Tag: Dasara 2018

ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಭರ್ಜರಿ ಭೋಜನ ವ್ಯವಸ್ಥೆ
ಮೈಸೂರು

ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಭರ್ಜರಿ ಭೋಜನ ವ್ಯವಸ್ಥೆ

September 22, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಆಗಮಿಸಿರುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಶುಕ್ರವಾರ ಅರಮನೆಯ ಆಡಳಿತ ಮಂಡಳಿ ವತಿಯಿಂದ ಭೋಜನದ ವ್ಯವಸ್ಥೆ ಮಾಡಿ, ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 12 ಆನೆಗಳೊಂದಿಗೆ ಅರ ಮನೆಯ ಅಂಗಳಕ್ಕೆ ಬಂದು ಬೀಡುಬಿಟ್ಟಿರುವ ಆನೆಗಳ ಮಾವುತರು, ಕಾವಾಡಿ ಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಸತ್ಕರಿಸುವ ಸಂಪ್ರದಾಯವಿದ್ದು, ಇಂದು ಮಧ್ಯಾಹ್ನ ಅರಮನೆಯ…

ಈ ಬಾರಿಯ ದಸರಾ ವಸ್ತುಪ್ರದರ್ಶನ ಗುತ್ತಿಗೆಗೆ ಹಿಂದೇಟು
ಮೈಸೂರು

ಈ ಬಾರಿಯ ದಸರಾ ವಸ್ತುಪ್ರದರ್ಶನ ಗುತ್ತಿಗೆಗೆ ಹಿಂದೇಟು

September 22, 2018

ಮೈಸೂರು:  ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ದಸರಾ ವಸ್ತುಪ್ರದರ್ಶನದ ಆವರಣಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ, ಮನರಂಜನಾ ವಿಭಾಗದ ಯಂತ್ರೋಪಕರಣಗಳು ಹಾನಿಗೀಡಾಗಿ ನಷ್ಟ ಸಂಭವಿಸಿದ್ದೇ ಈ ಬಾರಿ ಟೆಂಡರ್‌ದಾರರು ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಅಲ್ಲದೆ ಪ್ರತಿ ವರ್ಷ ಶೇ.5ರಷ್ಟು ಟೆಂಡರ್ ಮೊತ್ತವನ್ನು ಹೆಚ್ಚಳ ಮಾಡುವ ನಿಯಮವಿದ್ದು, ಪ್ರವೇಶ ದರ ಹೆಚ್ಚಳ ಮಾಡದೆ ಇರುವುದನ್ನು ಮನಗಂಡು ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಮರು ಟೆಂಡರ್ ಅವಧಿ…

`ಜಯಚಾಮರಾಜ ಒಡೆಯರ್ ಪೂಜಾ ವಿಧಾನದ `ವಿಶೇಷ ಬೊಂಬೆ ಅಂಕಣ’ ಈ ಬಾರಿಯ ಆಕರ್ಷಣೆ
ಮೈಸೂರು

`ಜಯಚಾಮರಾಜ ಒಡೆಯರ್ ಪೂಜಾ ವಿಧಾನದ `ವಿಶೇಷ ಬೊಂಬೆ ಅಂಕಣ’ ಈ ಬಾರಿಯ ಆಕರ್ಷಣೆ

September 22, 2018

ಮೈಸೂರು:  ಪ್ರತಿ ವರ್ಷದಂತೆ ಈ ವರ್ಷವೂ ರಾಮ್‍ಸನ್ಸ್ ಕಲಾ ಪ್ರತಿಷ್ಠಾನವು ಸೆ.22ರಿಂದ ಮೈಸೂರಿನ ನಜರ್‌ಬಾದ್ ಮುಖ್ಯ ರಸ್ತೆಯ ಪ್ರತಿಮಾ ಗ್ಯಾಲರಿಯಲ್ಲಿ ‘ಬೊಂಬೆ ಪ್ರದರ್ಶನ ಮತ್ತು ಮಾರಾಟ’ ಏರ್ಪಡಿಸಿದೆ. ಒಂದೇ ಸೂರಿನಡಿ 10 ಸಾವಿರಕ್ಕೂ ಹೆಚ್ಚಿನ ನಾನಾ ಪ್ರದೇಶದ, ನಾನಾ ಅಳತೆಯ, ನಾನಾ ರೀತಿಯ ಬೊಂಬೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮಣ್ಣು, ಕಾಗದ ರಚ್ಚು (ಪೇಪರ್ ಮೆಷ್), ಪ್ಲಾಸ್ಟರ್ ಆಫ್ ಪ್ಯಾರಿಸ್, ಪಿಂಗಾಣಿ, ಮರ, ಲೋಹ ಇತ್ಯಾದಿಗಳಿಂದ ರಚಿಸಲಾಗಿರುವ ಬೊಂಬೆಗಳು ವೈವಿಧ್ಯಮಯ ಬೊಂಬೆ ಲೋಕವನ್ನೇ ಇಲ್ಲಿ ಸೃಷ್ಟಿಸಿವೆ. ಮೈಸೂರು, ಚನ್ನಪಟ್ಟಣ,…

`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’
ಮೈಸೂರು

`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’

September 21, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯೊಳಗೆ ಅರಳಲಿರುವ ಕಮಲ ದೇವಸ್ಥಾನ. ನವದೆಹಲಿಯಲ್ಲಿರುವ ಕಮಲ ದೇವಸ್ಥಾನದ ಹೂವಿನ ಮಾದರಿಯನ್ನು ಇದು ಹೋಲಲಿದೆ. 1986ರ ಡಿಸೆಂಬರ್‌ನಲ್ಲಿ ಬಹಾಯಿ ಪೂಜಾ ಮನೆಯಾಗಿ ಸಮರ್ಪಿಸಲ್ಪಟ್ಟ ಕಮಲ ದೇವಸ್ಥಾನದ ಹೂವಿನ ಮಾದರಿ ಈ ಬಾರಿ ಪ್ರವಾಸಿಗರನ್ನು ಸೆಳೆಯಲಿದೆ. ಪ್ರತೀ ವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಕುಪ್ಪಣ್ಣ ಪಾರ್ಕ್‍ನಲ್ಲಿ ಒಂದಲ್ಲ ಒಂದು ಹೂವಿನ ಮಾದರಿಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಅ.10ರಿಂದ 19ರವರೆಗೆ…

ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ
ಮೈಸೂರು

ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ

September 21, 2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಗೆ ಬರುವ ಪ್ರವಾಸಿಗರಿಗೆ ಈ ಬಾರಿಯ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ದುಂಡಾಕಾರದ ಗಾಜಿನ ಮನೆ. ಬರೋಬ್ಬರಿ 20 ತಿಂಗಳ ಕಾಮಗಾರಿ ಬಳಿಕ ಕೆಲವು ಸಣ್ಣಪುಟ್ಟ ಕಾಮ ಗಾರಿ ಹೊರತುಪಡಿಸಿ ಸುಂದರ `ಗಾಜಿನ ಮನೆ’ ಸಿದ್ಧವಾಗಿದೆ. ಮುಂದಿನ ತಿಂಗಳು ಅ.10ರಿಂದ 19 ರವರೆಗೆ ನಡೆಯಲಿರುವ 10 ದಿನಗಳ ದಸರಾ ಮಹೋತ್ಸವಕ್ಕೆ ಇದು ಪ್ರವಾಸಿಗರಿಗೆ ನೋಡಲು ಸಿಗಲಿದೆ. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದ (ಆರು ಗೇಟ್ ಅಥವಾ ಹಾರ್ಡಿಂಜ್ ಸರ್ಕಲ್) ಬಳಿಯಿರುವ ಕುಪ್ಪಣ್ಣ…

ದಸರಾ ಆಹಾರ ಮೇಳದಲ್ಲಿ ಈ ಬಾರಿ ವಿದೇಶಿಗರಿಗೂ ಅವಕಾಶ ಕಲ್ಪಿಸಲು ನಿರ್ಧಾರ
ಮೈಸೂರು

ದಸರಾ ಆಹಾರ ಮೇಳದಲ್ಲಿ ಈ ಬಾರಿ ವಿದೇಶಿಗರಿಗೂ ಅವಕಾಶ ಕಲ್ಪಿಸಲು ನಿರ್ಧಾರ

September 21, 2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗುವ ಬಾಯಲ್ಲಿ ನೀರೂರಿಸುವ ಆಹಾರ ಮೇಳದಲ್ಲಿ ಈ ಬಾರಿ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ದೇಶೀಯ, ಖಂಡಾಂತರ ಆಹಾರ ಪದ್ಧತಿ ಮತ್ತು ಪ್ರಾದೇಶಿಕ ವೈವಿಧ್ಯದ ಊಟೋಪಚಾರಗಳನ್ನು ಕಳೆದ ವರ್ಷದಂತೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು…

ರಸ್ತೆ ಬದಿ ಗೋಡೆ, ಕಾಂಪೌಂಡ್‍ಗಳ ಮೇಲೆ  ರಾರಾಜಿಸುತ್ತಿದೆ ನಾಡಿನ ಕಲೆ, ಸಂಸ್ಕೃತಿ…!
ಮೈಸೂರು

ರಸ್ತೆ ಬದಿ ಗೋಡೆ, ಕಾಂಪೌಂಡ್‍ಗಳ ಮೇಲೆ  ರಾರಾಜಿಸುತ್ತಿದೆ ನಾಡಿನ ಕಲೆ, ಸಂಸ್ಕೃತಿ…!

September 21, 2018

ಮೈಸೂರು:  ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದ್ದು, ಪ್ರಮುಖ ರಸ್ತೆಗಳ ಗೋಡೆ, ಕಾಂಪೌಂಡ್‌ಗಳ ಮೇಲೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಗಳು ಮೈದಳೆಯುತ್ತಿವೆ. ಕೆ.ಆರ್‍ಎಸ್ ರಸ್ತೆ, ರೈಲ್ವೇ ಬ್ರಿಡ್ಜ್‍ನ ಬೃಹತ್ ಗೋಡೆಯ ಮೇಲೆ ಈಗಾಗಲೇ ಚಿತ್ರ ಬಿಡಿಸಲಾಗಿತ್ತು. ಆದರೆ ಬಣ್ಣ ಮಾಸಿದ್ದರಿಂದ ಹೊಸದಾಗಿ ಬಣ್ಣ ತುಂಬಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಹಾಗೆಯೇ ಜೆಎಲ್‍ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯದ ಕಾಂಪೌಂಡ್‍ಗಳ ಮೇಲೂ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಹುಣಸೂರು ರಸ್ತೆಯಲ್ಲಿ ಮಹಾರಾಣಿ ಕಾಲೇಜು ಕಾಂಪೌಂಡ್‍ಗೆ ಹೊಂದಿಕೊಂಡಂತಿರುವ ಪ್ರಯಾಣಿಕರ ತಂಗುದಾಣ, ಪಾಳು…

ಮೈಸೂರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭ
ಮೈಸೂರು

ಮೈಸೂರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭ

September 19, 2018

ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆಯ ಎಲ್ಲಾ 9 ವಲಯ ಕಚೇರಿ ಸರಹದ್ದಿನಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ಭರದಿಂದ ಸಾಗಿದ್ದು, ಇನ್ನೊಂದು ವಾರದಲ್ಲಿ ಕೆಲಸ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ವಲಯ 1ರಲ್ಲಿ ವಲಯಾಧಿಕಾರಿ ಸುನೀಲ್‍ಬಾಬು, 2ರಲ್ಲಿ ಜವರೇಗೌಡ, 3ರಲ್ಲಿ ಶಿವಾನಂದ್‍ಮೂರ್ತಿ, 4ನೇ ವಲಯದಲ್ಲಿ ಪ್ರಿಯದರ್ಶಿನಿ ಮತ್ತು 6ರಲ್ಲಿ…

ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಮತ್ಸ್ಯ ಮೇಳ
ಮೈಸೂರು

ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಮತ್ಸ್ಯ ಮೇಳ

September 19, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದ ವೇಳೆ ಇದೇ ಮೊದಲ ಬಾರಿಗೆ ಮತ್ಸ್ಯಲೋಕ ಅನಾವರಣಗೊಳ್ಳಲಿದೆ. ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆಯಲಿರುವ ರೈತ ದಸರಾ ಹಾಗೂ ಕೃಷಿ ಮೇಳದ ಒಂದು ಅಂಗವಾಗಿ ಮತ್ಸ್ಯಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ವಿವಿಧ ತಳಿ ಹಾಗೂ ನಾನಾ ಬಣ್ಣದ ಮೀನುಗಳನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಸೂರಿನಡಿ ಬಗೆ ಬಗೆಯ ಮತ್ಸ್ಯ (ಮೀನು)ಗಳ ಸೌಂದರ್ಯ, ವಯ್ಯಾರವನ್ನು ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಮೀನು ಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸುತ್ತಿದೆ. ಇದಕ್ಕಾಗಿ ದೇಶ ವಿದೇಶಗಳ ಅಪರೂಪದ ಮೀನು…

ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ
ಮೈಸೂರು

ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ

September 19, 2018

ಮೈಸೂರು: ಅಕ್ಟೋಬರ್ ಮೊದಲ ವಾರ ದಸರಾ ಮಹೋ ತ್ಸವ ಬಂದೋಬಸ್ತ್‍ಗೆ ನಿಯೋಜನೆಗೊಂಡ ಹೊರ ಜಿಲ್ಲೆಗಳ ಹೆಚ್ಚುವರಿ ಪೊಲೀಸರ ಮೊದಲ ತಂಡ ಮೈಸೂರಿಗೆ ಆಗಮಿಸಲಿದೆ. ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ಅವರು ದಸರಾ ಭದ್ರತೆ ಕುರಿತಂತೆ ಈಗಾ ಗಲೇ ಅಧೀನ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಿದ್ದು, ಜಿಲ್ಲಾಡಳಿತವು ದಸರಾ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವ ಸಂಖ್ಯೆಗನುಗುಣ ವಾಗಿ ಹೆಚ್ಚುವರಿಯಾಗಿ ಎಷ್ಟು ಮಂದಿ ಸಿಬ್ಬಂದಿ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾ…

1 6 7 8 9 10 11
Translate »