ಮೈಸೂರು: ವಿವಿಧ ಭಾಷೆ ಗಳಿಗೆ ಸಂಬಂಧಿಸಿದಂತೆ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ವತಿಯಿಂದ ಸಿದ್ಧ ಪಡಿಸಿರುವ ಪಠ್ಯ, ವಾಕ್ ಹಾಗೂ ಸಂಜ್ಞೆ ಗಳ ದತ್ತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಐಐಎಲ್ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಹೇಳಿದರು. ಭಾರತೀಯ ಭಾಷಾ ಸಂಸ್ಥಾನದಲ್ಲಿ ಡಿ. 7ರವರೆಗೆ ಪುಣೆಯ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾದ (ಎಲ್‍ಎಸ್‍ಐ) 40ನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿ ಸಿದ್ದು, ಬುಧವಾರ ಹಮ್ಮಿಕೊಂಡಿದ್ದ ಸಮ್ಮೇ ಳನದ ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಇಂತಹ ದತ್ತಾಂಶ…
ಮೈಸೂರಿನ ಇಬ್ಬರು ಹೋಟೆಲ್ ಉದ್ಯಮಿಗಳಿಗೆ ಆತಿಥ್ಯ ರತ್ನ ಪ್ರಶಸ್ತಿ
December 6, 2018ಮೈಸೂರು: ಮೈಸೂರಿನ ಗೋವರ್ಧನ್ ಹೋಟೆಲು ಮಾಲೀಕ ಬಿ.ಹಯವದನಾಚಾರ್ಯ ಹಾಗೂ ಹೋಟೆಲ್ ಸಂತೋಷ್ ಮಾಲೀಕ ಕೆ.ಚಂದ್ರಶೇಖರ್ ಹೆಗ್ಡೆ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಹಾರ ಮಂದಿರಗಳ ಸಂಘ ಹಾಗೂ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸಹಯೋಗ ದಲ್ಲಿ ಕೊಡಮಾಡುವ ಆತಿಥ್ಯ ರತ್ನ ಮತ್ತು ಉದ್ಯಮ ರತ್ನ ಪ್ರಶಸ್ತಿಗಳನ್ನು ಡಿಸೆಂಬರ್ 11ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಅಜ್ಜರ ಕಾಡುವಿನ ಆರೂರು ಲಕ್ಷ್ಮೀನಾರಾಯಣ ರಾವ್ ಮೆಮೋರಿಯಲ್ ಟೌನ್‍ಹಾಲ್‍ನಲ್ಲಿ ಏರ್ಪಡಿಸಿರುವ…
ಬೆಂಗಳೂರಲ್ಲಿ ಹತ್ಯೆಯಾದ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಲ್ಲಿ ಶ್ರದ್ಧಾಂಜಲಿ
December 6, 2018ಮೈಸೂರು: ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ದುಷ್ಕರ್ಮಿ ಗಳಿಂದ ಹತ್ಯೆಯಾದ ಮೋಹನ್ ಎಂಬ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಿನ ಓಲಾ ಮತ್ತು ಊಬರ್ ಕ್ಯಾಬ್ ಚಾಲಕರು ಬುಧವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶ್ರದ್ಧಾಂಜಲಿ ಅರ್ಪಿಸಿದರು. ಮೈಸೂರು ಅರಮನೆ ನಗರಿ ಸಾರಥಿ ಸೇನೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಚಾಲಕರು, ಮೃತ ಮೋಹನ್ ಭಾವಚಿತ್ರದ ಎದುರು ಮೇಣದ ಬತ್ತಿಗಳನ್ನು ಹಚ್ಚಿ, ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ…
ಸಂಘಟಿತರಾಗಿ ಸರ್ಕಾರಿ ಸವಲತ್ತು ಪಡೆದುಕೊಳ್ಳಿ ಸವಿತಾ ಸಮಾಜಕ್ಕೆ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಕರೆ
December 5, 2018ಮೈಸೂರು: ಸವಿತಾ ಸಮಾಜದ ಸದಸ್ಯರು ಎನ್‍ಜಿಒ ಸಂಸ್ಥೆ ಗಳನ್ನು ಸ್ಥಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ ಎಂದು ಮಾಜಿ ಲೋಕಸಭಾ ಸದಸ್ಯ ಸಿ.ಹೆಚ್. ವಿಜಯಶಂಕರ್ ಸಲಹೆ ನೀಡಿದರು. ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಸವಿತಾ ಕೇಶಾಲಂಕಾರಿಗಳ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಸೌಲಭ್ಯ ಗಳು ಎನ್‍ಜಿಒ ಸಂಸ್ಥೆಗಳ ಮೂಲಕ ದೊರೆಯಲಿದ್ದು, ಸವಿತಾ ಸಮಾಜದವರು ಎನ್‍ಜಿಒ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಪಡೆದು ಆರ್ಥಿಕ ಸ್ವಾವಲಂಬಿಗಳಾಗಿ…
ವಾಹನ ಡಿಕ್ಕಿ: ಅಪರಿಚಿತ ಸಾವು
December 5, 2018ಮೈಸೂರು: ವಾಹನವೊಂದು ಡಿಕ್ಕಿ ಹೊಡೆದು, ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದೆ. ಮಂಡಕಳ್ಳಿ ವಿಮಾನ ನಿಲ್ದಾಣದ ಹಳೇಗೇಟ್ ಬಳಿ, ನಡೆದು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮುಖ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನ ಪತ್ತೆಯಾಗಿಲ್ಲ. ಮೃತಪಟ್ಟಿರುವ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, ಅರ್ಧ ತೋಳಿನ ಬಿಳಿ ಬಣ್ಣದ ಟಿ ಶರ್ಟ್, ಸಿಮೆಂಟ್ ಬಣ್ಣದ…
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಕಲಚೇತನರ ರ್ಯಾಲಿ
December 4, 2018ಮೈಸೂರು: ವಿಕಲಚೇತನರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸೋಮವಾರ ವಿಕಲಚೇತನರ ಅಭ್ಯುದಯ ವೇದಿಕೆಯ ಕಾರ್ಯಕರ್ತರು ತ್ರಿಚಕ್ರ ವಾಹನಗಳ ರ್ಯಾಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾ ಲಯ ಮುಂಭಾಗದಿಂದ ಇಂದು ಬೆಳಿಗ್ಗೆ ರ್ಯಾಲಿ ಆರಂಭಿಸಿದ ವಿಕಲಚೇತನರು ದೊಡ್ಡಗಡಿಯಾರ ವೃತ್ತ, ಮಹಾತ್ಮಗಾಂಧಿ ವೃತ್ತ, ಚಿಕ್ಕಗಡಿಯಾರವೃತ್ತ, ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ…
ಯಶಸ್ವಿಯಾಗಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ
December 4, 2018ಮೈಸೂರು: ಮೈಸೂರು ಜಿಲ್ಲೆಯ 2017-18ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 266 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯ 100 ಹುದ್ದೆಗಳಿಗೆ ಸೋಮವಾರ ಕೌನ್ಸಿ ಲಿಂಗ್ ಮೂಲಕ ಭರ್ತಿ ಮಾಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಸ್.ಮಮತಾ ನೇತೃತ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಸಭಾಂ ಗಣದಲ್ಲಿ ನಡೆದ ಕೌನ್ಸಿಲಿಂಗ್‍ನಲ್ಲಿ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಹಾಗೂ ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ ಅವರ ಆಯ್ಕೆಯಂತೆ ಸ್ಥಳ ನಿಯೋಜನೆ ಮಾಡಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು. ಇಂಗ್ಲಿಷ್‍ನ 57, ವಿಜ್ಞಾನ…
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆ ಕುರಿತು ತಾಲೂಕು ಮಟ್ಟದ ವಿವಿಧ ಸ್ಪರ್ಧೆ
December 4, 2018ಮೈಸೂರು: ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆಗೆ ಸಂಬಂಧಿಸಿದಂತೆ ಸೋಮವಾರ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾರತ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪದವಿಪೂರ್ವ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ (ಇಸಿಎಲ್) ಮತ್ತು ಚುನಾವಣಾ ಪಾಠಶಾಲಾ (ಇಸಿಪಿ) ಸ್ಥಾಪಿಸಿ ಭಾವಿ ಮತದಾರರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮೈಸೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂ ರಿನ ಮಹಾರಾಜ ಪದವಿಪೂರ್ವ ಕಾಲೇ ಜಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ…
ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ
December 3, 2018ಹುಣಸೂರು: ಜೈನ ಧರ್ಮದ ಆರಾಧ್ಯ ದೈವ ಹುಣಸೂರು ತಾಲೂಕು ಗೊಮ್ಮಟಗಿರಿಯ ಗೊಮ್ಮಟೇಶ್ವರ ನಿಗೆ ಇಂದು ವೈಭವದ 69ನೇ ಮಸ್ತಕಾಭಿಷೇಕ ಜರುಗಿತು. ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸಿದ ಮೂರ್ತಿಯನ್ನು ಕಂಡು ಭಕ್ತರು ಪುಳಕಿತರಾದರು. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಬಳಿಯ ದಿಗಂಬರ ಜೈನ ಅತಿಶಯ ಕ್ಷೇತ್ರ ಶ್ರೀ ಗೊಮ್ಮಟಗಿರಿಯ ವಿರಾಟ್‍ಯೋಗಿ ಗೊಮ್ಮಟೇಶ್ವರನಿಗೆ 69ನೇ ಮಸ್ತಕಾಭಿಷೇಕದ ಪ್ರತಿ ಅಭಿಷೇಕದಲ್ಲೂ ತನ್ನ ನಗು ಮುಖದ ತನ್ಮಯತೆಯ ಭಾವ ಮೆರೆದಾಗ ಭಕ್ತರು ಬಾಹುಬಲಿ ಭಗವಾನಕೀ ಜೈ, ಗೊಮ್ಮಟೇಶ್ವರಕೀ ಜೈ ಎನ್ನುತ್ತಾ ಭಕ್ತಿಪರವಶರಾದರು. ಅಭಿಷೇಕಕ್ಕೂ ಮುನ್ನ…
ಡಾ.ಪುಟ್ಟರಾಜ ಗವಾಯಿಗಳ ಸ್ಮರಣೆಗಾಗಿ `ಭೈರವದಿಂದ ಭೈರವಿ’
December 3, 2018ಮೈಸೂರು: ಗಾನಯೋಗಿ ಡಾ.ಪುಟ್ಟ ರಾಜ ಗವಾಯಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜೊತೆಗೆ ಲಕ್ಷಾಂತರ ಮಂದಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು. ಮೈಸೂರಿನ ಕುವೆಂಪುನಗರದ ವೀಣೆ ಶೇಷಣ್ಣ ಭವನ ದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ವತಿಯಿಂದ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿ ಅವರ 8ನೇ ಪುಣ್ಯ ಸ್ಮರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ `ಭೈರವದಿಂದ ಭೈರವಿ’ ಶೀರ್ಷಿಕೆಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುಟ್ಟರಾಜ ಗವಾಯಿ ಅವರ…