ಮೈಸೂರು ಜಿಲ್ಲೆಯಲ್ಲಿ ಮಂಗನ ಖಾಯಿಲೆ ದೃಢಪಟ್ಟಿಲ್ಲ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮಂಗನ ಖಾಯಿಲೆ ದೃಢಪಟ್ಟಿಲ್ಲ

January 29, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಂಗನ ಖಾಯಿಲೆ ಪ್ರಕರಣ ಗಳು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ತಿಳಿಸಿದ್ದಾರೆ.

ಮೈಸೂರಿನ ಡಿಸಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೆಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಹಳ್ಳಿ ಹಾಡಿಯಲ್ಲಿ ಜ್ವರ, ರಕ್ತದ ಒತ್ತಡ, ಕಿಡ್ನಿ ತೊಂದರೆಯಿಂದ ಬಳಲಿ ಇಬ್ಬರು ಸಾವನ್ನಪ್ಪಿದ್ದರಿಂದ ಅಲ್ಲಿನ ಜನರು ಮಂಗನ ಖಾಯಿಲೆ ಇರಬಹುದೆಂದು ಭಾವಿಸಿ ಆತಂಕಗೊಂಡಿದ್ದರು ಎಂದರು.

ವಿಷಯ ತಿಳಿದ ತಕ್ಷಣ ಆರೋಗ್ಯ ಇಲಾಖೆ, ಅರಣ್ಯ, ಪಶುಪಾಲನಾ ಇಲಾಖೆ ಅಧಿಕಾರಿ ಗಳೊಂದಿಗೆ ತಿಮ್ಮನಹೊಸಹಳ್ಳಿ ಹಾಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೃತಪಟ್ಟ ಭಾಸ್ಕರ್ ಮತ್ತು ಚಂದ್ರ ಅವರು ರಕ್ತದ ಒತ್ತಡ, ಕಿಡ್ನಿ ಸಮಸ್ಯೆಯಿಂದ ಬಳಲಿ ಸರಿಯಾಗಿ ಚಿಕಿತ್ಸೆ ಪಡೆಯದೆ ಸಾವನ್ನಪ್ಪಿದ್ದಾರೆ ಎಂಬುದು ತಿಳಿಯಿತು ಎಂದು ಡಾ. ಬಸವರಾಜು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ರೋಗಗ್ರಸ್ಥ ಬ್ಲಾಕ್ ಲಂಗೂರ್‍ಗೆ ಕಚ್ಚಿ ರಕ್ತ ಹೀರಿದ ಉಣ್ಣೆಗಳು ಆರೋಗ್ಯವಂತ ಮನುಷ್ಯನಿಗೆ ಕಚ್ಚಿದರೆ ಮಾತ್ರ ಮಂಗನ ಖಾಯಿಲೆ ಹರಡು ತ್ತದೆಯೇ ಹೊರತು, ಮನುಷ್ಯರಿಂದ ಮನುಷ್ಯ ನಿಗೆ ಹರಡುವುದಿಲ್ಲ. ಹೆಚ್.ಡಿ. ಕೋಟೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಬ್ಲಾಕ್ ಲಂಗೂರ್ ಸಾವನ್ನಪ್ಪಿರುವ ಬಗ್ಗೆಯೂ ವರದಿಯಾಗಿಲ್ಲ ಎಂದರು.

ಆದರೂ ನಾವು ಅಲ್ಲಿನ ಜನರ ರಕ್ತದ ಸ್ಯಾಂಪಲ್ ಅನ್ನು ಶಿವಮೊಗ್ಗದ ಪ್ರಯೋ ಗಾಲಯಕ್ಕೆ ಹಾಗೂ ಉಣ್ಣೆಗಳನ್ನು ಮಣಿ ಪಾಲ ಆಸ್ಪತ್ರೆ ಪ್ರಯೋಗಾಲಯಕ್ಕೂ ಕಳುಹಿಸಿದ್ದೇವೆ. ಒಂದು ವಾರದೊಳಗಾಗಿ ವರದಿ ಬರಬಹುದೆಂದು ನಿರೀಕ್ಷಿಸುತ್ತಿ ದ್ದೇವೆ ಎಂದು ನುಡಿದರು.

ಮುಂಜಾಗ್ರತೆಗಾಗಿ ಹಾಡಿಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದ್ದು, ಈಗಾಗಲೇ ಚುಚ್ಚು ಮದ್ದು ಹಾಕಲಾಗುತ್ತಿದೆ. 8 ದಿನಗಳ ಕಾಲ ಬಿಡದೇ ಜ್ವರ ಬರುವುದು, ವಿಪರೀತ ತಲೆ ನೋವು, ಸೊಂಟ-ಮೈ ನೋವು, ನಿಶ್ಯಕ್ತಿ, ಕಣ್ಣು ಕೆಂಪಗಾಗುವುದು, ಜ್ವರ ಬಂದ ಎರಡು ವಾರಗಳ ನಂತರ ಮೂಗು, ಬಾಯಿ, ಗುದದ್ವಾರದಲ್ಲಿ ರಕ್ತಸ್ರಾವವಾಗು ವುದು ಮಂಗನ ಖಾಯಿಲೆ ಲಕ್ಷಣವಾ ಗಿದ್ದು, ಈ ಬಗೆಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸು ವಂತೆ ಡಾ. ಬಿ. ಬಸವರಾಜು ತಿಳಿಸಿದರು.

Translate »