ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು
ಮೈಸೂರು

ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು

February 24, 2019

ಮೈಸೂರು: ಜೀವನವು ಬಹಳ ಸರಳ ಮತ್ತು ಸುಂದರವಾಗಿದ್ದು, ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು ಮಾಡಿಕೊಳ್ಳಲಾಗುತ್ತಿದೆ ಎಂದು ಬ್ರಹ್ಮಕುಮಾರಿ ಸಂಸ್ಥೆ ದೆಹಲಿ ಪ್ರವಾಚಕಿ ಬಿ.ಕೆ.ಶಿವಾನಿ ಅಭಿಪ್ರಾಯಪಟ್ಟರು.

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸಂತೋಷಮಯ ಬದುಕಿಗಾಗಿ ಸರಳ ಸೂತ್ರಗಳು’ ಕುರಿತು ಮಾತನಾಡಿದ ಅವರು, ಜೀವನ ಬಹಳ ಸರಳವಾಗಿದ್ದು, ಕಳೆದು ಹೋದ ಕ್ಷಣಗಳ ಕುರಿತು ಯೋಚಿಸದೇ, ಮುಂದೆ ಸಂತೋಷದಿಂದ ಜೀವಿಸುವುದನ್ನು ಅಳವಡಿಸಿಕೊಳ್ಳ ಬೇಕು. ಸಕಾರಾತ್ಮಕ ಆಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಂತೋಷ ವಾಗಿರಬಹುದು ಎಂದು ಸಲಹೆ ನೀಡಿದರು.

ನಮ್ಮ ತಪ್ಪುಗಳಿಂದಲೇ ಸಂತೋಷ ವನ್ನು ಕಳೆದುಕೊಳ್ಳುತ್ತಿದ್ದು, ಬೇರೆ ಎಲ್ಲೋ ಹುಡುಕುವ ಪ್ರಯತ್ನ ಮಾಡುತ್ತೇವೆ. ಸಂತೋಷವೆಂಬುದು ನಮ್ಮೊಳಗೆ ಇದೆ. ಅದನ್ನು ಕಂಡುಕೊಂಡು ಪ್ರಜ್ಞಾಪೂರ್ವಕ ವಾಗಿ ಜೀವಿಸುವುದು ಅಗತ್ಯವಾಗಿದೆ. ದೊಡ್ಡ ಮನೆ, ಕಾರು, ಬಟ್ಟೆಗಳ ಖರೀದಿಯಿಂದ ತಾತ್ಕಾಲಿಕ ನೆಮ್ಮದಿ ಸಿಗಬಹುದು. ಆದರೆ, ಅದರಿಂದ ಮಾತ್ರವೇ ಸದಾ ಕಾಲ ನೆಮ್ಮದಿ ಯಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ಸ್ನೇಹಪರತೆ, ಉತ್ತಮ ಚಿಂತನೆ, ಮಾನ ವೀಯತೆಯಿಂದ ಮಾತ್ರ ಸಂತೋಷ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ನಮ್ಮ ಕೆಟ್ಟ ಚಿಂತನೆ ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ ಯಾವಾಗಲೂ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಕೊಳ್ಳಬೇಕು. ಆ ಮೂಲಕ ಏಕಾಗ್ರತೆ ಕಾಯ್ದು ಕೊಳ್ಳಬೇಕು. ಮನಸ್ಸಿನ ಚಂಚಲತೆಯ ಹತೋಟಿಗೆ ಸರಳ ಜೀವನವನ್ನು ತಮ್ಮ ದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು ಮಾತ ನಾಡಿ, ಮಗುವಿನ ನಿರೀಕ್ಷೆ ಕೇವಲ ಒಂದು ಚಾಕಲೇಟ್ ಮಾತ್ರ. ಆದರೆ, ವ್ಯಕ್ತಿ ಬೆಳೆ ದಂತೆಲ್ಲಾ ಆತನ ನಿರೀಕ್ಷೆಗಳು ದೊಡ್ಡದಾಗಿ ಬೆಳೆಯುತ್ತವೆ. ಆದರೆ, ಸಾವಿನಲ್ಲಿ ಏನು ನಿರೀಕ್ಷೆ ಮಾಡಲು ಸಾಧ್ಯ?. ಹಾಗಾಗಿ ತೃಪ್ತಿಕರ ಸಾವನ್ನು ಅಪ್ಪಿಕೊಂಡು ಜೀವ ನದ ಯಶಸ್ವಿ ಪಯಣ ಪೂರ್ಣಗೊಳಿಸ ಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲ ಪತಿ ಪ್ರೊ.ಹೇಮಂತ್‍ಕುಮಾರ್ ಮಾತ ನಾಡಿ, ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡಿ ಕಳುಹಿಸಲಾಗು ತ್ತಿದೆ. ನಂತರದಲ್ಲಿ ವಿದ್ಯಾರ್ಥಿಗಳ ಬದು ಕನ್ನು ಅರಿಯುವ ಪ್ರಯತ್ನವಾಗುತ್ತಿಲ್ಲ. ಆದರೆ, ನಿಜವಾದ ಪದವಿಯನ್ನು ಪ್ರಜಾ ಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ನೀಡು ತ್ತಿದೆ. ಹಾಗಾಗಿ, ಶಿಕ್ಷಣದಲ್ಲಿ ಜೀವನವನ್ನು ಹೇಗೆ ನಡೆಸಬೇಕು. ಸಂತೋಷವನ್ನು ಹೇಗೆ ಕಂಡುಕೊಳ್ಳಬೇಕು ಎಂಬ ವಿಷಯ ಕುರಿತು ವಿವಿಯ ಪಠ್ಯದಲ್ಲಿ ಅಳವಡಿಸ ಬೇಕಿದೆ ಎಂದು ಹೇಳಿದರು.
ಕಿಕ್ಕಿರಿದು ತುಂಬಿದ್ದ ಸಭಾಂಗಣ: ಪ್ರವಾ ಚಕಿ ಬಿ.ಕೆ.ಶಿವಾನಿ ಅವರ `ಸಂತೋಷ ಮಯ ಬದುಕಿಗಾಗಿ ಸರಳ ಸೂತ್ರಗಳು’ ಕುರಿತು ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು.

ಶಿವಾನಿ ಅವರು ಮಾತು ಆರಂಭಿಸಿ ನಂತರ ಸಭಾಂಗಣ ನಿಶ್ಯಬ್ದತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಅವರ ಮಾತನ್ನು ಆಲಿಸುವಲ್ಲಿ ಮಗ್ನರಾಗಿದ್ದರು.

ಊಟದ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ದಲ್ಲಿ ದೆಹಲಿಯ ಹೃದ್ರೋಗ ತಜ್ಞ ಡಾ. ಮೋಹಿತ್ ಗುಪ್ತಾ, ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ.ಕರುಣಾಜೀ, ಮೈಸೂರು ವಲಯದ ಮುಖ್ಯ ಸಂಚಾಲಕಿ ಬಿ.ಕೆ.ಲಕ್ಷ್ಮಿಜೀ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸಂತೋಷದ ಸೂತ್ರಗಳನ್ನು ಅರಿಯಲು ಸಾಧ್ಯ

ಮೈಸೂರು: ಸಂತೋಷದ ಸೂತ್ರಗಳನ್ನು ಯಾರೂ ಹೇಳಿಕೊಡುವುದಿಲ್ಲ. ಆದರೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆ ಕೆಲಸವನ್ನು ಮಾಡುತ್ತಿದೆ. ಸಂತೋಷ ಎಂಬುದು ಬೇರೆಲ್ಲೂ ಇಲ್ಲ. ನಮ್ಮೊಳಗೇ ಇದೆ ಎಂಬುದನ್ನು ಅರಿಯಬೇಕಿದೆ ಎಂದು ಜವಳಿ ಅಭಿವೃದ್ಧಿ ಆಯುಕ್ತ ಡಾ.ಎಂ.ಆರ್.ರವಿ ಹೇಳಿದರು.

ಕಸ್ತೂರಿ ಮೃಗವು ತನ್ನ ದೇಹದಿಂದ ಬರುವ ಸೌಗಂಧ ವನ್ನು ಎಲ್ಲಿಂದಲೋ ಬರುತ್ತಿದೆ ಎಂದು ಕಾಡೆಲ್ಲವನ್ನು ಸುತ್ತುವಂತೆ, ನಾವು ಸಂತೋಷವನ್ನು ಬೇರೆಲ್ಲೋ ಹುಡುಕು ತ್ತಿದ್ದೇವೆ. ನಾವೆಲ್ಲಾ ಕಸ್ತೂರಿ ಮೃಗಗಳಾಗಿದ್ದೇವೇನೋ ಅನಿಸುತ್ತಿದೆ. ಹಣ, ಆಸ್ತಿ, ಗೆಳೆಯರು, ಸಂಬಂಧ ಎಲ್ಲದರಿಂದ ಸಂತೋಷವಾಗಿರಲು ಸಾಧ್ಯವಿಲ್ಲ. ಅವೆಲ್ಲದ ರಾಚೆಗೆ ಸಂತೋಷವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಪೋಷಕರು ಮಕ್ಕಳನ್ನು ಯಾರ್ಯಾರಿಗೋ ಹೋಲಿಕೆ ಮಾಡಿ ಕಡೆಗಣಿಸುತ್ತಾರೆ. ಅವರು ಬೇಸರಪಟ್ಟಾಗ ನೊಂದುಕೊಳ್ಳುವವರು ಪೋಷಕರೇ. ಹಾಗಾಗಿ ತಮ್ಮ ಮಕ್ಕಳನ್ನು ಯಾರ್ಯಾರಿಗೋ ಹೋಲಿಕೆ ಮಾಡುವ ಬದಲಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಮೂಡಿಸಬೇಕು. ನಿರೀಕ್ಷೆಗಳ ಹಿಂದೆಯೇ ನಿರಾಸೆ ಕಾದಿರುತ್ತದೆ ಎಂಬುದನ್ನು ಅರಿಯಬೇಕು. ಒಳ್ಳೆಯವರಾಗಲು ಯಾರ ಅಪ್ಪಣೆ ಬೇಕಿಲ್ಲ. ಆದರೆ, ಒಳ್ಳೆಯವರಿಗೆ ಹೆಚ್ಚಿನ ಪರೀಕ್ಷೆಗಳು ಎದುರಾಗುವುದು ಸಹಜ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಗಳು, ಸಂತೋಷದ ಸರಳ ಸೂತ್ರಗಳನ್ನು ತಿಳಿಸುವಂತಹ ಕಾರ್ಯವಾಗಬೇಕು. ಬದುಕು ದೊಡ್ಡದಾಗಿದ್ದು, ತಾಳ್ಮೆ, ತೃಪ್ತಿಯನ್ನು ಕಂಡುಕೊಳ್ಳ ಬೇಕು. ಯಾವ ಸಂದರ್ಭದಲ್ಲಿ ನಗಬೇಕೋ ನಕ್ಕರೆ, ಅಳಬೇಕೋ ಅತ್ತರೆ ಪ್ರಾಯಶಃ ಮನಸ್ಸು, ಹೃದಯ ಬಹುಬೇಗ ಹಗುರಾಗುತ್ತದೆ. ಇಲ್ಲವಾದರೆ ಇಡೀ ಜಗತ್ತಿನ ಭಾರವನ್ನು ನಾವೇ ಹೊರುತ್ತಿದ್ದೇವೆನೋ ಅನ್ನುವಷ್ಟು ನೋವು ನಮ್ಮನ್ನು ಬಾಧಿಸುತ್ತದೆ ಎಂದು ಡಾ. ಎಂ.ಆರ್. ರವಿ ಹೇಳಿದರು.

Translate »