ಬೆಂಗಳೂರು: ಆಪರೇಷನ್ ಕಮಲ ಭೀತಿಯ ನಡುವೆಯೇ 15 ಡಿವೈಎಸ್ಪಿ ಮತ್ತು 46 ಪೊಲೀಸ್ ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಸ್ಥಳ ನಿರೀಕ್ಷೆಯಲ್ಲಿರುವ ಕೆ.ಸಂತೋಷ್ ಅವರನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ವಿ.ವಿ.ಪುರಂ ಇನ್ಸ್‍ಪೆಕ್ಟರ್ ಪಿ.ಎ.ಸೂರಜ್ ಅವರನ್ನು ದೇವರಾಜ ಸಂಚಾರ ಠಾಣೆಗೆ, ಮೈಸೂರು ನಗರ ಎಸ್‍ಬಿ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್ ಅವರನ್ನು ಹೊಳೆ ನರಸೀಪುರಕ್ಕೆ, ಎಸಿಬಿಯಲ್ಲಿರುವ ಎಸ್.ಡಿ. ಸುರೇಶ್‍ಕುಮಾರ್ ಅವರನ್ನು ಜಯ ಲಕ್ಷ್ಮೀಪುರಂ ಠಾಣೆಗೆ ಸ್ಥಳ ನಿರೀಕ್ಷೆಯಲ್ಲಿ ರುವ ಆರ್.ಜಗದೀಶ್ ಅವರನ್ನು…
ಪ್ರಭಾವಕ್ಕೊಳಗಾಗಿ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬೇಡಿ
January 15, 2019ಮೈಸೂರು: ರಾಜಕಾರಣಿ ಗಳ ಪ್ರಭಾವಕ್ಕೆ ಮಣಿದು ಆತ್ಮವಿಶ್ವಾಸಕ್ಕೆ ಧಕ್ಕೆ ತಂದಕೊಳ್ಳಬೇಡಿ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರೊಬೇಷನರಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕವಾಯತು ಮೈದಾನ ದಲ್ಲಿ ನಡೆದ ಅಕಾಡೆಮಿಯ 41ನೇ ತಂಡದ ಆರಕ್ಷಕ ಉಪನಿರೀಕ್ಷಕ (ಸಿವಿಲ್) ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯ ಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತ ನಾಡುತ್ತಿದ್ದ ಅವರು, ಸರ್ಕಾರದ ವಿರುದ್ಧ ಇಲಾಖೆಗಳ `ಪೈಕಿ ರಾಜ್ಯ ಪೊಲೀಸ್ ಇಲಾಖೆಗೆ ವಿಶಿಷ್ಟ ಗೌರವವಿದೆ….
ಟಿಪ್ಪು ಸುಲ್ತಾನ್ ನಾಯಕ್‍ವಾಡಿಗೆ ಸರ್ವೋತ್ತಮ ಟ್ರೋಫಿ
January 15, 2019ಮೈಸೂರು: ಮೈಸೂರಿನ ಕೆಪಿಎನಲ್ಲಿ ಒಂದು ವರ್ಷ ಬುನಾದಿ ತರಬೇತಿ ಪಡೆದ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪೊಲೀಸ್ ಸಬ್ ಇನ್ಸ್‍ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ ಟ್ರೋಫಿ ಹಾಗೂ ಬಹುಮಾನಗಳನ್ನು ಪ್ರದಾನ ಮಾಡಿದರು. ಕೆಪಿಎ ಕವಾಯಿತು ಮೈದಾನ ದಲ್ಲಿ ಇಂದು ಏರ್ಪಡಿಸಿದ್ದ 41ನೇ ತಂಡದ ಸಬ್‍ಇನ್‍ಸ್ಪೆಕ್ಟರ್ ಪ್ರಶಿಕ್ಷ ಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪರೇಡ್ ಕಮಾಂ ಡರ್ ಟಿಪ್ಪು ಸುಲ್ತಾನ್ ನಾಯಕ್ ವಾಡಿ ಅವರಿಗೆ ಸರ್ವೋತ್ತಮ ಟ್ರೋಫಿ, ಮುಖ್ಯಮಂತ್ರಿಗಳ ಟ್ರೋಫಿ, ಖಡ್ಗ ಡಿಜಿ…
ಬಿಜೆಪಿಯ ಆಪರೇಷನ್ ಕಮಲ ಫಲ ನೀಡಲ್ಲ
January 15, 2019ಮೈಸೂರು: ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯವರು ಮಾಡುತ್ತಿರುವ ಆಪರೇಷನ್ ಕಮಲ ಫಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕೆಪಿಎ ಕವಾಯಿತು ಮೈದಾನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಮುಂಬೈ ನಲ್ಲಿರುವ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕ ದಲ್ಲಿದ್ದಾರೆ. ಅವರು ನನ್ನ ಸ್ನೇಹಿತರು. ನನಗೆ ಹೇಳಿಯೇ ಮುಂಬೈಗೆ ಹೋಗಿದ್ದಾರೆ. ಇಂದು ಬೆಳಿಗ್ಗೆ 7.30 ಗಂಟೆಯಲ್ಲೂ ಆ ಮೂವರು ಶಾಸಕರೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದೇನೆ. ಯಾರೂ ಪಕ್ಷ ಬಿಡುವ ಮನಸ್ಥಿತಿಯಲ್ಲಿಲ್ಲ ಎಂದು ನುಡಿದರು. ರಾಜ್ಯದಲ್ಲಿ ಆಪರೇಷನ್ ಕಮಲ…
ನೂತನ ಪರೀಕ್ಷಾ ಪದ್ಧತಿ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
January 15, 2019ಮೈಸೂರು: ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಜಾರಿ ಗೊಳಿಸಿರುವ ಸಿಬಿಸಿಎಸ್ ಪರೀಕ್ಷಾ ಪದ್ಧತಿ ಯಲ್ಲಿರುವ ದೋಷವನ್ನು ಸರಿ ಮಾಡ ಬೇಕು. ಮರು ಮೌಲ್ಯಮಾಪನದ ಶುಲ್ಕ ಕಡಿಮೆ ಮಾಡಬೇಕು ಎಂಬುದು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಮುಂದೆ ಸೋಮವಾರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿ ನೂತನವಾಗಿ ಜಾರಿಗೊಳಿಸಿ ರುವ ಸಿಬಿಸಿಎಸ್ ಪರೀಕ್ಷಾ ಪದ್ಧತಿಯಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ….
ಸಿಂಗಾಪುರದಲ್ಲಿ ಫೆ.23ರಂದು ಕೆಂಪೇಗೌಡರ ಎರಡನೇ ಅಂತಾರಾಷ್ಟ್ರೀಯ ಉತ್ಸವ
January 15, 2019ಮೈಸೂರು: ಹೊರದೇಶಗಳಲ್ಲಿ ನಾಡಪ್ರಭು ಕೆÉಂಪೇಗೌಡರ ಜಯಂತಿ ಉತ್ಸವ ಮತ್ತು ಕನ್ನಡೋತ್ಸವ ನಡೆಸುತ್ತಾ ಬಂದಿರುವ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಫೆ.23ರಂದು ಸಿಂಗಾಪುರದಲ್ಲಿ 2ನೇ ಅಂತಾರಾಷ್ಟ್ರೀಯ ಕೆಂಪೇಗೌಡ ಉತ್ಸವ, ಕನ್ನಡೋತ್ಸವ ಹಮ್ಮಿಕೊಂಡಿದೆ ಎಂದು ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್ ತಿಳಿಸಿದರ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು. ಕಳೆದ ಬಾರಿ ದುಬೈನಲ್ಲಿ ಉತ್ಸವ ನಡೆಸಲಾಗಿತ್ತು. ಈ ಬಾರಿ ಸಿಂಗಾಪುರದಲ್ಲಿ ನಡೆಸಲಾಗುತ್ತಿದೆ. ಉತ್ಸವದಲ್ಲಿ ನಟ ದಿವಂಗತ ಅಂಬರೀಶ್ ಅವರಿಗೆ ನುಡಿ ನಮನ, ಕೆಂಪೇಗೌಡರ ಕುರಿತು…
ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಲು ಪೋಷಕರಿಗೆ ಸಲಹೆ
January 15, 2019ಮೈಸೂರು: ಮೈಸೂ ರಿನ ಕುವೆಂಪುನಗರದ ಪೂರ್ಣ ಪ್ರಜ್ಞ ವಿದ್ಯಾಕೇಂದ್ರದ 14ನೇ ವಾರ್ಷಿಕೋತ್ಸವ ಸಮಾರಂಭ ಮೈಸೂರಿನ ಗಾನಭಾರತಿ ಬಯಲು ರಂಗಮಂದಿರದಲ್ಲಿ ಭಾನು ವಾರ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮೈಸೂರು ಮಹಾನಗರಪಾಲಿಕೆ 47ನೇ ವಾರ್ಡ್ ಸದಸ್ಯ ಶಿವಕುಮಾರ್ ಮಾತ ನಾಡಿ, ಮೊಬೈಲ್ ಹಾವಳಿಯಿಂದ ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕವಾಗಿದೆ. ಆದ್ದರಿಂದ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡುವ ಮೂಲಕ ಅವರ ಶೈಕ್ಷಣಿಕ, ಮಾನಸಿಕ ಬೆಳವಣಿಗೆಗೆ ಪೋಷಕರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಹಿರಿಯ ಪತ್ರಕರ್ತ ಅಂಶಿ…
ಆಯುಕ್ತಾಲಯ, ಸಂಜೆ ಪಾಲಿಟೆಕ್ನಿಕ್ ತೆರೆಯಿರಿ ಸಿಎಂಗೆ ಎಂಎಲ್‍ಸಿ ಮರಿತಿಬ್ಬೇಗೌಡ ಮನವಿ
January 15, 2019ಮೈಸೂರು: ಮೈಸೂರು ವಿಭಾಗದ ಶೈಕ್ಷಣಿಕ ಉನ್ನತೀಕರಣ ದೃಷ್ಟಿ ಯಿಂದ ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾ ಲಯ ಹಾಗೂ ಸರ್ಕಾರಿ ಸಂಜೆ ತಾಂತ್ರಿಕ ಪಾಲಿಟೆಕ್ನಿಕ್ ತೆರೆಯ ಬೇಕು ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಎಂಟು ಜಿಲ್ಲೆಗಳನ್ನು ಒಳಗೊಂಡಿರುವ ಮೈಸೂರು ವಿಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯ ತೆರೆಯಬೇಕು. ಧಾರವಾಡ, ಕಲಬುರ್ಗಿ ವಿಭಾಗದಲ್ಲಿ 12 ವರ್ಷಗಳ ಹಿಂದೆ ಆಯುಕ್ತಾಲಯ ಸ್ಥಾಪಿಸಲಾಗಿತ್ತು….
45, 48ನೇ ವಾರ್ಡ್ ಸದಸ್ಯರಿಂದ ಸ್ವಚ್ಛತಾ ಕಾರ್ಯ
January 15, 2019ಮೈಸೂರು: ಸ್ವಾಮಿ ವಿವೇಕಾ ನಂದರ ಜಯಂತಿ ಅಂಗವಾಗಿ ಮೈಸೂ ರಿನ 45 ಮತ್ತು 47ನೇ ವಾರ್ಡ್‍ನಲ್ಲಿ ಆಯಾ ವಾರ್ಡ್ ಸದಸ್ಯರು ತಮ್ಮ ವ್ಯಾಪ್ತಿಯ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು. 45ನೇ ವಾರ್ಡ್‍ನಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಅವರು ವಲಯ ಕಚೇರಿ 3ರ ಅಧಿಕಾರಿ ಗಳೊಂದಿಗೆ ಸಿಎಫ್‍ಟಿಆರ್‍ಐ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದೆ ಪ್ರತಿ ವಾರವೂ ಒಂದೊಂದು ಬಡಾವಣೆಯ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 48ನೇ ವಾರ್ಡ್ ವ್ಯಾಪ್ತಿಯ ಜಯ ನಗರದಲ್ಲಿ…
ಕಾವೇರಿ ಆಸ್ಪತ್ರೆಯಿಂದ ಬಾಲಕನಿಗೆ ಸವಾಲಿನ ಥೊರಾಕೊಸ್ಕೋಪಿ ಯಶಸ್ವಿ ಚಿಕಿತ್ಸೆ
January 15, 2019ಮೈಸೂರು: ಶ್ವಾಸಕೋಶದ ಮೇಲಿನ ಪದರ (ಫ್ಲೂರಲ್) ರೋಗದಿಂದ ಬಳಲುತ್ತಿದ್ದ 13 ವರ್ಷದ ಬಾಲಕನಿಗೆ ಸವಾಲಿನ ವೈದ್ಯಕೀಯ ಥೊರಾ ಕೊಸ್ಕೋಪಿ ಚಿಕಿತ್ಸೆಯನ್ನು ಯಶಸ್ವಿಯಗಿ ಮಾಡಿರುವುದಾಗಿ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಸಿ ಆಸ್ಪತ್ರೆ ವೈದ್ಯ ಡಾ.ಎಸ್.ವಿ.ಹರ್ಷವರ್ಧನ್ ತಿಳಿಸಿದರು. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದ ಮಳವಳ್ಳಿ ತಾಲೂಕು ನಿಮ್ನಾಪುರ ದೊಡ್ಡಿಯ ಮುತ್ತುರಾಜ್ ಗುಣಮುಖನಾಗುತ್ತಿ ದ್ದಾನೆ ಎಂದು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಜ್ವರ, ಆಹಾರ ಸೇವನೆ ಸಾಧ್ಯವಾಗದೆ ಬಳಲುತ್ತಿದ್ದ ಆತನನ್ನು…