Tag: Mandya

ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ
ಮಂಡ್ಯ

ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

March 6, 2020

ಕಿಕ್ಕೇರಿ, ಮಾ.5- ಸುಗಮ ಸಂಗೀತ ಪರೀಕ್ಷೆ, ಮಾನಸಿಕ ನೆಮ್ಮದಿಗೆ ಟಾನಿಕ್ ನಂತೆ ಕೆಲಸ ಮಾಡಲಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು. ರಾಜ್ಯಾದ್ಯಂತ ಮಕ್ಕಳಿಗೆ ಪರೀಕ್ಷಾ ಭಯ ಎಂಬ ಒತ್ತಡ ನಿವಾರಣೆಗಾಗಿ ಬೆಂಗ ಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಹಮ್ಮಿಕೊಂಡಿರುವ ‘ಕನ್ನಡ ಡಿಂಡಿಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿದ್ರಾಹೀನತೆ ಹಾಗೂ ಹಲವು ಮಾರಕ ರೋಗ ನಿವಾರಣೆಗೆ ಸಂಗೀತ ದಿವ್ಯೌಷಧವಾಗಿದ್ದು, ಪಶು ಪಕ್ಷಿ, ಗಿಡ ಮರಗಳು…

ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ
ಮಂಡ್ಯ

ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ

March 6, 2020

ಮಂಡ್ಯ, ಮಾ.5(ನಾಗಯ್ಯ)- ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ವತಿಯಿಂದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಮಾ.6(ನಾಳೆ )ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ನಾರಾಯಣ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸುವರು, ಖ್ಯಾತ ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಪ್ರಧಾನ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲ ಪ್ರೊ.ನಾರಾಯಣ ಕೆ.ಬಿ.ನಾನು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ….

ಕೆಪಿಟಿಸಿಎಲ್ ಅಧಿಕಾರಿ ಮೇಲೆ ಹಲ್ಲೆ
ಮಂಡ್ಯ

ಕೆಪಿಟಿಸಿಎಲ್ ಅಧಿಕಾರಿ ಮೇಲೆ ಹಲ್ಲೆ

March 6, 2020

ಮದ್ದೂರು, ಮಾ.5- ಜಮೀನಿನಲ್ಲಿ ಹೈ ಟೆನ್ಷನ್ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿದ ಕೆಪಿಟಿಸಿಎಲ್ ಅಧಿಕಾರಿಗೆ ಹಲ್ಲೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಗೊರವನಹಳ್ಳಿ ಗ್ರಾಮದ ಚೇತನ್ ಮತ್ತು ಅನಿಲ್ ಎಂಬುವರು, ಕೆಪಿಟಿಸಿಎಲ್ ಎಇ ಆನಂದ್‍ಗೆ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದ್ದಾರೆ. ವಿವರ: ಗೊರವನಹಳ್ಳಿ ಗ್ರಾಮದಲ್ಲಿ ಹೈ ಟೆನ್ಷ್‍ನ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿಯುವ ಸಂಬಂಧ ರೈತ ಬೋರೇಗೌಡನಿಗೆ ಕೆಪಿಟಿಸಿಎಲ್ ವತಿಯಿಂದ ಮರಕ್ಕೆ ಪರಿಹಾರ ನೀಡಿದ್ದರು. ಈ ಮಧ್ಯೆ ಜಮೀನಿನಲ್ಲಿ ಸ್ವಾಧೀನವಿರುವ ರೈತ ಬೋರೇಗೌಡ ಪರಿಹಾರ…

ನಾಲೆ ಒತ್ತುವರಿ ಮಾಡಿ ಅಮರಾವತಿ ಹೋಟೆಲ್ ನಿರ್ಮಾಣ
ಮಂಡ್ಯ

ನಾಲೆ ಒತ್ತುವರಿ ಮಾಡಿ ಅಮರಾವತಿ ಹೋಟೆಲ್ ನಿರ್ಮಾಣ

March 5, 2020

ಮಂಡ್ಯ,ಮಾ.4(ನಾಗಯ್ಯ)- ವಿಶ್ವೇಶ್ವ ರಯ್ಯ ನಾಲೆಯ ಜಾಗವನ್ನು ಅತೀಕ್ರಮಿಸಿ ಕೊಂಡು ಅಮರಾವತಿ ಹೋಟೆಲ್ ನಿರ್ಮಿಸಿ ಕೊಂಡಿರುವ ಕಾಂಗ್ರೆಸ್ ಮುಖಂಡ ಅಮ ರಾವತಿ ಚಂದ್ರಶೇಖರ್ ಮತ್ತು ಕುಟುಂ ಬಕ್ಕೆ ಒತ್ತುವರಿ ತೆರವಿಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಮರಾವತಿ ಚಂದ್ರಶೇಖರ್, ಮತ್ತು ಕುಟುಂಬದವರು, ಉಮ್ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 129 ಮತ್ತು 130. ಬೂದನೂರು ಹಾಗೂ ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ, ಸುಮಾರು 60 ಎಕರೆ ವಿಸ್ತೀರ್ಣದಲ್ಲಿ ಐದು ಎಕರೆ ನಾಲೆ ಯನ್ನು, ಮುಚ್ಚಿ ಅತೀಕ್ರಮಣ ಮಾಡಿರುವ ಬಗ್ಗೆ, ಹಾಗೂ…

ಕೇರಳದಿಂದ ತಂದು ಸಂಗ್ರಹಿಸಿದ್ದ ತ್ಯಾಜ್ಯ ಪಾಲಹಳ್ಳಿಯಲ್ಲಿ ವಶ: ಪ್ರಕರಣ ದಾಖಲು
ಮಂಡ್ಯ

ಕೇರಳದಿಂದ ತಂದು ಸಂಗ್ರಹಿಸಿದ್ದ ತ್ಯಾಜ್ಯ ಪಾಲಹಳ್ಳಿಯಲ್ಲಿ ವಶ: ಪ್ರಕರಣ ದಾಖಲು

March 5, 2020

ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ತಾಲೂಕಿನ ಪಾಲಹಳ್ಳಿಯ ಗ್ರಾಮದಲ್ಲಿ ಕೇರಳದಿಂದ ತಂದಿದ್ದ ತ್ಯಾಜ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪಾಲಹಳ್ಳಿ ಗ್ರಾಮದ ವೆಂಕಟೇಶ್ ಅವರ ಜಮೀನು ಮತ್ತು ಲೋಕೇಶ್ ಅವರ ಆಲೆಮನೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ತಹಶೀಲ್ದಾರ್ ಎಂ.ವಿ.ರೂಪಾ ಅವರ ನಿರ್ದೇಶನದ ಮೇರೆಗೆ ಕಂದಾಯ ನಿರೀಕ್ಷಕ ಉಮೇಶ್ ಮಂಗಳವಾರ ಪತ್ತೆ ಮಾಡಿ ದಾಳಿ ಮಾಡಿದ್ದಾರೆ. ವೆಂಕಟೇಶ್ ಅವರ ಜಮೀನಿನಲ್ಲಿ ಮೈಸೂ ರಿನ ರಿಜ್ವಾನ್ ಮತ್ತು ಲೋಕೇಶ್ ಅವರ ಆಲೆ ಮನೆಯಲ್ಲಿ ಸಲೀಂಖಾನ್ ಪ್ಲಾಸ್ಟಿಕ್ ಇತರ ತ್ಯಾಜ್ಯ ವನ್ನು ಸಂಗ್ರಹಿಸಿದ್ದರು ಎಂದು ತಿಳಿದು…

ಅಗಸನಪುರ ಗ್ರಾ.ಪಂ. ಮುಂದೆ ಡಿಪಿಐಎಂ ಪ್ರತಿಭಟನೆ
ಮಂಡ್ಯ

ಅಗಸನಪುರ ಗ್ರಾ.ಪಂ. ಮುಂದೆ ಡಿಪಿಐಎಂ ಪ್ರತಿಭಟನೆ

March 5, 2020

ಮಳವಳ್ಳಿ.ಮಾ.4-ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮಪಂಚಾಯಿತಿಯ ಬಳಿ ಇಲ್ಲಿನ ಕುಡಿಯುವ ನೀರು ಸೇರಿ ದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ತ್ವರಿತವಾಗಿ ಈ ಭಾಗದ ಅಗಸನಪುರ, ಕೋಡಿಪುರ, ಜೋಗಿಪುರ, ಅಣ್ಣಹಳ್ಳಿ, ಸಾಹಳ್ಳಿ, ಕೆಂಭೂತಗೆರೆ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತು…

ಲಿಥಿಯಂ ಪತ್ತೆಯಾಗಿರುವ ಜಮೀನಿನ ರೈತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಲಿಥಿಯಂ ಪತ್ತೆಯಾಗಿರುವ ಜಮೀನಿನ ರೈತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

March 5, 2020

ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ರೈತರ ಅನುಮತಿ ಇಲ್ಲದೆ ಕೇಂದ್ರ ತಂಡ ಲಿಥಿಯಂ ನಿಕ್ಷೇಪ ಪತ್ತೆ ಯಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಹಲವು ವರ್ಷಗಳಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಿ ಎಂದು ಬುಧವಾರ ರೈತ ಸಂಘ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತಾಲೂಕಿನ ಮರಳೆಗಾಲ ಹಾಗೂ ಅಲ್ಲಾಪಟ್ಟಣದ ಆಸುಪಾಸಿನಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿ ಭಾರಿ ಸುದ್ದಿ ಮಾಡಿತ್ತು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ…

ತಲೆ ಮೇಲೆ ತೆಂಗಿನಕಾಯಿ ಬಿದ್ದು ರೈತ ಸಾವು
ಮಂಡ್ಯ

ತಲೆ ಮೇಲೆ ತೆಂಗಿನಕಾಯಿ ಬಿದ್ದು ರೈತ ಸಾವು

March 5, 2020

ಕೆ.ಆರ್.ಪೇಟೆ,ಫೆ.04-ಜಮೀನಿನ ತೋಟದಲ್ಲಿ ಕಾಯಿ ಕೀಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ತೆಂಗಿನಕಾಯಿಯು ತಲೆಯ ಮೇಲೆ ಬಿದ್ದ ಪರಿ ಣಾಮ ಗಂಭೀರವಾಗಿ ಗಾಯಗೊಂಡ ರೈತನೊಬ್ಬ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ರಾಯಸಮುದ್ರ ಗ್ರಾಮದ ಸಿದ್ದೇಗೌಡರ ಮಗ ಚಂದ್ರೇಗೌಡ (59) ಮೃತ ರೈತ. ಘಟನೆ ವಿವರ: ಚಂದ್ರೇಗೌಡ ಅವರ ರಾಯಸಮುದ್ರ ಗ್ರಾಮದ ಎಲ್ಲೆಯಲ್ಲಿರುವ ತಮ್ಮ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ಸಮಯದಲ್ಲಿ ತೆಂಗಿನಕಾಯಿಯೊಂದು ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾದ ಗಾಯಗಳಾಗಿ ಅಪಾರ…

ಮೇಲುಕೋಟೆಯಲ್ಲಿ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯ
ಮಂಡ್ಯ

ಮೇಲುಕೋಟೆಯಲ್ಲಿ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯ

March 3, 2020

ಮೇಲುಕೋಟೆ,ಮಾ.2-ವೈರಮುಡಿ ಜಾತ್ರಾ ಮಹೋತ್ಸವಕ್ಕೂ ಮುನ್ನಾ ಎನ್‍ಎಸ್‍ಎಸ್ ಶಿಭಿರಾರ್ಥಿ ಗಳು ಗ್ರಾ.ಪಂ ಸಹಕಾರದಲ್ಲಿ ಮೇಲುಕೋಟೆಯ ವಿವಿಧೆಡೆ ಪ್ರಥಮ ಹಂತದ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ನೇತೃತ್ವದಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಜಿಲ್ಲಾ ಮಟ್ಟದ ಅಂತರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ 39 ರಾಷ್ಟ್ರೀಯ ಸೇವಾ ಯೋಜನೆಯ 180 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. 7 ದಿನಗಳ ಕಾಲ ನಡೆದ ಶಿಬಿರದ ವೇಳೆ 5 ತಂಡಗಳಾಗಿ ಶ್ರಮ ದಾನ ಮಾಡಿದ ವಿದ್ಯಾರ್ಥಿಗಳು,…

ಲೋಕಪಾವನಿಯಲ್ಲಿ ಎತ್ತು, ಗಾಡಿ ತೊಳೆಯುವಾಗ ಯುವಕ ನಾಪತ್ತೆ
ಮಂಡ್ಯ

ಲೋಕಪಾವನಿಯಲ್ಲಿ ಎತ್ತು, ಗಾಡಿ ತೊಳೆಯುವಾಗ ಯುವಕ ನಾಪತ್ತೆ

March 3, 2020

ಶ್ರೀರಂಗಪಟ್ಟಣ,ಮಾ.2(ವಿನಯ್‍ಕಾರೇಕುರ,ನಾಗಯ್ಯ)-ಗಾಡಿ ಮತ್ತು ಎತ್ತುಗಳನ್ನು ತೊಳೆಯಲು ಹೋದ ಯುವಕ ನೋರ್ವ ಕೊಚ್ಚಿ ಹೋಗಿ ನಾಪತ್ತೆ ಯಾಗಿರುವ ಘಟನೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಬಾಬು ರಾಯನಕೊಪ್ಪಲಿನ ಲೋಕ ಪಾವನಿ ನದಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮತ್ತೋರ್ವ ಯುವಕ ಈಜಿ ದಡ ಸೇರಿದ್ದಾನೆ. ಬಾಬುರಾಯನ ಕೊಪ್ಪಲು ನಿವಾಸಿ ಲಾಯರ್ ಶೇಷಾದ್ರಿ ಮತ್ತು ಹೇಮಾ ದಂಪತಿ ಪುತ್ರ ಸೋಮೇಶ್ವರ್ (21) ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವನಾಗಿದ್ದು, ಆತನ ಚಿಕ್ಕಪ್ಪನ ಮಗ ಶಿವು ಈಜಿ ದಡ ಸೇರಿದ್ದಾನೆ. ವಿವರ: ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿ ಪಕ್ಕದಲ್ಲಿರುವ…

1 3 4 5 6 7 56
Translate »