Tag: Mandya

ರಸ್ತೆಯಲ್ಲಿ ಕೋಳಿ ತ್ಯಾಜ್ಯದ ರಾಶಿ; ಕ್ರಮ ಕೈಗೊಳ್ಳದ ಗ್ರಾಪಂ
ಮಂಡ್ಯ

ರಸ್ತೆಯಲ್ಲಿ ಕೋಳಿ ತ್ಯಾಜ್ಯದ ರಾಶಿ; ಕ್ರಮ ಕೈಗೊಳ್ಳದ ಗ್ರಾಪಂ

March 20, 2020

ಶ್ರೀರಂಗಪಟ್ಟಣ, ಮಾ.19(ವಿನಯ್ ಕಾರೇಕುರ)-ತಾಲೂಕಿನ ನಗುವನಹಳ್ಳಿ – ಚಂದಗಾಲು ಗ್ರಾಮದ ಮದ್ಯೆ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯವನ್ನು ಸುರಿದಿದ್ದು ಗ್ರಾಪಂ ಅಧಿಕಾರಿಗಳು ಕಂಡರೂ ಕಾಣದಂತಿ ದ್ದಾರೆ ಎಂದು ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಚಂದಗಾಲು ಆರೋಪಿಸಿದ್ದಾರೆ. ನಗುವನಹಳ್ಳಿ,ಚಂದಗಾಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೋಳಿ ಅಂಗಡಿ ಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಗಾಡಿಗಟ್ಟಲೆ ಸುರಿದಿದ್ದು, ಅದು ಕೊಳೆತು ಗಬ್ಬು ವಾಸನೆ ಯಿಂದ ಕೂಡಿದೆ . ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ವಾಸನೆ ತಾಳಲಾರದೆ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ಉಂಟಾ ಗಿದೆ….

ಮೈಷುಗರ್ ಉಳಿಸಿ ಪಾದಯಾತ್ರೆ ತಂಡಕ್ಕೆ ತಡೆ; ಸಾತನೂರು ಗ್ರಾಮಸ್ಥರ ತರಾಟೆ
ಮಂಡ್ಯ

ಮೈಷುಗರ್ ಉಳಿಸಿ ಪಾದಯಾತ್ರೆ ತಂಡಕ್ಕೆ ತಡೆ; ಸಾತನೂರು ಗ್ರಾಮಸ್ಥರ ತರಾಟೆ

March 14, 2020

ಮಂಡ್ಯ,ಮಾ.13(ನಾಗಯ್ಯ)-ಮೈಷು ಗರ್ ಖಾಸಗೀಕರಣವನ್ನು ವಿರೋಧಿಸಿ ಡಾ.ರವೀಂದ್ರ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಗೆ ಇಂದು ಸಾತನೂರು ಗ್ರಾಮಸ್ತರು ತಡೆಯೊಡ್ಡಿ ತರಾಟೆಗೆ ತೆಗೆದು ಕೊಂಡ ಘಟನೆ ಜರುಗಿತು. ಪಾದಯಾತ್ರೆ ಆರಂಭಗೊಂಡ ನಾಲ್ಕನೇ ದಿನವಾದ ಇಂದು ಕೆರಗೋಡು ಮಾರ್ಗ ವಾಗಿ ಚಿಕ್ಕಮಂಡ್ಯಕ್ಕೆ ಆಗಮಿಸಿತು.ಅಲ್ಲಿ ಪ್ರತಿ ರೈತರು ಹಾಗೂ ಸಾರ್ವಜನಿಕರಿಂದ ತಲಾ 1 ರು ನಂತೆ ವಂತಿಗೆ ಸಂಗ್ರಹಿಸಿ ಬಳಿಕ ಸಾತನೂರಿಗೆ ಯಾತ್ರೆ ಬರುತ್ತಿದ್ದಂತೆ ಗ್ರಾಮಸ್ಥರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಡಾ.ರವೀಂದ್ರ ಮತ್ತು ಇತರೆ ಸಂಘಟನೆಗಳ ಪದಾಧಿ ಕಾರಿಗಳು ಖಾಸಗೀಕರಣದ ಬಗ್ಗೆ ಮನವ ರಿಕೆ…

ಕೆ.ಆರ್.ಎಸ್ ಬೃಂದಾವನದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ
ಮಂಡ್ಯ

ಕೆ.ಆರ್.ಎಸ್ ಬೃಂದಾವನದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ

March 14, 2020

ಶ್ರೀರಂಗಪಟ್ಟಣ,ಮಾ.13(ವಿನಯ್ ಕಾರೇಕುರ)-ಕೆ.ಆರ್.ಸಾಗರದ ಬೃಂದಾವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾವೇರಿ ನೀರಾವರಿ ನಿಗಮದ ವತಿ ಯಿಂದ ಪ್ರವಾಸಿಗರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಲಕ್ಷಣಗಳ ಬಗ್ಗೆ ಅರಿವಿರಲಿ, ನೆಗಡಿ, ಸೀನು,ಕೆಮ್ಮು ಇರುವವ ರಿಂದ ಎರಡು ಮೀಟರ್ ದೂರವಿರಿ, ಆಗಾಗ್ಗೆ ಕೈ ತೊಳೆ ಯಿರಿ, ಸ್ವಚ್ಛತೆಗೆ ಗಮನ ಕೊಡಿ , ವಿದೇಶ ಪ್ರವಾಸ ಮುಂದೂಡಿ, ವಿದೇಶ ಪ್ರವಾಸದಿಂದ ಹಿಂದಿರುಗಿರುವ ವರ ಬಗ್ಗೆ ನಿಗಾ ಇಡಿ, ಅನುಮಾನವಿದ್ದಲ್ಲಿ ಉಚಿತ ಆರೋಗ್ಯ…

ಶ್ರೀವೈರಮುಡಿ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗೆ ಸೂಚನೆ
ಮಂಡ್ಯ

ಶ್ರೀವೈರಮುಡಿ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗೆ ಸೂಚನೆ

March 12, 2020

ಮಂಡ್ಯ,ಮಾ.11(ನಾಗಯ್ಯ)-ಮೇಲು ಕೋಟೆಯಲ್ಲಿ ಏಪ್ರಿಲ್ 2 ರಂದು ನಡೆ ಯಲಿರುವ ಚಲುವನಾರಾಯಣಸ್ವಾಮಿ ದೇವರ ಶ್ರೀವೈರಮುಡಿ ಕಿರೀಟ ಧಾರಣಾ ಮಹೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತ ವಾಗಿ ಮಾಡಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು. ಇಂದು ಮೇಲುಕೋಟೆ ಪ್ರವಾಸಿ ಮಂದಿ ರದಲ್ಲಿ ನಡೆದ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಕಿರೀಟಧಾರಣ ಬ್ರಹ್ಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇಗುಲ ದಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 9…

ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ
ಮಂಡ್ಯ

ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ

March 12, 2020

ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್‍ಗೆ ಆನೆ ಬಲ ಬಂಡೀಪುರಕ್ಕೆ 25 ನಿವೃತ್ತ ಯೋಧರ ನೇಮಕಕ್ಕೆ ಚಿಂತನೆ ವಿಶೇಷ ಪಡೆಯಾಗಿ ಬಳಕೆಗೆ ನಿರ್ಧಾರ ಅರಣ್ಯ ಇಲಾಖೆಗೆ ಮೊದಲ ಬಾರಿ ನಿವೃತ್ತ ಸೈನಿಕರ ಸೇವೆ ಮೈಸೂರು,ಮಾ.11- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ರಕ್ಷಣಾ ಕಾರ್ಯಾಚರಣೆ ನಡೆಸಲು ಶೀಘ್ರದಲ್ಲೇ ಭಾರತೀಯ ಸೇನೆಯ ನಿವೃತ್ತ ಯೋಧರ ಪಡೆ ಕಣಕ್ಕಿಳಿಯಲಿದೆ. ಅದಕ್ಕಾಗಿ 25 ನಿವೃತ್ತ ಸೈನಿಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸದ್ಯ ಸ್ಪೆಷಲ್ ಟಾಸ್ಕ್ ಟೈಗರ್…

ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ
ಮಂಡ್ಯ

ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

March 8, 2020

ಕೆ.ಆರ್.ಪೇಟೆ,ಮಾ.7(ಶ್ರೀನಿವಾಸ್)- ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತ ರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡು ವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ನೂರಾರು ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿದರು. ಪಟ್ಟಣದ ಲೋಕೋಪಯೋಗಿ ಕಚೇರಿ ಮುಂಭಾಗ ಸಮಾವೇಶಗೊಂಡ ನೂರಾರು ರೈತರು ಪರಿಹಾರ ನೀಡುವಂತೆ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. 40 ವರ್ಷಗಳ ಹಿಂದೆ ತಾಲೂಕಿನ ಬೂಕನಕೆರೆ-ಅಟ್ಟುಪ್ಪೆ-ಚಿಕ್ಕಗಾಡಿಗನಹಳ್ಳಿ-ಕಟ್ಟಹಳ್ಳಿ ಮಾರ್ಗದ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡುವಂತೆ ಹೈ ಕೋರ್ಟ್ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ…

ಅರಕೆರೆ ಬಳಿ ಭತ್ತದ ದಲ್ಲಾಳಿ ಆತ್ಮಹತ್ಯೆ
ಮಂಡ್ಯ

ಅರಕೆರೆ ಬಳಿ ಭತ್ತದ ದಲ್ಲಾಳಿ ಆತ್ಮಹತ್ಯೆ

March 8, 2020

ಶ್ರೀರಂಗಪಟ್ಟಣ, ಮಾ.7(ವಿನಯ್ ಕಾರೇಕುರ)-ಭತ್ತ ಖರೀದಿ ಮಾಡಿದ ದಲ್ಲಾಳಿ ಹಣ ನೀಡದೆ ವಂಚಿಸಿದ್ದರಿಂದ ಮನನೊಂದ ಮತ್ತೋರ್ವ ಭತ್ತದ ದಲ್ಲಾಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಭತ್ತದ ದಲ್ಲಾಳಿ ದೇವರಾಜು(40) ಆತ್ಮಹತ್ಯೆಗೆ ಶರಣಾಗಿದ್ದು, ಇವರು ರೈತರಿಂದ ಖರೀದಿಸಿ ನೀಡಿದ್ದ ಭತ್ತದ ಹಣವನ್ನು ಕೊಡದೆ ವಂಚಿಸುವ ಮೂಲಕ ಇವರ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಅರಕೆರೆ ಗ್ರಾಮದ ಗಿರೀಶ್ ಎಂಬ ಮತ್ತೋರ್ವ ದಲ್ಲಾಳಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿವರ: ಭತ್ತದ ದಲ್ಲಾಳಿಯಾಗಿರುವ ದೇವರಾಜು,…

ಆದಿಚುಂಚನಗಿರಿ ಮಠದಲ್ಲಿ ಸಾಮೂಹಿಕ ವಿವಾಹ
ಮಂಡ್ಯ

ಆದಿಚುಂಚನಗಿರಿ ಮಠದಲ್ಲಿ ಸಾಮೂಹಿಕ ವಿವಾಹ

March 7, 2020

ಮಂಡ್ಯ,ಮಾ.6(ನಾಗಯ್ಯ)- ನಾಗ ಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗ ವಾಗಿ ಗುರುವಾರ ನಡೆದ ಉಚಿತ ಸಾಮೂ ಹಿಕ ವಿವಾಹ ಸಮಾರಂಭದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 25 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಳಿಗ್ಗೆಯಿಂದಲೇ ಮದುವೆಯ ಎಲ್ಲಾ ವಿಧಿವಿಧಾನಗಳು ಶ್ರೀಮಠದಲ್ಲಿ ನೆರ ವೇರಿದವು. ಬಿಜಿಎಸ್ ಸಭಾಭವನವನ್ನು ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿಯವರು ಹೋಮ ಹವನ, ಧಾರ್ಮಿಕ ಸಂಪ್ರದಾಯಗಳಲ್ಲಿ ಭಾಗವಹಿಸಿದರು. ಪೂರ್ಣಾಹುತಿ ಅರ್ಪಿಸುವ ಮೂಲಕ ಮದುವೆಯ ವಿಧಿ ವಿಧಾನಗಳನ್ನು…

ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ
ಮಂಡ್ಯ

ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ

March 7, 2020

ಮಂಡ್ಯ,ಮಾ.6(ನಾಗಯ್ಯ): ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾರಗೊಂಡನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಗವಿರಂಗನಾಥ ಸ್ವಾಮಿ ಬೆಟ್ಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 5 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಲೆ ಬಾಳುವ ವಿವಿಧ ಜಾತಿಯ ಗಿಡ ಮರಗಳು ಸುಟ್ಟು ಭಸ್ಮವಾಗಿವೆ. ಗುರುವಾರ ಬೆಳಿಗ್ಗೆ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಡೀ ಅರಣ್ಯ ಪ್ರದೇಶದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡು, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಒಣಗಿ ನಿಂತಿದ್ದ ಗಿಡಮರಗಳನ್ನು ಆವರಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸ್ಥಳೀಯ ಅಗ್ನಿಶಾಮಕದಳಕ್ಕೆ…

ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

March 6, 2020

ಬೇಸಿಗೆಯಲ್ಲಿ ನೀರಿನ ಬರ ಎದುರಿಸಲು  ಸಿದ್ಧರಾಗುವಂತೆ ಅಧ್ಯಕ್ಷರ ಸೂಚನೆ.! ಮಂಡ್ಯ, ಮಾ.5(ನಾಗಯ್ಯ)- ಬೇಸಿಗೆ ಕಾಲ ಶುರುವಾಗುತ್ತಿರುವುದರಿಂದ ತಾಲೂಕಿ ನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ತಾಪಂ ಅಧ್ಯಕ್ಷೆ ಶಿವಕುಮಾರಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗೆ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶಿವಕುಮಾರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲೆಲ್ಲಿ ನೀರಿನ ಅಭಾವ ವಿದೆ ಎಂಬುದನ್ನೂ ಈಗಿನಿಂದಲೇ ಪರಿ ಶೀಲನೆ ನಡೆಸಬೇಕು,…

1 2 3 4 5 6 56
Translate »