ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಶ್ರದ್ಧಾಂಜಲಿ
ಮೈಸೂರು

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಶ್ರದ್ಧಾಂಜಲಿ

February 17, 2019

ಮೈಸೂರು: ಮೈಸೂ ರಿನ ವಿವಿಧೆಡೆ ಜಮ್ಮುವಿನ ಪುಲ್ವಾಮಾ ದಲ್ಲಿ ಭಾರತೀಯ ಸೇನೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ರಿಗೆ ಮೇಣದಬತ್ತಿ ಹಚ್ಚಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶನಿವಾರ ಸಂಜೆ ವಿವಿಧ ಸಂಘ-ಸಂಸ್ಥೆ ಗಳು, ಸಂಘಟನೆಗಳು ಮತ್ತು ವ್ಯಾಪಾರಿ ಗಳು ಮಹಾತ್ಮಗಾಂಧಿ ವೃತ್ತ, ಅಶೋಕರಸ್ತೆ, ಕೆ.ಟಿ.ಸ್ಟ್ರೀಟ್, ಕಲಾಮಂದಿರ ಮತ್ತಿತರೆ ಕಡೆ ಗಳಲ್ಲಿ ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್: ಮುಸ್ಲಿಂ ಧರ್ಮಗುರು ಮತ್ತು ಶಾಸಕ ತನ್ವೀರ್‍ಸೇಠ್ ನೇತೃತ್ವದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ ನೂರಾರು ಮಂದಿ ಮೇಣದ ಬತ್ತಿ ಮೆರವಣಿಗೆ ನಡೆಸುವ ಮೂಲಕ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಶೋಕ ರಸ್ತೆಯ ಲ್ಲಿನ ಮಸ್ಜಿದೆ ಅಜಮ್ ಮಸೀದಿಯಿಂದ ಮೇಣದಬತ್ತಿ ಮತ್ತು ಭಾರತದ ಧ್ವಜ ಹಿಡಿದು ಹೊರಟ ಮೆರವಣಿಗೆಯು ಆಶೋಕರಸ್ತೆ ಮೂಲಕ ಮೀನಾಬಜಾರ್ ತಲುಪಿ, ಅದೇ ಮಾರ್ಗದಲ್ಲಿ ವಾಪಸ್ ಸಾಗಿ ಮಸೀದಿ ತಲುಪಿದರು. ಈ ವೇಳೆ ಇಂಡಿಯನ್ ಆರ್ಮಿ ಜಿಂದಾಬಾದ್ ಘೋಷಣೆ ಕೂಗಿದರು.

ಈ ವೇಳೆ ಶಾಸಕ ತನ್ವೀರ್ ಸೇಠ್ ಮಾತ ನಾಡಿ, ದೇಶದ ವಿಷಯದಲ್ಲಿ ನಾನು ಯಾವುದೇ ಪಕ್ಷ, ಜಾತಿ, ಧರ್ಮದ ಪರ ವಾಗಿ ಇರುವುದಿಲ್ಲ. ಭಾರತದ ಪರವಾಗಿ ನಿಲ್ಲುತ್ತೇನೆ. ಈ ರೀತಿಯ ಘೋರ ಘಟನೆ ಯನ್ನು ನಾವೆಂದೂ ನೋಡಿರಲಿಲ್ಲ. ಇಂತಹ ಹೀನ ಕೃತ್ಯಗಳನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಮಟ್ಟದಲ್ಲಿ ಶಾಂತಿ ಕಾಪಾಡು ವಂತಹ ನಿಯಮಗಳನ್ನು ಮೀರಿ ಇಂದು ಪಾಕಿಸ್ತಾನ ಇಂತಹ ಕೃತ್ಯ ಮಾಡಿಸಿದೆ. ಪಾಕಿಸ್ತಾನ ಇಂಥ ಭಯೋತ್ಪಾದಕರಿಗೆ ನೆಲೆ ಮಾಡಿಕೊಡುತ್ತಿರುವುದು ನಿಜಕ್ಕೂ ಖಂಡ ನೀಯ. ಕೇಂದ್ರ ಸರ್ಕಾರ ಈ ಕುರಿತು ಅತ್ಯಂತ ಎಚ್ಚರಿಕೆಯಿಂದ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕರಿಗೆ ಯಾವುದೇ ಜಾತಿ ಇಲ್ಲ. ಅಂತಹವರು ಯಾವುದೇ ಜಾತಿ, ಧರ್ಮಕ್ಕೂ ಸೇರುವು ದಿಲ್ಲ. ಭಯೋತ್ಪಾದನೆಯಲ್ಲಿ ಇರುವವರು ಮನುಷ್ಯರೇ ಅಲ್ಲ ಎಂದು ಕಿಡಿಕಾರಿದರು.

ಮಾನವೀಯತೆ ದೃಷ್ಟಿಯಿಂದ ಪ್ರೀತಿ, ಸಹನೆಯ ಸಂದೇಶ ಸಾರುತ್ತಾರೋ ಅವ ರೊಂದಿಗೆ ನಾವಿರುತ್ತೇವೆ. ಭಯೋತ್ಪಾದನೆ ವಿರುದ್ಧ ಯಾವುದೇ ದಯೇ ಬೇಡ. ಕೇಂದ್ರ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿ ಭಾಗದಲ್ಲಿ ಆಗುತ್ತಿ ರುವ ಫೈರಿಂಗ್, ಬಾಂಬ್ ದಾಳಿ ಎಲ್ಲೋ ಒಂದು ಕಡೆ ಪಾಕಿಸ್ತಾನ ಯುದ್ಧಕ್ಕೆ ಪ್ರಚೋ ದನೆ ನೀಡಿದಂತಿದೆ. ಹಾಗಾಗಿ ಕೇಂದ್ರ ಸರ್ಕಾರದ ಪ್ರತಿಯೊಂದು ನಡೆಗೂ ನಮ್ಮ ಬೆಂಬಲ ಇದೆ ಎಂದರು.

ಮೈಸೂರು ಸರ್ಖಾಜಿ ಮಹಮದ್ ಉಸ್ಮಾನ್ ಶರೀಫ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಅಧ್ಯಕ್ಷ ಹಜರತ್ ಜಕವುಲ್ಲಾ, ಪಾಲಿಕೆ ಮಾಜಿ ಸದಸ್ಯ ಸುಹೇಲ್‍ಬೇಗ್, ಮಹಮದ್ ಖಾನ್, ಟಿಪ್ಪು ಮತ್ತಿತರರು ಭಾಗವಹಿಸಿದ್ದರು. ಮಹಾತ್ಮಗಾಂಧಿ ವೃತ್ತ ದಲ್ಲಿ ಗಾಣಿಗರ ಸಂಘ, ಕೆ.ಟಿ.ಸ್ಟ್ರೀಟ್ ವ್ಯಾಪಾರಿ ಗಳು, ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೈಸೂರು ಘಟಕ ಮತ್ತು ಮೈಸೂರು ಎಲೆಕ್ಟ್ರಾನಿಕ್ ಡೀಲರ್ಸ್ ಅಸೋಸಿ ಯೇಷನ್‍ನ ಸದಸ್ಯರು ಮೇಣದ ಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು. ಹುತಾತ್ಮ ಯೋಧರ ಸಾವಿಗೆ ಪ್ರತೀ ಕಾರ ತೀರಿಸಿಕೊಳ್ಳುವಂತೆ ಕೇಂದ್ರ ಸರ್ಕಾ ರಕ್ಕೆ ಮನವಿ ಮಾಡಿದರು. ಕಲಾಮಂದಿರದ ಆವರಣದಲ್ಲಿ ರಂಗ ಕಲಾವಿದರು ಹಾಗೂ ಶ್ರೀರಾಂಪುರದ ರಿಂಗ್ ರಸ್ತೆಯ ಪರಸಯ್ಯನ ಹುಂಡಿಯ ನಿವಾಸಿಗಳು ಮೇಣದಬತ್ತಿ ಹಚ್ಚಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Translate »