ಮೈಸೂರು ರೈಲು ನಿಲ್ದಾಣಕ್ಕೆ ಇಂಟಿಗ್ರೇಟೆಡ್ ಐಎಸ್‍ಒ ಪ್ರಮಾಣಪತ್ರ
Uncategorized

ಮೈಸೂರು ರೈಲು ನಿಲ್ದಾಣಕ್ಕೆ ಇಂಟಿಗ್ರೇಟೆಡ್ ಐಎಸ್‍ಒ ಪ್ರಮಾಣಪತ್ರ

June 25, 2019

ಮೈಸೂರು ವಿಭಾಗದ 30 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲು ನಿರ್ಧಾರ
ಮೈಸೂರು, ಜೂ.24(ಎಂಕೆ)- ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಹೆಚ್ಚು ವರಿಯಾಗಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಮೈಸೂರು ವಿಭಾಗವು 55 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಹೊಂದಿದ್ದು, 2ನೇ ಹಂತದಲ್ಲಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ರೈಲ್ವೆ ಸಚಿವಾಲಯದ 100 ದಿನಗಳ ಕ್ರಿಯಾ ಯೋಜನೆ ಅಂಗವಾಗಿ ವೈ-ಫೈ ಸೌಲಭ್ಯ ಒದಗಿಸಲಾಗುತ್ತಿದೆ. ಈಗಾಗಲೇ ದೇಶಾದ್ಯಂತ 1603 ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವಿದ್ದು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಮೂಲಕ 4800 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಸಂಪರ್ಕವನ್ನು ಒದಗಿಸುವ ಯೋಜನೆಯಾಗಿದೆ. ವೈ-ಫೈ ಸೌಲಭ್ಯದಿಂದ ಪ್ಲಾಟ್‍ಫಾರ್ಮ್‍ಗಳಲ್ಲಿ ಕಾಯುವ ಪ್ರಯಾಣಿಕರು ಒಂದು ಸಮಯದಲ್ಲಿ ಮೂವತ್ತು ನಿಮಿಷಗಳ ಕಾಲ ಉಚಿತವಾಗಿ ಇಂಟರ್ನೆಟ್ ಪಡೆಯಲು ಸಹಾಯವಾಗುತ್ತದೆ. ಸಾಗರಕಟ್ಟೆ, ಹೊಸ ಅಗ್ರಹಾರ, ನರಿಮೊಗರು, ಅಮ್ಮಸಂದ್ರ, ದೇವನೂರ್, ಚಿಕ್ಕಮಗಳೂರು, ಸಾಸಲು, ಕರಜ್ಗಿ, ತಲಕು, ಮೊಳಕಲ್ಮೂರು ಸೇರಿದಂತೆ 30 ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಪಡೆಯಬಹುದಾಗಿದೆ.

Translate »