ಮೈಸೂರು, ಜೂ.24(ಎಸ್‍ಬಿಡಿ)- ಕೊಡಗು ಮೂಲದ ಮೈಸೂರಿನ ಯುವತಿ ಭಾರತೀಯ ವಾಯು ಪಡೆಗೆ ಸೇರುವ ಮೂಲಕ ಬಾಲ್ಯದ ಕನಸನ್ನು ಸಾಕಾರ ಗೊಳಿಸಿದ್ದಾರೆ. ಮೈಸೂರಿನ ವಿಜಯನಗರ ನಿವಾಸಿ ಕೊಳುವಂಡ ಪುಣ್ಯ ನಂಜಪ್ಪ ಭಾರತೀಯ ವಾಯು ಪಡೆಯ ಫ್ಲೈಯಿಂಗ್ ಬ್ರಾಂಚ್‍ಗೆ ಆಯ್ಕೆಯಾಗಿದ್ದು, ಬಾಲ್ಯದ ಕನಸಿನಂತೆ ಪೈಲಟ್ ಆಗುವ ಹಾದಿಯಲ್ಲಿ ದ್ದಾರೆ. ಹೈದರಾಬಾದ್‍ನ ದುಂಡಿಗಲ್‍ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಜುಲೈ 8ರಿಂದ ಅವರು ಟ್ರೈನಿ ಪೈಲಟ್ ಆಗಿ ಸೇವೆ ಆರಂಭಿಸಲಿದ್ದಾರೆ. ಪ್ರಸಕ್ತ ಕೋರ್ಸ್‍ಗೆ ಆಯ್ಕೆಯಾಗಿರುವವರಲ್ಲಿ ಫ್ಲೈಯಿಂಗ್ ಬ್ರಾಂಚ್‍ನಲ್ಲಿರುವ ಏಕೈಕ ಕನ್ನಡತಿ ಪುಣ್ಯ ನಂಜಪ್ಪ…
ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಮುಖ್ಯ ಕಾರ್ಯದರ್ಶಿ
June 25, 2019ಬೆಂಗಳೂರು, ಜೂ. 24(ಕೆಎಂಶಿ)-ಸಮಸ್ಯೆಗಳ ಪರಿ ಹಾರಕ್ಕೆ ಮುಖ್ಯಮಂತ್ರಿಗಳೇ ಖುದ್ದಾಗಿ ಬರಬೇಕೆಂಬ ಭಾವನೆ ಜನರಲ್ಲಿ ಮೂಡದಂತೆ ನೀವು ಕಾರ್ಯನಿರ್ವ ಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಿವಿಮಾತು ಹೇಳಿದ್ದಾರೆ. ಜಿಲ್ಲೆಯ ಹಿತ ರಕ್ಷಿಸಲು, ಜನರ ಸಮಸ್ಯೆ ಆಲಿಸುವಲ್ಲಿ ನೀವೆಷ್ಟು ಸಫಲರಾಗಿದ್ದೀರಿ ಎಂದು ಪ್ರಶ್ನಿಸಿ ಕೊಳ್ಳಬೇಕಾದ ಸಂದರ್ಭ ಇದು ಎಂಬುದು ನಿಮಗೆ ಗೊತ್ತಿರಲಿ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಇಂದು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿ, ಇತ್ತೀ ಚೆಗೆ…
ಮೈಸೂರು ರೈಲು ನಿಲ್ದಾಣಕ್ಕೆ ಇಂಟಿಗ್ರೇಟೆಡ್ ಐಎಸ್‍ಒ ಪ್ರಮಾಣಪತ್ರ
June 25, 2019ಮೈಸೂರು ವಿಭಾಗದ 30 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲು ನಿರ್ಧಾರ ಮೈಸೂರು, ಜೂ.24(ಎಂಕೆ)- ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಹೆಚ್ಚು ವರಿಯಾಗಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಮೈಸೂರು ವಿಭಾಗವು 55 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಹೊಂದಿದ್ದು, 2ನೇ ಹಂತದಲ್ಲಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ರೈಲ್ವೆ ಸಚಿವಾಲಯದ 100 ದಿನಗಳ ಕ್ರಿಯಾ ಯೋಜನೆ ಅಂಗವಾಗಿ ವೈ-ಫೈ ಸೌಲಭ್ಯ ಒದಗಿಸಲಾಗುತ್ತಿದೆ….
ಮೈಸೂರು ರೈಲು ನಿಲ್ದಾಣದಿಂದ ಎಂದಿನಂತೆ ರೈಲು ಸೇವೆ ಆರಂಭ
June 25, 2019ಮೈಸೂರು, ಜೂ. 24 (ಆರ್‍ಕೆ)- ಯಾರ್ಡ್ ರೀ-ಮಾಡಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಕೆಲವು ರೈಲುಗಳ ಸಂಚಾರ ಇಂದಿನಿಂದ ಆರಂಭ ವಾಯಿತು. ಮೈಸೂರು ರೈಲು ನಿಲ್ದಾಣ ಬಳಿಯ ಪ್ರಧಾನ ಯಾರ್ಡ್‍ನಲ್ಲಿ ತಾಂತ್ರಿಕ ಕಾಮ ಗಾರಿ ಕೈಗೆತ್ತಿಕೊಂಡಿದ್ದ ಕಾರಣ, ಜೂನ್ 16ರಿಂದ 23ರವರೆಗೆ ಬೆಂಗಳೂರು ಹಾಗೂ ಇತರ ನಗರಗಳ ನಡುವಿನ 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. 15 ರೈಲುಗಳು ಭಾಗಶಃ ರದ್ದಾಗಿದ್ದು, ಇತರ ಐದು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ಚೆನ್ನೈ ಮತ್ತು ಸಿಕಂದರಾಬಾದ್ ಎಕ್ಸ್‍ಪ್ರೆಸ್ ರೈಲು…
ಕಾಂಗ್ರೆಸ್ ಸೋಲಿಗೆ ಕಾರಣ ಕಂಡುಕೊಳ್ಳುವ ಪ್ರಯತ್ನ
June 25, 2019ಮೈಸೂರು,ಜೂ.24(ಆರ್‍ಕೆಬಿ)-ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರವೂ ಗೌಪ್ಯ ಸಭೆ ನಡೆಸಿ, ಈ ಭಾಗದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮುಂದುವರಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದೂ ಸಹ ವರುಣಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು ಸಭೆಯಲ್ಲಿ ನಡೆದ ಯಾವುದೇ ವಿಚಾರ ಮಾಧ್ಯಮ ಗಳಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ. ಸಭೆಯಲ್ಲಿ ಪ್ರತ್ಯೇಕವಾಗಿ ಮುಖಂಡರು, ಕಾರ್ಯಕರ್ತ ರನ್ನು ಕೊಠಡಿಗೆ ಕರೆದು, ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತಗಳು ಬರಲು ಕಾರಣವೇನು? ಎಂಬ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಲೋಕಸಭಾ…
ಸಾಗರಕಟ್ಟೆ-ಕೆ.ಆರ್.ನಗರ ರಸ್ತೆ ಅಭಿವೃದ್ಧಿ, ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಸುಸಜ್ಜಿತ ಸಭಾಂಗಣ ಸೇರಿ 60 ಕೋಟಿ ಯೋಜನೆಗೆ ಅನುಮೋದನೆ
June 25, 2019ಮೈಸೂರು,ಜೂ.24-ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ 60 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ವಿವಿಧ ಕಾಮ ಗಾರಿ ಕೈಗೊಳ್ಳಲು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅನುಮೋದಿಸಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿರುವ ಸಾಗರಕಟ್ಟೆ-ಕೆ.ಆರ್.ನಗರ ರಸ್ತೆ ಅಭಿವೃದ್ಧಿ, ನಡುವೆ ರಾಮೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಬ್ರಿಡ್ಜ್ ಕಾಮಗಾರಿಗೆ ಅನು ಮೋದನೆ ನೀಡಲಾಗಿದೆ. ಈ ರಸ್ತೆ ಅಭಿ ವೃದ್ಧಿಯಿಂದ ಮೈಸೂರು-ಕೆ.ಆರ್.ನಗರ ಪ್ರಯಾಣ ಮತ್ತಷ್ಟು ಸಮೀಪವಾಗಲಿದೆ. ಸದ್ಯ ಹುಣಸೂರು ಮುಖ್ಯರಸ್ತೆ, ಬಿಳಿಕೆರೆ ಮಾರ್ಗವಾಗಿ ಕೆ.ಆರ್.ನಗರಕ್ಕೆ ಸುಮಾರು 41 ಕಿ.ಮೀ ಕ್ರಮಿಸಬೇಕು. ಸಾಗರಕಟ್ಟೆ-ಕೆ.ಆರ್.ನಗರ ಹೆದ್ದಾರಿ ನಿರ್ಮಾಣದ ನಂತರ…
ಇಲಾಖಾ ಅಧಿಕಾರಿಗಳಿಂದ ಸ್ಪಷ್ಟತೆ ಕೊರತೆ: ಶಿಕ್ಷಕರು ಕಂಗಾಲು
June 25, 2019ಮೈಸೂರು,ಜೂ.24(ಎಸ್‍ಪಿಎನ್)- ಕಳೆದ 3 ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಉದ್ಭವಿಸಿರುವ ಆಡಳಿತಾತ್ಮಕ ಹಾಗೂ ವರ್ಗಾವಣೆ ಗೊಂದಲಗಳಿಗೆ ಉತ್ತರಿಸುವವರೇ ಇಲ್ಲದಂತಾಗಿದೆ..!?. ಶಿಕ್ಷಕರ ವರ್ಗಾವಣೆ, ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ(ಟಿಡಿಎಸ್) ಗೊಂದಲ, ಸೇವಾನಿರತ ಶಿಕ್ಷಕರಲ್ಲಿ ಪದವೀಧರರನ್ನು ಗುರುತಿಸಿ ಬಡ್ತಿ ನೀಡದಿ ರುವುದು ಸೇರಿದಂತೆ ಕಳೆದ ಮೂರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಎದ್ದಿರುವ ಗೊಂದಲಗಳಿಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ. 2018ರ ಅಕ್ಟೋಬರ್‍ನಲ್ಲಿ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆ ಮತ್ತೆ ಜೂನ್ ತಿಂಗಳಲ್ಲಿ ಆರಂಭ ವಾಗಿದೆ….
ವಿಜಯ ವಿಠಲ ಕಾಲೇಜಿನಲ್ಲಿ ಪರಿಸರ ಸಂಘದ ಉದ್ಘಾಟನೆ
June 25, 2019ಮೈಸೂರು,ಜೂ.24-ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ 2019ನೇ ಸಾಲಿನ ಪರಿಸರ ಸಂಘದ ಉದ್ಘಾ ಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರಿನ ಪ್ರಾದೇಶಿಕ, ಪ್ರಾಕೃತಿಕ ಮತ್ತು ಇತಿಹಾಸ ವಸ್ತುಸಂಗ್ರಹಾಲಯದ ಶೈಕ್ಷಣಿಕ ಅಧಿಕಾರಿ ಬಿ.ಎಸ್.ಯೋಗೇಂದ್ರರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಅದರ ಅನಿವಾರ್ಯತೆಯನ್ನು ಅರಿತು ಪರಿಶುದ್ಧ ವಾದ ಗಾಳಿ, ನೆಲ, ಜಲವನ್ನು ಸಂರಕ್ಷಿಸ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಅದರಲ್ಲೂ ಶುದ್ಧವಾದ ನೀರಿನ ಮಹತ್ವವನ್ನು ಅರಿಯಬೇಕು. ಪ್ರಾಚೀನ ಕಾಲದಲ್ಲಿದ್ದ ಕೆರೆ, ಬಾವಿ ಮುಂತಾದ…
ಮೈಸೂರು ಮೃಗಾಲಯದ ಪ್ರವೇಶ ದರದಲ್ಲಿ ಹೆಚ್ಚಳ
June 25, 2019ಜೂ.1ರಿಂದಲೇ ಜಾರಿಯಾಗಿದೆ ವಾರದ ದಿನ 60 ರಿಂದ 80 ರೂ. ವಾರಾಂತ್ಯ ದಿನ 80ರಿಂದ 100 ರೂ. ಮೈಸೂರು,ಜೂ.24(ಎಂಟಿವೈ)- ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸು ವುದರೊಂದಿಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಮೃಗಾಲಯ ಸಂಪ ನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ಜೂ.1ರಿಂದಲೇ ಪ್ರವೇಶ ದರ ಹೆಚ್ಚಿಸಿದೆ. ಹೊಸ ಪ್ರಾಣಿಗಳನ್ನು ತರುವುದ ರೊಂದಿಗೆ ಮೃಗಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸಮ ರೋಪಾದಿಯಲ್ಲಿ ನಡೆಸುತ್ತಿರುವುದ ರಿಂದ ಸಂಪನ್ಮೂಲ ಕ್ರೂಡೀಕರಣಕ್ಕೆ ಕ್ರಮ ಕೈಗೊಂಡಿದೆ. ಇದಕ್ಕಾಗಿ ಪ್ರವೇಶ ದರವನ್ನು ಹೆಚ್ಚಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ…
ಬಿಹಾರದಲ್ಲಿ ಮಕ್ಕಳ ಸರಣಿ ಸಾವು ತಡೆಗೆ ಆಗ್ರಹಿಸಿ ಎಸ್‍ಯುಸಿಐ ಪ್ರತಿಭಟನೆ
June 25, 2019ಮೈಸೂರು,ಜೂ.24(ಎಂಟಿವೈ)-ಬಿಹಾರದಲ್ಲಿ ಅನಾರೋಗ್ಯ ದಿಂದ ಸಂಭವಿಸುತ್ತಿರುವ ಮಕ್ಕಳ ಸರಣಿ ಸಾವು ತಡೆಗಟ್ಟು ವಂತೆ ಆಗ್ರಹಿಸಿ ಸೋಮವಾರ ಎಸ್‍ಯುಸಿಐ ಕಾರ್ಯಕರ್ತರು ಪ್ರತಿ ಭಟನೆ ನಡೆಸಿದರು. ಬಿಹಾರದಲ್ಲಿನ ನಡೆಯುತ್ತಿರುವ ಮಕ್ಕಳ ಸಾವಿನ ಪ್ರಕರಣವನ್ನು ಖಂಡಿಸಿ ಎಸ್‍ಯುಸಿಐ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಬೆಳಿಗ್ಗೆ ಮೈಸೂರಿನ ಚಿಕ್ಕ ಗಡಿಯಾರದ ಮುಂದೆ ಪ್ರತಿಭಟಿಸಿ, ಬಿಹಾರದ ಸರ್ಕಾರದ ಬೇಜವಾಬ್ದಾರಿ ನಿಲುವನ್ನು ಖಂಡಿಸಿದರು. ಮುಜಾಫರ್ ಜಿಲ್ಲೆಯೊಂದರಲ್ಲೇ 150ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಖಾಯಿಲೆ ಯಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ…










