ಗಾಯಗೊಂಡಿದ್ದ ಶಿವಸಿದ್ದಪ್ಪಗೆ ಶಸ್ತ್ರಚಿಕಿತ್ಸೆ
ಮೈಸೂರು

ಗಾಯಗೊಂಡಿದ್ದ ಶಿವಸಿದ್ದಪ್ಪಗೆ ಶಸ್ತ್ರಚಿಕಿತ್ಸೆ

May 13, 2019

ಮೈಸೂರು: ಕಳೆದ ಬುಧವಾರ ರಾತ್ರಿ ಮೈಸೂರಿನ ಲಿಂಗಾಂಬುದಿ ಪಾಳ್ಯ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಶಿವಸಿದ್ದಪ್ಪ ಅವರಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ತಲೆ, ಬೆನ್ನು ಭಾಗಕ್ಕೆ ಮನಸ್ಸೋಇಚ್ಛೆ ಥಳಿಸಿ, ಕೆಳಕ್ಕೆ ಬಿದ್ದ ಶಿವಸಿದ್ದಪ್ಪ ಬಲಗಾಲಿನ ಮೇಲೆ ಕಲ್ಲು ಎತ್ತಿ ಹಾಕಿ ತೀವ್ರವಾಗಿ ಗಾಯಗೊಳಿಸಲಾಗಿತ್ತು. ಮೂಳೆ ಸಂಪೂರ್ಣ ವಾಗಿ ಮುರಿದಿದ್ದರಿಂದ ಶುಕ್ರವಾರ ಕೆ.ಆರ್. ಆಸ್ಪತ್ರೆ ವೈದ್ಯರು ಆತನನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದ್ದಾರೆ.

ಆಸ್ಪತ್ರೆಯ ಕಲ್ಲು ಕಟ್ಟಡದ 1ನೇ ವಾರ್ಡಿನಲ್ಲಿ ದಾಖಲಾ ಗಿರುವ ಶಿವಸಿದ್ದಪ್ಪ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರ ಪ್ರತಾಪ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈಗಷ್ಟೇ ಸ್ವಲ್ಪ ಮಾತನಾಡಲಾರಂಭಿಸಿದ್ದಾರೆ. ಘಟನೆ ಕುರಿತು ಏನನ್ನೂ ಹೇಳುತ್ತಿಲ್ಲ ಎಂದು ಪ್ರತಾಪ್ ತಿಳಿಸಿದ್ದಾರೆ.

ಶಿವಸಿದ್ದಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಜೊತೆಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಕುವೆಂಪುನಗರ ಠಾಣೆ ಪೊಲೀಸರು, ತಲೆ ಮರೆಸಿಕೊಂಡಿ ರುವ ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ.

Translate »