ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಮುಖ್ಯ ಕಾರ್ಯದರ್ಶಿ
ಮೈಸೂರು

ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಮುಖ್ಯ ಕಾರ್ಯದರ್ಶಿ

June 25, 2019

ಬೆಂಗಳೂರು, ಜೂ. 24(ಕೆಎಂಶಿ)-ಸಮಸ್ಯೆಗಳ ಪರಿ ಹಾರಕ್ಕೆ ಮುಖ್ಯಮಂತ್ರಿಗಳೇ ಖುದ್ದಾಗಿ ಬರಬೇಕೆಂಬ ಭಾವನೆ ಜನರಲ್ಲಿ ಮೂಡದಂತೆ ನೀವು ಕಾರ್ಯನಿರ್ವ ಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಿವಿಮಾತು ಹೇಳಿದ್ದಾರೆ.

ಜಿಲ್ಲೆಯ ಹಿತ ರಕ್ಷಿಸಲು, ಜನರ ಸಮಸ್ಯೆ ಆಲಿಸುವಲ್ಲಿ ನೀವೆಷ್ಟು ಸಫಲರಾಗಿದ್ದೀರಿ ಎಂದು ಪ್ರಶ್ನಿಸಿ ಕೊಳ್ಳಬೇಕಾದ ಸಂದರ್ಭ ಇದು ಎಂಬುದು ನಿಮಗೆ ಗೊತ್ತಿರಲಿ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಇಂದು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿ, ಇತ್ತೀ ಚೆಗೆ ಗ್ರಾಮವೊಂದರಲ್ಲಿ ವಾಸ್ತವ್ಯ ವೇಳೆ 10,000ಕ್ಕೂ ಹೆಚ್ಚು ಅರ್ಜಿಗಳು ಕೆಲವೇ ಗ್ರಾಮಗಳಿಂದ ಬಂದಿವೆ ಎಂದರು.

ಕಲಬುರಗಿ ಜಿಲ್ಲೆಯ ಗ್ರಾಮ ವೊಂದಕ್ಕೆ ಮುಖ್ಯಮಂತ್ರಿ ವಾಸ್ತವ್ಯಕ್ಕೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದ ಹೋಗಲಾಗದಿದ್ದಾಗಲೂ ಗ್ರಾಮ ಸ್ಥರಿಂದ ಉಸ್ತುವಾರಿ ಸಚಿವರಿಗೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ನಾನು ಪರಿಶೀಲನೆ ಮಾಡಿದ್ದೇನೆ. ರೈತರು ಮತ್ತು ಗ್ರಾಮಸ್ಥರು, ಸಣ್ಣ-ಪುಟ್ಟ ಸಮಸ್ಯೆಗಳನ್ನು ಅವರ ಮುಂದಿಟ್ಟಿದ್ದಾರೆ. ಸಾಮಾನ್ಯ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮುಖ್ಯಮತ್ರಿಗಳ ಗಮನಕ್ಕೂ ತರುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದಕ್ಕೆ ಅವಕಾಶ ಮಾಡಿ ಕೊಡಬೇಡಿ. ಮುಖ್ಯ ಮಂತ್ರಿ ಅವರು, ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಮಾಡುತ್ತಾರೆ, ಇದನ್ನು ಮನಗಂಡು ನೀವು ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಎಂದಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಮರೋ ಪಾದಿಯಲ್ಲಿ ಪರಿಹಾರ ಕಾಮಗಾರಿಗೆ ಸಜ್ಜಾಗುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿ ದರು. ಬರ ಪರಿಹಾರ ಕಾಮಗಾರಿಗಾಗಿ ಈಗಾಗಲೇ ರೂಪಿಸಲಾಗಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇದರ ಜೊತೆ ಕೆಲವು ಜಿಲ್ಲೆಗಳಲ್ಲಿ ಸಂಭವ ನೀಯ ಅತಿವೃಷ್ಟಿ ಆತಂಕವನ್ನು ಎದುರಿಸಲು ಸಿದ್ಧ ರಾಗಿ, ಯಾವ ಕಾರಣಕ್ಕೂ ಜನಜೀವನ ಅಸ್ತವ್ಯಸ್ತವಾಗ ದಂತೆ ನೋಡಿಕೊಳ್ಳಿ, ಜನರೊಂದಿಗೆ ಜಾನುವಾರು ಗಳನ್ನೂ ರಕ್ಷಿಸಿ ಎಂದು ಕಿವಿಮಾತು ಹೇಳಿದರು.

Translate »