ಹಾಸನ: ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆ ಯುತ್ತಿದೆ. ಕಾಮಗಾರಿಗೆ ಬೇಕಾ ಗುವಂತಹ ಮಣ್ಣನ್ನು ಕೆಲವೆಡೆ ಗುತ್ತಿಗೆದಾರರು ಅವೈಜ್ಞಾನಿಕವಾಗಿ ತೆಗೆದಿದ್ದಾರಂತೆ. ಹೀಗೆ ಮಣ್ಣನ್ನು ಹಲವರ ಜಮೀನಿನಲ್ಲಿ ತೆಗೆದಿದ್ದಾರೆ. ಹಾಗಾಗಿ, ಇತ್ತೀಚೆಗಷ್ಟೇ ಮಳೆಯಾದ ಕಾರಣ ನೀರು ಗುಂಡಿಯಲ್ಲಿ ಶೇಖರಣೆಯಾಗಿ ಕೆಸರು ತುಂಬಿಕೊಂಡಿದೆ. ಈ ಕೆಸರಿನ ಗುಂಡಿಗೆ ಕಾಡಾನೆ ಕಾಲು ಜಾರಿ ಬಿದ್ದು,…
ರಾಮನಾಥಪುರದಲ್ಲಿ ಕಾರ್ತಿಕ ಪೂಜೆ, ರಾಮೇಶ್ವರಸ್ವಾಮಿ ಉತ್ಸವ
November 28, 2018ರಾಮನಾಥಪುರ: ಕಾರ್ತಿಕ ಮಾಸ ಮತ್ತು ವಿಷ್ಣು ದೀಪೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಇಲ್ಲಿಯ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ, ಶ್ರೀ ಸುಬ್ರ ಹ್ಮಣ್ಯಸ್ವಾಮಿ, ವರದಾನ ಬಸವೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಉತ್ಸ ವಾದಿಗಳು ವಿಜೃಂಭಣೆಯಿಂದ ಜರುಗಿದವು. ಪಟ್ಟಣದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವ ಸ್ಥಾನದ ಸಮಿತಿ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿಯಿಂದ ಕಾವೇರಿ ನದಿ ಸೋಪಾನಕಟ್ಟೆ ಸ್ವಚ್ಛಗೊಳಿಸ ಲಾಯಿತು. ಮೆಟ್ಟಿಲುಗಳ ಮೇಲೆ ನೂರಾರು ಭಕ್ತರು ಕಾರ್ತಿಕ ದೀಪ ಬೆಳಗಿಸಿದರು. ಅಲ್ಲದೆ, ಶ್ರೀ ಸುಬ್ರಹ್ಮಣ್ಯಸ್ವಾಮಿ, ರಾಮೇಶ್ವರ ಸ್ವಾಮಿ…
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಹಾತ್ಮರ ಮಾರ್ಗ ಅಗತ್ಯ
November 28, 2018ಅರಸೀಕೆರೆ: ಮಹಾತ್ಮರು ತೋರಿಸಿದ ಹಾದಿಯಲ್ಲಿ ಎಲ್ಲರೂ ಒಗ್ಗೂಡಿ ನಡೆದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಕನಕ ಗುರುಪೀಠ ಕೆ.ಆರ್.ನಗರ ಶಾಖಾ ಮಠ ಕಾಗಿನೆಲೆ ಮಹಾ ಸಂಸ್ಥಾನದ ಶಿವಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕಿನ ಗಂಡಸಿ ಹೋಬಳಿಯ ಕೆಂಕರೆ ಗ್ರಾಮದಲ್ಲಿ ಕನಕದಾಸ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ರೇವಣ್ಣ ಸಿದ್ದೇಶ್ವರ ಮಠದಿಂದ ನಡೆದ ಕನಕದಾಸರ ಪುತ್ಥಳಿ ಲೋಕಾರ್ಪಣೆ ಮತ್ತು ಕನಕದಾಸರ 531ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರು 15ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು….
ಯುರೇನಿಯಂ ನಿಕ್ಷೇಪದ ಹೆಸರಲ್ಲಿ ಊರು ಖಾಲಿ ಮಾಡಿಸಿದರೆ ಉಗ್ರ ಹೋರಾಟ
November 27, 2018ಅರಸೀಕೆರೆ: ನನ್ನ ಕ್ಷೇತ್ರದ ಜನತೆ ಮತ್ತು ರೈತರೇ ನನ್ನ ನಿಕ್ಷೇಪ. ಇವರ ಜಮೀನಿನಲ್ಲಿ ಖನಿಜ ಇದೆ ಎಂದು ಮೈನಿಂಗ್ ಮತ್ತು ಮ್ಯಾಪಿಂಗ್ ಮಾಡುವ ನೆಪದಲ್ಲಿ ಕಿರುಕುಳ ನೀಡಿ ಊರು ಖಾಲಿ ಮಾಡಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ನನ್ನ ನೇತೃತ್ವದಲ್ಲೇ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಒಡ್ಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇ ಗೌಡ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾಲೂಕಿನ ಶಶಿವಾಳ ಮತ್ತು ಮಾಡಾಳು ಗ್ರಾಮಗಳ ಸುತ್ತಮುತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು…
ಬೇಲೂರಿನಲ್ಲಿ ಸರಳ ಕನಕ ಜಯಂತಿ ಆಚರಣೆ
November 27, 2018ಬೇಲೂರು: ಪಟ್ಟಣದ ಕೋಟೆ ಕನಕ ಬಳಗದಿಂದ ಕನಕದಾಸರ ಬೀದಿ ಯಲ್ಲಿ ಸರಳವಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು. ಇಲ್ಲಿನ ಕನಕದಾಸರ ಬೀದಿಯಲ್ಲಿ ನಡೆದ ಕನಕ ಜಯಂತಿಯನ್ನು ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬಿ.ಎಲ್.ಧರ್ಮೇ ಗೌಡ ಉದ್ಘಾಟಿಸಿ ಮಾತನಾಡಿ, ಮಾಜಿ ವಸತಿ ಸಚಿವ ಅಂಬರೀಶ್ ಹಾಗೂ ಮಾಜಿ ರೈಲ್ವೆ ಮಂತ್ರಿ ಜಾಫರ್ ಷರೀಫ್ ಅವರ ನಿಧನದ ಹಿನ್ನಲೆಯಲ್ಲಿ ಸರಳವಾಗಿ ಕನಕ ಜಯಂತಿಯನ್ನು ಆಚರಣೆ ಮಾಡಲಾಗಿದೆ. ಕನಕದಾಸರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೆ ಎಲ್ಲಾ ಜಾತಿ, ಜನಾಂಗ ದವರಿಗೂ ಅವರ ದಾಸಪದಗಳು…
ಆದ್ಯತಾನುಸಾರ ಗ್ರಾಮೀಣ ಭಾಗಗಳಿಗೆ ಮೂಲಭೂತ ಸೌಕರ್ಯ: ಶಾಸಕ ಕೆ.ಎಸ್.ಲಿಂಗೇಶ್
November 27, 2018ಬೇಲೂರು: ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಅನುಸಾರ ಕಾಮಗಾರಿ ಮಾಡಿಸಲಾಗು ವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ನಬಾರ್ಡ್ ಯೋಜನೆಯಡಿ ತಾಲೂಕಿನ ನವಿಲಹಳ್ಳಿ ಕಂದಾವರ ನಡುವಿನ 2 ಕಿ.ಮೀ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇ ರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮೂಲ ಸೌಕರ್ಯದ ಕೊರತೆ ಕಂಡುಬರುತ್ತಿದೆ. ಕುಡಿಯುವ ನೀರು, ರಸ್ತೆ, ಚರಂಡಿ ಕೆಲಸ ಆಗಬೇಕಿದೆ. ಕೆಲವು ರಸ್ತೆಗಳಿಗೆ ಡಾಂಬರ್ ಹಾಗೂ ಜಲ್ಲಿ ಕಂಡು ಅನೇಕ ವರ್ಷಗಳೇ ಆಗಿವೆ. ಇಂತಹ ಗ್ರಾಮಗಳನ್ನು ಗುರುತಿಸಿ ಕೆಲಸ…
ಹೆಚ್.ಡಿ. ದೇವೇಗೌಡರ ಕುಟುಂಬದಿಂದ ಹರದನಹಳ್ಳಿ ಮನೆ ದೇವರಿಗೆ ವಿಶೇಷ ಪೂಜೆ
November 27, 2018ಹಾಸನ: ಕಾರ್ತಿಕ ಸೋಮವಾರದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿರುವ ತಮ್ಮ ಮನೆ ದೇವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ತಾಲೂಕಿನ ಹರದನಹಳ್ಳಿಯಲ್ಲಿರುವ ಈಶ್ವರ ದೇವಾ ಲಯಕ್ಕೆ ಭೇಟಿ ನೀಡಿದ ದೇವೇಗೌಡರು, ತಮ್ಮ ಕುಟುಂಬದೊಂದಿಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವೇ ಗೌಡರ ಪುತ್ರ ಸಚಿವ ಹೆಚ್.ಡಿ.ರೇವಣ್ಣ, ಸೊಸೆ ಭವಾನಿ, ಮೊಮ್ಮಕ್ಕಳಾದ ಡಾ.ಸೂರಜ್,…
ಜಮೀನಿಗೆ ಬಸ್ ಮಗುಚಿ 30ಕ್ಕೂ ಹೆಚ್ಚು ಮಂದಿಗೆ ಗಾಯ ಅರಕಲಗೂಡು ಬಳಿ ಘಟನೆ
November 27, 2018ಅರಕಲಗೂಡು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಜಮೀನಿಗೆ ನುಗ್ಗಿ, ಮಗುಚಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಅರಕಲಗೂಡು ಸಮೀಪದ ಉಳ್ಳೇನಹಳ್ಳಿ ಸೇತುವೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ವಧುವನ್ನು ಕರೆತರಲು ವರನ ಕಡೆಯವರು ಕುಶಾಲನಗರದಿಂದ ಖಾಸಗಿ ಬಸ್ ಬಾಡಿಗೆಗೆ ಪಡೆದು ಅರಿಯೂರಿನಿಂದ ಸೋಮವಾರ ಬೆಳಿಗ್ಗೆ ಹೊರಟಿದ್ದರು. ಬಸ್ ಅರಕಲಗೂಡು ಬಳಿ ಇರುವ ಹೆಬ್ಬಾಲೆ ಅತ್ನಿ ಕಡೆಗೆ ತೆರಳುತ್ತಿದ್ದಾಗ ಹುಲ್ಲೇನಹಳ್ಳಿ ಸಮೀಪ ಬೈಕ್ ಅನ್ನು ಓವರ್‍ಟೇಕ್ ಮಾಡಲು…
ಚನ್ನರಾಯಪಟ್ಟಣದಲ್ಲಿ ಗುಂಪು ಘರ್ಷಣೆ: ಲಾಠಿ ಚಾರ್ಜ್
November 27, 2018ಚನ್ನರಾಯಪಟ್ಟಣ: ಪಟ್ಟಣದ ಗಾಣಿಗರ ಬೀದಿಯ ಶನೇಶ್ವರ ದೇವಸ್ಥಾನದ ಗೋಪುರಕ್ಕೆ ಧ್ವಜ ಕಟ್ಟುವ ಸಂಬಂಧ ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ಪೆÇಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ತಹಬದಿಗೆ ತಂದರು. ಶನೇಶ್ವರ ದೇವಸ್ಥಾನದ ಗೋಪುರಕ್ಕೆ ಇತ್ತೀಚೆಗೆ ನಡೆದ ಈದ್ ಮಿಲಾದ್ ಆಚರಣೆ ವೇಳೆ ಒಂದು ಗುಂಪಿನ ಯುವಕರು ಬಂಡಿಂಗ್ಸ್ ಕಟ್ಟಿದ್ದರು. ಸೋಮ ವಾರ ಕಡೇ ಕಾರ್ತಿಕದ ಹಿನ್ನೆಲೆಯಲ್ಲಿ ಹಳೇ ಬಂಡಿಂಗ್ಸ್ ತೆರವುಗೊಳಿಸಿ ದೇವಸ್ಥಾನದ ಗೋಪುರಕ್ಕೆ ಕೇಸರಿ ಬಂಡಿಂಗ್ಸ್ ಕಟ್ಟಲು ಮತ್ತೊಂದು ಗುಂಪಿನ…
ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ
November 26, 2018ಹಾಸನ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅದನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕಿಂಗ್‍ಪಿನ್ ಸೇರಿದಂತೆ 117 ಮಂದಿಯನ್ನು ಹಾಸನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ.25 ರಂದು ನಡೆಯಬೇಕಾ ಗಿದ್ದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಪ್ರವೇಶ ಪರೀಕ್ಷೆಯನ್ನು ದಿನಾಂಕ ಸೂಚಿ ಸದೇ ಪೊಲೀಸ್ ನೇಮಕಾತಿ ವಿಭಾಗದ ಎಡಿ ಜಿಪಿ ಅವರು…