ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕಿನಿಂದ 30 ಲಕ್ಷ ರೂ. ಮೌಲ್ಯದ ಸುಸಜ್ಜಿತ ಆಂಬುಲೆನ್ಸ್ ವಾಹನವನ್ನು ದೇಣಿಗೆಯಾಗಿ ನೀಡಲಾಯಿತು. ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಿಜಯ ಕುಮಾರ್ ಅವರು ಶ್ರೀ ಜಯ ದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ ಅವರಿಗೆ ಇಂದು ಮಧ್ಯಾಹ್ನ ಕೆಆರ್‍ಎಸ್ ರಸ್ತೆಯ ಆಸ್ಪತ್ರೆ ಆವರಣದಲ್ಲಿ ಆಂಬುಲೆನ್ಸ್ ಕೀಲಿಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಯದೇವ ಆಸ್ಪತ್ರೆ ಸೇವೆಯನ್ನು ಗಮ ನಿಸಿದ ಕೆನರಾ ಬ್ಯಾಂಕ್…
ಸರ್ವರ್ ವೈಫಲ್ಯ: ಆಸ್ತಿ ನೋಂದಣಿ ಅಸ್ತವ್ಯಸ್ತ
March 9, 2019ಮೈಸೂರು: ಸರ್ವರ್ ವೈಫಲ್ಯ ದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ನೋಂದಣಿ ಕಾರ್ಯ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರಿತಪಿಸಬೇಕಾಗಿ ಬಂದಿದೆ. ಹಲವು ದಿನಗಳಿಂದಲೂ ಈ ಸಮಸ್ಯೆ ಎದುರಾಗಿದ್ದರೂ, ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಪ್ರದೇಶ ವಾರು ನಾಲ್ಕು ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಇವುಗಳಲ್ಲಿ ಪ್ರತಿನಿತ್ಯ, ಪ್ರತಿ ಯೊಂದರಲ್ಲಿ ಹತ್ತಾರು ಆಸ್ತಿಗಳು ನೋಂದಣಿಯಾಗುತ್ತವೆ. ಆದರೆ ಇತ್ತೀ ಚಿನ ದಿನಗಳಲ್ಲಿ ಸರ್ವರ್ ವೈಫಲ್ಯ ದಿಂದಾಗಿ ನೋಂದಣಿ ಕಾರ್ಯ ಸ್ಥಗಿತ ಗೊಂಡು ಜನರು…
`ಔಷಧೀಯ, ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿಷ್ಕಾರ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
March 9, 2019ಮೈಸೂರು: ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿ ಷ್ಕಾರಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಮೈಸೂರು ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್ ಎಂಎಸ್ ರಾಘವ ರಾವ್ ಇಂದಿಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಸುಖಕರ ಜೀವನಕ್ಕೆ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರ ಬಹು ಮುಖ್ಯ. ಆರೋಗ್ಯಕ್ಕೆ ಔಷಧ ಬೇಕೇ ಬೇಕು. ಆಹಾರ ಕೆಡದಂತೆ ಸಂರಕ್ಷಣೆ ಮಾಡಲು ಇದು ಮುಖ್ಯ. ಈ ನಿಟ್ಟಿನಲ್ಲಿ ಆವಿಷ್ಕಾರಗಳು ಅಗತ್ಯವಾಗುತ್ತವೆ…
`ಮಹಿಳಾ ಕಹಳೆ ದಿಟ್ಟ ಮಹಿಳೆ’ ಪ್ರಶಸ್ತಿ ಪ್ರದಾನ
March 9, 2019ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದಿ.ಕೆ.ಕಮಲಮ್ಮನವರ 9ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ಶುಕ್ರ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ `ಮಹಿಳಾ ಕಹಳೆ ದಿಟ್ಟ ಮಹಿಳೆಯರು’ ಪ್ರಶಸ್ತಿ ನೀಡಿ ಗೌರವಿಸಿತು. ಮ.ನ.ಲತಾ ಮೋಹನ್ (ಸಾಹಿತ್ಯ), ಪಿ.ಯು. ಮಂಜುಳಾ (ಹಿರಿಯ ಶುಶ್ರೂ ಷಕಿ), ಎಂ.ಕವಿತಾ (ಅಂಚೆ ಮಹಿಳೆ), ಎಂ.ನಿರ್ಮಲಾ (ಮುಖ್ಯ ಪೇದೆ), ಕೆ.ಎಂ.ರೇಖಾ ಪ್ರಕಾಶ್ (ಪತ್ರಕರ್ತೆ), ಯಶೋಧ (ಬಿಸಿಯೂಟ ಕಾರ್ಯ…
`ತಾಯಿಗೆ ನೋವಾಗುವ ಮಾತು ಬೇಡ’
March 9, 2019ಮೈಸೂರು: ಇಂದು ಮಹಿಳಾ ದಿನ. ವಿಶ್ವದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ತಾಯಿಗೆ ನೋವಾಗುವಂತಹ ಮಾತುಗಳ ಯಾರೂ ಆಡಬಾರದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗಳು ನಡೆಯುತ್ತಿದ್ದು, ಅದನ್ನು ತಡೆಯಲು ಆಗುವುದಿಲ್ಲ. ಆದರೆ ಯಾರಿಗೂ ನೋವಾಗು ವಂತಹ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತು ಗಳನ್ನು ಆಡಬಾರದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು. ಮಹಿಳಾ ದಿನವಾದ ಶುಕ್ರವಾರ ಮೈಸೂ ರಿಗೆ ಭೇಟಿ ನೀಡಿ,…
ಲೋಕಸಭೆ ಚುನಾವಣೆ: ಮೈಸೂರು ನಗರ ಪೊಲೀಸರ ಸಿದ್ಧತೆ
March 9, 2019ಮೈಸೂರು,: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು ಪೊಲೀಸರು ಸರ್ವ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಭಾರತ ಚುನಾ ವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಪ್ರಕಟಿಸುತ್ತಿ ದ್ದಂತೆಯೇ ಸರ್ವ ಸನ್ನದ್ಧರಾಗಲಿದ್ದಾರೆ. ಈಗಾಗಲೇ ಜಿಲ್ಲಾಡಳಿ ತವು ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಮೊದಲ ಮತ್ತು ಎರಡನೇ ಮತದಾನ ಅಧಿಕಾರಿಗಳು (1sಣ ಚಿಟಿಜ 2ಟಿಜ ಠಿoಟiಟಿg oಜಿಜಿiಛಿeಡಿ) ಹಾಗೂ ಸಿಬ್ಬಂದಿಗೆ 3 ಹಂತಗಳಲ್ಲಿ ತರಬೇತಿ ನೀಡಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ಬಂದೋಬಸ್ತ್ ಯೋಜನೆ ರೂಪಿಸಿಕೊಂಡಿದ್ದಾರೆ. ಈ ಕುರಿತು…
ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ
March 9, 2019ಮೈಸೂರು: ವಿಜ್ಞಾನ-ತಂತ್ರಜ್ಞಾನಯುಕ್ತ ಆಧುನಿಕ ಕಾಲದಲ್ಲಿಯೂ ವರದಕ್ಷಿಣೆ ಪಿಡುಗಿನಿಂದ ಮಹಿಳೆಯರು ನಲುಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ವಿಷಾದಿಸಿದ್ದಾರೆ. ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಶುಕ್ರವಾರ ನಡೆದ `ವಿಶ್ವ ಮಹಿಳಾ ದಿನಾಚಣೆ’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ. ಮಹಿಳೆಯರು ದೌರ್ಜನ್ಯದಿಂದ ಮುಕ್ತರಾಗಲು ಸ್ವಾವಲಂಬಿಗಳಾಗಬೇಕು. ಶಿಕ್ಷಣ ಪಡೆದಾಗ ಮಾತ್ರ ದೌರ್ಜನ್ಯವನ್ನು ಹಿಮ್ಮೆಟ್ಟಿ ಸಬಹುದು. ಜಗತ್ತು ಮಹಿಳೆಗೆ…
ಚಿರತೆ, ವಾನರರಿಗೆ ಸಿಂಹಸ್ವಪ್ನವಾಗಿರುವ `ಟೈಗರ್ ಡಾಲ್’ !
March 9, 2019ಕಂಗೆಟ್ಟ ರೈತರಿಗೆ ವ್ಯಾಘ್ರನ ಕೃಪಾಕಟಾಕ್ಷ ಮೈಸೂರು: ಮೈಸೂರಿನ ಮಂಡ ಕಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿರುವ ಆತಂಕದ ನಡುವೆಯೇ ರೈತರೊಬ್ಬರು ರಕ್ಷಣೆಗೆ ಸರಳ ಹಾಗೂ ಪರಿಣಾಮಕಾರಿ ಉಪಾಯವನ್ನು ಕಂಡು ಕೊಂಡಿದ್ದಾರೆ. ಮೈಸೂರು ತಾಲೂಕಿನ ಕೂಡನಹಳ್ಳಿ ಗ್ರಾಮದ ರೈತ ಬಸವರಾಜು, ಹುಲಿಯ ಬೊಂಬೆಯನ್ನು ಬಳಸಿ, ಚಿರತೆ ಹಾಗೂ ವಾನರಗಳ ಹಾವಳಿಗೆ ಬ್ರೇಕ್ ಹಾಕುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಹುಬ್ಬೇರುವಂತೆ ಮಾಡಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದ ಕಾಂಪೌಂಡ್ ಒಳಾವರಣದಲ್ಲೇ ಚಿರತೆ ಕಾಣಿಸಿ ಕೊಂಡಿತ್ತು. ಸುತ್ತಮುತ್ತಲ ಗ್ರಾಮಗಳಲ್ಲೂ ಚಿರತೆಗಳ…
ಇಂದು ಸಿಂಚನಾ ರಂಗ ಪ್ರವೇಶ
March 9, 2019ಮೈಸೂರು: ಮೈಸೂರಿನ ಉದ್ಯಮಿ ಹಾಗೂ ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಪಿ.ಎಸ್.ಲೋಕೇಶ್ ಮತ್ತು ಶ್ರೀಮತಿ ಆರ್.ಸಹನಾ ಅವರ ಪುತ್ರಿ ಸಿಂಚನಾ ನಾಳೆ (ಶನಿವಾರ) ಸಂಜೆ 5.30ಕ್ಕೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಂಗ ಪ್ರವೇಶ ಮಾಡುತ್ತಾರೆ. ವಸುಂಧರಾ ಪರ್ಫಾ ಮಿಂಗ್ ಆಟ್ರ್ಸ್‍ನ ವಿದ್ಯಾರ್ಥಿಯಾದ ಸಿಂಚನಾ ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ನಾಟ್ಯ ಪ್ರಾವೀಣ್ಯತೆ ಪಡೆದಿದ್ದಾರೆ. ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ವಿವಿ ವಿಶ್ರಾಂತ ಕುಲಪತಿ ಡಾ. ಸರ್ವಮಂಗಳಾ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಪಿಎಸಿ ಅಧ್ಯಕ್ಷ ಕೆ.ವಿ.ಮೂರ್ತಿ…
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಅಬ್ದುಲ್ಲಾ ಅಧಿಕಾರ ಸ್ವೀಕಾರ
March 9, 2019ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು. ನಿನ್ನೆಯಷ್ಟೇ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿರುವ ಕಚೇರಿಯಲ್ಲಿ ವ್ಯವಸ್ಥಾಪಕ ರೆಡ್ಡಪ್ಪರಿಂದ ಅಧಿಕಾರ ವಹಿಸಿಕೊಂಡರು. ನಂತರ ಮಾತನಾಡಿದ ಅಬ್ದುಲ್ಲಾ ಅವರು, ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸಗಳು, ಬಾಕಿ ಉಳಿದಿರುವ ಯೋಜನೆಗಳು ಹಾಗೂ ಪ್ರಗತಿ ಕುರಿತಂತೆ ಸದ್ಯದಲ್ಲೇ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು….