Tag: Gonikoppal

ಅಕ್ರಮ ಮರ ಸಾಗಾಣಿಕೆ; 4 ವಾಹನ, 20 ಲಕ್ಷ ಮೌಲ್ಯದ ಮರ ವಶ, ಮೂವರ ಸೆರೆ
ಕೊಡಗು

ಅಕ್ರಮ ಮರ ಸಾಗಾಣಿಕೆ; 4 ವಾಹನ, 20 ಲಕ್ಷ ಮೌಲ್ಯದ ಮರ ವಶ, ಮೂವರ ಸೆರೆ

September 16, 2018

ಗೋಣಿಕೊಪ್ಪಲು: ಅಕ್ರಮ ಮರ ಸಾಗಾಟ ಆರೋಪದಡೀ ನಾಲ್ಕು ವಾಹನ ಸೇರಿದಂತೆ ಅಂದಾಜು 20 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 1 ಲಾರಿ, 1 ಮಜ್ದಾ, 1 ಕ್ರೈನ್, 1 ಜೀಪು ವಶ ಪಡಿಸಿಕೊಳ್ಳಲಾಗಿದ್ದು, ಆರೊಪಿಗಲಾದ ನಾಚಪ್ಪ, ವಿಜಯ್, ರಾಜ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ…

ಸ್ಕೂಟರ್‍ನಿಂದ ಬಿದ್ದು ಸವಾರ ಸಾವು
ಮೈಸೂರು

ಸ್ಕೂಟರ್‍ನಿಂದ ಬಿದ್ದು ಸವಾರ ಸಾವು

September 16, 2018

ಗೋಣಿಕೊಪ್ಪಲು:  ಸ್ಕೂಟರ್‍ನಿಂದ ಬಿದ್ದು ಸವಾರ ಸಾವನಪ್ಪಿರುವ ಘಟನೆ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬಲ್ಯಮುಂಡೂರು ಗ್ರಾಮದ ರವಿ (48) ಮೃತ ವ್ಯಕ್ತಿ. ಪೊನ್ನಂಪೇಟೆಯಿಂದ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಆಯಾತಪ್ಪಿ ಬಿದ್ದು ತಲೆಗೆ ಗಂಭೀರ ಗಾಯವಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನಪ್ಪಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ಕೊಡಗು

ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು

September 6, 2018

ಗೋಣಿಕೊಪ್ಪಲು: ಸವಾರನೊಬ್ಬ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಹುದಿಕೇರಿ ಏಳನೇ ಮೈಲಿನ ನಿವಾಸಿ ದಿ.ನಾಚಪ್ಪನವರ ಮಗ ನೆಲ್ಲಮಾಡ ಚೇತನ್ ರಾಯ್ (31). ಮಂಗಳ ವಾರ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಕೆಲಸ ಮುಗಿಸಿ ಬಾಳೆಲೆಯಿಂದ ಹುದಿಕೇರಿಯ ತನ್ನ ಮನೆಗೆ ಬೈಕ್‍ನಲ್ಲಿ ಬರುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬೈಕ್ ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಸಮೀಪದ ಕಾಫಿ ತೋಟದ ಒಳಗೆ ನುಗ್ಗಿ ಬಿದ್ದಿದೆ. ನರಳಾಳುತ್ತಿದ್ದ ಈತನನ್ನು ಗ್ರಾಮಸ್ಥರು ಗಮನಿಸಿ ಕೂಡಲೇ…

ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು
ಕೊಡಗು

ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು

September 3, 2018

ಗೋಣಿಕೊಪ್ಪಲು: ರಸ್ತೆ ಬದಿ ಯಲ್ಲಿ ಗಂಧದ ಮರ ಕಡಿದು ಹಾಗೆಯೇ ಬಿಟ್ಟು ಹೋಗಿರುವ ಘಟನೆ ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.ಅಲ್ಲಿನ ಮುಕ್ಕಾಟೀರ ಕಾಶಿ ಎಂಬುವ ವರ ಮನೆ ಎದುರಿನ ರಸ್ತೆ ಬದಿಯಲ್ಲಿದ್ದ ಮರವನ್ನು ಕಳ್ಳತನಕ್ಕೆ ಬಂದಿದ್ದ ಕಳ್ಳರು ಕಡಿದು ಹಾಕಿದ್ದರು. ಆದರೆ, ಒಳಗೆ ಸೇಗು ಇಲ್ಲದ ಕಾರಣ ಹಾಗಯೇ ಬಿಟ್ಟುಹೋಗಿ ದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ತಂಡ ಪರಿಶೀಲನೆ ನಡೆಸಿ ತುಂಡುಗಳನ್ನು ವಶಕ್ಕೆ ತೆಗೆದುಕೊಂಡರು. ಶನಿವಾರ ತಡರಾತ್ರಿ…

ಅಳಿಯನ ಮನೆಯತ್ತ ಮಾವನ ಆಗಮನ!
ಕೊಡಗು

ಅಳಿಯನ ಮನೆಯತ್ತ ಮಾವನ ಆಗಮನ!

August 21, 2018

ಗೋಣಿಕೊಪ್ಪಲು: ವಿಪರೀತ ಮಳೆ, ಗಾಳಿಯಿಂದ ಸಿಲುಕಿ ನರಕ ಯಾತನೆ ಅನುಭವಿಸಿದ ಹೆಬ್ಬಟ್ಟಗೇರಿ, ಮುಕ್ಕೋಡ್ಲು ಗ್ರಾಮದ ವಯೋವೃದ್ದ ಚಂದ್ರು ಎಂಬಾತ ಮೂರು ದಿನಗಳ ಕಾಲ ಕಾಡಿನಲ್ಲಿ ನಡೆದುಕೊಂಡೇ ಬಂದು, ಮುಖ್ಯರಸ್ತೆ ತಲುಪಿದ ನಂತರ ಸಿಕ್ಕಿದ ಟ್ರಕ್ ನಲ್ಲಿ ತನ್ನ ಅಳಿಯನ ಊರು ದೇವರಪುರಕ್ಕೆ ಆಗಮಿಸಿದ್ದಾರೆ. ವಯೋವೃದ್ಧನೊಂದಿಗೆ ಹೆಬ್ಬಟ್ಟಗೇರಿಯ ಅಕ್ಕಪಕ್ಕದ 40 ನಿವಾಸಿಗಳು ಸಹ ಆಗಮಿಸಿದ್ದು, ದೇವರಪುರದ ಅಂಬುಕೋಟೆಯಲ್ಲಿರುವ ಚಂದ್ರುವಿನ ಅಳಿಯ ವಿವೇಕ್ ಅವರ ಮನೆಯಲ್ಲಿ ಸದ್ಯಕ್ಕೆ ಆಶ್ರಯ ಪಡೆದಿದ್ದಾರೆ. ದಿಢೀರನೇ ಮನೆಗೆ ಆಗಮಿಸಿದ ಮಾವ ಹಾಗೂ 40 ಮಂದಿಗೆ…

ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ
ಕೊಡಗು

ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ

August 14, 2018

ಗೋಣಿಕೊಪ್ಪಲು:  ತಟ್ಟೆಕೆರೆ ಹಾಡಿ ಯಿಂದ ಗಿರಿಜನರು ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರು ವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ತಟ್ಟೆಕೆರೆ ಹಾಡಿ ನಿವಾಸಿ ಗಳು ನಿಟ್ಟೂರು ಗ್ರಾಮ ಪಂಚಾಯ್ತಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜಮಾ ಯಿಸಿರುವ ಹಾಡಿ ನಿವಾಸಿಗಳು, ನಮ್ಮನ್ನು ಬಲತ್ಕಾರವಾಗಿ ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಆಶ್ವಾಸನೆ ಸಿಗುವವರೆಗೂ ಹೋರಾಟ ನಡೆಸುವು ದಾಗಿ ಪಟ್ಟುಹಿಡಿದು, ಪ್ರತಿಭಟನೆ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ ನಿರಂತರವಾಗಿ ಮಾನಸಿಕ ಕಿರುಕುಳ…

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ
ಕೊಡಗು

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ

August 10, 2018

ಗೋಣಿಕೊಪ್ಪಲು: ಅಮ್ಮತ್ತಿ-ಸಿದ್ದಾಪುರ ಮುಖ್ಯರಸ್ತೆ ಅಡ್ಡವಾಗಿ ಮರ ಬಿದ್ದು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮ್ಮತ್ತಿಯಿಂದ 1 ಕಿ. ಮೀ. ದೂರದಲ್ಲಿ ಮರವೊಂದು ಅಡ್ಡವಾಗಿ ಬಿದ್ದು, ವಾಹನ ಸಂಚರಿಸದೆ ತೊಂದರೆ ಉಂಟಾಯಿತು. ಸುಮಾರು 1 ಗಂಟೆಗಳ ಕಾಲ ರಸ್ತೆ ಉದ್ದಕ್ಕೂ ವಾಹನಗಳು ಸಾಲಾಗಿ ನಿಂತಿದ್ದವು. ನಂತರ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ
ಕೊಡಗು

ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ

August 8, 2018

ಗೋಣಿಕೊಪ್ಪಲು: ದಕ್ಷಿಣ ಕೊಡ ಗಿನ ಕುಟ್ಟ ಪಂಚಾಯ್ತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಹುಲಿ ದಾಳಿ ನಡೆದಿದ್ದು, ಹಸುವೊಂದು ಬಲಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ರೈತ ಮುಂಡುಮಾಡ ಅಯ್ಯಣ್ಣ ಎಂಬುವರ ಹಸು ಕಾಣೆಯಾಗಿತ್ತು. ಈ ಬಗ್ಗೆ ಸಮೀಪದ ತೋಟದಲ್ಲಿ ಹುಡುಕಾಟ ನಡೆಸಿ ದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ರೈತ ಸಂಘದ ಮುಖಂಡ ರಾದ ಅಜ್ಜಮಾಡ ಚಂಗಪ್ಪ, ಅರಣ್ಯ ಹಿರಿಯ ಅಧಿಕಾರಿಗಳಾದ ಡಿಸಿಎಫ್ ಜಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹುಲಿ ದಾಳಿಯ ಬಗ್ಗೆ ಮಾಹಿತಿ…

ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ
ಕೊಡಗು

ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ

August 8, 2018

ಗೋಣಿಕೊಪ್ಪಲು:  ಕಣ್ಣಂಗಾಲ ಗ್ರಾಪಂ ವ್ಯಾಪ್ತಿಯ ದೇವರಮೊಟ್ಟೆ ಪೈಸಾರಿಯ ಸಾರ್ವಜನಿ ಕರ ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಅನ್ನು ಆಗಿಂದ್ದಾಗ್ಗೆ ಕಿಡಿಗೇಡಿಗಳು ಒಡೆದು ಹಾಕುತ್ತಿರುವ ಹಿನ್ನಲೆಯಲ್ಲಿ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಈ ಬಗ್ಗೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ಉಪ ಠಾಣೆಯ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನಿರಂತರವಾಗಿ ಈ ಭಾಗದ ಜನರನ್ನು ಗುರಿಯಾಗಿ ಇಟ್ಟುಕೊಂಡಿರುವ ಕೆಲವು ಕಿಡಿಗೇಡಿಗಳು ಈ ರೀತಿ ಪೈಪ್ ಲೈನ್‍ಅನ್ನು ಹಾಳು ಮಾಡುತ್ತಿದ್ದು ಈ ಪೈಪ್ ಲೈನ್ ದುರಸ್ಥಿಗಾಗಿ ಸಾಕಷ್ಟು…

ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ
ಕೊಡಗು

ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ

August 7, 2018

ಗೋಣಿಕೊಪ್ಪ: ಈ ನೆಲದ ಕೃಷಿಯಲ್ಲಿ ಕೊಡವ ಸಂಸ್ಕೃತಿ ಅಡಗಿದೆ. ಆಚರಣೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಪೂರ್ವಜರು ಕಷ್ಟ ಪಟ್ಟು ಮಾಡಿಟ್ಟಿರುವ ಈ ಭೂಮಿಯನ್ನು ಪರಂಪರೆಯಂತೆ ಕೃಷಿ ಮಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಯುವ ಪೀಳಿಗೆಗಿದೆ. ಗದ್ದೆಯನ್ನು ಪಾಳು ಬಿಡಬಾರದು. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯು ಕೃಷಿಗೆ ಉತ್ತೇಜನ ನೀಡುವಂತಹ ಬೇಲ್ ನಮ್ಮೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ತಿಳಿಸಿದರು. ಕರ್ನಾಟಕ ಕೊಡವ ಸಾಹಿತ್ಯ…

1 2 3 4 5 6 9
Translate »