ಮೈಸೂರಲ್ಲಿ ಇಂದಿನಿಂದ `ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ’
ಮೈಸೂರು

ಮೈಸೂರಲ್ಲಿ ಇಂದಿನಿಂದ `ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ’

January 29, 2019

ಮೈಸೂರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ ವತಿ ಯಿಂದ ಟೀಚರ್ ಮಾಸಪತ್ರಿಕೆಯ 16ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ ಜ.29 ಮತ್ತು 30ರಂದು ಮೈಸೂರಿನ ಪುರಭವನದಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 600ಕ್ಕೂ ಹೆಚ್ಚಿನ ಶಿಕ್ಷಕರು ಹಾಗೂ ಶಿಕ್ಷಣ ಆಸಕ್ತರು ಭಾಗವಹಿಸಲಿದ್ದಾರೆ. ಎರಡು ದಿನ ಗಳ ಶೈಕ್ಷಣಿಕ ಹಬ್ಬದಲ್ಲಿ ಪ್ರಾಥಮಿಕ ಶಿಕ್ಷಣ ದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿಚಾರಗಳನ್ನು ಕುರಿತು ಏಳು ವಿಚಾರ ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ಆರ್‍ಟಿಐ- ಪ್ರಸ್ತುತ ಸ್ಥಿತಿಗತಿಗಳು, ಪೂರ್ವ ಪ್ರಾಥಮಿಕ ಶಿಕ್ಷಣ- ತಲ್ಲಣಗಳು, ಕಲಿಕಾ ಮಾಧ್ಯಮ ಮತ್ತು ಆದ್ಯತೆಗಳು ಹಾಗೂ 2ನೇ ದಿನ, ಸರ್ಕಾರಿ ಶಾಲೆಗಳ ಕಲಿಕಾ ಸ್ಥಿತಿಗತಿಗಳು, ಉನ್ನತ ಶಿಕ್ಷಣ ಸವಾಲು ಗಳು ಮತ್ತು ಭವಿಷ್ಯದಲ್ಲಿ ವಿವಿ ಶಿಕ್ಷಣ, ತಂತ್ರಜ್ಞಾನ ಕೇಂದ್ರಿತ ಶಿಕ್ಷಣ ಧೋರಣೆ ಗಳು, ತರಗತಿಗಳಲ್ಲಿ ವೈಜ್ಞಾನಿಕ ಮನೋ ವೃತ್ತಿ ವಿಷಯಗಳ ಕುರಿತ ವಿಷಯಗಳ ಮಂಡನೆ, ಪ್ರತಿಕ್ರಿಯೆಗಳು ನಡೆಯಲಿವೆ.

ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯ ಯನ ಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ. ಶಿವಾಲಿ, ತಮಿಳುನಾಡು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಡಾ.ಸಿಲ್ವಿಯ ಕಲ್ಪಕಂ, ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಮುಖಂಡ ಸಂತೋಷ್ ಮಾಸ್ಟರ್, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಉಪಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ, ಬೆಂಗಳೂರಿನ ಜೆಎನ್ ಸಿಎಎಸ್‍ಆರ್ ಪ್ರಾಧ್ಯಾಪಕ ಡಾ.ಅಮಿತಾಬ್ ಬೋಶಿ, ಮುಂಬೈನ ಸಿಇಐಎಆರ್ ಪಿಐಎಸ್ ಎಸ್‍ನ ಸಹಾಯಕ ಪ್ರಾಧ್ಯಾಪಕಿ ಡಾ.ಬಿಂದು ತಿರುಮಲೈ, ಸಮಿತಿಯ ಕರ್ನಾ ಟಕ ಉಪಾಧ್ಯಕ್ಷ ಅಹಮದ್ ಹಗರೆ ಇನ್ನಿ ತರರು ವಿಷಯ ಮಂಡಿಸಲಿದ್ದಾರೆ.

ಜ.29ರಂದು ಬೆಳಿಗ್ಗೆ 11 ಗಂಟೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಖಿಲ ಭಾರತ ಅಧ್ಯಕ್ಷ ಡಾ.ಸಿ.ರಾಮಕೃಷ್ಣನ್ ಎರಡು ದಿನ ಗಳ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಟೀಚರ್ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಪ್ರೊ.ಬಿ. ಗಂಗಾಧರಮೂರ್ತಿ ಅಧ್ಯಕ್ಷತೆ ವಹಿಸು ವರು. ಸಾಹಿತಿ ದೇವನೂರ ಮಹಾದೇವ, ಸಮಿತಿಯ ರಾಜ್ಯ ಕಾರ್ಯದರ್ಶಿ ಶುಭಂಕರ್ ಚಕ್ರವರ್ತಿ, ದೆಹಲಿ ವಿವಿ ಶಿಕ್ಷಣ ನಿಕಾ ಯದ ನಿವೃತ್ತ ಪ್ರಾಧ್ಯಾಪಕ ಡಾ.ಅನಿತಾ ರಾಂ ಪಾಲ್, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಿಂಡಿಕೇಟ್ ಸದಸ್ಯ ಡಾ. ಹೆಚ್.ಎನ್.ರವೀಂದ್ರ, ಪಾಲಿಕೆ ಅಯುಕ್ತ ಕೆ.ಹೆಚ್.ಜಗದೀಶ್, ಹೆಚ್ಚುವರಿ ಆಯುಕ್ತ ಬಿ.ಸಿ.ಶಿವಾನಂದಮೂರ್ತಿ, ಡಿಡಿಪಿಐ ಎಸ್. ಮಮತಾ, ಪಾಲಿಕೆ ಮುಖ್ಯ ಆಡಳಿತಾಧಿ ಕಾರಿ ಕೆ.ಎಂ.ಗಾಯತ್ರಿ ಇನ್ನಿತರರು ಉದ್ಘಾ ಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಜ.30ರಂದು ಸಂಜೆ 4 ಗಂಟೆಗೆ ಸಮಾ ರೋಪ ಸಮಾರಂಭ ನಡೆಯಲಿದ್ದು, ಶಿಕ್ಷಣ ತಜ್ಞ ಪ್ರೊ.ಹೆಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು. ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಡಾ. ಎಂ.ರೇಜು, ಎಂಎಲ್‍ಸಿ ಮರಿತಿಬ್ಬೇಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಶಿಕ್ಷಣ ತಜ್ಞ ಪ್ರೊ.ಮಲ್ಲಿಕಾರ್ಜುನ ಶಾಸ್ತ್ರಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್, ಆಹಾರ ಮತ್ತು ನಾಗ ರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಯೋಗಾನಂದ, ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶು ಪಾಲ ಪ್ರೊ.ಹೆಚ್.ಇ.ದಿವಾಕರ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಮೈಸೂರು ಕಾರ್ಯದರ್ಸಿ ಎಸ್.ವಜ್ರಮುನಿ ತಿಳಿಸಿದ್ದಾರೆ.

Translate »