ಟೆಂಪೋ ಚಾಲಕ ಆತ್ಮಹತ್ಯೆ
ಕೊಡಗು

ಟೆಂಪೋ ಚಾಲಕ ಆತ್ಮಹತ್ಯೆ

October 27, 2018

ಮಡಿಕೇರಿ: ವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡ ಘಟನೆ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ನಗರದಲ್ಲಿ ಟೆಂಪೋ ಚಾಲಕನ ವೃತ್ತಿಯಲ್ಲಿದ್ದ ಮಹೇಶ(25) ಆತ್ಮಹತೈಗೆ ಶರಣಾದ ವ್ಯಕ್ತಿ.

ಚಾಮುಂಡೇಶ್ವರಿನಗರದ ತನ್ನ ಮನೆಯಲ್ಲೇ ಶುಕ್ರವಾರ ಬೆಳಗ್ಗೆ 5 ಗಂಟೆ ಸಮಯದಲ್ಲಿ ಮಹೇಶ ಇಹಲೋಕ ತ್ಯಜಿಸಿದ್ದು, ಘಟನೆ ಕುರಿತು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಹೇಶ ತಾಯಿ, ಪತ್ನಿ ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾನೆ. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆÉಸಿ, ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಸಾಲ ಭಾದೆಯಿಂದ ಮಹೇಶ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಚಾಮುಂಡೇಶ್ವರಿ ನಗರ ನಿವಾಸಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

Translate »