ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನೇ ದಿನೆ ಕಳೆ ಗಟ್ಟುತ್ತಿದ್ದು, 2ನೇ ಶನಿವಾರವಾದ ಇಂದು ಲಕ್ಷಾಂತರ ಪ್ರವಾಸಿಗರು ಲಗ್ಗೆ ಇಟ್ಟು ಮೈಸೂರಿನ ಸೊಬಗನ್ನು ಆಸ್ವಾದಿಸಿದ್ದಾರೆ. ಇದರ ಪರಿಣಾಮವಾಗಿ ಮೈಸೂರು ಹೃದಯ ಭಾಗ ಮಾತ್ರವಲ್ಲದೆ, ಹೊರವಲಯದಲ್ಲೂ ಕೂಡ ಸಂಚಾರ ದಟ್ಟಣೆ ಮಿತಿ ಮೀರಿತ್ತು.
ಇಂದು ಬೆಳಿಗ್ಗೆಯಿಂದಲೇ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕಾರಣದಿಂದಾಗಿ ಕೃಷ್ಣರಾಜ ಬುಲೆ ವಾರ್ಡ್ ರಸ್ತೆ ಪ್ರವಾಸಿಗರೂ ಮತ್ತು ಸ್ಥಳೀಯರಿಂದ ಕಿಕ್ಕಿರಿದು ತುಂಬಿತ್ತು. ಸಂಜೆಯ ನಂತರ ಇದೇ ರಸ್ತೆಯಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕೂಡ ನಡೆದ ಕಾರಣ ಜನದಟ್ಟಣೆ ಇಮ್ಮಡಿಯಾಯಿತು.
ಸಂಜೆ ನಂತರ ಅರಮನೆ ಸೇರಿದಂತೆ ಇಡೀ ಮೈಸೂರಿನ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಕಿಲೋ ಮೀಟರ್ ಗಟ್ಟಲೆ ದೀಪಾಲಂಕಾರ ಏರ್ಪ ಡಿಸಿದ್ದರಿಂದ ಅನೇಕ ಪ್ರವಾಸಿಗರು ತಮ್ಮ ವಾಹನಗಳಲ್ಲೇ ದೀಪಾಲಂಕಾರ ವೀಕ್ಷಿಸಿದರು. ಇದರಿಂದಾಗಿ ಅರಮನೆ ಸುತ್ತಲ ಪ್ರದೇಶ, ಸಯ್ಯಾಜಿರಾವ್ ರಸ್ತೆಯಲ್ಲಿ ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ಇರ್ವಿನ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು. ಈ ರಸ್ತೆಗಳಲ್ಲಿ ಸಂಜೆ ನಂತರ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರೂ ಸಾಮಾನ್ಯ ವಾಗಿ ಸಂಚರಿಸುವ ವಾಹನಗಳು ಈ ರಸ್ತೆಗಳಿಗೆ ಇಳಿಯಲು ಸಾಧ್ಯವಾಗದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕಾಯಿತು. ಈ ರಸ್ತೆಗಳಲ್ಲಿ ಪ್ರವಾಸಿಗರು ತಮ್ಮ ವಾಹನಗಳಲ್ಲೇ ನಿಧಾನಗತಿಯಲ್ಲಿ ಸಂಚರಿಸುತ್ತಾ ದೀಪಾಲಂಕಾರ ವೀಕ್ಷಿಸುತ್ತಿದ್ದ ಪರಿಣಾಮ ಅರಮನೆ ಒಂದು ಸುತ್ತು ಹಾಕಲು ಸುಮಾರು 2 ಗಂಟೆಗಳ ಕಾಲ ಹಿಡಿಯಿತು ಎಂದು ಪ್ರವಾಸಿಗರೊಬ್ಬರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಅರಮನೆ ಸುತ್ತಲಿನ ರಸ್ತೆ ವಾಹನ ದಟ್ಟಣೆಯಿಂದ ಕೂಡಿದ್ದ ಪರಿಣಾಮ ಮೈಸೂರು ನಗರದಿಂದ ನಂಜನಗೂಡು ಕಡೆಗೆ ತೆರಳ ಬೇಕಾದ ವಾಹನಗಳು ಮೃಗಾಲಯ ರಸ್ತೆ ಹಾಗೂ ಎಂಜಿ ರಸ್ತೆ ಕಡೆಗೆ ಚಲಿಸಿದ ಪರಿಣಾಮ ಈ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಮಿತಿ ಮೀರಿತ್ತು. ಅಲ್ಲದೆ, ರಿಂಗ್ ರಸ್ತೆ ಮೂಲಕ ನಂಜನಗೂಡು ಕಡೆಗೆ ಚಲಿಸಿದ ವಾಹನಗಳು ಟೆರೆಷಿಯನ್ ಕಾಲೇಜಿನಿಂದ ಟಿ.ನರಸೀಪುರ ರಸ್ತೆ ವಾಹನ ದಟ್ಟಣೆ ಯಿಂದ ಕೂಡಿತ್ತು. ಬೆಂಗಳೂರು-ಮೈಸೂರು ರಸ್ತೆಯಲ್ಲೂ ಕೂಡ ವಾಹನ ದಟ್ಟಣೆ ಅಧಿಕ ವಾಗಿತ್ತು. ಸಂಚಾರ ನಿಯಂತ್ರಿಸುವಲ್ಲಿ ಪೊಲೀ ಸರು ಹಾಗೂ ಹೋಂಗಾರ್ಡ್‍ಗಳು ಹೆಣ ಗಾಡುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.