ಮಾರಾಟಗಾರರಿಂದ ಮೋಸ ಹೋಗದಂತೆ ಗ್ರಾಹಕರಿಗೆ ನೇರ ಪ್ರಾತ್ಯಕ್ಷಿಕೆ
ಮೈಸೂರು

ಮಾರಾಟಗಾರರಿಂದ ಮೋಸ ಹೋಗದಂತೆ ಗ್ರಾಹಕರಿಗೆ ನೇರ ಪ್ರಾತ್ಯಕ್ಷಿಕೆ

March 16, 2019

ಮೈಸೂರು: ವಿಶ್ವ ಗ್ರಾಹಕರ ದಿನಾ ಚರಣೆ ಅಂಗವಾಗಿ ಮೈಸೂರಿನ ದೇವರಾಜ ಮಾರು ಕಟ್ಟೆ ಬಳಿಯ ಚಿಕ್ಕ ಗಡಿಯಾರದ ಬಳಿ ಮೈಸೂರು ಗ್ರಾಹಕ ಪರಿಷತ್, ಸರಾಫ್ ವರ್ತಕರ ಸಂಘ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕೂಟ, ಭಾರತ್ ಗ್ಯಾಸ್, ಚೆಸ್ಕಾಂ, ಪ್ರಥಮ್ ಮೈಸೂರು ವತಿಯಿಂದ ಗ್ರಾಹಕ ರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಯಾವುದೇ ವಸ್ತುವಿನ ಮಾರಾಟಗಾರರಿಂದ ಗ್ರಾಹ ಕರು ಹೇಗೆ ಮೋಸ ಹೋಗುತ್ತಾರೆ. ಖರೀದಿಸುವ ಪದಾರ್ಥಗಳನ್ನು ಹೇಗೆ ಕಲಬೆರಕೆ ಮಾಡಲಾಗಿರುತ್ತದೆ. ಅದನ್ನು ಗ್ರಾಹಕರು ಪತ್ತೆ ಹಚ್ಚುವುದು ಹೇಗೆ? ಎಂಬಿ ತ್ಯಾದಿ ಕುರಿತು ಗ್ರಾಹಕರಿಗೆ ಮನವರಿಕೆ ಮಾಡಿಕೊಡ ಲಾಯಿತು. ಮೈಸೂರು ಗ್ರಾಹಕ ಪರಿಷತ್‍ನ ಅಧ್ಯಕ್ಷೆ ಶ್ರೀಮತಿ ಹರಿಪ್ರಸಾದ್, ಕಾರ್ಯಾಧ್ಯಕ್ಷೆ ಶೋಭನಾ ಮತ್ತು ಪದಾಧಿಕಾರಿಗಳ ತಂಡ ತಮ್ಮ ಮಳಿಗೆಯಲ್ಲಿ ಗ್ರಾಹಕರು ಮೋಸ ಹೋಗದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು. ಮಾರಾಟಗಾರರಿಂದ ಮೋಸ ಹೋಗಿರುವುದು ಕಂಡು ಬಂದರೆ ಅಂತಹ ಗ್ರಾಹಕರು ಮೈಸೂರು ಗ್ರಾಹಕರ ಪರಿಷತ್‍ಗೆ ದೂರು ನೀಡಬಹುದಾಗಿದೆ. ಈ ಮೂಲಕ ಅಂತಹ ಗ್ರಾಹಕರಿಗೆ ನ್ಯಾಯ ದೊರಕಿ ಸುವ ಪ್ರಯತ್ನವನ್ನು ಪರಿಷತ್ ಮಾಡಲಿದೆ ಎಂದು ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟರು.

ಸೇಂಟ್ ಫಿಲೋಮಿನಾ ಕಾಲೇಜಿನ ಎಂಎಸ್‍ಸಿ ಕೆಮಿಸ್ಟ್ರಿ ವಿದ್ಯಾರ್ಥಿಗಳು ಹಾಜರಿದ್ದು, ಸಿಹಿ ಮತ್ತು ಖಾರದ ತಿಂಡಿ ಮತ್ತು ಆಹಾರಕ್ಕೆ ಬಳಸುವ ಬಣ್ಣ, ಸೊಪ್ಪು ತರಕಾರಿ ಮಾರಾಟಗಳಲ್ಲಿ ಮಾಡಬಹು ದಾದ ಮೋಸ ಇನ್ನಿತರ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಜಾಗೃತಿ ಉಂಟು ಮಾಡಿದರು. ಈ ಸಂದರ್ಭದಲ್ಲಿ ಗ್ರಾಹಕರ ಪರಿಷತ್‍ನ ಜಾನಕಿರಾಮನ್, ಜಯರಾಂ, ಡಾ.ಕೃಷ್ಣಮೂರ್ತಿ, ಉಷಾರಾಣಿ, ಯದು ರಾಜ್, ಪೂಂಗುಳಲಿ ಇನ್ನಿತರರು ಇದ್ದರು.

ಕಾನೂನು ಮಾಪಕ ಶಾಸ್ತ್ರ ಇಲಾಖೆಯ ಮಳಿಗೆ ಯಲ್ಲಿ ಗ್ರಾಹಕರು ತೂಕ ಮತ್ತು ಅಳತೆಯಲ್ಲಿ ಹೇಗೆ ಮೋಸ ಹೋಗುತ್ತಾರೆ ಎಂಬ ಬಗ್ಗೆ ಗ್ರಾಹಕರಿಗೆ ಪ್ರಾತ್ಯಕ್ಷಿಕೆ ನೀಡಿದರು. ಯಾವುದೇ ಮಾರಾಟಗಾರ ತನ್ನಲ್ಲಿರುವ ತಕ್ಕಡಿಯಲ್ಲಿ ಮೋಸ ಮಾಡುವ ಸಾಧ್ಯತೆಗಳ ಬಗ್ಗೆ ತಿಳಿಸಿದರು. ಗ್ರಾಹಕರು ಏನನ್ನೇ ಖರೀದಿಸಲು ಹೋದಾಗ ಮೊದಲು ತಕ್ಕಡಿ ಸಮವಾಗಿದೆಯೇ ಎಂದು ಪರಿಶೀ ಲಿಸಬೇಕು. ವಿದ್ಯುತ್‍ಚಾಲಿತ ತಕ್ಕಡಿಗಳನ್ನು ಒಮ್ಮೆ ಪರಿಶೀಲಿಸಿ ಬಳಿಕ ತಮ್ಮ ವಸ್ತುಗಳನ್ನು ಖರೀದಿಸುವು ದರಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳ ಬಹುದಾಗಿದೆ ಎಂದು ತಿಳುವಳಿಕೆ ಮೂಡಿಸಿದರು. ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಜಿ.ತಿಮ್ಮ ರಾಯಪ್ಪ, ಇನ್ಸ್‍ಪೆಕ್ಟರ್‍ಗಳಾದ ಮಹದೇವಸ್ವಾಮಿ, ಸುಮಾರಾಣಿ ಗ್ರಾಹಕರಿಗೆ ಮಾಹಿತಿ ನೀಡಿದರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಾಂತ್ರಿಕ ವಿಭಾಗದ ವತಿಯಿಂದ ಹಾಲಿನ ಉತ್ಪನ್ನಗಳ ಪ್ರದರ್ಶನ ನಡೆಯಿತು. ಡೈರಿ ಗಳಲ್ಲಿ ಹಾಲು ಕಲಬೆರಕೆ ಮಾಡುವ ಬಗ್ಗೆ ಮೈಮುಲ್‍ನ ಗುಣಮಟ್ಟ ಭರವಸೆ ನಿಯಂತ್ರಣಾ ಇಲಾಖೆಯ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. ತಾಂತ್ರಿಕ ಅಧಿಕಾರಿ ಕುಸುಮಾರಾಣಿ ಇದ್ದರು. ಭಾರತ್ ಗ್ಯಾಸ್‍ನ ಮಳಿಗೆ ಯಲ್ಲಿ ಗ್ರಾಹಕರು ಗ್ಯಾಸ್ ಖರೀದಿಸುವ ಮುನ್ನ ಗ್ಯಾಸ್ ಸಿಲಿಂಡರ್‍ನ ತೂಕ ಪರೀಕ್ಷಿಸಿಕೊಳ್ಳಬೇಕು. ಸಿಲಿಂಡರ್ ಬುಕ್ ಮಾಡಿದಾಗ ಗೋದಾಮಿನಿಂದ 5 ಕಿ.ಮೀ. ವರೆಗೆ ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಬಿಲ್‍ನಲ್ಲಿ ನಮೂದಿಸಿರುವ ಹಣವನ್ನು ಮಾತ್ರ ನೀಡಬೇಕಾಗುತ್ತದೆ. ಗ್ರಾಹಕರ ಮನೆ 5 ಕಿ.ಮೀ.ಗಿಂತ ದೂರ ಇದ್ದರೆ ಪ್ರತಿ ಕಿ.ಮೀ.ಗೆ ರೂ.1.18ರಂತೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾ ಗುತ್ತದೆ ಎಂದು ಮಾಹಿತಿ ನೀಡಿದರು. ಬಿಪಿಸಿ ಎಲ್‍ನ ಮಹೇಂದ್ರ ಢೋಂಗ್ರೆಸ್, ಭಾರತ್ ಗ್ಯಾಸ್‍ನ ಗೋಕುಲಂ ಡಿಸ್ಟ್ರಿಬ್ಯೂಟರ್ಸ್‍ನ ಎಂ.ರಮ್ಯಾ, ಎಂ.ಇಂಪು, ಮೇಟ ಗಳ್ಳಿ ಪ್ರಧಾನ ಗ್ಯಾಸ್‍ನ ಎಂ.ಬಿ.ರವಿ ಪ್ರಸಾದ್, ಪ್ರಸಾದ್ ಗ್ಯಾಸ್‍ನ ಮೋಹನ್ ಇನ್ನಿತರರು ಹಾಜರಿದ್ದು ಗ್ರಾಹಕ ರಿಗೆ ಮಾಹಿತಿ ನೀಡಿದರು. ಚೆಸ್ಕಾಂನ ಮಳಿಗೆಯಲ್ಲಿ ವಿದ್ಯುತ್ ಅಡಚಣೆಗೆ ಸಂಬಂಧಿತ ದೂರುಗಳನ್ನು ನೀಡುವ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಯಿತು. ವಿದ್ಯುತ್‍ಗೆ ಸಂಬಂಧಿಸಿದ ದೂರುಗಳನ್ನು 1912 ಉಚಿತ ಕರೆ ಮೂಲಕ ದಾಖಲಿಸಬಹುದು. ಎಂದು ಎಇಇ ರಾಜಪ್ಪ ತಿಳಿಸಿದರು. ಚಿನ್ನ-ಬೆಳ್ಳಿ ಅಂಗಡಿ ಗಳಲ್ಲಿ ಯಾವುದೇ ಆಭರಣಗಳನ್ನು ಖರೀದಿಸುವ ಮುನ್ನ ಗ್ರಾಹಕರು ಆಭರಣದ ಮೇಲೆ ಹಾಲ್ ಮಾರ್ಕ್ ಮುದ್ರೆ ಇದೆಯೇ ಎಂದು ಪರಿಶೀಲಿಸಿ ಖರೀದಿ ಸುವಂತೆ ಸರಾಫ್ ವರ್ತಕರ ಸಂಘದ ಕಾರ್ಯ ದರ್ಶಿ ಆದರ್ಶ್ ಗ್ರಾಹಕರಿಗೆ ಮಾಹಿತಿ ನೀಡಿದರು.

Translate »