇಶ್, ರಾಮಣ್ಣ, ಬೋಗಾದಿ ಮಹೇಶ್, ಗಣಪತಿ, ಬಾಲು, ರಾಜು, ಮುರಳೀಧರ್ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »