ಸುತ್ತೂರು(ನಂಜನಗೂಡು), ಜ.23- ಆದಿ ಜಗದ್ಗುರುಗಳಿಗೆ ಜೈ… ಶಿವರಾತ್ರೀಶ್ವರ ಮಹಾರಾಜಕೀ ಜೈ… ರಾಜೇಂದ್ರ ಮಹಾ ಸ್ವಾಮಿಗಳಿಗೆ ಉಘೇ ಎನ್ನಿ… ಹೀಗೆ ಜಯ ಘೋಷಗಳೊಂದಿಗೆ ನಂಜನಗೂಡು ತಾಲೂ ಕಿನ ಸುತ್ತೂರಲ್ಲಿ ಶಿವರಾತ್ರೀಶ್ವರ ಶಿವಯೋಗಿ ಗಳ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾಭಕ್ತಿ ಯೊಂದಿಗೆ ನೆರವೇರಿತು.
ಕಪಿಲಾ ನದಿ ತೀರದಲ್ಲಿ ಕಳೆದ 3 ದಿನ ಗಳಿಂದ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ಯಾದ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಆದಿಜಗದ್ಗುರು ಶಿವ ರಾತ್ರೀಶ್ವರ ಶಿವಯೋಗಿಗಳ ರಥೋತ್ಸವಕ್ಕೆ ಬೆಳಿಗ್ಗೆ 10.45ಕ್ಕೆ ಪುಷ್ಯ ಬಹುಳ ದ್ವಾದಶಿಯ ಶುಭಲಗ್ನದಲ್ಲಿ ಶ್ರೀಗಳ ಕರ್ತೃಗದ್ದುಗೆ ಮುಂಭಾ ಗದಿಂದ ಚಾಲನೆ ನೀಡಲಾಯಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಗುರು ಚರಮೂರ್ತಿಗಳು ಸೇರಿದಂತೆ ರಾಜ್ಯ ವಿವಿಧ ಮಠಾಧೀಶರ ನೇತೃತ್ವದಲ್ಲಿ ಕೃರ್ತಗದ್ದುಗೆಯಿಂದ ಹೊರಟ ರಥವು ರಾಜ ಬೀದಿಗಳಲ್ಲಿ ಸಾಗಿ ಸುತ್ತೂರಿನ ದೊಡ್ಡಮ್ಮ ತಾಯಿ ದೇವಸ್ಥಾನದವರೆಗೆ ತೆರಳಿ ನಂತರ ಸ್ವಸ್ಥಾನಕ್ಕೆ ಯಶಸ್ವಿಯಾಗಿ ತಲುಪಿತು.
ಜಾನಪದ ಕಲಾತಂಡಗಳ ಮೆರಗು: ರಥೋ ತ್ಸವದಲ್ಲಿ ಶ್ರೀ ಮಠದ ಸಕಲ ಬಿರುದಾವಳಿ ಗಳ ಸಮೇತ ನಂದಿಧ್ವಜ, ಛತ್ರಿ ಚಾಮರ, ಸೂರಿಪಾನಿ, ಗಾರುಡಿ ಗೊಂಬೆ, ಮರಗಾಲು ನೃತ್ಯ, ವೀರಾಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ, ಜಾಂಜ್ ಮೇಳ, ಹುಲಿವೇಷಧಾರಿಗಳು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಒಟ್ಟು 37ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಪಾಲ್ಗೊಂಡು ಮೆರಗು ನೀಡಿತು. ಭಕ್ತರ ಉತ್ಸಾಹ ಮತ್ತು ಭಾವಾ ವೇಶ ಉತ್ತುಂಗಕ್ಕೇರಿ ಶಿವ ರಾತ್ರೀಶ್ವರ ಸ್ವಾಮೀಜಿಗೆ ಜಯವಾಗಲಿ… ಎಂಬ ಘೋಷಣೆಗಳು ಮುಗಿಲು ಮುಟ್ಟಿ ದವು. ರಥವು ಮುಂದೆ ಸಾಗಿದಂತೆ ಹಣ್ಣು- ಜವನವನ್ನು ಎಸೆದು, ಧೂಪದಾರತಿ ಸೇವೆ ಸಲ್ಲಿಸಿದರು. ಬೆಳಿಗ್ಗೆ ಆದಿಜಗದ್ಗುರುಗಳ ಉತ್ಸವÀ ಮೂರ್ತಿಗೆ ರುದ್ರಾಭಿಷೇಕ, ರಾಜೋ ಪಚಾರ ಮಾಡಲಾಯಿತು. ದೊಡ್ಡ ಮತ್ತು ಚಿಕ್ಕ ರಥಗಳಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ, ರಥಗಳಿಗೆ ಕಳಶಾರೋಹಣ ಫಲ ಪುಷ್ಪ ಅಲಂಕಾರ ಹಾಗೂ ವಿವಿಧ ಬಣ್ಣಗಳ ಬಟ್ಟೆಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಚಿಕ್ಕ ರಥ ಮತ್ತು ದೊಡ್ಡ ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದಾಗ ರಸ್ತೆಯ 2 ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನಿಂತು ವೀಕ್ಷಿಸಿ ಪುನೀತ ರಾದರು. ಶ್ರೀಕ್ಷೇತ್ರಕ್ಕೆ ಸಾಗಾರೋಪಾದಿಯಲ್ಲಿ ಭಕ್ತರು ಆಗಮಿಸಿದ ಹಿನೆÀ್ನಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.