Tag: Mysuru Dasara 2018

ಮೈಸೂರಲ್ಲಿ ಪ್ರವಾಸಿಗರ ಜಾತ್ರೆ ಎತ್ತ ನೋಡಿದರೂ ಟ್ರಾಫಿಕ್ ಜಾಮ್
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಪ್ರವಾಸಿಗರ ಜಾತ್ರೆ ಎತ್ತ ನೋಡಿದರೂ ಟ್ರಾಫಿಕ್ ಜಾಮ್

October 14, 2018

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನೇ ದಿನೆ ಕಳೆ ಗಟ್ಟುತ್ತಿದ್ದು, 2ನೇ ಶನಿವಾರವಾದ ಇಂದು ಲಕ್ಷಾಂತರ ಪ್ರವಾಸಿಗರು ಲಗ್ಗೆ ಇಟ್ಟು ಮೈಸೂರಿನ ಸೊಬಗನ್ನು ಆಸ್ವಾದಿಸಿದ್ದಾರೆ. ಇದರ ಪರಿಣಾಮವಾಗಿ ಮೈಸೂರು ಹೃದಯ ಭಾಗ ಮಾತ್ರವಲ್ಲದೆ, ಹೊರವಲಯದಲ್ಲೂ ಕೂಡ ಸಂಚಾರ ದಟ್ಟಣೆ ಮಿತಿ ಮೀರಿತ್ತು. ಇಂದು ಬೆಳಿಗ್ಗೆಯಿಂದಲೇ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕಾರಣದಿಂದಾಗಿ ಕೃಷ್ಣರಾಜ ಬುಲೆ ವಾರ್ಡ್ ರಸ್ತೆ ಪ್ರವಾಸಿಗರೂ ಮತ್ತು ಸ್ಥಳೀಯರಿಂದ ಕಿಕ್ಕಿರಿದು ತುಂಬಿತ್ತು. ಸಂಜೆಯ ನಂತರ ಇದೇ ರಸ್ತೆಯಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ…

ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ
ಮೈಸೂರು, ಮೈಸೂರು ದಸರಾ

ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ

October 14, 2018

ಮೈಸೂರು: ಯೋಗ ದಸರಾ ಉಪಸಮಿತಿಯಿಂದ ಇಂದು ಏರ್ಪಡಿಸಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಯೋಗಪಟುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇಂದು ಬೆಳಿಗ್ಗೆ 6.10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆರಂಭವಾದ ಯೋಗ ಚಾರಣ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಹಸಿರು ನಿಶಾನೆ ತೋರಿಸಿದರು. ನಂತರ ಸಚಿವರು, ಯೋಗ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೂ ಸೇರಿ ಸುಮಾರು 1 ಸಾವಿರ ಮಂದಿಯೊಂದಿಗೆ ಮೆಟ್ಟಿಲುಗಳ ಮೂಲಕ…

ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ‘ಹೆಲಿ ರೈಡ್’ ಆರಂಭ
ಮೈಸೂರು, ಮೈಸೂರು ದಸರಾ

ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ‘ಹೆಲಿ ರೈಡ್’ ಆರಂಭ

October 14, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸದವಕಾಶವನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು, 2399 ರೂ. ಪಾವತಿಸಿ ಲಲಿತಮಹಲ್ ಹೆಲಿಪ್ಯಾಡ್‍ನಿಂದ 10 ನಿಮಿಷಗಳ ಕಾಲ ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ಹಾಕಬಹುದು. ಕಳೆದ ಕೆಲ ವರ್ಷದಿಂದ ದಸರಾ ಮಹೋತ್ಸವದಲ್ಲಿ ಹೆಲಿ ಕಾಪ್ಟರ್ ರೈಡ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಅ.19ರವರೆಗೆ ಎರಡು ಹೆಲಿಕಾಪ್ಟರ್ ಗಳು ಮೈಸೂರಿನ ಸೌಂದರ್ಯವನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ…

ಮೊದಲ 3 ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟುಗಳಿಗೆ ತಲಾ 10 ಸಾವಿರ ನಗದು ಬಹುಮಾನ
ಮೈಸೂರು, ಮೈಸೂರು ದಸರಾ

ಮೊದಲ 3 ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟುಗಳಿಗೆ ತಲಾ 10 ಸಾವಿರ ನಗದು ಬಹುಮಾನ

October 14, 2018

ಮೈಸೂರು:  ದಸರಾ ಮಹಿಳಾ ಕುಸ್ತಿಯ ಎಲ್ಲಾ ವಿಭಾಗಗಳಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ಸ್ಪರ್ಧಿ ಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಲಾಗು ವುದು ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಪ್ರಕಟಿಸಿದರು. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ರಾಜ್ಯಮಟ್ಟದ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಸ್ತಿಯಲ್ಲಿ ಗೆಲುವು ಪಡೆದವರ ವಿಳಾಸ ಮತ್ತು ಇತರ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ಸಂಘಟಕರಿಗೆ ಸೂಚಿಸಿದರಲ್ಲದೆ, ಮಹಿಳಾ ಕುಸ್ತಿಪಟುಗಳಿಗೆ ಉತ್ತೇಜನ…

ಇಂದು ಸಂಜೆ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ
ಮೈಸೂರು, ಮೈಸೂರು ದಸರಾ

ಇಂದು ಸಂಜೆ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ

October 14, 2018

ಮೈಸೂರು: ದಸರಾ ಮಹೋತ್ಸವದ ಅಂಗ ವಾಗಿ ನಾಳೆ(ಅ.14) ಮೈಸೂರಿನ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ(ಒಚಿss ಃಚಿಟಿಜ) ನಡೆಯಲಿದೆ. ಭಾನುವಾರ ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿರುವ ಪೊಲೀಸ್ ಸಮೂಹ ವಾದ್ಯಮೇಳದಲ್ಲಿ ಗೃಹಮಂತ್ರಿಗಳೂ ಆದ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸು ತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಭಾಗವಹಿಸುವರು. ಜುಗಲ್‍ಬಂದಿ, ಕರ್ನಾಟಕ ಮತ್ತು ಇಂಗ್ಲೀಷ್ ಬ್ಯಾಂಡ್ ವಾದನ…

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ವಿಜಯ ಬ್ಯಾಂಕ್, ಬೆಂಗಳೂರು ಕೇಶವ ಸ್ಪೋಟ್ರ್ಸ್ ಕ್ಲಬ್ ಚಾಂಪಿಯನ್ಸ್
ಮೈಸೂರು, ಮೈಸೂರು ದಸರಾ

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ವಿಜಯ ಬ್ಯಾಂಕ್, ಬೆಂಗಳೂರು ಕೇಶವ ಸ್ಪೋಟ್ರ್ಸ್ ಕ್ಲಬ್ ಚಾಂಪಿಯನ್ಸ್

October 14, 2018

ಮೈಸೂರು:  ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯದಲ್ಲಿ ವಿಜಯ ಬ್ಯಾಂಕ್ ಮತ್ತು ಬೆಂಗಳೂರಿನ ಕೇಶವ ಸ್ಪೋರ್ಟ್ಸ್ ಕ್ಲಬ್ ತಂಡಗಳು ಕ್ರಮವಾಗಿ ಪುರುಷ- ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು. ಪುರುಷರ ವಿಭಾಗ: ಫೈನಲ್‍ನಲ್ಲಿ ವಿಜಯ ಬ್ಯಾಂಕ್ ತಂಡವು ಹೆಚ್‍ಎಎಲ್ ತಂಡವನ್ನು 29-17ರಿಂದ ಮಣಿಸಿತು. ಮೊದಲಾರ್ಧದಲ್ಲಿ 19-11ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡಕ್ಕೆ ರೋಹಿತ್ ಮಾರ್ಲ ಹೆಚ್ಚು ಪಾಯಿಂಟ್‍ಗಳನ್ನು ತಂದುಕೊಟ್ಟರು. 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಎಸ್‍ಸಿ ತಂಡವು ಕೊಡಗು ತಂಡವನ್ನು 42-25ರಿಂದ ಸೋಲಿಸಿತು….

ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ
ಮೈಸೂರು, ಮೈಸೂರು ದಸರಾ

ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ

October 14, 2018

ಮೈಸೂರು: ರುಚಿಯಾದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸಿದ ಯುವಕರಿಗೆ ಪ್ಲೇಟ್ ಪಾನಿ ಪೂರಿಯನ್ನು ಕೆಲವೇ ನಿಮಿಷದಲ್ಲಿ ಗುಳುಂ ಮಾಡಿ ಸೆಡ್ಡು ಹೊಡೆದ ನಾರಿಯರು. ಆಹಾರ ಮೇಳದ ಅಂಗಳದಲ್ಲಿ ಮೋಡಿ ಮಾಡಿದ ಸಿಹಿಕಹಿ ಚಂದ್ರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಹಾರ ಮೇಳ ಉಪಸಮಿತಿ ವತಿಯಿಂದ ಆಯೋಜಿಸಿದ್ದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸುವ ಸ್ಪರ್ಧೆ, ಪಾನಿಪೂರಿ ತಿನ್ನುವ ಸ್ಪರ್ಧೆ ಹಾಗೂ ಅಡುಗೆ ತಯಾರಿಕೆ ಪ್ರತ್ಯಕ್ಷ ಪಾತಕ್ಷಿಕೆಯಲ್ಲಿ…

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ
ಮೈಸೂರು, ಮೈಸೂರು ದಸರಾ

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

October 13, 2018

ಮೈಸೂರು:  ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಸಮೂಹ ವನ್ನು ಒಗ್ಗೂಡಿಸಿ ರಸದೌತಣ ನೀಡುವ ಸಂಭ್ರಮದ `ಯುವ ದಸರಾ’ಗೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದ್ಯುಕ್ತ ಚಾಲನೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಭವ್ಯ ವೇದಿಕೆಯಲ್ಲಿ ಇಂದಿನಿಂದ ಅ.17ರವರೆಗೆ ನಡೆಯಲಿರುವ `ಯುವ ದಸರಾ’ಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಸಿಎಂ ಕುಮಾರ ಸ್ವಾಮಿ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಕುಟುಂಬಗಳಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿ, ದಸರಾ ಹಬ್ಬದ ಶುಭಾಶಯ ಕೋರಿದರು. ಉನ್ನತ ಶಿಕ್ಷಣ ಸಚಿವರೂ ಆದ…

ನಾಳೆ ಮೈಸೂರಲ್ಲಿ ದಸರಾ ಏರ್ ಷೋ
ಮೈಸೂರು, ಮೈಸೂರು ದಸರಾ

ನಾಳೆ ಮೈಸೂರಲ್ಲಿ ದಸರಾ ಏರ್ ಷೋ

October 13, 2018

ಮೈಸೂರು: ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ಏರ್ ಷೋ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಭಾರತೀಯ ವಾಯುದಳ (Indian Air Force) ಏರ್ ಷೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ (ಅ.13) ಬೆಳಿಗ್ಗೆ 11 ಗಂಟೆಗೆ ಬನ್ನಿಮಂಟಪದ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ಏರ್ ಷೋ ತಾಲೀಮು ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪೂರ್ಣ ಪ್ರಮಾಣದ ಪ್ರದರ್ಶನದಲ್ಲಿ ಪೆಟಲ್…

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
ಮೈಸೂರು, ಮೈಸೂರು ದಸರಾ

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ

October 13, 2018

ಮೈಸೂರು:  ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು…

1 2 3 4 5 6 7
Translate »