Tag: Dasara 2018

ಅರಮನೆಯಲ್ಲಿ ಆಚರಿಸುವುದು ಮಾತ್ರವೇ ಸಾಂಪ್ರದಾಯಿಕ ದಸರಾ, ಸರ್ಕಾರದ್ದು ನಾಡಹಬ್ಬ
ಮೈಸೂರು

ಅರಮನೆಯಲ್ಲಿ ಆಚರಿಸುವುದು ಮಾತ್ರವೇ ಸಾಂಪ್ರದಾಯಿಕ ದಸರಾ, ಸರ್ಕಾರದ್ದು ನಾಡಹಬ್ಬ

September 17, 2018

ಮೈಸೂರು: ರಾಜ್ಯ ಸರ್ಕಾರದ ವತಿಯಿಂದ ಆಚರಣೆ ಮಾಡುವುದು ಸಾಂಪ್ರದಾಯಿಕ ದಸರಾ ಅಲ್ಲ. ಅದು ಕೇವಲ ನಾಡಹಬ್ಬ. ಅರಮನೆಯಲ್ಲಿ ಆಚರಿಸುವುದು ಮಾತ್ರ ಸಾಂಪ್ರದಾಯಿಕ ದಸರಾ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿಶ್ಲೇಷಿಸಿದ್ದಾರೆ. ಮೈಸೂರಿನ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಆಚರಿಸುವುದು ಸಾಂಪ್ರದಾಯಿಕ ದಸರಾ ಅಲ್ಲ. ಆದರೆ ಎಲ್ಲೆಡೆ ನಾವು ಸಾಂಪ್ರದಾಯಿಕ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಸರ್ಕಾರ ಮಾಡುವುದು ನಾಡಹಬ್ಬವಾಗಿದೆ. ಅರಮನೆಯಲ್ಲಿ ರಾಜ ಮನೆತನದಿಂದ ನಡೆಯುವ…

ತೆರೆಮರೆಗೆ ಸರಿಯುತ್ತಿದೆ ಬದುಕಿನ ಜಟಕಾ ಬಂಡಿ
ಮೈಸೂರು

ತೆರೆಮರೆಗೆ ಸರಿಯುತ್ತಿದೆ ಬದುಕಿನ ಜಟಕಾ ಬಂಡಿ

September 17, 2018

ಮೈಸೂರು:  ಟಕ್.. ಟಕ್..ಟಕ್ ಕುದುರೆ ಹೆಜ್ಜೆ ಸದ್ದಿನೊಂದಿಗೆ ಟಾಂಗಾದಲ್ಲಿ ಕುಳಿತು ಸಂಚರಿಸುವುದು ಒಂದು ವಿಶಿಷ್ಟ ಅನುಭವ. ಮೈಸೂರು ಪರಂಪರೆಯೊಂದಿಗೆ ನಂಟು ಬೆಸೆದುಕೊಂಡಿರುವ ಟಾಂಗಾ, ಆಧುನಿಕ ಪ್ರಪಂಚದ ಆಕರ್ಷಕ ಸಾರಿಗೆ ಎಂದರೆ ತಪ್ಪಾಗಲಾರದು. 1897ರ ವೇಳೆಗೆ ಮೈಸೂರು ಪ್ರವೇಶಿಸಿದ ಟಾಂಗಾ ಗಾಡಿ, ಮೈಸೂರು ಸಂಸ್ಥಾನದಲ್ಲಿ ಪ್ರಮುಖ ಸಾರಿಗೆ ಸೌಲಭ್ಯವಾಗಿತ್ತು. ರಾಜ-ಮಹಾರಾಜರಿಗೂ ಟಾಂಗಾ ಗಾಡಿ ಎಂದರೆ ಅಚ್ಚುಮೆಚ್ಚು. ಸಾಮಾನ್ಯರೂ ಸಂಚಾರಕ್ಕೆ ಟಾಂಗಾ ಗಾಡಿಯನ್ನೇ ಅವಲಂಬಿಸಿದ್ದರು. ಎರಡು ದಶಕಗಳ ಹಿಂದೆಯೂ ಟಾಂಗಾ ಗಾಡಿಗಳ ಸದ್ದು ಜೋರಾಗಿಯೇ ಇತ್ತು. ಆದರೆ ಆಧುನಿಕತೆ ನಡುವೆ…

ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ
ಮೈಸೂರು

ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ

September 16, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಕ್ಯಾಂಪ್‍ಗಳಿಂದ ಅರಮನೆಗೆ ಆಗಮಿಸಿರುವ ಎರಡನೇ ತಂಡದ ಆರು ಆನೆಗಳನ್ನು ಶನಿವಾರ ಹೈವೇ ವೃತ್ತದ ಬಳಿಯಿರುವ ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು. ಶುಕ್ರವಾರ ಸಂಜೆಯಷ್ಟೇ ಅರಮನೆಗೆ ಎರಡನೇ ತಂಡದ ಆನೆಗಳು ಆಗಮಿಸಿದ್ದವು. ಇಂದಿನಿಂದ ಎಲ್ಲಾ ಆನೆಗಳಿಗೂ ತಾಲೀಮು ನಡೆಸಲಾಯಿತು. ಅಲ್ಲದೆ ಎರಡನೆ ಹಂತದ ಆನೆಗಳಿಗೆ ಕಳೆದ ರಾತ್ರಿಯಿಂದಲೇ ಪೌಷ್ಟಿಕ ಆಹಾರ ನೀಡವುದಕ್ಕೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ತಂಡದ ಆನೆಗಳ ತೂಕವನ್ನು ನಿಖರವಾಗಿ ದಾಖಲಿಸಲು ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು. ತಾಲೀಮಿಗೆ…

ಈ ಬಾರಿ ದಸರಾ ಉತ್ಸವಕ್ಕೆ 25 ಕೋಟಿ ಅನುದಾನಕ್ಕೆ ಬೇಡಿಕೆ: ಸಚಿವ ಜಿಟಿಡಿ
ಮೈಸೂರು

ಈ ಬಾರಿ ದಸರಾ ಉತ್ಸವಕ್ಕೆ 25 ಕೋಟಿ ಅನುದಾನಕ್ಕೆ ಬೇಡಿಕೆ: ಸಚಿವ ಜಿಟಿಡಿ

September 15, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲು 25ಕೋಟಿ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಸಾಲಿನಲ್ಲೂ ಯುವ ದಸರಾ, ರೈತ ದಸರಾ ಸೇರಿದಂತೆ 16 ಕಾರ್ಯಕ್ರಮಗಳು ಜರು ಗಲಿವೆ ಎಂದು ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ…

ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು
ಮೈಸೂರು

ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು

September 13, 2018

ಸೆ.14ರಂದು ದಸರಾ ಗಜಪಡೆ ಎರಡನೇ ತಂಡ ಅಂತಿಮ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪ್ರಶಾಂತ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.14ರಂದು ಸಂಜೆ ದಸರಾ ಗಜಪಡೆ ಎರಡನೇ ತಂಡದ ಆರು ಆನೆಗಳು ಮೈಸೂರು ಅರಮನೆ ಆವರಣ ಪ್ರವೇಶಿಸಲಿದ್ದು, ಈ ವೇಳೆ ಆಗ ಮಿಸಬೇಕಾಗಿದ್ದ 35 ವರ್ಷದ ಗೋಪಾಲಸ್ವಾಮಿಗೆ ಮದವೇರಿದ್ದು, ಅದನ್ನು ಕೈಬಿಟ್ಟು ವಿಶೇಷ ಅನು ಮತಿ ಪಡೆದು ಪ್ರಶಾಂತನನ್ನು ಕರೆತರಲಾಗುತ್ತಿದೆ. ಈಗಾಗಲೇ ಸೆ.2ರಂದು ಮೊದಲ ತಂಡದಲ್ಲಿ ಗಜಪಡೆ ನಾಯಕ ಅರ್ಜುನ, ಚೈತ್ರ, ವರಲಕ್ಷ್ಮೀ ವಿಕ್ರಮ, ಗೋಪಿ, ಧನಂಜಯ…

ದಸರಾ ಗಜಪಡೆ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು
ಮೈಸೂರು

ದಸರಾ ಗಜಪಡೆ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು

September 10, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಯ ಮೇಲೆ ಸಿಸಿ ಕ್ಯಾಮರಾದ ಕಣ್ಗಾವಲು ಇಟ್ಟು, ಅಪರಿಚಿತರು ಆನೆಗಳ ಸಮೀಪ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಆನೆಗಳಿಗೆ ಎಲ್ಲಿಲ್ಲದ ಮಹತ್ವವಿದ್ದು, ಅವುಗಳ ಪಾಲನೆ ಮತ್ತು ಪೋಷಣೆಗೆ ಹೆಚ್ಚಿನ ಗಮನ ನೀಡಿದಂತೆ ಆನೆಗಳ ರಕ್ಷಣೆಗೂ ಅರಣ್ಯ ಇಲಾಖೆ ಆದ್ಯತೆ ನೀಡಿದೆ. ಅರಮನೆಯ ಆವರಣದಲ್ಲಿ ಈಗಾಗಲೇ ಮೊದಲ ತಂಡದಲ್ಲಿ…

ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ 8 ದಿನ ಕಡಿತಕ್ಕೆ ಸರ್ಕಾರ ನಿರ್ಧಾರ
ಮೈಸೂರು

ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ 8 ದಿನ ಕಡಿತಕ್ಕೆ ಸರ್ಕಾರ ನಿರ್ಧಾರ

September 10, 2018

ಬೆಂಗಳೂರು: ಈ ವರ್ಷ ಕರ್ನಾಟಕ ಸರ್ಕಾರದಡಿಯಲ್ಲಿ ಬರುವ ಶಾಲೆಗಳಿಗೆ ದಸರಾ ರಜೆ ದಿನಗಳು ಕಡಿಮೆಯಾಗಲಿವೆ. ಈ ವರ್ಷ 8 ದಿನಗಳ ದಸರಾ ರಜೆ ಕಡಿತಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಹಲವು ರಜೆಗಳನ್ನು ನೀಡಬೇಕಾಗಿ ಬಂದಿದ್ದರಿಂದ ದಸರಾ ರಜೆಯನ್ನು ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ. ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ದಸರಾ ರಜೆ ಅಕ್ಟೋಬರ್ 8ರಿಂದ 21ರವರೆಗೆ ಇರುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ 22 ದಿನ ದಸರಾ ರಜೆ ಇತ್ತು. ಆದರೆ…

ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ವಿಶೇಷ ತಯಾರಿ
ಮೈಸೂರು

ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ವಿಶೇಷ ತಯಾರಿ

September 9, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ, ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಗೆ ಪ್ರತಿದಿನ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಜಂಬೂ ಸವಾರಿ ದೃಷ್ಟಿಯಿಂದ ಆನೆಗಳತ್ತ ವಿಶೇಷ ಗಮನ ನೀಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಮೈಸೂರು ಅರಮನೆಯ ಆವರಣದಿಂದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯಿತು ಮೈದಾನದವರೆಗೆ ಸುಮಾರು 4 ಕಿ.ಮೀ. ಕ್ರಮಿಸಬೇಕಾದ ದಸರಾ ಆನೆಗಳಿಗೆ ರಾಜ ಭೋಜನ ನೀಡಿ, ಅವುಗಳ ಶಕ್ತಿ ವೃದ್ಧಿಸುವಂತೆ ಮಾಡಲಾಗುತ್ತಿದೆ. ಆ ಮೂಲಕ ಜಂಬೂ…

ದಸರಾ ಗಜಪಡೆ ತಾಲೀಮು
ಮೈಸೂರು

ದಸರಾ ಗಜಪಡೆ ತಾಲೀಮು

September 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದು, ಅರಮನೆಯ ಅಂಗಳದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆ ಶುಕ್ರವಾರದಿಂದ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ಆರಂಭಿಸಿದೆ. ವಿವಿಧ ಆನೆ ಶಿಬಿರಗಳಿಂದ ಮೊದಲ ತಂಡದಲ್ಲಿ ಸೆ.2ರಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳು ಸೆ.5ರಂದು ಅರ ಮನೆ ಅಂಗಳ ಪ್ರವೇಶಿಸಿದ್ದವು. ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ನಡೆಸಿ, ತರಬೇತಿ ನೀಡುವ ಅಗತ್ಯವಿರುವುದರಿಂದ ಇಂದು ಬೆಳಿಗ್ಗೆ ತಾಲೀಮು ನಡೆಸಲಾಯಿತು. ಬೆಳಿಗ್ಗೆ 7.15ಕ್ಕೆ…

ಅಂಬಾರಿ ಆನೆ ಅರ್ಜುನ ತೂಕದಲ್ಲೂ ನಾಯಕ
ಮೈಸೂರು

ಅಂಬಾರಿ ಆನೆ ಅರ್ಜುನ ತೂಕದಲ್ಲೂ ನಾಯಕ

September 7, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಬಂದು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಎಲ್ಲಾ ಆರು ಆನೆಗಳ ತೂಕ ಮಾಡಿಸಲಾಯಿತು. ಪ್ರತಿ ವರ್ಷದಂತೆ ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಮ್ ಅಂಡ್ ಕೊ ಲಾರಿ ವೇಯಿಂಗ್ ಸರ್ವಿಸ್‍ನಲ್ಲಿ ಇಂದು ಬೆಳಿಗ್ಗೆ ಅರಮನೆಯಿಂದ ಆರು ಆನೆ ಕರೆತಂದು ತೂಕ ಮಾಡಿಸಲಾಯಿತು. ಯಾರು ಎಷ್ಟು ತೂಗುತ್ತಾರೆ! : ದಸರಾ ಗಜಪಡೆಯ ನಾಯಕ ಅಂಬಾರಿ ಆನೆ ಅರ್ಜುನ 5,650 ಕೆಜಿ ತೂಕವಿದ್ದಾನೆ. ಕಳೆದ ವರ್ಷ ಬಂದಾಗ ಅವನ ತೂಕ…

1 7 8 9 10 11
Translate »