ಮೈಸೂರು ಜಿಲ್ಲೆಯಲ್ಲಿ ಹತ್ತು ಬೃಹತ್ ಕೈಗಾರಿಕೆ ಸ್ಥಾಪನೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಹತ್ತು ಬೃಹತ್ ಕೈಗಾರಿಕೆ ಸ್ಥಾಪನೆ

July 25, 2018

ಮೈಸೂರು: ಯುವಕರಿಗೆ ಭಾರೀ ಉದ್ಯೋಗ ಸೃಷ್ಟಿಸುವ ನಿಟ್ಟಿ ನಲ್ಲಿ ಮೈಸೂರು ಜಿಲ್ಲೆಯಾದ್ಯಂತ 4328 ಕೋಟಿ ರೂ. ಬಂಡವಾಳದೊಂದಿಗೆ ಹೊಸ ದಾಗಿ 10 ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಕೈಗಾರಿಕಾ ವಸಾ ಹತುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕೈಗಾರಿಕೆ ಇಲಾಖೆ ಹಾಗೂ ಕೈಗಾ ರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಏಷಿಯನ್ ಪೇಂಟ್ಸ್ (2,500 ಕೋಟಿ ರೂ.), ಕಾಲ್ಸ್‍ಬರ್ಗ್ (130 ಕೋಟಿ ರೂ.), ಪೆಪ್ಸಿ ಕೋಲಾ (150 ಕೋಟಿ ರೂ.), ಬೇರ್ ಬ್ರೇವರೀಸ್ (100 ಕೋಟಿ), ಕೆನ್ ವುಡ್ (500 ಕೋಟಿ), ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ (200 ಕೋಟಿ), ಪಾರ್ಲೆ ಇಂಡಸ್ಟ್ರೀಸ್ (600 ಕೋಟಿ), ರುಚಾ ಇಂಜಿನಿಯರಿಂಗ್ (137.85 ಕೋಟಿ), ಮಿಂಡಾಸ್ ಸಾಯಿ (16 ಕೋಟಿ) ಹಾಗೂ 96.75 ಕೋಟಿ ರೂ. ಬಂಡವಾಳದಲ್ಲಿ ಮೆಟಲ್ ಮಾನ್ಯ ಆಟೋ ಪ್ರೈ. ಲಿ. ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು. 2013 ರಿಂದ ಈವರೆಗೆ 823 ಕೈಗಾರಿಕಾ ಘಟಕಗಳಿಗೆ ಸರ್ಕಾರ ವಿವಿಧ ಹಂತಗಳಲ್ಲಿ ಅನುಮೋದನೆ ನೀಡಿದ್ದು, ಒಟ್ಟು 27,564 ಉದ್ಯೋಗ ಸೃಷ್ಟಿ ಮಾಡಿದೆ. ಕೋಚನಹಳ್ಳಿ, ಅಡಕನಹಳ್ಳಿ, ತಾಂಡ್ಯ ಹಾಗೂ ಕಲ್ಲಹಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆ ಯುತ್ತಿದೆ ಎಂದು ತಿಳಿಸಿದರು.

ಕೈಗಾರಿಕಾ ನಿವೇಶನಗಳ ಹಂಚಿಕೆಗಾಗಿ ಇಮ್ಮಾವು ಬಳಿ 250 ಎಕರೆ, ಕಲ್ಲಹಳ್ಳಿ ಯಲ್ಲಿ 60 ಎಕರೆ, ತಾಂಡ್ಯ ಬಳಿ 450 ಎಕರೆ ಸೇರಿ ಒಟ್ಟು 760 ಎಕರೆ ಪ್ರದೇಶ ಲಭ್ಯವಿದೆ. ಕೋಚನಹಳ್ಳಿ, ಸಿಂಧುವಳ್ಳಿ ಅಡಕನ ಹಳ್ಳಿ, ತಾಂಡ್ಯ ಹಾಗೂ ಕಲ್ಲಹಳ್ಳಿಯಲ್ಲಿ 913 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿ ಕೊಳ್ಳಲಾಗುತ್ತಿದೆ ಎಂದು ಇದೇ ವೇಳೆ ನುಡಿದರು. ಟ್ರಕ್ ಟರ್ಮಿನಲ್ ಸ್ಥಾಪನೆಗೆ ಕೂರ್ಗಳ್ಳಿ, ಮೇಟಗಳ್ಳಿ ವ್ಯಾಪ್ತಿಯಲ್ಲಿ 10 ಎಕರೆ ಖಾಸಗಿ ಭೂಮಿ ಗುರ್ತಿಸುವಂತೆ ಕೆಐಎಡಿಬಿಗೆ ಸೂಚಿಸಲಾಗಿದೆ. ಹೆಚ್ಚು ಕೈಗಾರಿಕೆಗಳು
ಬರುತ್ತಿರುವುದರಿಂದ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಉಪ ಕೇಂದ್ರದ ಸಾಮಥ್ರ್ಯವನ್ನು 50 ಮೆಗಾವ್ಯಾಟ್‍ಗೆ ಹೆಚ್ಚಿಸಲು 50 ಕೋಟಿ ರೂ. ಮಂಜೂರು ಮಾಡಲಾಗಿದೆ ಹಾಗೂ ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ, ನೀರು, ಚರಂಡಿ ಮುಂತಾದ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ತಿಳಿಸಿದರು.

ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ: ನಮ್ಮ ಸಮ್ಮಿಶ್ರ ಸರ್ಕಾರ ಸುಭದ್ರ ಹಾಗೂ ಸ್ಥಿರವಾಗಿದ್ದು, ಒಳ್ಳೆಯ ಸಿಎಂ ಸಹ ಇದ್ದಾರೆ. ರಾಜ್ಯ ಸರ್ಕಾರ ಸ್ಥಿರವಾಗಿದೆ. ಹಾಗಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿವೆ.

ಈ ಹಿಂದಿನ ಸರ್ಕಾರವಿದ್ದಾಗ ಬೆಂಗಳೂರಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನ ದಲ್ಲಿ ಪಾಲ್ಗೊಂಡಿದ್ದ ಬಹುತೇಕ ಉದ್ಯಮಿಗಳು ಬೆಳಗಾಂ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತೋರಿದ್ದು, ಅವರಿಗೆ ಸರ್ಕಾರ ಅಗತ್ಯ ಮೂಲ ಸೌಕರ್ಯ ಹಾಗೂ ನೆರವು ನೀಡಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದರು. ಕೈಗಾರಿಕೆ ಸ್ಥಾಪಿಸುವ ವಿಷಯದಲ್ಲಿ ಚಾಮರಾಜನಗರವನ್ನು ನಿರ್ಲಕ್ಷಿಸಿಲ್ಲ. ಅಲ್ಲಿಯೂ ನಾವು ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಭೂಸ್ವಾಧೀನ ಪಡಿಸಿಕೊಳ್ಳುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಜಾರ್ಜ್ ಪ್ರತಿಕ್ರಿಯಿಸಿದರು.

ಉದ್ಯಮಿಗಳನ್ನು ಸೆಳೆಯಲು ರಾಜ್ಯ ಸರ್ಕಾರ ನಿರಂತರ ರೋಡ್ ಶೋ ನಡೆಸುತ್ತಿದೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೂ ಕ್ರಮ ವಹಿಸಲಾಗಿದೆ. ಈ ಭಾಗದಲ್ಲಿ ಫುಡ್ ಪಾರ್ಕ್, ಮಹಿಳಾ ಪಾರ್ಕ್‍ಗಳಿಗೆ ಈಗಾಗಲೇ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ, ನವೆಂಬರ್ ತಿಂಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಗಾಗಿ ‘Tech Summit’ ನಡೆಸಲೂ ಚಿಂತನೆ ಮಾಡಿದ್ದೇವೆ ಎಂದ ಜಾರ್ಜ್, ಇವೆಲ್ಲಾ ಮೈಸೂರು ಭಾಗಕ್ಕೆ ಕಳಶವಿಟ್ಟಂತಲ್ಲವೇ ಎಂದು ಪ್ರಶ್ನಿಸಿದರು. ಮೈಸೂರು ನಗರದಲ್ಲೇ ಹೂಡಿಕೆದಾರರ ಸಮ್ಮೇಳನವನ್ನೇಕೆ ಮಾಡಬಾರದು ಎಂಬ ಶಾಸಕ ಹರ್ಷವರ್ಧನ್ ಹಾಗೂ ತನ್ವೀರ್ ಸೇಟ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮೈಸೂರಿನಲ್ಲಿ ಮಾಡಬಾರದೆಂಬುದೇನಿಲ್ಲ, ಆದರೆ ಹೊರಗಡೆಯಿಂದ ಬರುವ ಹೂಡಿಕೆದಾರರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇನ್ನಿತರ ಸೌಲಭ್ಯ ಒದಗಿಸಬೇಕಾಗಿರುವುದರಿಂದ ರಾಜಧಾನಿ ಬೆಂಗಳೂರಲ್ಲಿ ಆಯೋಜಿಸಲಾಗುತ್ತಿತ್ತು. ಮುಂದಿನ ಮೇಳವನ್ನು ಮೈಸೂರಿನಲ್ಲಿ ಏರ್ಪಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು. ಟೆಕ್ಸ್‍ಟೈಲ್ ಪಾರ್ಕ್, ಐಟಿ ಪಾರ್ಕ್, ಫುಡ್‍ಪಾರ್ಕ್, ವಿಮೆನ್ ಪಾರ್ಕ್, ಸ್ಪೆಷಲ್ ಎಕನಾಮಿಕ್ ಜೋನ್ ಮಾಡುವ ಬಗ್ಗೆ ಸರ್ಕಾರ ವಿಶೇಷ ಆಸಕ್ತಿ ತೋರುತ್ತಿದ್ದು, ಸಾವಿರಾರು ಉದ್ಯೋಗ ಸ್ಥಾಪನೆಗೆ ಸಿಎಂಗೆ ವಿಶೇಷ ಆಸಕ್ತಿ ಇದೆ ಎಂದು ಜಾರ್ಜ್ ಅವರು ಇದೇ ಸಂದರ್ಭ ನುಡಿದರು.

Translate »