ಮೈಸೂರು: ನಾವು ಯಾವ ಕುಲದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ಸಮಾಜದಲ್ಲಿ ಎಲ್ಲ ಜನರ ಮಧ್ಯೆ ಇದ್ದೇವೆ ಎಂಬುದು ಮುಖ್ಯ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಶಿವಯೋಗಿ ಸಿದ್ದ ರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಮೈಸೂ ರಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಬಳಿಕ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಂಡೆದ್ದ ವಚನ ಕಾರರಲ್ಲಿ ಸಿದ್ದರಾಮೇಶ್ವರರು ಮೊದಲಿ ಗರು. ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಸಂದೇಶ ಸಾರಿದವರು. ಕಾಯಕವೇ ಕೈಲಾಸ ಎಂಬಂತೆ ಅವರು ಸಮಾಜಕ್ಕೆ ಅರ್ಪಿಸಿಕೊಂಡಿದ್ದರು. ಇಂದು ಯುವಕರು ಸಿದ್ದರಾಮೇಶ್ವರ ಮಾರ್ಗವನ್ನು ಅನುಸರಿಸಿ, ಸಮಾನತೆಯ ಸಮಾಜ ನಿರ್ಮಿಸಬೇಕು. ಭೋವಿ ಸಮುದಾಯದ ಮಕ್ಕಳನ್ನು ಉತ್ತಮ ಶಿಕ್ಷಣ ನೀಡಿ, ಸದ್ಭಾವನೆ ತುಂಬಿ ಉತ್ತಮ ನಾಯಕರನ್ನಾಗಿ ಬೆಳೆಸುವುದು ಅಗತ್ಯ ಎಂದರು.
ಚಿತ್ರದುರ್ಗ-ಬಾಗಲಕೋಟೆ ಸಿದ್ಧರಾಮೇ ಶ್ವರ ಭೋವಿ ಗುರುಪೀಠದ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ಮೊರಬದ ಮಲ್ಲಿ ಕಾರ್ಜುನ, ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಡಿ.ಸಿದ್ಧರಾಮಯ್ಯ, ಅಧ್ಯಕ್ಷ ನಾಗರಾಜು, ಭೋವಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾ ರಾಮು, ಸಮಾಜದ ಮುಖಂಡರಾದ ಬಸವ ರಾಜು, ವಿ.ರಮೇಶ್, ಲಕ್ಷ್ಮಮ್ಮ, ಡಾ.ಹನುಮಂತಪ್ಪ, ಮಾಜಿ ಮೇಯರ್ ಭಾಗ್ಯವತಿ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.