ದೇಶದ ಭವಿಷ್ಯಕ್ಕೆ ವಿಜ್ಞಾನ, ತಂತ್ರಜ್ಞಾನದ ಮೇಲೆ ಹೂಡಿಕೆ ಅಗತ್ಯ
ಮೈಸೂರು

ದೇಶದ ಭವಿಷ್ಯಕ್ಕೆ ವಿಜ್ಞಾನ, ತಂತ್ರಜ್ಞಾನದ ಮೇಲೆ ಹೂಡಿಕೆ ಅಗತ್ಯ

March 16, 2019

ಮೈಸೂರು: ಭವಿ ಷ್ಯದ ಭವ್ಯ ಭಾರತದ ಬುನಾದಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡುವುದು ಅಗತ್ಯ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‍ಡ್ ಸೈಂಟಿಫಿಕ್ ರೀಸರ್ಚ್ ಗೌರವಾಧ್ಯಕ್ಷರಾದ ವಿಶ್ವ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆ ಲಿನಲ್ಲಿ ಇಂದು ಆರಂಭವಾದ `ಸಮರ್ಥ ಕೈಗಾರಿಕೆಗಾಗಿ ಶಿಕ್ಷಣದಲ್ಲಿ ಅನ್ವೇಷಣೆ’ ಕುರಿತಾದ ಎರಡು ದಿನಗಳ ಭಾರತ ಉನ್ನತ ಶಿಕ್ಷಣ ಶೃಂಗಸಭೆ-2019 ಅನ್ನು ಉದ್ದೇಶಿಸಿ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚು ಹಣ ಹೂಡಿದಲ್ಲಿ ಮಾತ್ರ ಭಾರತದ ಭವಿಷ್ಯ ಉತ್ತಮವಾಗಿದೆ ಎಂದರು.

ಅಮೇರಿಕಾ ಮತ್ತು ಚೈನಾ ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಆದೇಶಗಳು ವಿಶ್ವದಲ್ಲಿ ಅತ್ಯಂತ ಎತ್ತರದ ಸ್ಥಾನದಲ್ಲಿವೆ ಎಂದ ಪ್ರೊ. ರಾವ್, ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಜಿಡಿಪಿಯಲ್ಲಿ ಶೇ.3.5ರಷ್ಟು ಮಾತ್ರ ಖರ್ಚು ಮಾಡ ಲಾಗುತ್ತಿದೆ. ಅದರ ಪ್ರಮಾಣ ಶೇ.6ಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ಇಲ್ಲಿ ಶಾಲಾ-ಕಾಲೇಜುಗಳ ಕೊಠಡಿ ಯೊಳಗೆ ಪುಸ್ತಕದಲ್ಲಿರುವ ವಿಷಯಗಳನ್ನು ತುಂಬುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋರೆನಿಸಿದೆಯಾದ್ದರಿಂದ ಅವರಿಗೆ ಶಾಂತ ವಾತಾವರಣದ ಅಧ್ಯ ಯನ ಅವಶ್ಯ ಎಂದು ಅವರು ನುಡಿದರು.
ವಿಶ್ವವಿದ್ಯಾನಿಲಯ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂಶೋಧನೆಗೆ ಅವಕಾಶ ನೀಡಬೇಕು. ವಿದ್ಯಾರ್ಥಿಗಳನ್ನು ಪಠ್ಯ ಪುಸ್ತಕ ಗಳಿಗೆ ಸೀಮಿತ ಮಾಡಬಾರದು ಎಂದ ಅವರು ನಮ್ಮ ದೇಶದಲ್ಲಿನ ಬ್ರೈಟ್ ಸ್ಟೂಡೆಂಟ್ ಗಳನ್ನು ವಿಜ್ಞಾನ ಮತ್ತು ಸಂಶೊಧನೆಗೆ ಸಜ್ಜುಗೊಳಿಸುವುದು ಅಗತ್ಯ ಎಂದರು.

ರಾಜ್ಯ ಉನ್ನತ ಶಿಕ್ಷಣದ ಬಗ್ಗೆ ವಿಶ್ವಾಸವಿಲ್ಲ: ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾ ಡಿದ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರ ಶೇಖರ್, ಕರ್ನಾಟಕದಲ್ಲಿನ ಉನ್ನತ ಶಿಕ್ಷಣ ವ್ಯವಸ್ಥೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಈ ಕುರಿತು ನಾನು ಹಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ಚರ್ಚಿಸಿದ್ದೇನೆ ಎಂದರು.

ನಮ್ಮ ವಿಶ್ವವಿದ್ಯಾನಿಲಯಗಳು ಅನು ದಾನ ಹಾಗೂ ಸೌಲಭ್ಯ ಪಡೆಯುವುದ ಕ್ಕಾಗಿ ಯುಜಿಸಿ ಮತ್ತು ರಾಜ್ಯ ಸರ್ಕಾರ ಹೇಳಿದ ರೀತಿ ಕಾರ್ಯಕ್ರಮ ರೂಪಿಸುತ್ತಿವೆ. ಆರ್ಥಿಕ ನೆರವು ನೀಡುತ್ತವೆ ಎಂಬ ಕಾರಣಕ್ಕೆ ಸ್ವತಂತ್ರವಾಗಿ ಶಿಕ್ಷಣ ರೂಪು ರೇಷೆ ನಿರ್ಧ ರಿಸಲು ವಿಶ್ವವಿದ್ಯಾನಿಲ ಯಗಳಿಗೆ ಸಾಧ್ಯ ವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಯುಜಿಸಿಯನ್ನು ಸ್ವಾಯತ್ತ ಸಂಸ್ಥೆಯಾಗಿ ಸಲು 1954ರಲ್ಲೇ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಪ್ರಸ್ತಾಪಿ ಸಿದ್ದರು. ಅದಕ್ಕೆ ವಿರೋಧಿಸಿದ ದೇಶ್ ಮುಖ್ ಅವರು ರಾಷ್ಟ್ರೀಯ ಉನ್ನತ ಶಿಕ್ಷಣ ಸಮಿತಿ ಸ್ಥಾಪಿಸಬೇಕೆಂದು ಸಲಹೆ ನೀಡಿದ್ದರು ಎಂದು ಪ್ರೊ.ಚಂದ್ರಶೇಖರ್ ಇದೇ ಸಂದರ್ಭ ಸ್ಮರಿಸಿದರು.

ಪರೀಕ್ಷಾ ಪ್ರಶ್ನೆ ಪತ್ರಿಕೆ ಮುದ್ರಿಸಿ ಹಂಚು ವವರೆಗೂ ಸಿಸಿಟಿವಿ ಕ್ಯಾಮರಾ, ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ಗುಪ್ತಚರ ಇಲಾಖೆ ಕಣ್ಗಾವಲು ಮಾಡುತ್ತಾರೆ. ಹೀಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಭೀತಿ ಯಲ್ಲಿರುವ ಇಲಾಖಾ ಅಧಿಕಾರಿಗಳು ವಿದ್ಯಾರ್ಥಿಗಳಿಗೆ `ಕೂಲ್ ಆಗಿ ಪರೀಕ್ಷೆ ಬರೆಯಿರಿ’ ಎನ್ನುತ್ತಾರೆ. ಇದು ನಮ್ಮ ಶಿಕ್ಷಣ ವ್ಯವಸ್ಥೆ ಎಂದು ಲೇವಡಿ ಮಾಡಿದರು.

Translate »