ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‍ಐ) ಅಳವಡಿಸಿರುವ ಸಿಸಿ ಕ್ಯಾಮರಾದ ಹಿಂದಿನ 6 ತಿಂಗಳ ಫುಟೇಜ್‍ಗಳನ್ನು ಹಾಜರು ಪಡಿಸಬೇಕು ಹಾಗೂ ಸಿಸಿ ಕ್ಯಾಮರಾ ದಲ್ಲಿ ದಾಖಲಾಗುವ ಫುಟೇಜ್‍ಗಳನ್ನು ಕನಿಷ್ಠ 1 ವರ್ಷದವರೆಗೆ ಶೇಖರಣೆ ಮಾಡಲು ಕ್ರಮ ಕೈಗೊಳ್ಳ ಬೇಕು ಎಂದು ಕರ್ನಾಟಕ ಮಾಹಿತಿ ಆಯೋಗವು (ಎಂಎಂಸಿಆರ್‍ಐ) ಡೀನ್ ಡಾ.ಸಿ.ಪಿ. ನಂಜರಾಜ್ ಅವರಿಗೆ ಆದೇಶಿಸಿದೆ. ಮೈಸೂರಿನ ಶ್ರೀಮತಿ ಎಸ್. ಕೋಮಲಾ ದೇವಿ ಎಂಬುವರು ಮಾಹಿತಿ ಹಕ್ಕು ಕಾಯಿದೆಯಡಿ ಎರಡು ದಿನಗಳ ಸಿಸಿ ಕ್ಯಾಮರಾ…
ಕೆ.ಆರ್.ಆಸ್ಪತ್ರೆಯಲ್ಲಿ ಇನ್ನು ಮುಂದೆ ಕಾಸುಕೊಟ್ಟರೆ ಚಿಕಿತ್ಸೆ
March 17, 2019ಮೈಸೂರು: ಬಡವರು, ಮಧ್ಯಮ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಮಹಾರಾಜರು ಸ್ಥಾಪಿಸಿದ ಮೈಸೂರಿನ ದೊಡ್ಡಾಸ್ಪತ್ರೆಯ ಲ್ಲೀಗ ಉಚಿತ ಚಿಕಿತ್ಸೆ ಮರೀಚಿಕೆಯಾಗಿದೆ. ಶತಮಾನದಷ್ಟು ಹಳೆಯದಾದ ಮೈಸೂರಿನ ಹೃದಯ ಭಾಗದ ಕೃಷ್ಣ ರಾಜೇಂದ್ರ ಆಸ್ಪತ್ರೆಯ ಎಲ್ಲಾ ಬಗೆಯ ವೈದ್ಯಕೀಯ ಸೇವೆಗಳಿಗೂ ಶುಲ್ಕ ವಿಧಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳು ಲಿಖಿತ ಆದೇಶ ಹೊರಡಿಸಿರುವುದ ರಿಂದ ಮಾರ್ಚ್ 1ರಿಂದ ಕೆ.ಆರ್ ಆಸ್ಪತ್ರೆಯಲ್ಲಿ ಕಾಸು ಕೊಟ್ಟರೆ ಮಾತ್ರ ಚಿಕಿತ್ಸೆ. ಎಸ್ಸಿ, ಎಸ್ಟಿ, ಅನಾಥರು ಹಾಗೂ ಜೈಲು ವಾರ್ಡ್‍ಗಳ ರೋಗಿಗಳನ್ನು…
ಪರಿಸರ ಸ್ನೇಹಿ ವಾತಾವರಣವುಳ್ಳ ಶಾಲೆಗಳಿಗೆ ‘ಪರಿಸರ ಮಿತ್ರ ಶಾಲೆ’ ಪುರಸ್ಕಾರ ಪ್ರದಾನ
March 17, 2019ಮೈಸೂರು: ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ವಾತಾ ವರಣ ಹೊಂದಿರುವ ಶಾಲೆಗಳಿಗೆ ಕರ್ನಾ ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನೀಡುವ ಜಿಲ್ಲಾ ಮಟ್ಟದ `ಪರಿಸರ ಮಿತ್ರ ಶಾಲೆ’ ಪುರಸ್ಕಾರ ಹುಣಸೂರು ತಾಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲಭಿಸಿದೆ. ಮೈಸೂರಿನ ಪುರಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ, ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ರಾಜೇಶ್,…
ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
March 17, 2019ಮೈಸೂರು: ವಿದ್ಯಾರ್ಥಿಗಳು ಪರೀಕ್ಷೆ ಎಂಬುದನ್ನು ಭೂತಾಕಾರವಾಗಿ ತಲೆಯಲ್ಲಿ ತುಂಬಿಕೊಂಡು ಅಧೀರತೆಗೆ ಒಳಗಾಗದೆ ಭಯ, ಆತಂಕ, ಗೊಂದಲಗಳ ನ್ನೆಲ್ಲಾ ಮನಸ್ಸಿನಿಂದ ಹೊರಹಾಕಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು. ನಗರದ ಕನಕಗಿರಿಯ ಶಾರದಾ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸ್ತುತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಶುಭ ಹಾರೈಕೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಸಾಮಾನ್ಯವಾಗಿ ಪರೀಕ್ಷೆ ಎಂದರೆ ಅದರಲ್ಲೂ ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎಂದರೆ ಚಳಿಜ್ವರಬಂದಂತೆ ವಿದ್ಯಾರ್ಥಿ…
ಬೀಟೆ ಮರ ಕಳವು ಯತ್ನ: ಇಬ್ಬರ ಸೆರೆ
March 17, 2019ಸೋಮವಾರಪೇಟೆ: ಬೀಟೆ ಮರ ಕಳವು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತಾಲೂಕಿನ ಐಗೂರು ಗ್ರಾಮದ ವಸಂತ್ ಕುಮಾರ್ ಎಂಬವರ ತೋಟದಲ್ಲಿದ್ದ ಬೀಟೆ ಮರವನ್ನು ಫೆ.19ರಂದು ಕಳವು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀ ಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಆಗ ಆರೋಪಿಗಳಾದ ಹೊಸಬೀಡು ಹೆಚ್.ಎಂ.ಶಶಿಕುಮಾರ್ ಮತ್ತು ಐಗೂರು-ಕಾಜೂರು ಗ್ರಾಮದ ಚೇತನ್(ಚೇತು) ಪರಾರಿಯಾಗಿದ್ದರು. ಶನಿವಾರ ಆರೋಪಿಗಳು ಮನೆಯಲ್ಲಿರುವ ಬಗ್ಗೆ ಖಚಿತ…
ಬೆಂಗಳೂರು ಉತ್ತರದಿಂದ ದೇವೇಗೌಡರ ಸ್ಪರ್ಧೆ ಖಚಿತ
March 16, 2019ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ದೇವೇಗೌಡರ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿಂದು ಸಭೆ ನಡೆಸಿದರು. ಇಂದಿನ ಸಭೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಗೋಪಾ ಲಯ್ಯ, ಯಶವಂತಪುರ…
ದೇಶದ ಭವಿಷ್ಯಕ್ಕೆ ವಿಜ್ಞಾನ, ತಂತ್ರಜ್ಞಾನದ ಮೇಲೆ ಹೂಡಿಕೆ ಅಗತ್ಯ
March 16, 2019ಮೈಸೂರು: ಭವಿ ಷ್ಯದ ಭವ್ಯ ಭಾರತದ ಬುನಾದಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡುವುದು ಅಗತ್ಯ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‍ಡ್ ಸೈಂಟಿಫಿಕ್ ರೀಸರ್ಚ್ ಗೌರವಾಧ್ಯಕ್ಷರಾದ ವಿಶ್ವ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆ ಲಿನಲ್ಲಿ ಇಂದು ಆರಂಭವಾದ `ಸಮರ್ಥ ಕೈಗಾರಿಕೆಗಾಗಿ ಶಿಕ್ಷಣದಲ್ಲಿ ಅನ್ವೇಷಣೆ’ ಕುರಿತಾದ ಎರಡು ದಿನಗಳ ಭಾರತ ಉನ್ನತ ಶಿಕ್ಷಣ ಶೃಂಗಸಭೆ-2019 ಅನ್ನು ಉದ್ದೇಶಿಸಿ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ…
ಮಾರಾಟಗಾರರಿಂದ ಮೋಸ ಹೋಗದಂತೆ ಗ್ರಾಹಕರಿಗೆ ನೇರ ಪ್ರಾತ್ಯಕ್ಷಿಕೆ
March 16, 2019ಮೈಸೂರು: ವಿಶ್ವ ಗ್ರಾಹಕರ ದಿನಾ ಚರಣೆ ಅಂಗವಾಗಿ ಮೈಸೂರಿನ ದೇವರಾಜ ಮಾರು ಕಟ್ಟೆ ಬಳಿಯ ಚಿಕ್ಕ ಗಡಿಯಾರದ ಬಳಿ ಮೈಸೂರು ಗ್ರಾಹಕ ಪರಿಷತ್, ಸರಾಫ್ ವರ್ತಕರ ಸಂಘ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕೂಟ, ಭಾರತ್ ಗ್ಯಾಸ್, ಚೆಸ್ಕಾಂ, ಪ್ರಥಮ್ ಮೈಸೂರು ವತಿಯಿಂದ ಗ್ರಾಹಕ ರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಯಾವುದೇ ವಸ್ತುವಿನ ಮಾರಾಟಗಾರರಿಂದ ಗ್ರಾಹ ಕರು ಹೇಗೆ ಮೋಸ ಹೋಗುತ್ತಾರೆ. ಖರೀದಿಸುವ ಪದಾರ್ಥಗಳನ್ನು ಹೇಗೆ ಕಲಬೆರಕೆ…
ಜಮ್ಮು-ಕಾಶ್ಮೀರಕ್ಕೆ ಕಲ್ಪಿಸಿರುವ ವಿಶೇಷ ಸ್ಥಾನಮಾನ ರದ್ದತಿಗೆ ಇದು ಸಕಾಲ
March 16, 2019ಮೈಸೂರು: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ಕಲಂ 370ನೇ ವಿಧಿ ಅಡಿಯಲ್ಲಿ ವಿಶೇಷ ಸ್ಥಾನಮಾನದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆಗೊಳಪಡಿಸ ಬೇಕು ಮತ್ತು ಕಣಿವೆ ರಾಜ್ಯದ ಮಹಿಳಾ ಸ್ವಾತಂ ತ್ರ್ಯಕ್ಕೆ ವಿರುದ್ಧವಾಗಿರುವ ಉಪ ಕಲಂ 35-ಎ ಅನ್ನು ಕೇಂದ್ರ ಸರ್ಕಾರ ಕೂಡಲೇ ರದ್ದು ಪಡಿಸಬೇಕು ಎಂದು ಮೈಸೂರು ವಿವಿ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಹೆಚ್.ಎಂ.ರಾಜಶೇಖರ ಒತ್ತಾಯಿಸಿದರು. ಮೈಸೂರು ವಿವಿ ಸಂಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಮರಣೆ ಅಂಗವಾಗಿ `ಸಂವಿಧಾನ ಶಿಲ್ಪಿ ಡಾ.ಬಿ….
ಬೈಕಿಗೆ ಕಾರು ಡಿಕ್ಕಿ: ನವ ವಿವಾಹಿತೆ ಸೇರಿ ಇಬ್ಬರು ಸಾವು
March 16, 2019ಮೈಸೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಬಸ್ಸಿಗಾಗಿ ಕಾದು ನಿಂತಿದ್ದ ನವವಿವಾಹಿತೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಕೋಟಿಶೆಟ್ಟಿಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕು ಕೋಡಿಶೆಟ್ಟಿಪುರ ಗ್ರಾಮದ ಮೌನಶ್ರೀ ಹಾಗೂ ಉತ್ತರ ಕರ್ನಾಟಕ ಭಾಗದ ಸಂತೋಷ(25) ಸಾವನ್ನಪ್ಪಿದವರು. ಗಾಯಗೊಂಡಿರುವ ಬೈಕ್ ಸವಾರ ಶ್ರೀಧರ ಹಾಗೂ ಕಾರಿನಲ್ಲಿದ್ದ ಮೂವರನ್ನು ಮೈಸೂರಿನ ನಾರಾಯಣ ಹೃದಯಾ ಲಯಕ್ಕೆ ದಾಖಲಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮೌನಶ್ರೀ…










