ರಸ್ತೆಯಲ್ಲಿ ಕೋಳಿ ತ್ಯಾಜ್ಯದ ರಾಶಿ; ಕ್ರಮ ಕೈಗೊಳ್ಳದ ಗ್ರಾಪಂ
ಮಂಡ್ಯ

ರಸ್ತೆಯಲ್ಲಿ ಕೋಳಿ ತ್ಯಾಜ್ಯದ ರಾಶಿ; ಕ್ರಮ ಕೈಗೊಳ್ಳದ ಗ್ರಾಪಂ

March 20, 2020

ಶ್ರೀರಂಗಪಟ್ಟಣ, ಮಾ.19(ವಿನಯ್ ಕಾರೇಕುರ)-ತಾಲೂಕಿನ ನಗುವನಹಳ್ಳಿ – ಚಂದಗಾಲು ಗ್ರಾಮದ ಮದ್ಯೆ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯವನ್ನು ಸುರಿದಿದ್ದು ಗ್ರಾಪಂ ಅಧಿಕಾರಿಗಳು ಕಂಡರೂ ಕಾಣದಂತಿ ದ್ದಾರೆ ಎಂದು ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಚಂದಗಾಲು ಆರೋಪಿಸಿದ್ದಾರೆ.

ನಗುವನಹಳ್ಳಿ,ಚಂದಗಾಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೋಳಿ ಅಂಗಡಿ ಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಗಾಡಿಗಟ್ಟಲೆ ಸುರಿದಿದ್ದು, ಅದು ಕೊಳೆತು ಗಬ್ಬು ವಾಸನೆ ಯಿಂದ ಕೂಡಿದೆ . ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ವಾಸನೆ ತಾಳಲಾರದೆ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ಉಂಟಾ ಗಿದೆ. ಹಲವು ಬಾರಿ ಗ್ರಾಪಂಗೆ ದೂರು ನೀಡಿ ದರೂ ಅಧಿಕಾರಿಗಳು ಕೋಳಿ ತ್ಯಾಜ್ಯ ಗಳನ್ನು ಸುರಿಯುವರ ವಿರುದ್ದ ಕ್ರಮ ಕೈಗೊಂಡಿಲ್ಲ. ಜೊತೆಗೆ ತ್ಯಾಜ್ಯವನ್ನು ತೆರವು ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹಕ್ಕಿಜ್ವರ ಹಾಗೂ ಕೊರೊನಾ ವೈರಸ್ ಬಗ್ಗೆ ಈಗಾಗಲೇ ಎಲ್ಲಾ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ಹಕ್ಕಿಜ್ವರದ ಬಗ್ಗೆ ತಾಲೂಕಿನ 13 ಗ್ರಾಮಗಳಲ್ಲಿ ಮಂಡ್ಯ ಜಿಲ್ಲಾಧಿ ಕಾರಿ ಕೋಳಿ, ಹಾಗೂ ಮೊಟ್ಟೆ ಮಾರಾಟ ಹಾಗೂ ಸಾಗಾಣಿಕೆಯನ್ನು ಸಂಪೂರ್ಣ ನಿಷೇಧಿಸಿದ್ದಾರೆ, ಸ್ವಚ್ಚತೆಯಿಂದ ಇರಲು ಸೂಚಿಸಲಾಗಿದ್ದರೂ ಸಹ ರಸ್ತೆಯಲ್ಲಿ ಸುರಿದಿದ್ದ ಕೋಳಿ ತ್ಯಾಜ್ಯವನ್ನು ತೆರವು ಮಾಡಿಸಲು ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳಿಂದ ಅಕ್ಕಪಕ್ಕದ ಗ್ರಾಮಗಳಿಗೆ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ. ಗ್ರಾಪಂ ಅಭಿ ವೃದ್ದಿ ಅಧಿಕಾರಿಗಳ ವಿರುದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು. ಇಲ್ಲದಿದ್ದರೆ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Translate »