ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ
ಮೈಸೂರು

ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ

August 11, 2019

ಮೈಸೂರು, ಆ.10(ಆರ್‍ಕೆ)-ಸೋಮ ವಾರ ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಗಳು ಶನಿವಾರ ಮೈಸೂರಿನ ನಜರ್‍ಬಾದ್ ನಲ್ಲಿರುವ ಪೊಲೀಸ್ ಕಮೀಷ್ನರ್ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು.

ಆ ವೇಳೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜ್ ಅವರು, ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಯಾವುದೇ ಗಲಾಟೆ ಇಲ್ಲದಂತೆ ಭಕ್ತಿ-ಭಾವದಿಂದ ಆಚ ರಿಸಿ, ಸಮಾಜದ ಎಲ್ಲ ವರ್ಗದ ಜನರನ್ನೂ ಪ್ರೀತಿಯಿಂದ ತೊಡಗಿಸಿಕೊಂಡು ಆರೋಗ್ಯ ಕರ ರೀತಿಯಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳಿ ಎಂದರು. ಬಕ್ರೀದ್ ಹಬ್ಬ ಆಚರಣೆ ವೇಳೆ ಕಾನೂನು-ಸುವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆಗಳಲ್ಲಿ ತೊಡಗಿ ಇತರರಿಗೆ ತೊಂದರೆ ಉಂಟಾ ದರೆ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸುವುದು ಅನಿವಾರ್ಯವಾಗು ತ್ತದೆ ಎಂದು ಮುಖಂಡರಿಗೆ ಎಚ್ಚರಿಕೆ ನೀಡಿ ದರು. ಈ ವೇಳೆ ಮುಖಂಡರುಗಳು ಬಕ್ರೀದ್ ಆಚರಣೆ ದಿನ ಪೊಲೀಸ್ ರಕ್ಷಣೆ ಒದಗಿಸು ವಂತೆ ಕೋರಿಕೊಂಡರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಟಿ. ಕವಿತಾ, ದೇವರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್, ಎನ್.ಆರ್. ಉಪ ವಿಭಾಗದ ಎಸಿಪಿ ಗೋಪಾಲ್ ಅವರು ಶಾಂತಿ ಸಭೆಯಲ್ಲಿ ಹಾಜರಿದ್ದರು.

 

Translate »