ತಿತಿಮತಿಯಲ್ಲಿ ಕಾಡಾನೆ ದಾಂಧಲೆ: ಆರ್‍ಆರ್‍ಟಿ ಕ್ಷಿಪ್ರ ಕಾರ್ಯಾಚರಣೆಯಿಂದ ಗ್ರಾಮಸ್ಥರು ಬಚಾವ್
ಕೊಡಗು

ತಿತಿಮತಿಯಲ್ಲಿ ಕಾಡಾನೆ ದಾಂಧಲೆ: ಆರ್‍ಆರ್‍ಟಿ ಕ್ಷಿಪ್ರ ಕಾರ್ಯಾಚರಣೆಯಿಂದ ಗ್ರಾಮಸ್ಥರು ಬಚಾವ್

October 13, 2018

ಗೋಣಿಕೊಪ್ಪ:  ಕಾಡಾನೆ ಯೊಂದು ಗ್ರಾಮಕ್ಕೆ ನುಗ್ಗಿ ಆತಂಕ ಮೂಡಿ ಸಿದ್ದ ಸಂದರ್ಭ ತಿತಿಮತಿ ಆರ್‍ಆರ್‍ಟಿ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆ ಯಿಂದಾಗಿ ನೂರಾರು ಜನರ ಪ್ರಾಣ ಉಳಿಯುವಂತಾಗಿದೆ.

ತಿತಿಮತಿ ಮುಖ್ಯ ರಸ್ತೆಗೂ ಬಂದ ಒಂಟಿ ಗಂಡಾನೆ, ಜನರನ್ನು ಅಟ್ಟಾಡಿಸಲು ಮುಂದಾಯಿತು, ತಾನು ನಡೆದದ್ದೆ ದಾರಿ ಎಂದು ತೋಟ, ಗ್ರಾಮಕ್ಕೆ ನುಗ್ಗಿದ ಕಾಡಾನೆಯನ್ನು ನಿಯಂತ್ರಿಸಿ, ಜನರನ್ನು ರಕ್ಷಿಸಲು ಆರ್‍ಆರ್‍ಟಿ ತಂಡ ಮುಂದಾ ಯಿತು. ಕಾಡಾನೆ ತೆರಳುವ ದಾರಿ ಯಲ್ಲಿದ್ದವರನ್ನು ಓಡಿ ತಪ್ಪಿಸಕೊಳ್ಳಲು ತಂಡ ನೆರವಾಯಿತು. ಇದರಂತೆ ನೂರಾರು ಜನರನ್ನು ಕಾಡಾನೆಯಿಂದ ರಕ್ಷಿಸಿದರು. ತಿತಿಮತಿ ಪಟ್ಟಣದ ಸಮೀಪದಿಂದ ಮುಖ್ಯ ರಸ್ತೆ ದಾಟಿದ ಕಾಡಾನೆ ಎಡತೊರೆ, ನೊಕ್ಯ ಗ್ರಾಮಕ್ಕೆ ನುಗ್ಗಿ ಗಾಬರಿಯಿಂದ ಓಡಾಡಿತು.

ಗುರುವಾರ ಮಧ್ಯಾಹ್ನ ತಿತಿಮತಿ ಬಿಸಿಕೆ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆ ಅಲ್ಲಿ ಜನರನ್ನು ಕಂಡು ಗಾಬರಿಗೊಂಡು ಗೋಣಿ ಕೊಪ್ಪ-ಮೈಸೂರು ಹೆದ್ದಾರಿಗೂ ಬಂದಿತ್ತು. ಇದನ್ನು ಅರಿತ ತಿತಿಮತಿ ಆರ್‍ಅರ್‍ಟಿ ತಂಡ ಆನೆ ಹೋಗುವ ದಾರಿಯಲ್ಲೇ ಸಾಗಿ ಜನರನ್ನು ಓಡಿ ತಪ್ಪಿಸಿಕೊಳ್ಳಲು ನೆರವಾದರು. ತಂಡವಾಗಿ ಕಾರ್ಯಾಚ ರಣೆ ನಡೆಸಿ ತೋಟದಲ್ಲಿದ್ದ ಕಾರ್ಮಿಕ ರನ್ನು ತಮ್ಮ ವಾಹನಗಳಿಗೆ ಹತ್ತಿಸಿಕೊಂಡು ರಕ್ಷಿಸಿದರು. ಎಡತೊರೆ, ನೊಕ್ಯಾ ಗ್ರಾಮಕ್ಕೆ ನುಗ್ಗಿದ ಸಂದರ್ಭ ತೋಟದಲ್ಲಿನ ಕಾರ್ಮಿ ಕರ ಮೇಲೆರಗುವುದನ್ನು ತಪ್ಪಿಸಿದರು. ಆನೆಯ ಮುಂದೆ ಓಡಿದ ಕಾರ್ಯಾಚರಣೆ ತಂಡ ಕಾಫಿ ತೋಟದಲ್ಲಿನ ಕಾರ್ಮಿಕರನ್ನು ಓಡಿ ತಪ್ಪಿಸಿಕೊಳ್ಳುವಂತೆ ಸೂಚಿಸಿದರು.

ನೊಕ್ಯಾ ಗ್ರಾಮದ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಎಂಬುವವರ ತೋಟದಲ್ಲಿ 4 ವರ್ಷದ ಮಗುವಿನೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ರಕ್ಷಿಸಿದರು. ಇದರ ಬೆನ್ನೆಲ್ಲೆ ಅದೇ ಸ್ಥಳಕ್ಕೆ ಬಂದ ಆನೆ ಅಲ್ಲಿ ದಾಂಧಲೆ ನಡೆಸಿತು. ಅದೃಷ್ಠ ವಶಾತ್ ಎಲ್ಲರೂ ಅನಾಹುತದಿಂದ ಪಾರಾ ಗಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸ ದಿದ್ದರೆ ಕಾರ್ಮಿಕರ ಜೀವಕ್ಕೆ ಅಪಾಯವಾ ಗುತ್ತಿತ್ತು ಎಂದು ಸ್ಥಳೀಯರು ತಿತಿಮತಿ ಆರ್‍ಆರ್‍ಟಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜೆ ಆನೆ ಮತ್ತೆ ಅರಣ್ಯ ಸೇರಿರುವುದರಿಂದ ಆ ಭಾಗದ ಜನರಲ್ಲಿ ಆತಂಕ ದೂರವಾಗಿದೆ.

Translate »