ಎಂಕೆಎಸ್ ಬ್ರಿಗೇಡ್‍ನಿಂದ ಬಂಡಿಪಾಳ್ಯದಲ್ಲಿ ಧಾನ್ಯ ಸಂಗ್ರಹ
ಮೈಸೂರು

ಎಂಕೆಎಸ್ ಬ್ರಿಗೇಡ್‍ನಿಂದ ಬಂಡಿಪಾಳ್ಯದಲ್ಲಿ ಧಾನ್ಯ ಸಂಗ್ರಹ

August 11, 2019

ಮೈಸೂರು, ಆ.10(ಎಂಟಿವೈ)- ರಾಜ್ಯದ ವಿವಿಧೆಡೆ ಉಂಟಾಗಿರುವ ಪ್ರವಾಹ ಸಂತ್ರ ಸ್ತರಿಗೆ ನೆರವು ನೀಡಲು ಮುಂದಾಗಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದ ಎಂಕೆಎಸ್ ಬ್ರಿಗೇಡ್ ಕಾರ್ಯ ಕರ್ತರು ಶನಿವಾರ ಮೈಸೂರಿನ ಬಂಡಿ ಪಾಳ್ಯದಲ್ಲಿ ವರ್ತಕರಿಂದ ಆಹಾರ ಪದಾರ್ಥ ಸಂಗ್ರಹಿಸಿದರು.

ಇಂದು ಮಧ್ಯಾಹ್ನ ಬ್ರಿಗೇಡ್‍ನ ಕಾರ್ಯ ಕರ್ತರೊಂದಿಗೆ ಬಂಡಿಪಾಳ್ಯಕ್ಕೆ ಆಗಮಿ ಸಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತು ಗಳನ್ನು ಸಂಗ್ರಹಿಸಿದರು. ಇದೇ ವೇಳೆ ಅಲ್ಲಿನ ವರ್ತಕರಿಂದಲೂ ವಿವಿಧ ವಸ್ತು ಗಳನ್ನು ಸಂಗ್ರಹಿಸಲಾಯಿತು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸುವುದು ನಮ್ಮ ಧರ್ಮ. ಅಖಂಡ ಕರ್ನಾಟಕದಲ್ಲಿ ಉತ್ತರ ಕರ್ನಾಟಕವೂ ಒಂದಾಗಿದ್ದು, ಅಲ್ಲಿನ ಸಂತ್ರಸ್ತರ ಕಣ್ಣೀರು ಒರೆಸುವುದಕ್ಕಾಗಿ ಎಂಕೆಎಸ್ ಬ್ರಿಗೇಡ್‍ನಿಂದ ಅಗತ್ಯ ವಸ್ತು ಗಳನ್ನು ಸಂಗ್ರಹಿಸಲಾಗುತ್ತಿದೆ. ದಾನಿಗಳು ಕುವೆಂಪುನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ತಮ್ಮ ಶಕ್ತಿಯಾನು ಸಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಲೋಕೇಶ್, ಗುಣಶೇಖರ್, ರಾಜೇಶ್, ಸುಂದರ್, ವೆಂಕಟೇಶ್, ನಿರಾಲ್, ತ್ಯಾಗರಾಜು, ರಂಜನ್, ಸುನೀಲ್, ಹರೀಶ್ ಉಮೇಶ್, ಎಂಕೆಎಸ್ ಬ್ರಿಗೇಡ್ ಪ್ರಮೋದ್, ಜನಸ್ಪಂದನಾ ಟ್ರಸ್ಟ್ ಹರೀಶ್, ವಸಂತ್,  ನಾಗಮಹದೇವ, ಮಹೇಂದ್ರ, ಮಂಜುಗೌಡ ಇನ್ನಿತರರು ಉಪಸ್ಥಿತರಿದ್ದರು.

 

Translate »