ಫೇಸ್‍ಬುಕ್ ಖಾತೆ ತೆರೆದ ಮೈಸೂರು  ನಗರ ಸಂಚಾರ ಪೊಲೀಸರು
ಮೈಸೂರು

ಫೇಸ್‍ಬುಕ್ ಖಾತೆ ತೆರೆದ ಮೈಸೂರು ನಗರ ಸಂಚಾರ ಪೊಲೀಸರು

February 13, 2019

ಮೈಸೂರು: ಮೈಸೂರು ನಗರ ಸಂಚಾರ ಪೊಲೀಸ್ ವಿಭಾಗವೂ ಈಗ ಪ್ರತ್ಯೇಕವಾಗಿ ಫೇಸ್ ಬುಕ್ ಖಾತೆ ತೆರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ನಗರ ಪೊಲೀಸ್ ವತಿಯಿಂದ ಪ್ರಾರಂ ಭಿಸುವ ನೂತನ ಮತ್ತು ವಿಶೇಷ ಜನ ಸ್ನೇಹಿ ಕಾರ್ಯಕ್ರಮಗಳನ್ನು ಸಾರ್ವಜನಿ ಕರಿಗೆ ತಿಳಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು 2011ರಲ್ಲೇ `Mysore City Police’ ಹೆಸರಿನಲ್ಲಿ ಫೇಸ್‍ಬುಕ್ ಅಕೌಂಟ್ ಆರಂಭಿಸಲಾಗಿತ್ತು. ಆದರೆ, ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿ ಕರಲ್ಲಿ ಅರಿವು ಮೂಡಿಸುವ ಹಾಗೂ ಸಾರ್ವಜನಿಕರಿಂದ ಸಂಚಾರ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸುವ ಉದ್ದೇಶದಿಂದ ಪ್ರತ್ಯೇಕವಾಗಿ `Mysuru City Traffic Police’ ಫೇಸ್‍ಬುಕ್ ಅಕೌಂಟನ್ನು ಪ್ರಾರಂಭಿಸಲಾಗಿದೆ.

ನಗರ ಸಂಚಾರ ವಿಭಾಗ ಕೈಗೊಳ್ಳುವ ವಿಶೇಷ ಮತ್ತು ವಿನೂತನ ಸಂಚಾರಿ ನಿಯಮಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಳನ್ನು ಫೇಸ್‍ಬುಕ್‍ನಲ್ಲಿ ದಿನಂಪ್ರತಿ ಅಪ್‍ಲೋಡ್ ಮಾಡಲಾಗು ವುದು. ಜೊತೆಗೆ ಸಾರ್ವಜನಿಕ ರಿಂದಲೂ ನಗರ ಸಂಚಾರಿ ಸಮಸ್ಯೆಗಳ ಬಗ್ಗೆ ಈ ಫೇಸ್‍ಬುಕ್ ಅಕೌಂಟ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »