ಮೈಸೂರು ರೈಲು ನಿಲ್ದಾಣದಿಂದ ಎಂದಿನಂತೆ ರೈಲು ಸೇವೆ ಆರಂಭ
ಮೈಸೂರು

ಮೈಸೂರು ರೈಲು ನಿಲ್ದಾಣದಿಂದ ಎಂದಿನಂತೆ ರೈಲು ಸೇವೆ ಆರಂಭ

June 25, 2019

ಮೈಸೂರು, ಜೂ. 24 (ಆರ್‍ಕೆ)- ಯಾರ್ಡ್ ರೀ-ಮಾಡಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಕೆಲವು ರೈಲುಗಳ ಸಂಚಾರ ಇಂದಿನಿಂದ ಆರಂಭ ವಾಯಿತು. ಮೈಸೂರು ರೈಲು ನಿಲ್ದಾಣ ಬಳಿಯ ಪ್ರಧಾನ ಯಾರ್ಡ್‍ನಲ್ಲಿ ತಾಂತ್ರಿಕ ಕಾಮ ಗಾರಿ ಕೈಗೆತ್ತಿಕೊಂಡಿದ್ದ ಕಾರಣ, ಜೂನ್ 16ರಿಂದ 23ರವರೆಗೆ ಬೆಂಗಳೂರು ಹಾಗೂ ಇತರ ನಗರಗಳ ನಡುವಿನ 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

15 ರೈಲುಗಳು ಭಾಗಶಃ ರದ್ದಾಗಿದ್ದು, ಇತರ ಐದು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ಚೆನ್ನೈ ಮತ್ತು ಸಿಕಂದರಾಬಾದ್ ಎಕ್ಸ್‍ಪ್ರೆಸ್ ರೈಲು ಪಾಂಡವಪುರ ನಿಲ್ದಾಣದಿಂದ ಹೊರಡುತ್ತಿದ್ದು, ಇನ್ನಿತರ ರೈಲುಗಳ ಸಂಚಾರ ಮಾರ್ಗಗಳೂ ಬದಲಾಗಿದ್ದವು. ಇದರಿಂದಾಗಿ ನಿತ್ಯ ರೈಲಿನಲ್ಲಿ ಓಡಾಡುವವರಿಗೆ ತೊಂದರೆ ಆಗಿತ್ತು. ನಿಗದಿತ ಅವಧಿಯೊಳಗೆ ರೈಲ್ವೇ ಯಾರ್ಡ್ ರೀಮಾಡಲಿಂಗ್ ಕೆಲಸ ಮುಗಿದಿರುವು ದರಿಂದ ಇಂದು ಬೆಳಿಗ್ಗೆಯಿಂದ ಎಲ್ಲಾ ರೈಲುಗಳೂ ಎಂದಿನಂತೆ ಮೈಸೂರು ರೈಲ್ವೆ ನಿಲ್ದಾಣದಿಂದ ಸೇವೆಗಳನ್ನು ಆರಂಭಿಸಿವೆ ಎಂದು ರೈಲ್ವೇ ಇಲಾಖೆ ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ. ಪರಿಣಾಮ ಸಾವಿರಾರು ರೈಲು ಪ್ರಯಾಣಿಕರಿಗೆ ತಮ್ಮ ಸ್ಥಳಗಳಿಗೆ ತಲುಪುವುದು ಈಗ ಸಲೀಸಾಗಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

Translate »