Tag: Gonikoppal

ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ
ಕೊಡಗು

ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ

October 30, 2018

ಗೋಣಿಕೊಪ್ಪಲು: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘ ದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್ ಅವರು ಅಭಿಪ್ರಾಯಪಟ್ಟರು. ತಿತಿಮತಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಆರಂಭದಿಂದಲೂ ಹಲವು ಹೋರಾಟಗಳ ಮೂಲಕವೇ ರೈತರ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿದ್ದೇವೆ….

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ
ಕೊಡಗು

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ

October 21, 2018

ಗೋಣಿಕೊಪ್ಪಲು: ಸರಳ ದಸರಾ ಮೂಲಕ 40 ನೇ ವರ್ಷದ ಗೋಣಿಕೊಪ್ಪ ದಸರಾ ತೆರೆ ಎಳೆದುಕೊಂಡಿತು. ಸಾಂಪ್ರದಾಯಿಕ ಆಚರಣೆಯಂತೆ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ತೇರುಗಳು ಸಾಗಿದವು. ಶಾಸಕ ಕೆ.ಜಿ. ಬೋಪಯ್ಯ, ಕಾವೇರಿ…

ತಿತಿಮತಿಯಲ್ಲಿ ಕಾಡಾನೆ ದಾಂಧಲೆ: ಆರ್‍ಆರ್‍ಟಿ ಕ್ಷಿಪ್ರ ಕಾರ್ಯಾಚರಣೆಯಿಂದ ಗ್ರಾಮಸ್ಥರು ಬಚಾವ್
ಕೊಡಗು

ತಿತಿಮತಿಯಲ್ಲಿ ಕಾಡಾನೆ ದಾಂಧಲೆ: ಆರ್‍ಆರ್‍ಟಿ ಕ್ಷಿಪ್ರ ಕಾರ್ಯಾಚರಣೆಯಿಂದ ಗ್ರಾಮಸ್ಥರು ಬಚಾವ್

October 13, 2018

ಗೋಣಿಕೊಪ್ಪ:  ಕಾಡಾನೆ ಯೊಂದು ಗ್ರಾಮಕ್ಕೆ ನುಗ್ಗಿ ಆತಂಕ ಮೂಡಿ ಸಿದ್ದ ಸಂದರ್ಭ ತಿತಿಮತಿ ಆರ್‍ಆರ್‍ಟಿ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆ ಯಿಂದಾಗಿ ನೂರಾರು ಜನರ ಪ್ರಾಣ ಉಳಿಯುವಂತಾಗಿದೆ. ತಿತಿಮತಿ ಮುಖ್ಯ ರಸ್ತೆಗೂ ಬಂದ ಒಂಟಿ ಗಂಡಾನೆ, ಜನರನ್ನು ಅಟ್ಟಾಡಿಸಲು ಮುಂದಾಯಿತು, ತಾನು ನಡೆದದ್ದೆ ದಾರಿ ಎಂದು ತೋಟ, ಗ್ರಾಮಕ್ಕೆ ನುಗ್ಗಿದ ಕಾಡಾನೆಯನ್ನು ನಿಯಂತ್ರಿಸಿ, ಜನರನ್ನು ರಕ್ಷಿಸಲು ಆರ್‍ಆರ್‍ಟಿ ತಂಡ ಮುಂದಾ ಯಿತು. ಕಾಡಾನೆ ತೆರಳುವ ದಾರಿ ಯಲ್ಲಿದ್ದವರನ್ನು ಓಡಿ ತಪ್ಪಿಸಕೊಳ್ಳಲು ತಂಡ ನೆರವಾಯಿತು. ಇದರಂತೆ ನೂರಾರು ಜನರನ್ನು…

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ
ಕೊಡಗು

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ

October 8, 2018

ಗೋಣಿಕೊಪ್ಪಲು: ಪಟ್ಟಣದ ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಲಾಗು ವುದು ಎಂದು ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಹೇಳಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಡೆದ ರಸ್ತೆ ಸಂಚಾರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ವಾಹನ ದಟ್ಟಣೆ ನಿವಾರಣೆಗೆ ಅಂಗಡಿ ಮಾಲೀಕರ ಸಹಾಯ ಬೇಕಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು 50 ಮೀಟರ್‍ಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋ ಜಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರಿಗೆ ಟ್ರಾಫಿಕ್ ಸಮಸ್ಯೆ ಮಾಡ ದಂತೆ ಎಚ್ಚರ ನೀಡಲಾಗಿದೆ. ಸಾರ್ವಜನಿ…

ಎಪಿಎಂಸಿ: ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಬೆಲೆ
ಕೊಡಗು

ಎಪಿಎಂಸಿ: ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಬೆಲೆ

October 5, 2018

ಗೋಣಿಕೊಪ್ಪಲು: ಪ್ರಧಾನಿ ನರೇಂದ್ರ ಮೋದಿ ಚಿಂತನೆಯಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆನ್‍ಲೈನ್ ವ್ಯವಸ್ಥೆ ಯಿಂದಾಗಿ ಮಾರುಕಟ್ಟೆ ಆವರಣ ದಲ್ಲಾಳಿ ಗಳಿಂದ ಮುಕ್ತವಾಗುವಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಗತಿಪರ ರೈತರು ಹಾಗೂ ವರ್ತಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗೆ ಮಾರುಕಟ್ಟೆಯಿಂದ ಉತ್ತಮ ಧಾರಣೆ ದೊರಕುವಂತಾಗಬೇಕು, ದಲ್ಲಾಳಿ ಗಳ ಮಧ್ಯಸ್ಥಿಕೆಯಿಂದ ಅನುಭವಿಸುತ್ತಿದ್ದ ನಷ್ಟವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಮಾದರಿ ಪ್ರಯೋಗವನ್ನಾಗಿಸಿ ಆನ್‍ಲೈನ್ ಮಾರು…

ಪರಿಸರದೊಂದಿಗೆ ಆತ್ಮ ವಿಶ್ವಾಸದಿಂದ ಬದುಕು ಸಾಗಲಿ…..
ಕೊಡಗು

ಪರಿಸರದೊಂದಿಗೆ ಆತ್ಮ ವಿಶ್ವಾಸದಿಂದ ಬದುಕು ಸಾಗಲಿ…..

October 3, 2018

ಗೋಣಿಕೊಪ್ಪಲು: ಕಳೆದುಕೊಂಡಿ ರುವುದನ್ನು ನೆನೆಸಿಕೊಂಡು ಭವಿಷ್ಯ ಕಳೆದು ಕೊಳ್ಳುವುದಕಿಂತ ಆತ್ಮವಿಶ್ವಾಸದಿಂದ ಕೊಡ ಗಿನ ಪರಿಸರ ಉಳಿಸಿಕೊಂಡು ಬದುಕು ಸಾಗಿಸುವಂತಾಗಬೇಕು ಎಂಬ ಸಂದೇಶ ವನ್ನು ಮ್ಯಾಜಿಕ್ ಮಾಂತ್ರಿಕ ಮೈಸೂರಿನ ರಾಜ್‍ಭಟ್ ಮ್ಯಾಜಿಕ್ ಮೂಲಕ ಅನಾ ವರಣಗೊಳಿಸಿ ಸಂತ್ರಸ್ತ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಿದರು. ಭೂಕುಸಿತಕ್ಕೆ ಒಳಗಾಗಿ ಬದುಕು ಕಳೆದು ಕೊಂಡು ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆ ಯುತ್ತಿರುವ ಮಕ್ಕಳಿಗೆ ಆತ್ಮ ವಿಶ್ವಾಸ ಮೂಡಿ ಸಲು ಕಕೂನ್ ರೆಸ್ಟೊರೆಂಟ್ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮ್ಯಾಜಿಕ್ ಮೂಲಕ ಅತ್ಮವಿಶ್ವಾಸ…

ವಿವಿಧೋದ್ದೇಶ ಸಹಕಾರ ಸಂಘಕ್ಕೆ 9 ಲಕ್ಷ ಲಾಭ
ಕೊಡಗು

ವಿವಿಧೋದ್ದೇಶ ಸಹಕಾರ ಸಂಘಕ್ಕೆ 9 ಲಕ್ಷ ಲಾಭ

October 3, 2018

ಸೋಮವಾರಪೇಟೆ: ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ರೂ.9 ಲಕ್ಷ ಲಾಭಗಳಿಸಲು ಸಹಕಾರಿಯಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ.ಶಿವಕುಮಾರ್ ಹೇಳಿದರು. ಇಲ್ಲಿನ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ದರು. ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗುರುತಿಸಿದ್ದು, 2017-18ನೇ ಸಾಲಿನ ಆಡಿಟ್ ವರದಿಯಲ್ಲಿ ‘ಎ’ ದರ್ಜೆಯನ್ನು ಪಡೆದಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸವಲತ್ತು ನೀಡುವ…

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಕರೆ
ಕೊಡಗು

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಕರೆ

October 2, 2018

ಗೋಣಿಕೊಪ್ಪಲು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಬಹುಮತದಿಂದ ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಕ್ಷೇತ್ರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ನರೇಂದ್ರಮೋದಿ ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರುಗಳಿಂದ ಆಗಬೇಕಿದೆ. ಮೋದಿ ಅವರ ಯೋಜನೆಗಳು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಾದರೆ ಬಿಜೆಪಿ ಪರ ಮತಗಳ ರೂಪದಲ್ಲಿ ಪರಿವರ್ತನೆಗೊಳ್ಳುವಂತೆ ಕೇಂದ್ರ ಸರ್ಕಾರದ…

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ
ಕೊಡಗು

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ

September 18, 2018

ಗೋಣಿಕೊಪ್ಪಲು:  ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆ ಉತ್ಸುಕತೆ ತೋರುತ್ತಿಲ್ಲ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಗಂಭೀರ ಆರೋಪ ಮಾಡಿದರು. ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ವಿರಾಜಪೇಟೆ ತಾಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಬಕಾರಿ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಾರಾಟದ ಬಗ್ಗೆ ಜನರು ದೂರು ನೀಡಿದರೂ ಕ್ರಮಕ್ಕೆ ಮುಂದಾಗುವುದಿಲ್ಲ. ಇಲಾಖೆಯ ಚಾಲಕರ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ…

ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ
ಕೊಡಗು

ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ

September 17, 2018

ಗೋಣಿಕೊಪ್ಪಲು: ನಾಯಕತ್ವದ ಗುಣವಿದ್ದರೆ ಅವಕಾಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ ಹೇಳಿದರು. ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕತಿಕ ಸಂಘವನ್ನು ಉದ್ಘಾಟಿಸಿದ ಅವರು, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಬಗೆಯ ಪ್ರತಿಭೆಗಳು ಅಡಗಿರುತ್ತವೆ. ಇವುಗಳನ್ನು ಹೊರತರುವುದಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ ಯಾಗುತ್ತವೆ. ವಿದ್ಯಾರ್ಥಿಗಳು ಹಿಂಜರಿಕೆಯನ್ನು ಬಿಟ್ಟು ಮುಕ್ತವಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬೇಕು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಪರಿ ಪೂರ್ಣತೆ ಗಳಿಸಲು ಮುಂದಾಗಬೇಕು ಎಂದರು….

1 2 3 4 5 9
Translate »