ಬಿವಿಬಿ ಭವನೋತ್ಸವಕ್ಕೆ ಚಾಲನೆ
ಮೈಸೂರು

ಬಿವಿಬಿ ಭವನೋತ್ಸವಕ್ಕೆ ಚಾಲನೆ

January 20, 2019

ಮೈಸೂರು: ಮೈಸೂ ರಿನ ಭಾರತೀಯ ವಿದ್ಯಾಭವನದಲ್ಲಿ ಇಂದಿನಿಂದ 2 ದಿನಗಳ ಕಾಲ ಆಯೋ ಜಿಸಿರುವ ಭವನೋತ್ಸವ-2018ಕ್ಕೆ ಶನಿ ವಾರ ಚಾಲನೆ ನೀಡಲಾಯಿತು.

ಭಾರತೀಯ ವಿದ್ಯಾಭವನ ಮೈಸೂರು ಕೇಂದ್ರದ ಕಲಾವಿಭಾಗ ಆಯೋಜಿಸಿರುವ `ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 131ನೇ ಜನ್ಮೋತ್ಸವ ಹಾಗೂ 18ನೇ ವರ್ಷದ ಭವ ನೋತ್ಸವ-2018ಕ್ಕೆ ಸುರಭಿ ಗಾನ ಕಲಾ ಮಂದಿರದ ನಿರ್ದೇಶಕಿ ಹಾಗೂ ಪ್ರಸಿದ್ದ ಕರ್ನಾಟಕ ಸಂಗೀತ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ವಿದುಷಿ ಡಾ.ಸುಕನ್ಯಾ ಪ್ರಭಾ ಕರ್ ಮಾತನಾಡಿ, 1983ರಿಂದ ಬೆಂಗಳೂ ರಿನ ಭಾರತೀಯ ವಿದ್ಯಾಭವನದೊಂದಿಗೆ ಒಡನಾಟ ಹೊಂದಿದ್ದೇನೆ. ಅಂದಿನ ಬೆಂಗ ಳೂರು ಬಿವಿಬಿಯ ನಿರ್ದೇಶಕರಾಗಿದ್ದ ರಂಗನಾಥ್ ಮತ್ತು ಕೃಷ್ಣಮೂರ್ತಿ ಅವರು ಸಂಗೀತ, ನಾಟಕ, ನೃತ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಅದೇ ರೀತಿ ಮೈಸೂರು, ಮಡಿಕೇರಿ ಹಾಗೂ ಶಿವ ಮೊಗ್ಗದ ಬಿವಿಬಿಗಳೂ ಪ್ರೋತ್ಸಾಹ ನೀಡು ತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಬಿವಿಬಿ ಭಾರತೀಯ ಸಂಸ್ಕø ತಿಯ ಎಲ್ಲಾ ಕಲಾ ಪ್ರಕಾರಗಳನ್ನು ಬೆಳಕಿಗೆ ತರುವ ಜತೆಗೆ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವ ಕೆಲಸವನ್ನು ಬಹಳ ವರ್ಷ ಗಳಿಂದ ಮಾಡಿಕೊಂಡು ಬರುತ್ತಿದೆ. ಜತೆಗೆ ಕಲಾ ಭಾರತಿ ವಿಭಾಗ ತೆರೆದು ಚಿತ್ರಕಲೆ, ಶಿಲ್ಪಕಲೆ ಅಥವಾ ನೃತ್ಯ, ಸಂಗೀತ ಹೀಗೆ ಎಲ್ಲಾ ಕಲಾ ಪ್ರಕಾರಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಮಕ್ಕಳಿಗೆ ಕಲೆಗಳ ಬಗ್ಗೆ ತಿಳಿಸಿ ಕೊಟ್ಟಾಗ ಕಲಾವಿದರಾಗದಿದ್ದರೂ ಒಳ್ಳೆಯ ಶ್ರೋತೃಗಳು ಅಥವಾ ಪ್ರೇಕ್ಷಕರಾಗುವ ಸುಸಂದರ್ಭವನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.
ನಾನು ಓರ್ವ ಶಿಕ್ಷಕಿಯಾಗಿದ್ದು, ಸಂಗೀತ ಕಲಿಯಲು ಹಲವು ಮಂದಿ ಬರುತ್ತಾರೆ. ಯಾರನ್ನೂ ಬೇಡವೆಂದು ಹೇಳುವುದಿಲ್ಲ. ಕಾರಣ, ಅವರು ಕಲಾವಿದರಾಗದಿದ್ದರೂ ಸಂಗೀತ ಕೇಳಿದಾಗ ಆನಂದಪಡುವಷ್ಟು ಜ್ಞಾನವನ್ನಾದರೂ ಗಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಬಿವಿಬಿಯ ಕಲಾಭಾರತಿ ದೊಡ್ಡ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರು ಬಿವಿಬಿಯ ಅಧ್ಯಕ್ಷ ಪ್ರೊ. ಎ.ವಿ.ನರಸಿಂಹಮೂರ್ತಿ, ಖಜಾಂಚಿ ಡಾ.ಎ.ಟಿ.ಭಾಷ್ಯಂ, ವಿಂಗ್ ಕಮಾಂಡರ್ ಬಾಲಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.
ನಂತರ ನೃತ್ಯಕಲಾ ವಿಭಾಗದ ವಿದ್ಯಾರ್ಥಿಗಳು ಎಸ್.ಬಿಂದು ಮತ್ತು ಎನ್.ವಿ.ರಚನ ನಿರ್ದೇಶನದ ಪ್ರಾರ್ಥನಾ ಗೀತೆ ನಡೆಸಿಕೊಟ್ಟರೆ, ವೀಣಾ ವಾದನ ವಿಭಾಗದ ವಿದ್ಯಾರ್ಥಿಗಳು ವಿದುಷಿ ರಮಾ ಮಣಿ ನಿರ್ದೇಶನದ ವೀಣಾ ವಾದನ, ತಬಲಾ ವಿಭಾಗದ ವಿದ್ಯಾರ್ಥಿಗಳು ರಮೇಶ್ ಧನ್ನೂರ್ ನಿರ್ದೇಶನದ ತಬಲಾ ವಾದನ, ಕಲಾ ಭಾರತಿ ತಂಡದವರು ವಿದುಷಿ ಸುಮಾ ಹರಿನಾಥ್ ನಿರ್ದೇ ಶನದ ಕರ್ನಾಟಕ ಸಂಗೀತ ನಡೆಸಿ ಕೊಟ್ಟರು. ಹಾಗೆಯೇ ವಿದುಷಿ ನಾಗಲಕ್ಷ್ಮಿ ತಂಡದವರು ಭರತನಾಟ್ಯ ಪ್ರದರ್ಶಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

Translate »