Tag: Mysore

ಮೈಸೂರು ಪಾರಂಪರಿಕ ಕಟ್ಟಡಗಳ ಬಗ್ಗೆ15 ದಿನದೊಳಗೆ ನಿರ್ಧಾರ ಕೈಗೊಳ್ಳಿ
ಮೈಸೂರು

ಮೈಸೂರು ಪಾರಂಪರಿಕ ಕಟ್ಟಡಗಳ ಬಗ್ಗೆ15 ದಿನದೊಳಗೆ ನಿರ್ಧಾರ ಕೈಗೊಳ್ಳಿ

August 11, 2019

ಮೈಸೂರು, ಆ.10(ಎಂಟಿವೈ)- ಮೈಸೂ ರಿನಲ್ಲಿ 132 ಪಾರಂಪರಿಕ ಕಟ್ಟಡಗಳ ಸ್ಥಿತಿ ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾರಂಪರಿಕ ಸಮಿತಿ ತುರ್ತು ಸಭೆ ನಡೆಸಿ 15 ದಿನದೊಳಗೆ ಸ್ಪಷ್ಟ ನಿರ್ಧಾರ ತಳೆಯು ವಂತೆ ಶಾಸಕ ಎಲ್.ನಾಗೇಂದ್ರ ಸೂಚಿಸಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದ ಸರ ಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣಾ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ  ಶನಿವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎಲ್.ನಾಗೇಂದ್ರ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವುದಕ್ಕೆ…

ಮೈಸೂರು ಪುರಭವನದಲ್ಲಿ `ನೆರವು ಕೇಂದ್ರ’ ಆರಂಭ
ಮೈಸೂರು

ಮೈಸೂರು ಪುರಭವನದಲ್ಲಿ `ನೆರವು ಕೇಂದ್ರ’ ಆರಂಭ

August 11, 2019

ಮೈಸೂರು,ಆ.10(ವೈಡಿಎಸ್)-ವರು ಣನ ಆರ್ಭಟದಿಂದ ನಲುಗಿರುವ ಉತ್ತರ ಕರ್ನಾಟಕ, ಹಾಸನ, ಕೊಡಗು ಜಿಲ್ಲೆಗಳಿಗೆ ನೆರವು ನೀಡಲು ಜಿಲ್ಲಾಡಳಿತದಿಂದ ಪುರ ಭವನದಲ್ಲಿ `ನೆರವು ಕೇಂದ್ರ’ ಆರಂಭಿಸಿದ್ದು, 24 ಬಗೆಯ ತುರ್ತು ಅಗತ್ಯ ವಸ್ತುಗಳನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಪ್ರವಾಹದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳೊಂದಿಗಿನ ಸಭೆ ಯಲ್ಲಿ ಮಾತನಾಡಿದ ಅವರು, ವರುಣನ ಆರ್ಭಟಕ್ಕೆ ರಾಜ್ಯದ 16 ಜಿಲ್ಲೆಗಳಲ್ಲಿ ನೆರೆ ಹಾವಳಿ ಹೆಚ್ಚಾಗಿ ಸಂತ್ರಸ್ತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮೈಸೂರಿನ…

ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರಶಾಲಾ, ಕಾಲೇಜು ಪ್ರಾರಂಭ, ನಿಷೇಧಾಜ್ಞೆ ತೆರವು
ಮೈಸೂರು

ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರಶಾಲಾ, ಕಾಲೇಜು ಪ್ರಾರಂಭ, ನಿಷೇಧಾಜ್ಞೆ ತೆರವು

August 11, 2019

ಶ್ರೀನಗರ, ಆ.10- ಹಲವು ದಿನಗಳಿಂದ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ. ಉಳಿದೆಡೆಯೂ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಹೇರಿದ್ದ ನಿಷೇಧಾಜ್ಞೆಯನ್ನು ತೆರವುಗೊಳಿ ಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ 5 ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿ ಯಲ್ಲಿಯೂ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು, ಕಥುವಾ, ಸಾಂಬಾ, ಉಧಂಪುರ್ ಮತ್ತು ರಿಯಾಸಿಯ…

ಭಾರತದ ಮೇಲೆ ದಾಳಿಗೆ ಸ್ಕೆಚ್ ಪಾಕ್ ಕುತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!
ಮೈಸೂರು

ಭಾರತದ ಮೇಲೆ ದಾಳಿಗೆ ಸ್ಕೆಚ್ ಪಾಕ್ ಕುತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!

August 11, 2019

ನವದೆಹಲಿ, ಆ.10-ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಎಚ್ಚರಿಸಿತ್ತು. ಈ ಬೆನ್ನಲ್ಲೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಪಹಪಿಸುತ್ತಿ ರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 12ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳನ್ನು ಸಕ್ರಿಯಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿ ಇರುವ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಪಾಕಿಸ್ತಾನ ಉಗ್ರರ ನೆಲೆಗಳನ್ನು ಸಕ್ರಿಯಗೊಳಿಸಿದೆ. ಕಳೆದ ವಾರ ಈ ಪ್ರದೇಶಗಳಲ್ಲಿ ಅತೀ ಹೆಚ್ಚು…

ಕೆಆರ್ ಕ್ಷೇತ್ರದಲ್ಲಿ ಮಳೆ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಿ
ಮೈಸೂರು

ಕೆಆರ್ ಕ್ಷೇತ್ರದಲ್ಲಿ ಮಳೆ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಿ

August 11, 2019

ಮೈಸೂರು: ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಆಗಿರುವ ಸಮಸ್ಯೆ ಗಳನ್ನು ಬಗೆಹರಿಸಲು ತ್ವರಿತ ಕ್ರಮ ಕೈಗೊಳ್ಳು ವಂತೆ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಾರ ಕಾಲ ಎಡಬಿಡದೆ ಸುರಿದ ಮಳೆಯ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲೆ ದೋರಿರುವ ಸಮಸ್ಯೆಗಳ ಸಂಬಂಧ ಕ್ಷೇತ್ರದ ವಾರ್ಡ್‍ಗಳ ನಗರಪಾಲಿಕೆ ಸದಸ್ಯ ರೊಂದಿಗೆ ಶನಿವಾರ ತುರ್ತು ಸಭೆ ನಡೆಸಿ ಅವರು ಸಮಾ ಲೋಚಿಸಿದರು. ಮೈಸೂರಿನ ಕಾಡಾ ಕಟ್ಟಡ…

ಎಂಕೆಎಸ್ ಬ್ರಿಗೇಡ್‍ನಿಂದ ಬಂಡಿಪಾಳ್ಯದಲ್ಲಿ ಧಾನ್ಯ ಸಂಗ್ರಹ
ಮೈಸೂರು

ಎಂಕೆಎಸ್ ಬ್ರಿಗೇಡ್‍ನಿಂದ ಬಂಡಿಪಾಳ್ಯದಲ್ಲಿ ಧಾನ್ಯ ಸಂಗ್ರಹ

August 11, 2019

ಮೈಸೂರು, ಆ.10(ಎಂಟಿವೈ)- ರಾಜ್ಯದ ವಿವಿಧೆಡೆ ಉಂಟಾಗಿರುವ ಪ್ರವಾಹ ಸಂತ್ರ ಸ್ತರಿಗೆ ನೆರವು ನೀಡಲು ಮುಂದಾಗಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದ ಎಂಕೆಎಸ್ ಬ್ರಿಗೇಡ್ ಕಾರ್ಯ ಕರ್ತರು ಶನಿವಾರ ಮೈಸೂರಿನ ಬಂಡಿ ಪಾಳ್ಯದಲ್ಲಿ ವರ್ತಕರಿಂದ ಆಹಾರ ಪದಾರ್ಥ ಸಂಗ್ರಹಿಸಿದರು. ಇಂದು ಮಧ್ಯಾಹ್ನ ಬ್ರಿಗೇಡ್‍ನ ಕಾರ್ಯ ಕರ್ತರೊಂದಿಗೆ ಬಂಡಿಪಾಳ್ಯಕ್ಕೆ ಆಗಮಿ ಸಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತು ಗಳನ್ನು ಸಂಗ್ರಹಿಸಿದರು. ಇದೇ ವೇಳೆ ಅಲ್ಲಿನ ವರ್ತಕರಿಂದಲೂ ವಿವಿಧ ವಸ್ತು ಗಳನ್ನು ಸಂಗ್ರಹಿಸಲಾಯಿತು. ಇದೇ…

ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ
ಮೈಸೂರು

ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ

August 11, 2019

ಮೈಸೂರು, ಆ.10(ಆರ್‍ಕೆ)-ಸೋಮ ವಾರ ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಗಳು ಶನಿವಾರ ಮೈಸೂರಿನ ನಜರ್‍ಬಾದ್ ನಲ್ಲಿರುವ ಪೊಲೀಸ್ ಕಮೀಷ್ನರ್ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು. ಆ ವೇಳೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜ್ ಅವರು, ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಯಾವುದೇ ಗಲಾಟೆ ಇಲ್ಲದಂತೆ ಭಕ್ತಿ-ಭಾವದಿಂದ ಆಚ ರಿಸಿ, ಸಮಾಜದ ಎಲ್ಲ ವರ್ಗದ ಜನರನ್ನೂ ಪ್ರೀತಿಯಿಂದ ತೊಡಗಿಸಿಕೊಂಡು ಆರೋಗ್ಯ ಕರ ರೀತಿಯಲ್ಲಿ ಶುಭಾಶಯ…

ರಾಷ್ಟ್ರಧ್ವಜ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ
ಮೈಸೂರು

ರಾಷ್ಟ್ರಧ್ವಜ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

August 11, 2019

ಮೈಸೂರು, ಆ.10(ಪಿಎಂ)- ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರಧ್ವಜ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಭಾರತ ಸೇವಾದಳದ ಮಾಜಿ ದಳಪತಿ ಹ.ಸಂ.ಕಾಶಿನಕುಂಟಿ ತಿಳಿಸಿದರು. ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಘ -ಸಂಸ್ಥೆಗಳು ರಾಷ್ಟ್ರಧ್ವಜ ಸಂಹಿತೆ ನಿಯಮಗಳನ್ನು ತಿಳಿದುಕೊಂಡು ಅದರ ಅನುಸಾರವೇ ಧ್ವಜಾರೋಹಣ ಮಾಡ ಬೇಕು ಹಾಗೂ ಇಳಿಸಬೇಕು. ಆದರೆ ಧ್ವಜ ಸಂಹಿತೆ…

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ
ಮೈಸೂರು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ

August 11, 2019

ಮೈಸೂರು, ಆ.10(ಪಿಎಂ)- ಜಮ್ಮು ಮತ್ತು ಕಾಶ್ಮೀರದ ಜನಾಭಿಪ್ರಾಯವನ್ನೇ ಕೇಳದೇ ಅಲ್ಲಿಗೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಬಂದೂಕು ಧಾರಿ ಸೈನಿಕರನ್ನು ನಿಯೋಜಿಸಿದ್ದು, ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ, ಸಾಮ್ರಾಜ್ಯ ಶಾಹಿ ಧೋರಣೆ ಯಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ (ಜನ್ನಿ) ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರಿನ ಪುರಭವನದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಮೈಸೂರು ಜಿಲ್ಲಾ ಶಾಖೆ ವತಿಯಿಂದ `ಮೋದಿಯ ನವಭಾರತದಲ್ಲಿ ಯಾರಿಗೆ ಬಂತು ಸ್ವಾತಂತ್ರ್ಯ?; ನರೇಂದ್ರ ಮೋದಿ ಆಡಳಿತದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳ…

ನೆರೆ ಹಾವಳಿ: ಕಂಟ್ರೋಲ್ ರೂಂ ಪ್ರಾರಂಭ
ಮೈಸೂರು

ನೆರೆ ಹಾವಳಿ: ಕಂಟ್ರೋಲ್ ರೂಂ ಪ್ರಾರಂಭ

August 11, 2019

ಮೈಸೂರು ಆ.10- ಜಿಲ್ಲೆಯಲ್ಲಿ ಪ್ರಸ್ತುತ ಉಂಟಾಗಿರುವ ನೆರೆ ಹಾವಳಿ/ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ತಾಲೂಕು ಕೇಂದ್ರಗಳಲ್ಲಿರುವ ತಾಲೂಕು ಪಂಚಾಯತ್ ಕಚೇರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ತಿಳಿಸಿದ್ದಾರೆ. ಕಂಟ್ರೋಲ್ ರೂಂನಲ್ಲಿ ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುವಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಸಾರ್ವಜನಿಕರು ನೆರೆ ಹಾವಳಿ/ ಪ್ರವಾಹ ವಿಷಯಕ್ಕೆ ಸಂಬಂಧಿಸಿದಂತೆ ಸ್ವೀಕೃತಗೊಂಡ ದೂರು ಮನವಿಗಳನ್ನು…

1 202 203 204 205 206 330
Translate »