ಬೆಳಗಾವಿ,ಆ.9- ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಲೇ ಇದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜಲಾವೃತವಾಗಿರುವ ಗ್ರಾಮಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವವ ರನ್ನು ರಕ್ಷಿಸುವ ಕಾರ್ಯವನ್ನು ಎನ್‍ಡಿ ಆರ್‍ಎಫ್ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ಅವಿಶ್ರಾಂತವಾಗಿ ನಡೆಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಸಾವಿರಾರು ಮಂದಿ ನಿರಾಶ್ರಿತರ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯ ಗಳಲ್ಲಿ ದಿನದೂಡುತ್ತಾ ಪರಿತಪಿಸುತ್ತಿದ್ದಾರೆ. ಯಾವಾಗ ಮಳೆ ನಿಲ್ಲುವುದೋ, ಯಾವಾಗ ತಮ್ಮ ಮನೆ ಸೇರಿಕೊಳ್ಳುತ್ತೇವೋ ಎಂದು ಹಪಾಹಪಿಸುತ್ತಿದ್ದಾರೆ. ಈ ಮಧ್ಯೆ, ಎನ್‍ಡಿ ಆರ್‍ಎಫ್ ರಕ್ಷಣಾ ತಂಡದವರು ಬೆಳಗಾವಿ…
ನೆರೆ ಸಂತ್ರಸ್ತರಿಗೆ ನೆರವಾಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
August 10, 2019ಬೆಂಗಳೂರು, ಆ.9(ಕೆಎಂಶಿ)-ಭಾರೀ ಮಳೆ ಮತ್ತು ನೆರೆಗೆ ಸಿಲುಕಿ ಸಂಕಷ್ಟದಲ್ಲಿ ರುವ ರಾಜ್ಯದ ರೈತರು ಮತ್ತು ಜನತೆಯ ನೆರವಿಗೆ ಉದಾರ ನೆರವು ನೀಡಿ ಎಂದು ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ, ಉದ್ಯಮಿಗಳು, ಕೈಗಾರಿಕಾ ಹಾಗೂ ಸಂಘ -ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಬೀಳುತ್ತಿರುವ ಭಾರೀ ಮಳೆಯಿಂದ ಬಹುತೇಕ ಜಲಾ ಶಯಗಳು ಭರ್ತಿಯಾಗಿ ಮಾರಣಾಂತಿಕ ನೆರೆ ಉಂಟಾಗಿದೆ. ಅಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಬೀಳುತ್ತಿರುವ ಮಳೆ ಯಿಂದಾಗಿ ರಾಜ್ಯದ ಒಂದು ಭಾಗವೇ ನೀರಿನಲ್ಲಿ ಮುಳುಗಿದೆ. ಇದರಿಂದ ಲಕ್ಷಾಂ ತರ ಮಂದಿ…
ಮೈಸೂರು ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು
August 10, 2019ಮೈಸೂರು, ಆ.9(ಎಸ್‍ಪಿಎನ್)-ಮೈಸೂರು ನಗರದಲ್ಲಿ ಎಡಬಿಡದೇ ಸುರಿ ಯುತ್ತಿರುವ ಮಳೆಗೆ ನಗರದ ವಿವಿಧ ಬಡಾ ವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಮಂಡಿಮೊಹಲ್ಲಾದ ನಿವಾಸಿ ಅಕ್ರಂ ಪಾಷ, ಶ್ರೀರಾಂಪುರ 2ನೇ ಹಂತದ ನಿವಾಸಿ ಮಹೇಶ್, ಉದಯಗಿರಿಯ ಆದಿಲ್ ಪಾಷ, ಎನ್.ಆರ್.ಮೊಹಲ್ಲಾದ ಮಂಚಲಿಂ ಗಯ್ಯ, ಜಲಪುರಿಯ ಹರೀಶ್, ಗಾಯತ್ರಿ ಪುರಂ ನಿವಾಸಿ ನರಸಿಂಹಯ್ಯ ಅವರ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಮೈಸೂರು ನಗರಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಾಲಿಕೆ ಸಿಬ್ಬಂದಿ ನೆರವಿಗೆ…
ಆಯುಷ್ಮಾನ್ ಖುರಾನಾ, ವಿಕ್ಕಿ ಕೌಶಲ್ ಅತ್ಯುತ್ತಮ ನಟ, ಕೀರ್ತಿ ಸುರೇಶ್ ಅತ್ಯುತ್ತಮ ನಟಿ
August 10, 2019ಬೆಂಗಳೂರು:”ಬಧಾಯಿ ಹೋ” ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನಾ ಹಾಗೂ “ಉರಿ: ದಿ ಸರ್ಜಿಕಲ್ ಸ್ಟ್ರೈಕ್’” ನಟ ವಿಕ್ಕಿ ಕೌಶಲ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ “ಮಹಾನಟಿ” ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಮಹಾನಟಿ” ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರೆ ‘ಅಂಧಾ ಧುನ್’ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಭಾಷಾ ಚಿತ್ರ ಪ್ರಶಸ್ತಿ ಲಭಿಸಿದೆ. ಚೊಚ್ಚಲ “ಉರಿ: ದಿ ಸರ್ಜಿಕಲ್ ಸ್ಟ್ರೈಕ್”ಗಾಗಿ ಆದಿತ್ಯ ಧಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರೆ, “ಅಂಧಾಧುನ್”…
ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಹಾವಳಿ
August 10, 2019ಮೈಸೂರು,ಆ.9(ಆರ್‍ಕೆ)-ಕೊಡಗು ಹಾಗೂ ವೈನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದ ರಿಂದ ಮೈಸೂರು ಜಿಲ್ಲೆಯಾದ್ಯಂತ ಪ್ರವಾಹ ಮುಂದುವರೆದಿದೆ. ಕಬಿನಿ, ಹಾರಂಗಿ ಹಾಗೂ ತಾರಕ ಜಲಾಶಯ ಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಮಾರ್ಗ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಮೈಸೂರಿನಿಂದ ಹೊರಡುವ ಬಸ್ಸು ಹಾಗೂ ಇತರ ವಾಹನಗಳು, ತಿ.ನರಸೀಪುರ ರಸ್ತೆ ಯಲ್ಲಿ ಸಾಗಿ ವರುಣ, ಕುಪ್ಪೆಗಾಲ,…
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ಕ್ಕೆ ಅಸ್ತಿತ್ವಕ್ಕೆ
August 10, 2019ನವದೆಹಲಿ: 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾ ಡಳಿತ ಪ್ರದೇಗಳನ್ನಾಗಿ ವಿಭಜನೆ ಮಾಡುವ ಉದ್ದೇಶವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಕಾಯಿದೆ 2019ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಇಂದು ಒಪ್ಪಿಗೆ ಸೂಚಿಸಿದ್ದಾರೆ. ಈ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಕ್ಟೋಬರ್ 31ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಮೈಸೂರು ನಾಗರಿಕರಿಗೆ ಮನವಿ
August 10, 2019ಮೈಸೂರು, ಆ.9(ಎಂಟಿವೈ)-ಪ್ರವಾಹ ಸಂತ್ರಸ್ತರ ನೆರವಿಗಾಗಿ ತಮ್ಮ ವೇತನದಿಂದ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿರುವ ಶಾಸಕ ಎಸ್.ಎ.ರಾಮ ದಾಸ್, ಸಂತ್ರಸ್ತರಿಗೆ ನೆರವಾಗಲು ಮುಂದಾ ಗಿರುವ ಸಂಘ-ಸಂಸ್ಥೆಗಳ ಮೂಲಕ ದಾನಿಗಳು ಜೀವನಾವಶ್ಯಕ ವಸ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಯಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ…
ಧಾರಾಕಾರ ಮಳೆ: ಮೈಸೂರಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ
August 10, 2019ಮೈಸೂರು,ಆ.9(ಆರ್‍ಕೆ)-ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಬಿನಿ, ಹಾರಂಗಿ, ತಾರಕ ಹಾಗೂ ನುಗು ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಗಡೆ ಬಿಡುತ್ತಿ ರುವುದರಿಂದ ಪ್ರವಾಹ ಉಂಟಾಗಿದ್ದು, ಸಂಚಾರ ಮಾರ್ಗ ಕೆಲವೆಡೆ ಬಂದ್ ಆಗಿರುವು ದರಿಂದ ಮೈಸೂರು ನಗರದಲ್ಲಿ ಜನ ಸಂದಣಿ ವಿರಳವಾಗಿರುವುದು ಇಂದು ಕಂಡುಬಂದಿತು. ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ, ಬಹುತೇಕ ಜನರು ಮನೆಯಿಂದ ಹೊರಬರಲಾಗುತ್ತಿಲ್ಲ. ಪರಿಣಾಮ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆಯಲ್ಲದೆ, ಸದಾ…
ಮೈಸೂರು ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳ ನಿಯೋಜನೆ
August 10, 2019ಮೈಸೂರು,ಆ.9(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿ ಜಲಾಶಯ ಗಳಿಂದ ಅಧಿಕ ನೀರನ್ನು ಹೊರ ಬಿಡುತ್ತಿರುವುದರಿಂದ ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು 24 ಗಂಟೆಯೂ ಕಾರ್ಯ ನಿರ್ವಹಿಸಲು 3 ಪಾಳಿಗೆ ನಿಯೋಜಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಡಾ ತಹಶೀಲ್ದಾರ್ ನಿಶ್ಚಯ್ (9738866111) ಡಿಸಿ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್ ಸುಮಿತ್ರ(9986 388969), ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ಮುಡಾ ತಹಶೀಲ್ದಾರ್ ಶಿವಶಂಕರಪ್ಪ(9448868443), ಜಿಲ್ಲಾ ನಗರಾಭಿವೃದ್ಧಿ ಕೋಶದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್(9916129654),…
ಕೋರಂ ಕೊರತೆ ಹಿನ್ನಲೆಮೈಸೂರು ಡೈರಿ ಅಧ್ಯಕ್ಷರ ಚುನಾವಣೆ ಆ.14ಕ್ಕೆ ಮುಂದೂಡಿಕೆ
August 10, 2019ಮೈಸೂರು, ಆ.9(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಅಧ್ಯಕ್ಷ ಚುನಾವಣೆ ಕೋರಂ ಕೊರತೆ ಯಿಂದಾಗಿ ಮುಂದೂಡಲ್ಪಟ್ಟಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ವಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿ ರುವ ಮೈಮುಲ್ ಕಚೇರಿಯಲ್ಲಿ ಶುಕ್ರ ವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕೆಲ ದಿನಗಳ ಹಿಂದೆ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ನಿರ್ದೇಶಕ, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಬಂಧಿ ಎಸ್.ಸಿ.ಅಶೋಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಸಲ್ಲಿಸಿದ್ದ…










