ಆದಿಚುಂಚನಗಿರಿ ದೇವಸ್ಥಾನ ಬಂದ್
ಮಂಡ್ಯ

ಆದಿಚುಂಚನಗಿರಿ ದೇವಸ್ಥಾನ ಬಂದ್

March 20, 2020

ಮಂಡ್ಯ, ಮಾ.19(ನಾಗಯ್ಯ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಇಂದಿನಿಂದ ಆದಿ ಚುಂಚನಗಿರಿ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು ಭಕ್ತರು ಸದ್ಯಕ್ಕೆ ಕಾಲಭೈರವನ ದರ್ಶನಕ್ಕೆ ಬರುವುದು ಬೇಡ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಮನವಿ ಮಾಡಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶ್ರೀಗಳು,ಶ್ರೀ ಕಾಲಭೈರ ವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾ ದ್ಯಂತ ಹರಡಿರುವ ಕೊರೊನಾ ಹಿನ್ನೆಲೆ ಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸುವು ಬೇಡ, ಇದಕ್ಕೆ ಭಕ್ತರು ಸಹಕರಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ವೈರಸ್ ನಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದಕ್ಕಾಗಿ ಸದ್ಯದ ಪರಿಸ್ಥಿತಿ ಸುಧಾರಿಸುವವರೆಗೂ ಭಕ್ತರು ತಮ್ಮ ಯಾತ್ರೆಯನ್ನು ಕನಿಷ್ಠ 2 ವಾರಗಳ ಕಾಲ ತಾತ್ಕಾಲಿಕವಾಗಿ ಮುಂದೂಡು ವುದು ಅವಶ್ಯವಾಗಿದೆ, ಪರಿಸ್ಥಿತಿ ಸುಧಾರಿಸಿದ ನಂತರ ಭಕ್ತರು ತಮ್ಮ ಯಾತ್ರೆಯನ್ನು ಕೈಗೊಂಡು ದೇವರ ಕೃಪೆಗೆ ಪಾತ್ರರಾಗ ಬೇಕೆಂದು ಕೋರಲಾಗಿದೆ.

ಕೊರೊನ ಸೋಂಕಿತರ ಚಿಕಿತ್ಸೆಗಾಗಿ ಶ್ರೀ ಮಠದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಕೊರೊನಾ ಸೋಂಕಿ ತರು ಶ್ರೀಮಠದ ಆಸ್ಪತ್ರೆಗೆ ಭೇಟಿ ಕೊಟ್ಟು ಅಗತ್ಯ ಮಾಹಿತಿ, ಚಿಕಿತ್ಸಾ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »