Tag: Dasara 2018

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ
ಮೈಸೂರು, ಮೈಸೂರು ದಸರಾ

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ

October 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ, ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಅಂತಿಮ ಹಂತದಲ್ಲಿ ಪೂರ್ಣ ಪ್ರಮಾಣದ ಸಿಡಿಮದ್ದು ಸಿಡಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆ ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವು…

ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ
ಮೈಸೂರು

ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ

October 8, 2018

ಮೈಸೂರು:  ನಾಡಹಬ್ಬ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಆನೆಗಳ ಸುರಕ್ಷತೆ ದೃಷ್ಟಿಯಿಂದ `ಗಾದಿ’ ಹಾಗೂ ನಮ್ದಾ ತಯಾರಿ ಕೆಲಸ ಪ್ರತಿ ವರ್ಷದಂತೆ ಈ ಬಾರಿಯೂ ಆರಂಭವಾಗಿದೆ. ಅರಮನೆ ಆವರಣದ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ವಿಶೇಷ ಮಾವುತರಾದ ಪಾಷಾ, ಜಕಾವುಲ್ಲಾ, ಗಾದಿ ತಯಾರಿಯನ್ನು ಇಂದು ಆರಂಭಿಸಿದ್ದಾರೆ. ಶತಮಾನಗಳಿಂದ ಅಂಬಾರಿ ಕೆಳಗೆ ಗಾದಿ ಬಳಸುತ್ತಾ ಬರಲಾಗುತ್ತಿದೆ. ಮೆರವಣಿಗೆಯಲ್ಲಿ ಸಾಗುವ ಆನೆಗಳ ಮೇಲೆ ಅಲಂಕಾರಿಕ ಗೌನ್‍ಗೆ ಅನುಗುಣವಾಗಿ ಗಾದಿ…

ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ
ಮೈಸೂರು

ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ

October 8, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ 12 ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ ಕುಟುಂಬದ ಸದಸ್ಯರಿಗೆ ಭಾನುವಾರ ಸಿದ್ಧಾರ್ಥ ಬಡಾವಣೆಯ ಶ್ರೀ ಗುರು ರಾಘವೇಂದ್ರ ಬಂಗಾರ ಪೇಟೆ ಪಾನಿಪೂರಿ ಸೆಂಟರ್ ವತಿಯಿಂದ ಉಚಿತವಾಗಿ ಪಾನಿಪೂರಿ ನೀಡಲಾಯಿತು. ಕಳೆದ ಮೂರು ವರ್ಷದಿಂದ ದಸರಾ ಆನೆಗಳ ಮಾವುತರು, ಕಾವಾಡಿಗರು ಹಾಗೂ ವಿಶೇಷ ಮಾವುತರಿಗೆ ಶ್ರೀ ಗುರು ರಾಘವೇಂದ್ರ ಬಂಗಾರಪೇಟೆ ಪಾನಿಪೂರಿ ಸೆಂಟರ್‌ನ ಮಾಲೀಕ ದಿನೇಶ್ ಅವರು ಒಂದು ದಿನ ಪಾನಿಪೂರಿಯನ್ನು ನೀಡುವ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ…

ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ
ಮೈಸೂರು

ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ

October 7, 2018

ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ತಮಗೆ ಅವಕಾಶ ದೊರೆತಿರುವುದು ತರಗತಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದಷ್ಟು ಸಂತಸವಾಗಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಹಬ್ಬದ ಉದ್ಘಾಟನೆ ಅವಕಾಶ ದೊರೆಯುತ್ತದೆ ಎಂದು ಕನಸಿನಲ್ಲೂ ಕಂಡಿರಲಿಲ್ಲ ಎಂದರು. ದೇವರ ದಯೆಯಿಂದ ದಸರಾ ಉದ್ಘಾಟನೆ ಭಾಗ್ಯ ದೊರೆತಿದೆ, ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವುದು ಮತ್ತು ದಸರಾ ಉದ್ಘಾಟನೆ ಅವಕಾಶ ಎರಡೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಪ್ರತಿ ರಾಜ್ಯಕ್ಕೆ…

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

October 7, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಶನಿ ವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಮೈಸೂರು ಅರಮನೆಗೆ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಆಹ್ವಾನಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಪರಿಷತ್ ಸದಸ್ಯ ಧರ್ಮಸೇನಾ ಹಾಗೂ ಜಿಲ್ಲಾಧಿಕಾರಿ…

ಯುವ ಸಂಭ್ರಮ: ಒಂದೆಡೆ ಸಮಾನತೆ ಸಂದೇಶ ಮತ್ತೊಂದೆಡೆ ವಿಶೇಷ ಮಕ್ಕಳ ಪ್ರತಿಭೆ ಅನಾವರಣ
ಮೈಸೂರು

ಯುವ ಸಂಭ್ರಮ: ಒಂದೆಡೆ ಸಮಾನತೆ ಸಂದೇಶ ಮತ್ತೊಂದೆಡೆ ವಿಶೇಷ ಮಕ್ಕಳ ಪ್ರತಿಭೆ ಅನಾವರಣ

October 6, 2018

ಮೈಸೂರು: ಒಂದೆಡೆ ನೈಸರ್ಗಿಕ ವಿಕೋಪ ಕುರಿತು ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಎಲ್ಲರನ್ನು ಪ್ರೀತಿಸಿ, ಎಲ್ಲರ ಜೊತೆ ಜೀವಿಸಿ, ನಾವೆಲ್ಲರು ಒಂದೇ… ಸಂದೇಶ ಸಾರಿದರೆ, ಮತ್ತೊಂದೆಡೆ ನಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ವಿಶೇಷ ಮಕ್ಕಳು ನೃತ್ಯ ರೂಪಕದ ಮೂಲಕ ದೇಶಕ್ಕಾಗಿ ವೀರಮರಣ ಹೊಂದಿದ ಪತಿಯ ಮುಂದೆ ಪತ್ನಿ ಕಣ್ಣೀರಿಡುವಾಗ ಮಗು ತಂದೆಯ ಬಳಿಯಿದ್ದ ಧ್ವಜವನ್ನು ಎತ್ತಿ ಹಿಡಿದು ದೇಶಪ್ರೇಮ ಸಾರಿತು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ…

ಅ.8ರಂದು ದಸರೆಗೆ ಹೆಚ್ಚುವರಿ ಪೊಲೀಸರ ಆಗಮನ
ಮೈಸೂರು

ಅ.8ರಂದು ದಸರೆಗೆ ಹೆಚ್ಚುವರಿ ಪೊಲೀಸರ ಆಗಮನ

October 6, 2018

ಮೈಸೂರು: ದಸರೆಗೆ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸರ ಮೊದಲ ತಂಡವು ಅಕ್ಟೋಬರ್ 8ರಂದು ಮೈಸೂರು ತಲುಪಲಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ಅಕ್ಟೋಬರ್ 10ರಂದು 2018ರ ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು, 2 ದಿನ ಮುಂಚಿತವಾಗಿ ಹೊರ ಜಿಲ್ಲೆ ಗಳ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮೈಸೂ ರಿಗೆ ಆಗಮಿಸಲಿದ್ದಾರೆ. ಅವರಿಗೆ ಊಟ- ವಸತಿ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಎರಡನೇ ತಂಡದ ಪೊಲೀಸರು ಅಕ್ಟೋ ಬರ್ 8ರಂದು ಬರಲಿದ್ದು, ವಿಜಯ ದಶಮಿ…

ಈ ದಸರೆಗೆ ಮೈಸೂರು-ಬೆಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ
ಮೈಸೂರು

ಈ ದಸರೆಗೆ ಮೈಸೂರು-ಬೆಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ

October 5, 2018

ಮೈಸೂರು: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ನ್ಯಾಷನಲ್ ಕ್ಯಾರಿಯರ್ ಏರ್ ಇಂಡಿಯಾವು ಅಕ್ಟೋಬರ್ 10ರಿಂದ 20ರವರೆಗೆ ಈ ಬಾರಿಯ ದಸರಾ ವೇಳೆ ಮೈಸೂರು-ಬೆಂಗಳೂರು ನಡುವೆ ವಿಶೇಷ ವಿಮಾನ ಹಾರಾಟ ನಡೆಸಲಿದೆ. ಒಂದು ವೇಳೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ದಸರಾ ನಂತರವೂ ಸೇವೆಯನ್ನು ಮುಂದು ವರಿಸಲು ಏರ್ ಇಂಡಿಯಾ ಆಸಕ್ತಿ ವಹಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(KSTDC) ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಸ್ಥೆ ಅಧಿಕಾರಿಗಳು ಏರ್ ಇಂಡಿಯಾದೊಂದಿಗೆ ಚರ್ಚಿಸಿ, ದಸರೆಗೆ ಈ ಸೌಲಭ್ಯ…

ಖಾಸಗಿ ದರ್ಬಾರ್‌ಗೆ ಭಾರೀ ಭದ್ರತೆ ನಡುವೆ ಶಾಸ್ತ್ರೋಕ್ತ ಸಿಂಹಾಸನ ಜೋಡಣೆ
ಮೈಸೂರು

ಖಾಸಗಿ ದರ್ಬಾರ್‌ಗೆ ಭಾರೀ ಭದ್ರತೆ ನಡುವೆ ಶಾಸ್ತ್ರೋಕ್ತ ಸಿಂಹಾಸನ ಜೋಡಣೆ

October 5, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಚರಣೆ ಖಾಸಗಿ ದರ್ಬಾರ್ ಅ.10ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಬಿಗಿ ಭದ್ರತೆಯಲ್ಲಿ ಅರಮನೆ ನೆಲಮಾಳಿಗೆಯ ಭದ್ರತಾ ಕೊಠಡಿಯಿಂದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್‍ಗೆ ತಂದು ಜೋಡಿಸಲಾಯಿತು. ಯದುವಂಶ ಪರಂಪರೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ನವರಾತ್ರಿಯ ವೇಳೆ ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ದಿನಕ್ಕೆ ಎರಡು ಬಾರಿ ಖಾಸಗಿ ದರ್ಬಾರ್ ನಡೆಯಲಿದೆ. ಶತಮಾನದ ಇತಿಹಾಸವಿರುವ ಚಿನ್ನದ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸ ಲಿದ್ದಾರೆ….

ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ
ಮೈಸೂರು

ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ

October 4, 2018

ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‍ಗೂ ಆಮಂತ್ರಣ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರಿಗೆ ಸರ್ಕಾರ ಆಹ್ವಾನ ನೀಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸುಧಾಮೂರ್ತಿ ಅವರನ್ನು ಭೇಟಿ ಮಾಡಿ ವಿಧ್ಯುಕ್ತವಾಗಿ ಆಹ್ವಾನ ನೀಡಿದರು. ನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ಆಗಮಿಸಿದ ನಿಯೋಗ, ಸುಧಾ ಮೂರ್ತಿಯವರಿಗೆ ದಸರಾ ಹಬ್ಬ ಉದ್ಘಾಟಕರಾಗಿ…

1 2 3 4 5 6 11
Translate »