ಮೈಸೂರು: ಮೈಸೂರು ನಗರದ 12 ಠಾಣೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 354 ಮಂದಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ಸರ್ಕಾರ ಶುಕ್ರವಾರ ಸಾಮೂ ಹಿಕ ವರ್ಗಾವಣೆ ಮಾಡಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರದ ಅಶೋಕಪುರಂ ಠಾಣೆಯ ಪಿ.ಎಂ.ಸಿದ್ದರಾಜುರನ್ನು ಮಂಗಳೂರಿನ ಮುಲ್ಕಿ ಠಾಣೆಗೆ, ದೇವರಾಜ ಸಂಚಾರ ಠಾಣೆಯ ಪಿ.ಎ. ಸೂರಜ್‍ರನ್ನು ಬಾರ್ಕಿಗೆ, ಹೆಬ್ಬಾಳಿನ ಎ. ಗುರುಪ್ರಸಾದ್‍ರನ್ನು ಧ್ರುವ ಠಾಣೆಗೆ ವರ್ಗಾಯಿಸ ಲಾಗಿದೆ. ದೇವರಾಜ ಠಾಣೆಯ ಪ್ರಸನ್ನಕುಮಾರ್‍ರನ್ನು ಹಾಸನ ಡಿಸಿಆರ್‍ಬಿಗೆ, ಉದಯಗಿರಿಯ ಪಿ.ಪಿ. ಸಂತೋಷ್‍ರನ್ನು ಲೋಕಾಯುಕ್ತಗೆ, ಸಿಸಿಐಬಿಯ ಟಿ. ಅಶೋಕ್‍ಕುಮಾರ್‍ರನ್ನು ಮಂಗಳೂರು ಪಶ್ಚಿಮ ಸಂಚಾರ ಠಾಣೆಗೆ, ಕೆ.ಆರ್. ಸಂಚಾರ ಠಾಣೆಯ ಆರ್.ಜಗದೀಶರನ್ನು ಕಂಕನಾಡಿಗೆ, ಆಲನಹಳ್ಳಿಯ ಕೆ.ಎಂ.ಮಂಜುರನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ, ಸಿದ್ಧಾರ್ಥ ನಗರ ಸಂಚಾರ ಠಾಣೆಯ ಅರುಣ್‍ಕುಮಾರಿಯವರನ್ನು ಮಂಡ್ಯ ಡಿಸಿಬಿ ವಿಶೇಷ ಠಾಣೆಗೆ, ಲಕ್ಷ್ಮೀಪುರಂ ಠಾಣೆಯ ಎಸ್. ಗಂಗಾಧರರನ್ನು ಮಂಗಳೂರಿನ ಮುದಾಬಿದರೆ ಠಾಣೆಗೆ, ವಿದ್ಯಾರಣ್ಯಪುರಂನ ಜಿ. ಓಂಕಾರಪ್ಪರನ್ನು ರಾಜ್ಯ ಗುಪ್ತ ವಾರ್ತಾ ವಿಭಾಗಕ್ಕೆ, ಸ್ಥಳ ನಿಯೋಜನೆಗೆ ಬಾಕಿ ಇದ್ದ ಹೆಚ್. ಹರಿಯಪ್ಪರನ್ನು ಲಕ್ಷ್ಮೀಪುರಂಗೆ, ಕೆ.ಎಂ. ಮಹದೇವಶೆಟ್ಟಿಯವರನ್ನು ಮಂಡ್ಯ ಡಿಸಿಆರ್‍ಬಿಗೆ ಸೇರಿದಂತೆ ಹಲವು ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.