ಜಮ್ಮು-ಕಾಶ್ಮೀರಕ್ಕೆ ಕಲ್ಪಿಸಿರುವ ವಿಶೇಷ  ಸ್ಥಾನಮಾನ ರದ್ದತಿಗೆ ಇದು ಸಕಾಲ
ಮೈಸೂರು

ಜಮ್ಮು-ಕಾಶ್ಮೀರಕ್ಕೆ ಕಲ್ಪಿಸಿರುವ ವಿಶೇಷ ಸ್ಥಾನಮಾನ ರದ್ದತಿಗೆ ಇದು ಸಕಾಲ

March 16, 2019

ಮೈಸೂರು: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ಕಲಂ 370ನೇ ವಿಧಿ ಅಡಿಯಲ್ಲಿ ವಿಶೇಷ ಸ್ಥಾನಮಾನದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆಗೊಳಪಡಿಸ ಬೇಕು ಮತ್ತು ಕಣಿವೆ ರಾಜ್ಯದ ಮಹಿಳಾ ಸ್ವಾತಂ ತ್ರ್ಯಕ್ಕೆ ವಿರುದ್ಧವಾಗಿರುವ ಉಪ ಕಲಂ 35-ಎ ಅನ್ನು ಕೇಂದ್ರ ಸರ್ಕಾರ ಕೂಡಲೇ ರದ್ದು ಪಡಿಸಬೇಕು ಎಂದು ಮೈಸೂರು ವಿವಿ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಹೆಚ್.ಎಂ.ರಾಜಶೇಖರ ಒತ್ತಾಯಿಸಿದರು.

ಮೈಸೂರು ವಿವಿ ಸಂಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಮರಣೆ ಅಂಗವಾಗಿ `ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಮತ್ತು ಭಾರತ ಸಂವಿಧಾನ’ ವಿಷಯ ಕುರಿತು ಮಾತನಾಡಿದರು.

ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿದೆ. ಇದನ್ನು ಕಡಿಮೆಗೊಳಿ ಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಕಠಿಣ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಪ್ರಸ್ತುತ ಕಣಿವೆ ರಾಜ್ಯದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿದರೆ 370ನೇ ವಿಧಿ ಉಪಕಲಂ 35-ಎ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಬೇರೆ ಬೇರೆ ರಾಜಕೀಯ ಕಾರಣದಿಂದಾಗಿ ನಮ್ಮ ದೇಶದ ಜನರಿಗೆ ಸಂವಿಧಾನದಡಿಯಲ್ಲಿ ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಸಾಮಾ ಜಿಕ ಪರಿಸ್ಥಿತಿಗೆ ಅನುಗುವಾಗಿ ಕೆಲವು ಸೌಲಭ್ಯ ಗಳನ್ನು ನೀಡಲಾಗುತ್ತಿದೆ. ಹೀಗೆ ಸೌಲಭ್ಯ ಪಡೆ ದವರು ಈ ನೆಲಕ್ಕೆ ಋಣಿಯಾಗಿರಲಿ ಎಂಬ ಸದಾಶಯವಿರುತ್ತದೆ. ಅದೇ ಜನರು ಸರ್ಕಾ ರದ ವಿರುದ್ಧ ತಿರುಗಿ ಬಿದ್ದಾಗ, ಕಠಿಣ ನಿರ್ಧಾರ ಗಳು ಅನಿವಾರ್ಯ ಎಂದರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ, ಭಾರ ತದ ಅವಿಭಾಜ್ಯ ಅಂಗವಾಗಿ ಉಳಿಸಿಕೊಳ್ಳಲಾ ಗಿತ್ತು. ಇಲ್ಲಿನ ಜನರಿಗೆ 370ನೇ ವಿಧಿ ಹಾಗೂ ಉಪಕಲಂ 35-ಎ ಅಡಿಯಲ್ಲಿ ಜಮ್ಮು-ಕಾಶ್ಮೀ ರದ ಖಾಯಂ ನಿವಾಸಿಗಳಿಗೆ ಕೆಲವು ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯದಿಂದ ಬಂದ ವರಾದ್ದರಿಂದ ತಳ ಸಮುದಾಯಗಳ ಬವಣೆ, ಆರ್ಥಿಕ ಮಟ್ಟ, ಜೀವನ ಸುಧಾರಣೆಗೆ ಬಗ್ಗೆ ತಿಳಿದಿತ್ತು. ಇದಕ್ಕೆ ಪೂರಕವಾಗಿ ಹಾಗೂ ದೇಶದ ಸಮಗ್ರ ಇತಿಹಾಸವನ್ನು ಪರಿಶೀಲಿಸಿ, ಈ ನೆಲಕ್ಕೆ ಹೊಂದಿಕೆಯಾಗುವಂತೆ ಸಂವಿಧಾನ ರಚಿಸಿದರು. ನಂತರ ಅನೇಕ ಬಾರಿ ನಮ್ಮ ಸಂವಿಧಾನಕ್ಕೆ ಚ್ಯುತಿ ಬಾರದಂತೆ ತಿದ್ದಪಡಿಯಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷಾಧಿಕಾರದ ಕಾನೂನಿಗೂ ತಿದ್ದುಪಡಿ ಅಗತ್ಯ ಎಂದರು.
370ನೇ ವಿಧಿ ಉಪಕಲಂ 35-ಎ, ಕಣಿವೆ ರಾಜ್ಯದ ಹೆಣ್ಣು ಮಕ್ಕಳ ಸ್ವಾತಂತ್ರ್ಯ ಅಡ್ಡಿಯಾ ಗಿದೆ. ಅಲ್ಲಿನ ಹೆಣ್ಣು ಮಕ್ಕಳು ಬೇರೆ ರಾಜ್ಯದವ ರನ್ನು ಮದುವೆಯಾದರೆ, ಅಲ್ಲಿನ ಆಸ್ತಿ ಹಕ್ಕು, ಮತದಾನದ ಹಕ್ಕು ಸೇರಿದಂತೆ ಇತರೆ ಮೂಲ ಭೂತ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇದು ಸಂಪೂರ್ಣ ಭಾರತ ಸಂವಿಧಾನ ವಿರೋಧಿ ನೀತಿ, ಮಹಿಳಾ ಸ್ವಾತಂತ್ರ್ಯ ಹರಣ ಎಂದರೆ ತಪ್ಪಾಗಲಾರದು ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೂ 370ನೇ ವಿಧಿ ಅಡಿ ಕೆಲವು ವಿಶೇಷಾಧಿಕಾರವನ್ನು ನೀಡಿದೆ. ಆದರೆ, ಅಲ್ಲಿ ಈ ಸಮಸ್ಯೆ ಇಲ್ಲ. ಈ ರಾಜ್ಯಗಳಿಗೆ ನೀಡಿರುವ ಕಾನೂನು ಅಂಶಗಳನ್ನು ಪರಿಗಣಿಸಿ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರದ ಕಾನೂನಿಗೆ ತಿದ್ದುಪಡಿ ತರಲು ಸಕಾಲ. ಈಗಾ ಗಲೇ ಸುಪ್ರೀಂಕೋರ್ಟ್‍ನಲ್ಲಿ ಉಪಕಲಂ 35-ಎ ಸಿಂಧುತ್ವವನ್ನು ಪ್ರಶ್ನಿಸಿ ಎನ್‍ಜಿಓ ಸಂಸ್ಥೆ ಯೊಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂಪೂರ್ಣಗೊಂಡಿದೆ. ಈ ತೀರ್ಪು ಬಂದರೆ, ಕಣಿವೆ ರಾಜ್ಯದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ 35-ಎ ಕಾನೂನುನಿಂದ ಮುಕ್ತಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆಂಜನೇಯ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಡಾ. ಆರ್.ಎನ್.ದಿನೇಶ್, ಅಧೀಕ್ಷಕ ಚನ್ನ ಬಸಪ್ಪ, ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ರುದ್ರಯ್ಯ ಉಪಸ್ಥಿತರಿದ್ದರು.

Translate »