Tag: Dasara 2018

ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ
ಮೈಸೂರು

ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ

October 4, 2018

ಮೈಸೂರು: ವಿಶ್ವ ಪ್ರಸಿದ್ಧ ಐತಿಹಾಸಿಕ ದಸರಾ ಮಹೋತ್ಸವವು ಈ ಬಾರಿ ಪೂಜ್ಯ ಮಹಾಪೌರರಿಲ್ಲದೆ ನಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜನಮನ ಸೂರೆಗೊಳ್ಳುವ ವಿಜಯದಶಮಿ ಮೆರವಣಿಗೆ ಯಲ್ಲಿ ಮೇಯರ್ ಗೌನ್ ತೊಟ್ಟು, ಕುದುರೆ ಮೇಲೆ ಸವಾರಿ ಮಾಡುವುದು ಸಂಪ್ರದಾಯವಾಗಿ ಬಂದಿರುವ ಪದ್ಧತಿ ಹಾಗೂ ದಸರಾ ಮಹೋತ್ಸವದ ಪ್ರತಿಯೊಂದು ಕಾರ್ಯ ಕ್ರಮದಲ್ಲೂ ಮೇಯರ್ ಉಪಸ್ಥಿತರಿದ್ದು, ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದರು. ಆದರೆ ಈಗ ಮೊದಲ ಬಾರಿಗೆ ಮೇಯರ್ ಇಲ್ಲದ ದಸರಾ ನಡೆಯುತ್ತಿದೆ. ಪಾಲಿಕೆಯ ಎಲ್ಲಾ 65 ವಾರ್ಡುಗಳ ಸದಸ್ಯರು ಆಯ್ಕೆಗೊಂಡು ತಿಂಗಳು…

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ
ಮೈಸೂರು

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ

October 4, 2018

ಮೈಸೂರು: ಒಂದೆಡೆ ಕನ್ನಡ ನಾಡು-ನುಡಿ, ಮಹಿಳಾ ಸಬಲೀಕರಣ, ದೇಶಪ್ರೇಮ, ಕಾಡಿನ ನಾಶ-ಮನುಷ್ಯನ ವಿನಾಶ, ಮರ ಬೆಳೆಸಿ-ತಾಪ ಇಳಿಸಿ ಸಂದೇಶಗಳನ್ನು ಸಾರುತ್ತಿದ್ದರೆ, ಮತ್ತೊಂದೆಡೆ ಮಳೆಯ ಆರ್ಭಟದ ನಡುವೆಯೂ ಯುವ ಸಂಭ್ರಮ. ಈ ಸಂಭ್ರಮದಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ ಯುವ ಸಮೂಹ. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 4ನೇ ದಿನವಾದ ಬುಧವಾರ ಸಂಜೆ ಮಳೆಯ ಆರ್ಭಟದ ನಡುವೆಯೂ ಯುವ ಸಮೂಹ ಕುಣಿದು ಕುಪ್ಪಳಿಸಿ, ಎಂಜಾಯ್…

ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ
ಮೈಸೂರು

ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ

October 4, 2018

ಮೈಸೂರು:  ಮೈಸೂರಿನ ಲಲಿತ ಮಹಲ್ ಪಕ್ಕದಲ್ಲಿರುವ 7 ಎಕರೆ ಭೂಮಿ ತಮ್ಮದೆಂದು ಫಲಕ ಅಳವಡಿಸಿರುವ ಎಸ್.ಮೀನಾಕ್ಷಿ ಅವರು, ಸದರಿ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದಂತೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. `ಮೈಸೂರು ತಾಲೂಕು, ಕಸಬಾ ಹೋಬಳಿ, ಕುರುಬಾರಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಎ ಬ್ಲಾಕ್‍ನಲ್ಲಿ 5 ಎಕರೆ ಹಾಗೂ ಸಿ ಬ್ಲಾಕ್‍ನಲ್ಲಿ 2 ಎಕರೆ ಸೇರಿದಂತೆ ಒಟ್ಟು 7 ಎಕರೆ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳ ಬಾರದು ಎಂದು ಸೆ.14ರಂದು ಆಕ್ಷೇಪಣೆ ಸಲ್ಲಿಸಿದ್ದ ಅವರು, ಸೆ.25ರಂದು ಸದರಿ ಜಮೀನಿನಲ್ಲಿ…

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ
ಮೈಸೂರು

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ

October 2, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ ಬಣ್ಣ-ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ವಿವಿಧ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಹಸಿರೆ ಉಸಿರು, ಗಿಡ ನಕ್ಕರೆ ಜಗ ನಗುತ್ತದೆ, ಗಿಡ ಅಳಿದರೆ ಜಗ ಅಳಿಯುತ್ತದೆ, ಮರ ಬೆಳೆಸಿ-ಬರ ಅಳಿಸಿ-ತಾಪ ಇಳಿಸಿ, ರೈತರೇ ಆತ್ಮಹತ್ಯೆ ಬೇಡ. ಆತ್ಮಸ್ಥೈರ್ಯ ಬೇಕು ಎಂಬಿತ್ಯಾದಿ ಸಂದೇಶಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು. ಮೈಸೂರು ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ದಸರಾ ‘ಯುವ ಸಂಭ್ರಮ’ದ 2ನೇ ದಿನವಾದ ಸೋಮವಾರ ಮರಗಳ ಚಿತ್ರಣವುಳ್ಳ ಬ್ಯಾನರ್ ಹಿಡಿದು ವೇದಿಕೆಗೆ ಆಗಮಿಸಿದ ಹುಣಸೂರು…

ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು

ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ

October 2, 2018

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ 21ರವರೆಗೆ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನ ಬಗೆ ಬಗೆಯ ಹೂವಿನ ಗಿಡಗಳು ಕಣ್ಮನ ಸೆಳೆಯುವುದರೊಂದಿಗೆ ಹೂವಿನಿಂದಲೇ ತಯಾರಿಸಿರುವ ಅಶೋಕ ಸ್ತಂಭ, ಪೆಂಗ್ವಿನ್, ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ ಆಕೃತಿಗಳು ಮುದ ನೀಡಲಿವೆ. ನವರಾತ್ರಿಯ ಆರಂಭಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿದ್ದು, ಎಲ್ಲೆಡೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ನಡುವೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾದ ಫಲಪುಷ್ಪ ಪ್ರದರ್ಶನಕ್ಕಾಗಿ ಕುಪ್ಪಣ್ಣ…

ಅಲ್ಪ ದೂರ ದಸರಾ ಆನೆಗಳ ತಾಲೀಮಿನಲ್ಲಿ ಸಾಗಿದ ವಿಂಟೇಜ್ ಕಾರುಗಳು
ಮೈಸೂರು

ಅಲ್ಪ ದೂರ ದಸರಾ ಆನೆಗಳ ತಾಲೀಮಿನಲ್ಲಿ ಸಾಗಿದ ವಿಂಟೇಜ್ ಕಾರುಗಳು

October 2, 2018

ಮೈಸೂರು:  ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ವಿಂಟೇಜ್ ಕಾರುಗಳು ಸೋಮವಾರ ದಸರಾ ಆನೆಗಳ ತಾಲೀಮಿನಲ್ಲಿ ಅರಮನೆ ಆವರಣದಿಂದ ಕೆ.ಆರ್.ವೃತ್ತದವರೆಗೆ ಪಾಲ್ಗೊಂಡು ಗಮನ ಸೆಳೆದವು. ಈ ಹಿಂದೆ ನಿಗದಿಯಾಗಿದ್ದ ಸಮಯಕ್ಕಿಂತ ಒಂದು ಗಂಟೆ ತಡವಾಗಿ 12 ವಿಂಟೇಜ್ ಕಾರುಗಳು ಅರಮನೆಗೆ ಆಗಮಿಸಿದವು. ಎಂದಿನಂತೆ 7.30ಕ್ಕೆ ತಾಲೀಮಿಗೆ ಹೊರಡ ಬೇಕಾಗಿದ್ದ ಆನೆಗಳು ವಿಂಟೇಜ್ ಕಾರು ಗಳ ಆಗಮನಕ್ಕಾಗಿ ಕಾಯುತ್ತ ಅರಮನೆಯ ಆವರಣದಲ್ಲಿಯೇ ನಿಂತಿದ್ದವು. ಅಂತಿಮವಾಗಿ ಒಂದು ಗಂಟೆ ತಡವಾಗಿ ಬಲರಾಮ ದ್ವಾರದಿಂದ ಆರು ವಿಂಟೇಜ್ ಕಾರುಗಳ…

ಸಾಂಸ್ಕೃತಿಕ ನಗರಿಯಲ್ಲಿ ವಿಂಟೇಜ್ ಕಾರುಗಳ ಕಲರವ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ವಿಂಟೇಜ್ ಕಾರುಗಳ ಕಲರವ

October 1, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಬೆಂಗಳೂರಿಂದ ಮೈಸೂರಿಗೆ ಆಗಮಿಸಿದ ವಿವಿಧ ದೇಶಗಳ 50 ವಿಂಟೇಜ್ ಕಾರ್‍ಗಳು ನಗರದ ಪ್ರಮುಖ ರಸ್ತೆಗೆ ಇಳಿದು, ಸಾರ್ವಜನಿಕರು, ಪ್ರವಾಸಿಗರ ಮನಸೊರೆ ಗೊಂಡವು. ಅಂತೆಯೇ ಮಾನಿನಿಯರ ಮೊಬೈಲ್ ನಲ್ಲಿ ಸೆಲ್ಫಿಗೆ ಸೆರೆಯಾದ ದೃಶ್ಯ ಸಾಮಾನ್ಯವಾಗಿತ್ತು. ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ರ‍್ಯಾಲಿ ಜನರನ್ನು ಆಕರ್ಷಿಸಿದ ಪರಿಯಿದು. 1925ನೇ…

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು
ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು

October 1, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಹಾಗೂ ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆಯ ಸ್ಥಳದಲ್ಲಿ ಎರಡನೆ ಹಂತದ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು. ಜಂಬೂ ಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತ್ ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ವಾಡಿಕೆಯಿರುವ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನ ಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ಸಿದ್ಧಗೊಳಿಸುವುದಕ್ಕಾಗಿ ಸಿಡಿ…

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ
ಮೈಸೂರು

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ

October 1, 2018

ಮೈಸೂರು: ನಶಿಸಿ ಹೋಗುತ್ತಿರುವ ಕುಸ್ತಿ, ಕಬಡ್ಡಿ, ಖೋಖೋ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವುಗಳ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಲಹೆ ನೀಡಿದ್ದಾರೆ. ಮೈಸೂರಿನ ದಸರಾ ವಸ್ತು ಪ್ರದರ್ಶ ನದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂದಿರದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸ ಲಾಗಿದ್ದ…

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ

October 1, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋ ತ್ಸವದ ಅಂಗವಾಗಿ ಆಯೋಜಿಸಿರುವ ಮೊದಲ ಕಾರ್ಯಕ್ರಮ `ಯುವ ಸಂಭ್ರಮ’ದ ಮೊದಲ ದಿನವೇ ವರುಣನ ಸಿಂಚನವಾಯಿತು. ಸುಂದರ ಇಳಿ ಸಂಜೆಯಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಒಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡೋಲು ಬಾರಿಸುವ ಮೂಲಕ `ಯುವ ಸಂಭ್ರಮ’ಕ್ಕೆ ಅದ್ಧೂರಿ ಚಾಲನೆ ನೀಡಿದರೆ, ಮತ್ತೊಂದೆಡೆ ಉಕ್ರೆನ್‍ನ ನೃತ್ಯಗಾರ್ತಿ ಯುಲಿಯಾ ಅವರು ವಿನೂತನ ಶೈಲಿಯಲ್ಲಿ ಕ್ಲಸ್ಟರ್ ಹೀಲಿಯಂ ಬಲೂನ್ ಗುಚ್ಛದ ಮೂಲಕ 100 ಅಡಿ ಎತ್ತರಕ್ಕೆ ಹಾರಿ `ಯುವ…

1 3 4 5 6 7 11
Translate »