ಮೈಸೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಮೈಸೂರು ನಗರದಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಗುರುವಾರದಿಂದ (ನ.29) ಪರೀಕ್ಷೆ ಆರಂಭ ಗೊಂಡಿದ್ದು, ಡಿ.8ರವರೆಗೆ ಮೈಸೂರು ನಗರ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿ ರುವ ಪರೀಕ್ಷೆಗೆ 10,498 ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಡಿ.8ರಂದು ನಡೆಯುವ ಕನ್ನಡ ಭಾಷೆ ಸಾಮಾನ್ಯ ಪತ್ರಿಕೆಯ ಪರೀಕ್ಷೆಯನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ…
ಮಹಿಳೆಯ ಹೊಟ್ಟೆಯಲ್ಲಿತ್ತು 12 ಕೆಜಿ ಗೆಡ್ಡೆ : ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು
December 1, 2018ಮೈಸೂರು: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಯೊಬ್ಬರ ಹೊಟ್ಟೆಯಿಂದ 12 ಕೆಜಿ ತೂಕದ ಮಾಂಸದ ಗೆಡ್ಡೆಯೊಂದನ್ನು ತೆಗೆಯುವಲ್ಲಿ ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್‍ನ ವೈದ್ಯರು ಯಶಸ್ವಿಯಾಗಿದ್ದಾರೆ. ಆಗಾಗ ಹೊಟ್ಟೆ ನೋವು ಕಾಣಿಸಿಕೊಂಡು ಪರಿತಪಿಸುತ್ತಿದ್ದ ಮೈಸೂರಿನ ಶಾಂತಿನಗರ ಸಲ್ಮಾ (47) ಅವರ ಹೊಟ್ಟೆ ದಪ್ಪವಾಗುತ್ತಾ ಬಂದಿತ್ತು. ಇದರಿಂದ ಭಯಗೊಂಡ ಅವರು ಕೆಲವು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದರು. ಹೊಟ್ಟೆಯಲ್ಲಿ ಗೆಡ್ಡೆ ಇರುವ ಬಗ್ಗೆ ಖಚಿತಪಡಿಸಿ, ಶಸ್ತ್ರಚಿಕಿತ್ಸೆ ನಡೆಸಬೇಕಾ ಗುತ್ತದೆಂದು ತಿಳಿಸಿದರು. ಶಸ್ತ್ರಚಿಕಿತ್ಸೆಗೆ ಅಗತ್ಯ ಹಣ ಹೊಂದಿಸಲಾಗದ ಅವರು ಸಂಬಂಧಿಕರ…
ಮೈಸೂರು ವಿವಿ ಆಡಳಿತ, ಮಾನಸಗಂಗೋತ್ರಿ ಶೈಕ್ಷಣಿಕ ಚಟುವಟಿಕೆಗೆ ನೂತನ ತಂತ್ರಾಂಶದೊಂದಿಗೆ ಡಿಜಿಟಲೀಕರಣ
December 1, 2018ಮೈಸೂರು: ಇನ್ನೆರಡು ವರ್ಷದಲ್ಲಿ ಮೈಸೂರು ವಿವಿಯ ಆಡಳಿತ ಹಾಗೂ ಮಾನಸ ಗಂಗೋತ್ರಿಯ ಶೈಕ್ಷಣಿಕ ಚಟುವಟಿಕೆಗಳನ್ನು ಹಂತ ಹಂತ ವಾಗಿ ನೂತನ ತಂತ್ರಾಂಶ ಅಳವಡಿಸಿ ಡಿಜಿಟಲೀಕರಣ ಗೊಳಿಸಲಾಗುವುದು ಎಂದು ನೂತನ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ತಿಳಿಸಿದರು. ಮೈಸೂರು ವಿವಿ ಮೌಲ್ಯಮಾಪನ ಭವನ ದಲ್ಲಿ ಕರ್ನಾಟಕ ರಾಜ್ಯ ಕಂಪ್ಯೂಟರ್ ಸೈನ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾ ಗದ ವತಿಯಿಂದ ಆಯೋಜಿಸಿದ್ದ ಅಭಿನಂ ದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಮೈಸೂರು…
ಮೈಸೂರು ನ್ಯಾಯಾಲಯ ಆವರಣದಲ್ಲಿ ಕನ್ನಡ ಕಹಳೆ
December 1, 2018ಮೈಸೂರು: ನ್ಯಾಯಾ ಲಯದ ಆವರಣದಲ್ಲಿ ಕನ್ನಡ ವಿಜೃಂಭಿಸ ಬೇಕೆಂದು ಲೇಖಕ, ಖ್ಯಾತ ಅಂಕಣಕಾರ ಗುಬ್ಬಿಗೂಡು ರಮೇಶ್ ಆಶಿಸಿದರು. ಮೈಸೂರು ವಕೀಲರ ಸಂಘದ ಆವರಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋ ತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೌರವಾನ್ವಿತ ನ್ಯಾಯಾಧೀಶರು, ಬಡ ಬೋರೇಗೌಡನಿಗೂ ನ್ಯಾಯಾಭಿ ದಾನ ಅರ್ಥವಾಗುವಂತೆ ಕನ್ನಡದಲ್ಲೇ ತೀರ್ಪು ಪ್ರಕಟಿಸಬೇಕು. ಬಹಳ ವರ್ಷಗಳಿಂದ ಬಹ ಳಷ್ಟು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ಬರೆದಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಾಗ ಬೇಕು. ಹಾಗೆಯೇ ವಕೀಲರು ಕನ್ನಡದಲ್ಲೇ ಕಲಾಪಗಳನ್ನು ನಡೆಸಬೇಕೆಂದು ಸಮಸ್ತ ಕನ್ನಡಿಗರ…
ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
December 1, 2018ಮೈಸೂರು: ನಾಡಿನ ನೆಲ-ಜಲ-ಭಾಷೆ ರಕ್ಷಣೆಗಾಗಿ ಹೋರಾಡುತ್ತಿ ರುವ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯ ಬೇಕೆಂದು ಒತ್ತಾಯಿಸಿ ಕನ್ನಡ ಕ್ರಿಯಾ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಮುಂಭಾಗ ಗಾಂಧಿ ಪುತ್ಹಳಿ ಬಳಿ ಜಮಾವಣೆಗೊಂಡ ಕನ್ನಡಪರ ಹೋರಾಟ ಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದರು. ಈ ವೇಳೆ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಮಾತ ನಾಡಿ, ರಾಜ್ಯದಲ್ಲಿ ಗೋಕಾಕ್ ಚಳವಳಿ ವೇಳೆ ಕನ್ನಡಪರ ಹೋರಾಟಗಾರರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ…
ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ
December 1, 2018ಮೈಸೂರು: ಮನೆ ಗೊಂದು ಶೌಚಾಲಯ ಕಡ್ಡಾಯ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ, ಸ್ವಚ್ಛ ಭಾರತ- ಸ್ವಸ್ಥ ಭಾರತ, ಸ್ವಚ್ಛ ಭಾರತ- ಸಮಾಜಕ್ಕೆ ಹಿತ ಎಂಬ ಘೋಷ ವಾಕ್ಯ ಗಳೊಂದಿಗೆ ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ಶಾರದಾದೇವಿನಗರದ ಪ್ರಮುಖ ರಸ್ತ್ತೆಗಳಲ್ಲಿ ಸ್ವಚ್ಛತಾ ಅಭಿಯಾನ – ವಿಶೇಷ ಜಾಗೃತಿ ಜಾಥಾ ನಡೆಸಿದರು. ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮೈಸೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿ ವೃದ್ಧಿ ಇಲಾಖೆ,…
ಮನೆ ಕಟ್ಟಡಕ್ಕೆ ಲೈಸನ್ಸ್ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ; ಆರೋಪ
December 1, 2018ನಂಜನಗೂಡು: ನಗರದ ದೇವಿರಮ್ಮನಹಳ್ಳಿ ಪಂಚಾಯಿತಿ ಸೇರಿದಂತೆ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಲೈಸನ್ಸ್ ಪಡೆದು ನಂತರ ವಾಣಿಜ್ಯ ಕಟ್ಟಡ ಗಳನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಿದ್ದರೂ ಗ್ರಾಪಂ ಆಡಳಿತವಾಗಲಿ, ಅಧಿಕಾರಗಳಾಗಲಿ ಗಮನಹರಿಸುತ್ತಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಆರೋಪಿಸಿದರು. ನಗರದ ತಾಪಂ ಆವರಣದಲ್ಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ದನಿ ಎತ್ತಿದ ಅವರು, ಸಂಬಂಧಪಟ್ಟ ಅಧಿಕಾರಿ ಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು….
ಪಪಂ ಆಡಳಿತದಿಂದ ಗೌರವ ಧನ: ಪ್ರತಿಭಟನೆ ಹಿಂಪಡೆದ ಪೌರಕಾರ್ಮಿರು
December 1, 2018ಸರಗೂರು: ಪಟ್ಟಣ ಪಂಚಾಯ್ತಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಗೌರವ ಧನ ನೀಡಿ ಕರ್ತವ್ಯದಲ್ಲಿ ತೊಡಗಲು ಮನವಿ ಮಾಡಿದ ಹಿನ್ನೆಲೆ ವೇತನಕ್ಕಾಗಿ ಪಪಂ ಮುಂದೆ ಪೌರಕಾರ್ಮಿರು ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದರು. ಮೂರು ದಿನಗಳಿಂದ ಪಟ್ಟಣದಲ್ಲಿ ಸ್ವಚ್ಛತೆ, ಕುಡಿ ಯುವ ನೀರು ರಸ್ತೆ ಚರಂಡಿ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆ ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ತಾಲೂಕಿನ ಶಾಸಕರು ಪ್ರತಿಭಟನಾಕಾರರನ್ನು ಮನವಲಿಸುವ ಪ್ರಯತ್ನ ವಿಫಲವಾಗಿತ್ತು. ಪಟ್ಟಣದ ನಾಗರಿಕರ ಹಿತದೃಷ್ಟಿಯಿಂದ ಇಂದು ಪಪಂ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರ ಗೌರವ…
ಬಸ್‍ಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
December 1, 2018ಮೈಸೂರು: ಲಾರಿಯೊಂದು ಸಾರಿಗೆ ಸಂಸ್ಥೆ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ. ಬಸ್‍ನಲ್ಲಿದ್ದ ಲಕ್ಷ್ಮೀ, ಸಿದ್ದರಾಜಮ್ಮ, ಶಿವಸ್ವಾಮಿ, ನೂರ್ ಅಸ್ಮಾ, ಮಂಗಳ, ಸುಧಾ, ಅಕ್ಷತಾ, ಶ್ರೀನಿವಾಸ್ ಹಾಗೂ ಮಹದೇವ ಅವರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮೈಸೂರಿನಿಂದ ಮಳವಳ್ಳಿಗೆ ಸಂಚರಿಸುತ್ತಿದ್ದ ಪಾಂಡವ ಪುರ ಡಿಪೋಗೆ ಸೇರಿದ ಬಸ್(ಕೆಎ-11, ಎಫ್-0170) ರಿಂಗ್ ರಸ್ತೆ ದೇವೇ ಗೌಡ ವೃತ್ತದ ಬಳಿ ಹೋಗುತ್ತಿದ್ದಾಗ, ಕೊಲಂಬಿಯಾ…
ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ವಂಚನೆ: ಉದ್ಯಮಿಗೆ ಜೈಲು ಶಿಕ್ಷೆ
December 1, 2018ಮೈಸೂರು: ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಗೆ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯ 1 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರು ಬಸವೇಶ್ವರ ರಸ್ತೆ ಮಕ್ಕಂ ಟ್ರೇಡರ್ಸ್ ಮಾಲೀಕ ಎಂ.ಎನ್.ಮೋಹನ್ ಗುಪ್ತ ಶಿಕ್ಷೆಗೊಳಗಾದವರು. ಇವರು ಚಾಮುಂಡಿಪುರಂನ ಕರ್ಣಾಟಕ ಬ್ಯಾಂಕ್‍ನಿಂದ 9 ಲಕ್ಷ ರೂ. ಓ.ಡಿ. ಸೌಲಭ್ಯ ಪಡೆಯಲು ಬೆಂಗಳೂರಿನ ಬೃಂದಾರಾಣಿ ಮತ್ತು ಎಂ.ನಾಗರಾಜು ಎಂಬುವರ ಹೆಸರಿಗೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ…