ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಫೆ.13ರಿಂದ 16ರವರೆಗೆ ಭಾರತ `ಎ’ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಭಾರತ ‘ಎ’ ತಂಡದ ಆಟಗಾರ ಪ್ರಿಯಾಂಕ್ ಪಾಂಚಾಲ್ ತಿಳಿಸಿದರು.
ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆವು. ಅದೇ ಪ್ರದರ್ಶನವನ್ನು ಇಲ್ಲೂ ಮುಂದುವರಿಸುವ ವಿಶ್ವಾಸವಿದೆ ಎಂದು ಭಾರತ ತಂಡದ ಆಟಗಾರ ಪ್ರಿಯಾಂಕ್ ಪಾಂಚಾಲ್ ಹೇಳಿದರು. ಕೇರಳದ ವಯನಾಡ್‍ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಹಿಂದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರಿಂದ ಆತ್ಮವಿಶ್ವಾಸ ಹೆಚ್ಚಿದೆ. ಈ ಬಾರಿಯ ರಣಜಿ ಋತುವಿನಲ್ಲೂ ಉತ್ತಮ ಆಟವಾಡಲು ಸಾಧ್ಯವಾಗಿತ್ತು. ಪಂದ್ಯ ದಿಂದ ಪಂದ್ಯಕ್ಕೆ ಪ್ರದರ್ಶನ ಮಟ್ಟ ಉತ್ತಮಪಡಿಸಿಕೊಳ್ಳುವುದು ನನ್ನ ಗುರಿ ಎಂದರು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‍ಗೆ ಸಮಾನ ರೀತಿಯ ನೆರವು ನೀಡುವ ಸಾಧ್ಯತೆಯಿದ್ದು. ಉತ್ತಮ ಹೋರಾಟ ನಿರೀಕ್ಷಿಸಬಹುದು. ಎದುರಾಳಿ ತಂಡದ ಸಾಮರ್ಥ್ಯ ಏನೆಂಬುದು ನಮಗೆ ತಿಳಿದಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಕಣಕ್ಕಿಳಿಯುವೆವು ಎಂದು ತಿಳಿಸಿದರು.
ಭಾರತ `ಎ’ ತಂಡವನ್ನು ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಮುನ್ನಡೆಸ ಲಿದ್ದು, ಇಂಗ್ಲೆಂಡ್ ಲಯನ್ಸ್ ತಂಡವನ್ನು ಸ್ಯಾಮ್ ಬಿಲ್ಲಿಂಗ್ಸ್ ಮುನ್ನಡೆಸಲಿದ್ದಾರೆ.
ದಿನದ ಆಟದ ಆರಂಭ: ಬೆಳಿಗ್ಗೆ 9.30ಕ್ಕೆ
ತಂಡಗಳ ವಿವರ: ಭಾರತ `ಎ’ ತಂಡ: ಕೆ.ಎಲ್.ರಾಹುಲ್ (ನಾಯಕ), ಎ.ಆರ್.ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕೀತ್ ಭಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ಧಾರ್ಥ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಜಲಜ್ ಸಕ್ಸೇನಾ, ಮಯಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಆವೇಶ್ ಖಾನ್, ವರುಣ್ ಆ್ಯರನ್
ಇಂಗ್ಲೆಂಡ್ ಲಯನ್ಸ್: ಸ್ಯಾಮ್ ಬಿಲ್ಲಿಂಗ್ಸ್ (ನಾಯಕ), ಥಾಮಸ್ ಬೈಲಿ, ಡಾಮಿನಿಕ್ ಬೆಸ್ಸ್, ಡ್ಯಾನಿ ಬ್ರಿಗ್ಸ್, ಮ್ಯಾಥ್ಯೂ ಕಾರ್ಟರ್, ಜಾನ್ ಚಾಪೆಲ್, ಅಲೆಕ್ಸಾಂಡರ್ ಡೇವಿಸ್, ಬೆನ್ ಡಕೆಟ್, ಲೆವಿಸ್ ಗ್ರೆಗೊರಿ, ಸ್ಯಾಮುಯೆಲ್ ಹೈನ್, ಮ್ಯಾಕ್ಸ್ ಹೋಲ್ಡನ್, ವಿಲಿಯಂ ಜಾಕ್ಸ್, ಜೇಮಿ ಅವರ್ಟನ್, ಅಲಿವರ್ ಪೆÇೀಪ್, ಜೇಮ್ಸ್ ಪೆÇೀರ್ಟರ್, ಸ್ಟೀವನ್ ಮುಲಾನ್