Tag: Mysuru Dasara 2018

ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು

October 20, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆಯಲ್ಲಿ ಅರ್ಜುನನ ಮೇಲೆ ವಿರಾಜಮಾನಳಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಸಾವಿರಕ್ಕೂ ಅಧಿಕ ಮಂದಿ ವಿದೇಶಿ ಪ್ರವಾಸಿಗರು ವೀಕ್ಷಿಸಿ ನಮಿಸಿದರು. ಆಯುರ್ವೇದ ವೃತ್ತದಲ್ಲಿ ಕಲ್ಪವೃಕ್ಷ ಟ್ರಸ್ಟ್ ಹಾಗೂ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಸಹ ಯೋಗ ದೊಂದಿಗೆ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ವೀಕ್ಷಣಾ ಗ್ಯಾಲರಿಯಲ್ಲಿ ಕುಳಿತಿದ್ದ ಸ್ಪೇನ್, ಫ್ರಾನ್ಸ್, ಬ್ರಿಟನ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಮೈಸೂ ರಿನ ಕಂಪ್ಯೂಟರ್ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿ ರುವ 30ಕ್ಕೂ ಹೆಚ್ಚು ಚೀನಿ…

ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ

October 20, 2018

ಮೈಸೂರು: ಈ ಬಾರಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ನಟ ಶಿವರಾಜ್‍ಕುಮಾರ್ ದಂಪತಿ ವೀಕ್ಷಿಸಿದರು. ಸಯ್ಯಾಜಿರಾವ್ ರಸ್ತೆಯ ಹೈವೇ ವೃತ್ತ ಬಳಿಯಿರುವ ಪ್ರತಿಷ್ಟಿತ ಖಾಸಗಿ ಹೋಟೆಲ್ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಇತರೆ ಗಣ್ಯರೊಂದಿಗೆ ಕುಳಿತು, ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದರು. ಎಪಿಎಂಸಿಯಿಂದ ವಿಶೇಷ ಪೂಜೆ: ಸಯ್ಯಾಜಿರಾವ್ ರಸ್ತೆಯಲ್ಲಿನÀ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಬಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು ಹಂಪಲು ನೀಡಲಾಯಿತು. ಈ ವೇಳೆ…

ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ
ಮೈಸೂರು, ಮೈಸೂರು ದಸರಾ

ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ

October 20, 2018

ಮೈಸೂರು: ಅರಮನೆ ಬಲರಾಮ ದ್ವಾರದ ಬಳಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿ ಸುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ 408ನೇ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮಧ್ಯಾಹ್ನ 2.47ರ ವೇಳೆಗೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸಂಪುಟದ ಹಲವು ಸಹೋದ್ಯೋಗಿ ಗಳೊಡನೆ ಆಗಮಿಸಿದರು. ಶುಭ ಕುಂಭ ಲಗ್ನದಲ್ಲಿ ನಾದಸ್ವರದ ನಡುವೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಸರಾ ಉದ್ಘಾಟಕಿ ಡಾ.ಸುಧಾಮೂರ್ತಿ, ಸಿಎಂ…

ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ
ಮೈಸೂರು, ಮೈಸೂರು ದಸರಾ

ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ

October 20, 2018

ಮೈಸೂರು:  ದಸರಾ ಮೆರವಣಿಗೆ ವೇಳೆ ಪಾರಂಪರಿಕ ಕಟ್ಟಡ ಗಳು ಹಾಗೂ ಶಿಥಿಲಗೊಂಡ ಕಟ್ಟಡಗಳ ಮೇಲೆ ಹತ್ತಬಾರದು ಎಂಬ ನಗರಪಾಲಿಕೆ ಆಯುಕ್ತರ ಎಚ್ಚರಿಕೆ ಆದೇಶವನ್ನೂ ಜನತೆ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ. ಜಂಬೂ ಸವಾರಿ ಮಾರ್ಗದ ಬಹುತೇಕ ಕಟ್ಟಡಗಳು ಅದರಲ್ಲೂ ಮುಖ್ಯವಾಗಿ ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೂ ಅಪಾಯವನ್ನೂ ಲೆಕ್ಕಿಸದೆ ಭಾರೀ ಜನ ಕುಳಿತು ಮೆರವಣಿಗೆ ವೀಕ್ಷಿಸಿದರು. ಮರ, ಕಾಂಪೌಂಡ್, ಪೆಟ್ಟಿಗೆ ಅಂಗಡಿ, ಜಾಹೀರಾತು ಫಲಕಗಳ ಮೇಲೂ ಹತ್ತಿ ಕುಳಿತು ಮೆರವಣಿಗೆ ವೀಕ್ಷಿಸಿದರು. ಟೌನ್ ಹಾಲ್ ಆವರಣದಲ್ಲಿರುವ ಮರಗಳು,…

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಮೈಸೂರು, ಮೈಸೂರು ದಸರಾ

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

October 20, 2018

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಎಂದಿನಂತೆ ಜನರನ್ನು ನಿಯಂ ತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್‍ಗಳನ್ನು ತಳ್ಳಿ ಮುಂದೆ ಮುಂದೆ ಬರಲು ಯತ್ನಿಸುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‍ಗೆ ತಮ್ಮ ಬಲವನ್ನೆಲ್ಲಾ ಬಿಟ್ಟು ತಳ್ಳಿ ಹಿಡಿದು ಜನರನ್ನು ನಿಯಂತ್ರಿಸುತ್ತಿದ್ದರು. ಜಂಬೂಸವಾರಿ ಮಾರ್ಗದ ಇಕ್ಕೆಲಗಳಲ್ಲಿ ಬೆಳಿಗ್ಗೆಯಿಂದಲೇ ಜಾಗಗಳನ್ನು ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರಿಗೆ ಈ ಬಾರಿ ಮಳೆರಾಯ ಯಾವುದೇ ತೊಂದರೆ ನೀಡಲಿಲ್ಲ. ಸುಡು ಬಿಸಿಲನ್ನೂ ಲೆಕ್ಕಿಸದೆ ಜನ ಮೆರವಣಿಗೆ ವೀಕ್ಷಿಸಿದರು. ಡಾ.ರಾಜ್‍ಕುಮಾರ್ ಡಾ.ವಿಷ್ಣುವರ್ಧನ್ ಉದ್ಯಾನದ ಬಳಿ ಹಾಕಿದ್ದ…

ಬಿರು ಬಿಸಿಲಲ್ಲಿ ಬಸವಳಿದ ಜನತೆ
ಮೈಸೂರು, ಮೈಸೂರು ದಸರಾ

ಬಿರು ಬಿಸಿಲಲ್ಲಿ ಬಸವಳಿದ ಜನತೆ

October 20, 2018

ಮೈಸೂರು: ಶುಕ್ರವಾರ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನೋಡಲು ಕಾತುರದಿಂದ ಕಾದಿದ್ದ ಜನತೆ ಬಿರು ಬಿಸಿಲಲ್ಲಿ ಬಸವಳಿದರು. ಮೆರವಣಿಗೆಯ ಉದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಆದರೆ ಬೆಳಿಗ್ಗೆಯಿಂದಲೇ ಜಾಗ ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರು, ಕಲಾವಿದರು, ಪೊಲೀಸರು ಎಲ್ಲರೂ ಬಿರು ಬಿಸಿಲಿನಿಂದ ಬೆವರಿದರು. ಮೆರವಣಿಗೆ ಉದ್ದಕ್ಕೂ ವಿವಿಧ ಸಂಘಟನೆಗಳು ನೀರಿನ ವ್ಯವಸ್ಥೆ ಮಾಡಿದ್ದವು. ಡಾ.ರಾಜ್ ಸಂಘ, ಮೈಸೂರು ಕನ್ನಡ ವೇದಿಕೆ, ಶ್ರೀ ರಾಜೇಶ್ವರ್ ಪಟೇಲ್ ಗ್ರೂಪ್, ವಾಸವಿ ಯುವ ಜನ ಸಂಘ ಜಂಬೂಸವಾರಿಯಲ್ಲಿ ಭಾಗ…

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ
ಮೈಸೂರು, ಮೈಸೂರು ದಸರಾ

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ

October 16, 2018

ಮೈಸೂರು:  ಮಹಿಳಾ ಮತ್ತು ಮಕ್ಕಳ ದಸರಾ ಹಮ್ಮಿಕೊಂಡಿದ್ದ ಮೈಸೂರಿನ ಜೆಕೆ ಮೈದಾನದಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ನಿಂತಿದ್ದು, ಕೆಸರು ಗದ್ದೆಯಾದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಭೇಟಿ ನೀಡಿದ ನೂರಾರು ಮಂದಿ ಈ ಕೆಸರಿನಲ್ಲಿ ಹೆಜ್ಜೆ ಇಡಲಾಗದೇ ಪರಿತಪಿಸಬೇಕಾಯಿತು. ಭಾನುವಾರ ರಾತ್ರಿ ಸುರಿದ ಮಳೆಗೆ ಜೆಕೆ ಮೈದಾನದ ಬಹುಭಾಗದಲ್ಲಿ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಒಂದಿಷ್ಟು ಸಂಭ್ರಮಿಸಲು ಬಂದಿದ್ದ ಸಾರ್ವಜನಿಕರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆ ಕಂಡು, ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಮೈದಾನದಲ್ಲಿ ಮಹಿಳಾ ಉದ್ಯಮಿಗಳು…

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ
ಮೈಸೂರು, ಮೈಸೂರು ದಸರಾ

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ

October 16, 2018

ಮೈಸೂರು: ಚಿತ್ರ ತಾರೆಯರ ಮನಮೋಹಕ ನೃತ್ಯ, ಹಿನ್ನೆಲೆ ಗಾಯಕರ ಸಂಗೀತ ನಿನಾದ, ಹಾಸ್ಯ ಕಲಾವಿದರ ಝಲಕ್‍ನಿಂದ ಇಂದಿನ ಯುವ ದಸರಾ ರಂಗೇರಿತ್ತು. ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾದ 4ನೇ ದಿನವಾದ ಸೋಮವಾರ, ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಯಕ್ಷಗಾನದ ಪೋಷಾಕು ಧರಿಸಿದ್ದ ಕಲಾವಿದರು, ವಿಶಿಷ್ಟ ನೃತ್ಯ ಪ್ರದರ್ಶನದೊಂದಿಗೆ ವಿಘ್ನ ವಿನಾಯಕನನ್ನು ಸ್ಮರಿಸಿದರು. ಬಳಿಕ ವೇದಿಕೆಗೆ ಬಂದ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ, `ಆಡು ಆಟ ಆಡು…

ಗ್ರಾಮೀಣ ಜನರಿಗೆ `ದಸರಾ ದರ್ಶನ’
ಮೈಸೂರು, ಮೈಸೂರು ದಸರಾ

ಗ್ರಾಮೀಣ ಜನರಿಗೆ `ದಸರಾ ದರ್ಶನ’

October 16, 2018

ಮೈಸೂರು: ಗ್ರಾಮೀಣ ಮಹಿಳೆಯರು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ದಸರಾ ದರ್ಶನಕ್ಕೆ ಅನುವಾಗುವಂತೆ ಕನಿಷ್ಠ ದರದಲ್ಲಿ ಬಸ್ ಸೌಕರ್ಯಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಮೈಸೂರಲ್ಲಿ ಚಾಲನೆ ನೀಡಿದರು. ಇದ ರೊಂದಿಗೆ ಚಾಮುಂಡಿಬೆಟ್ಟ, ಮೃಗಾ ಲಯ, ಅರಮನೆ ತೋರಿಸಿ ಮತ್ತೆ ಊರಿಗೆ ಕರೆದೊಯ್ದು ಬಿಡಲಾಗುವುದು. ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಮೈಸೂರು ದಸರಾ ದರ್ಶನ ಉಪ ಸಮಿತಿ ಆಯೋಜಿ ಸಿರುವ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ದಸರಾ ದರ್ಶನದ 8 ಕೆಎಸ್ ಆರ್‍ಟಿಸಿ…

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ
ಮೈಸೂರು, ಮೈಸೂರು ದಸರಾ

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ

October 15, 2018

ಮೈಸೂರು: ಮೈಸೂರು ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ, ಅರ್ಥಾತ್ `ಮಿನಿ ಜಂಬೂ ಸವಾರಿ’ ಭಾನುವಾರ ಅತ್ಯಂತ ಸಂಭ್ರಮದಿಂದ ನೆರವೇರಿತು. ಕಲಾ ತಂಡಗಳಿಗೆ ಉತ್ತೇಜನ ನೀಡುವುದು ಹಾಗೂ ಮಹತ್ವದ ವಿಜಯದಶಮಿ ಮೆರವಣಿಗೆ ಯಶಸ್ಸಿಗೆ ಪೂರಕವಾಗಿ ಆಯೋಜಿಸಿದ್ದ ಈ ಮಿನಿ ಜಂಬೂಸವಾರಿ ಅದ್ಧೂರಿಯಾಗಿಯೇ ನೆರವೇರಿತು. ಆ ಮೂಲಕ ಮೈಸೂರಿಗರು, ಪ್ರವಾಸಿಗರು ವಿಜಯದಶಮಿಯ ವೈಭವದ ಒಂದು ನೋಟವನ್ನು ಮುಂಗಡವಾಗಿಯೇ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ…

1 2 3 4 7
Translate »