Tag: Dasara 2018

ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್
ಮೈಸೂರು

ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್

August 31, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಮೈಸೂರಿಗೆ ಆಗಮಿಸುತ್ತಿರುವ ಗಜಪಡೆಯ ನಾಯಕ ಅರ್ಜುನ ನೇತೃತ್ವದ ಆರು ಆನೆಗಳ ಮಾವುತರು ಹಾಗೂ ಕಾವಾಡಿಗಳಿಗಾಗಿ ಅರಮನೆ ಆವರಣದಲ್ಲಿ 22 ಟೆಂಟ್‍ಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ದಸರಾ ಆನೆಗಳಿಗೆ ಅರಮನೆ ಆವರಣದಲ್ಲಿ ಶೆಡ್ ಹಾಗೂ ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಟೆಂಟ್ ಶಾಲೆ, ಗ್ರಂಥಾಲಯ ಹಾಗೂ ಆಯುರ್ವೇದ ಚಿಕಿತ್ಸಾಲಯಕ್ಕೆ ಟೆಂಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ವರು ಭಾಗವಹಿಸಿದ್ದರು. ಅದರಲ್ಲಿ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ್ದ ನ್ಯಾಷನಲ್ ಎಂಟರ್…

ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ
ಮೈಸೂರು

ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ

August 31, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಆರು ಆನೆಗಳ ಮೊದಲ ತಂಡದಲ್ಲಿ ಪ್ರಮುಖ ಆನೆಗಳಾದ ಬಲ ರಾಮ, ಅಭಿಮನ್ಯು, ದ್ರೋಣ ಬರುತ್ತಿಲ್ಲ. ಕಾಡಾನೆ ಕಾರ್ಯಾಚರಣೆಗೆ ಹೋಗಿರುವ ಹಿನ್ನೆಲೆಯಲ್ಲಿ ಅವುಗಳ ಬದಲಿಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ವಿಕ್ರಮ, ಗೋಪಿ ಸ್ಥಾನ ಪಡೆದುಕೊಂಡಿವೆ. ಅಂಬಾರಿ ಆನೆ ಅರ್ಜುನನ ನೇತೃತ್ವದಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸುತ್ತಿವೆ. ಪೂರ್ವ ನಿಗದಿ ಪ್ರಕಾರ ಮೊದಲ ತಂಡದಲ್ಲಿ ಬಲರಾಮ, ಅಭಿಮನ್ಯು ಮತ್ತು ದ್ರೋಣ ಬರಬೇಕಿತ್ತು. ಆದರೆ ರಾಮನಗರದಲ್ಲಿ…

ದಸರಾ ಲಾಂಛನದಲ್ಲಿ ಬದಲಾವಣೆ ಇಲ್ಲ
ಮೈಸೂರು

ದಸರಾ ಲಾಂಛನದಲ್ಲಿ ಬದಲಾವಣೆ ಇಲ್ಲ

August 30, 2018

ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ 2018ರ ಮೈಸೂರು ದಸರಾ ಮಹೋತ್ಸವದ ಲಾಂಛನದಲ್ಲಿ ಬದಲಾವಣೆ ಇಲ್ಲ ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಅಂಬಾರಿ ಹೊತ್ತ ಆನೆಯ ಚಿತ್ರವುಳ್ಳ ದಸರಾ ಮಹೋತ್ಸವದ ಲಾಂಛನವನ್ನು ಕಳೆದ ಬಾರಿಯ ಮಹೋತ್ಸವ ಸಂದರ್ಭ ಶಾಶ್ವತ ಲೋಗೋವನ್ನಾಗಿ ರೂಪಿಸಿ, ಅಂತಿಮಗೊಳಿಸಲಾಗಿದೆ. ಆ ಲೋಗೋ ನೋಡಿದ ತಕ್ಷಣ ಜನರಲ್ಲಿ ಮೈಸೂರು ದಸರಾ ಪರಿಕಲ್ಪನೆ ಮೂಡಬೇಕೆಂಬುದೇ ಅದರ ಉದ್ದೇಶ ಎಂದು ತಿಳಿಸಿದರು. ಪ್ರತಿ ವರ್ಷ ಲೋಗೋ ಬದಲಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು,…

ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಈ ಬಾರಿ ಮೈಸೂರು ದಸರಾಗೆ ಚಾಲನೆ
ಮೈಸೂರು

ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಈ ಬಾರಿ ಮೈಸೂರು ದಸರಾಗೆ ಚಾಲನೆ

August 29, 2018

ಮೈಸೂರು:  ಈ ಬಾರಿ ಪ್ರವಾಸೋದ್ಯಮ ಕೇಂದ್ರಿತ, ಸಾಂಪ್ರದಾಯಿಕ ದಸರಾ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಸಾಮಾಜಿಕ ಕಳಕಳಿ ಹೊಂದಿರುವ ಲೇಖಕಿ, ಶಿಕ್ಷಣ ತಜ್ಞೆ ಹಾಗೂ ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರನ್ನು ಆಹ್ವಾನಿಸಲಾಗುವುದು ಎಂದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳವಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2018ರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ಕೊಡಗು ಜಿಲ್ಲೆಯಲ್ಲಿ ಅನಾಹುತ ಸಂಭವಿಸಿ,…

ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ
ಮೈಸೂರು

ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ

August 26, 2018

ಮೈಸೂರು: ಆಗಸ್ಟ್ 28ರಂದು ಮಧ್ಯಾಹ್ನ 3.30 ಗಂಟೆಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2018ರ ಬರುವ ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ. ದಸರಾ ಉನ್ನತ ಸಮಿತಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ, ಸಚಿವರಾದ ಸಾ.ರಾ.ಮಹೇಶ, ಎನ್.ಮಹೇಶ, ಡಿ.ಸಿ.ತಮ್ಮಣ್ಣ, ಸಂಸದರಾದ ಪ್ರತಾಪ್‍ಸಿಂಹ,…

ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು
ಮೈಸೂರು

ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು

August 20, 2018

ಮೈಸೂರು: ನೆರೆ ಜಿಲ್ಲೆ ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ಉಂಟಾಗಿರುವ ಅನಾಹುತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಗಜ ಪಯಣದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಸರಳ ಕಾರ್ಯಕ್ರಮದ ಮೂಲಕ ಆನೆಗಳನ್ನು ಕರೆತರುವಂತೆ ಅಥವಾ ಕಾರ್ಯಕ್ರಮದ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಪ್ರತಿ ವರ್ಷದಂತೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು ಹುಣಸೂರು ತಾಲೂಕಿನ ವೀರನಹೊಸಳ್ಳಿ ಹಾಡಿಯ ಆಶ್ರಮ ಶಾಲೆಯ ಆವರಣದಿಂದ ಅದ್ಧೂರಿ ಕಾರ್ಯಕ್ರಮದ ಮೂಲಕ ಗಜಪಡೆಯನ್ನು ಜಿಲ್ಲಾಡಳಿತ…

ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’
ಮೈಸೂರು

ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’

August 18, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ದುಬಾರೆ ಆನೆ ಶಿಬಿರದಿಂದ ಆಗಮಿಸುತ್ತಿರುವ ಧನಂಜಯ, ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿದ್ದಾನೆ. ಈ ದಸರಾ ಮಹೋತ್ಸವದಲ್ಲಿ 37 ವರ್ಷದ ಧನಂಜಯ ಹೊಸ ಅತಿಥಿ. ಸೆರೆ ಹಿಡಿದಾಗ ಪುಂಡ, ಆದರೆ ಈಗ ಫುಲ್ ಸೈಲೆಂಟ್ ಬಾಯ್. ಭವಿಷ್ಯದಲ್ಲಿ ಅಂಬಾರಿ ಪ್ರಮುಖ ಪಾತ್ರ ನಿರ್ವಹಿಸುವ ಹೊಣೆಗಾರಿಕೆಗೆ ಹೆಗಲು ಕೊಡುವ ಸಾಮಥ್ರ್ಯ ಈತನಿಗಿರುವುದನ್ನು ಮನಗಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಾರಿ ದಸರಾಕ್ಕೆ ಕರೆತರುತ್ತಿದ್ದಾರೆ. ಸೆರೆ ಸಿಕ್ಕಿದ್ದು ಎಲ್ಲಿ:…

ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ
ಮೈಸೂರು

ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ

August 10, 2018

ಮೈಸೂರು:  ಮೈಸೂರು ದಸರಾ, ಎಷ್ಟೊಂದು ಸುಂದರ ಚೆಲ್ಲಿರಿ ನಗೆಯಾ ಪನ್ನೀರಾ… ಹಾಡಷ್ಟೇ ಅಲ್ಲ ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. ದಸರಾ ಸಮೀಪಿಸುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವದ ವೇಳೆ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರಗು ನೀಡಿ, ನಗರವನ್ನು ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲು ಈಗಾಗಲೇ ಸೆಸ್ಕಾಂ ಸಜ್ಜಾಗಿದೆ. ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವೃತ್ತ ಕಚೇರಿಯಲ್ಲಿ ಗುರುವಾರ ನಡೆದ…

ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ
ಮೈಸೂರು

ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ

August 8, 2018

ಮೈಸೂರು: ಈ ಭಾರಿ ಅಧಿಕ ಪ್ರವಾಸಿಗರನ್ನು ಸೆಳೆಯಲು ಹೆಚ್ಚು ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಬಾರಿ ಏರ್‌ಷೋನಲ್ಲಿ ಮಿಲಿಟರಿ ಹಾಗೂ ವಾಯುದಳದ ಹೆಚ್ಚು ವಿಮಾನಗಳ ಪ್ರದರ್ಶನಕ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಯಾವ ಯಾವ ಕಾರ್ಯಕ್ರಮ ಆಯೋಜಿಸಬಹುದೆಂಬುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ….

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ
ಮೈಸೂರು

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ

August 7, 2018

ಮೊದಲ ತಂಡದಲ್ಲಿ ಅರ್ಜುನ ಸೇರಿ ಆರು ಆನೆ ಜಿಲ್ಲಾಡಳಿತದಿಂದ ಆನೆಗಳಿಗೆ ಪೂಜೆಗೆ ಸಿದ್ಧತೆ ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 12 ಆನೆಗಳಲ್ಲಿ ಗಜಪಡೆಯ ನಾಯಕ ಅರ್ಜುನ ಸೇರಿದಂತೆ ಆರು ಆನೆಗಳ ಮೊದಲ ತಂಡ ಆ.23ರಂದು ಹುಣಸೂರು ತಾಲೂಕಿನ ನಾಗಾಪುರ ಹಾಡಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪಯಣ ಆರಂಭಿಸಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ನಾಗಾಪುರ ಹಾಡಿ ಬಳಿಯ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಆ.23ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ…

1 8 9 10 11
Translate »