ಪಾಂಡವಪುರದ ಹಲವೆಡೆ ಸುಮಲತಾ ಮತ ಯಾಚನೆ
ಮೈಸೂರು

ಪಾಂಡವಪುರದ ಹಲವೆಡೆ ಸುಮಲತಾ ಮತ ಯಾಚನೆ

April 11, 2019

ಪಾಂಡವಪುರ: ಪಾಂಡವಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧ ವಾರ ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯನವರೊಂದಿಗೆ ರೋಡ್ ಶೋ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದರು.

ಎಣ್ಣೆಹೊಳೆಕೊಪ್ಪಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಸುಮಲತಾ, ಚಲುವರಸನ ಕೊಪ್ಪಲು, ಹರವು, ಶ್ಯಾದನಹಳ್ಳಿ, ಜಾಗಟೆ ಮಲ್ಲೇನಹಳ್ಳಿ, ಹಾಗನಹಳ್ಳಿ, ಅಲ್ಪಳಿ, ಬೇಬಿ, ಶಿಂಡ ಬೋಗನಹಳ್ಳಿ, ಹೊನಗಾನಹಳ್ಳಿ, ಚಿನ ಕುರಳಿ, ಕಾಳೇಗೌಡನಕೊಪ್ಪಲು, ಗುಮ್ಮನ ಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕ, ಬನ್ನಂಗಾಡಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅಂಬ ರೀಶ್ ಅವರು ಪಕ್ಷಾತೀತ, ಜಾತ್ಯಾತೀತ ವ್ಯಕ್ತಿತ್ವವನ್ನು ಮೈಗೂಡಿಸಿ ಕೊಂಡು ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. ಅವರಂತೆಯೇ ನಾನೂ ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗಾಗಿ ದುಡಿಯುತ್ತೇನೆ. ಆದ್ದರಿಂದ ಚುನಾವಣೆಯಲ್ಲಿ ತಮಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ದೇಶದ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಅಂಬರೀಶ್ ಅವರು ಹೆಸರು ಹೇಳಿ, ಕನ್ನಡ ಭಾಷೆ, ನಾಡಿನ ಸಂಸ್ಕøತಿಗೆ ಅವರು ನೀಡಿದ ಕೊಡುಗೆ ಸ್ಮರಿಸಿದ್ದಾರೆ. ಒಬ್ಬ ಪ್ರಧಾನಿಗಳು ನಮ್ಮ ಹೆಸರು ಹೇಳಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಂಡ್ಯದಲ್ಲಿ ನಡೆಯುತ್ತಿ ರುವ ಚುನಾವಣೆ ಐತಿಹಾಸಿಕ ಚುನಾವಣೆಯಾಗಿದೆ. ಕಷ್ಟದಲ್ಲಿ ದ್ದಾಗ ನನಗೆ ಧೈರ್ಯ ತುಂಬಿ ನನ್ನ ಜೊತೆ ನಿಂತು ಕೊಂಡ ಜನರ ಪರವಾಗಿ ನಾನು ನಿಲ್ಲಬೇಕು ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿ ಒಬ್ಬ ಹೆಣ್ಣು ಮಗಳಾಗಿ, ಸರ್ಕಾರ ನಡೆಸುತ್ತಿರುವ ಆಡಳಿತ ಪಕ್ಷ, ಮುಖ್ಯಮಂತ್ರಿಗಳು, ಮಂತ್ರಿಗಳು, ಎಂಎಲ್‍ಎ ಗಳನ್ನು ಎದುರು ಹಾಕಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಯಾರನ್ನಾದ್ರೂ ವಿರೋಧ ಕಟ್ಟಿಕೊಳ್ಳೊದಕ್ಕೆ ನಾನು ಚುನಾವಣೆಗೆ ನಿಂತಿಲ್ಲ. ನಾನು ನೋವಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆದರೆ, ನನ್ನ ಈ ನಿರ್ಧಾರದಿಂದ ಒಂದಷ್ಟು ಜನರಿಗೆ ಬೇಜಾ ರಾಗಿದೆ. ಅವರಿಗೆ ಬೇಜಾರಾಗಿದ್ದರೂ ಪರವಾಗಿಲ್ಲ, ಜನಕ್ಕೆ ಬೇಜಾ ರಾಗಬಾರದು ಎಂದು ಹೇಳಿದರು. ಜೆಡಿಎಸ್‍ನವರು ಇದೀಗ ಹೊಸದಾಗಿ ಅಭಿವೃದ್ದಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲಿ ನಿಂದಲೂ ಒಬ್ಬ ಮಹಿಳೆಯನ್ನು ಟಾರ್ಗೆಟ್ ಮಾಡಿಕೊಂಡು ವೈಯುಕ್ತಿಕ ಟೀಕೆಗಳನ್ನು ಮಾಡಿಕೊಂಡು ಬಂದಿದ್ದಾರೆ.

ಜೆಡಿಎಸ್ ಪಕ್ಷದವರು ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ಜಿಲ್ಲೆಯ ಜನತೆ ಮರೆತಿಲ್ಲ. ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಬೆಂಬಲ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಎಚ್.ಕೃಷ್ಣೇಗೌಡ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಸಿ ಮತ ಯಾಚಿಸಿದರು. ರೋಡ್ ಶೋ ಹೊನಗಾನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಉಚ್ಛಾಟಿತ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸುಮಲತಾ ಅಂಬರೀಶ್ ಅವರಿಗೆ ಹೂವಿನಹಾರ ಹಾಕಿ, ಸ್ವಾಗತಿಸಿದರು. ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣಾ ಪ್ರಚಾರಕ್ಕೆಂದು ನಮ್ಮೂರಿಗೆ ಆಗಮಿಸಿದ್ದು, ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದ ನಾನು ಸ್ವಾಗತವನ್ನು ಕೋರುತ್ತೇನೆ. ನಾನು ಮೊದಲಿಂದಲೂ ಅಂಬರೀಶ್ ಅಭಿಮಾನಿಯಾಗಿದ್ದು, ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೆ. ಅದರಂತೆ ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಮತ ಹಾಕುವ ಮೂಲಕ ಬೆಂಬಲ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತಸಂಘ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹಾಜರಿದ್ದರು.

Translate »