ವಿದ್ಯುತ್ ದರ ಪರಿಷ್ಕರಣೆಗೆ ಕೈಗಾರಿಕೋದ್ಯಮಿಗಳು, ಗ್ರಾಹಕರ ತೀವ್ರ ವಿರೋಧ
ಮೈಸೂರು

ವಿದ್ಯುತ್ ದರ ಪರಿಷ್ಕರಣೆಗೆ ಕೈಗಾರಿಕೋದ್ಯಮಿಗಳು, ಗ್ರಾಹಕರ ತೀವ್ರ ವಿರೋಧ

February 6, 2019

ಮೈಸೂರು: ಎಲ್ಲಾ ಜಕಾತಿಗಳ ವಿದ್ಯುತ್ ದರ ಪರಿಷ್ಕರಿಸಬೇ ಕೆಂಬ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ (ಚೆಸ್ಕಾಂ)ದ ಪ್ರಸ್ತಾವನೆಗೆ ಕೈಗಾರಿಕೋದ್ಯಮಿಗಳೂ ಸೇರಿದಂತೆ ಗ್ರಾಹಕರು ತೀವ್ರವಾಗಿ ವಿರೋಧಿಸಿದ್ದಾರೆ.

ಈ ಸಂಬಂಧ ಮೈಸೂರಿನ ಜಿಲ್ಲಾಧಿ ಕಾರಿ ಕಚೇರಿ ನ್ಯಾಯಾಲಯ ಸಭಾಂಗಣ ದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು ನಡೆಸಿದ 2019-20ನೇ ಸಾಲಿನ ವಿದ್ಯುತ್ ಪರಿಷ್ಕರಣೆ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದರು.

ಆರಂಭದಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್. ಗೋಪಾಲ ಕೃಷ್ಣ ಅವರು ಕಂಪನಿಯ ಕಾರ್ಯವೈಖರಿ ಬಗ್ಗೆ ಸುದೀರ್ಘ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಆಯೋಗದ ಅಧ್ಯಕ್ಷರಿಗೆ ನೀಡಿದರು.

ಆರ್ಥಿಕ ವರ್ಷ 2020ರ ಕಂದಾಯ ಕೊರತೆ 407.71 ಕೋಟಿ ರೂ. ಮತ್ತು ರೆಗ್ಯುಲೇಟರಿ ಆಸ್ತಿ 224.79 ಕೋಟಿ ರೂ. ಸೇರಿ ಒಟ್ಟು 632.50 ಕೋಟಿ ರೂ.ಗಳ ಪೈಕಿ 2017-18ರ ನಿವ್ವಳ ಲಾಭ 1.76 ಕೋಟಿ ರೂ.ಗಳನ್ನು ಕಳೆದರೆ ಒಟ್ಟು 630.74 ಕೋಟಿ ರೂ. ಗಳ ಕೊರತೆ ಉಂಟಾ ಗಿದ್ದು, ಆ ನಷ್ಟ ಭರಿಸಲು ಎಲ್ಲಾ ಜಕಾತಿ ಗಳನ್ನೊಳಗೊಂಡಂತೆ ಪ್ರತೀ ಸರಾಸರಿ ಯೂನಿಟ್‍ಗೆ 99.56 ಪೈಸೆ ಹೆಚ್ಚಿಸಬೇ ಕೆಂದು ಗೋಪಾಲಕೃಷ್ಣ ಮನವಿ ಮಾಡಿದರು.

ಚೆಸ್ಕಾಂನ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು, ಈಗಾಗಲೇ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿರುವುದ ರಿಂದ ವಿದ್ಯುತ್ ದರ ಹೆಚ್ಚಿಸಿದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅಲ್ಲದೆ ಉತ್ಪಾದನಾ ವೆಚ್ಚ ಜಾಸ್ತಿಯಾಗಿ ತೊಂದರೆಯಾಗುತ್ತದೆ ಎಂದರು.

ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಡಿ.ದೇವರಾಜ ಅರಸು ಅವರು 1970ರ ದಶಕದಲ್ಲಿ 6500 ಎಕರೆ ಪ್ರದೇಶ ದಲ್ಲಿ ಕೈಗಾರಿಕೆಗಳನ್ನು ಆರಂಭಿಸಿ ಮೈಸೂ ರಲ್ಲಿ ಕ್ರಾಂತಿ ಮಾಡಿದರು. ನಂತರ ಸಿದ್ದ ರಾಮಯ್ಯ ಅವರು 300 ಎಕರೆಯಲ್ಲಿ ನಂಜನಗೂಡು ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಿದರು ಎಂದು ತಿಳಿಸಿದರು.

ಜಿಎಸ್‍ಟಿ, ಬರ ಪರಿಸ್ಥಿತಿ, ನೋಟು ಅಮಾನ್ಯೀಕರಣದಂತಹ ಕ್ಲಿಷ್ಟ ಪರಿಸ್ಥಿತಿ ಯಿಂದಾಗಿ ಸಣ್ಣ ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿವೆ. ಚೆಸ್ಕಾಂ ವ್ಯಾಪ್ತಿಯಲ್ಲಿ 70 ಸಾವಿರ ಕೈಗಾರಿಕೆಗಳಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿವೆ. ಚೆಸ್ಕಾಂ ವ್ಯಾಪ್ತಿಯ ಐದು ಜಿಲ್ಲೆಗಳ ಕೈಗಾರಿಕೆಗಳಿಗೆ ಸರ್ಕಾರ 500 ಕೋಟಿ ರೂ. ಸಬ್ಸಿಡಿ ನೀಡಿರು ವಾಗ ವಿದ್ಯುತ್ ಕಂಪನಿ ನಮ್ಮಿಂದ 536 ಕೋಟಿ ರೂ.ಗಳ ಕ್ರಾಸ್ ಸಬ್ಸಿಡಿ ಪಡೆಯುತ್ತಿ ರುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ರುವಂತೆ ವಿದ್ಯುತ್ ದರ ಕಡಿತಗೊಳಿ ಸಬೇಕು. ಐಪಿ ಸೆಟ್‍ಗಳು, ಮೀಟರ್ ಅಳವಡಿಸದಿರುವುದು. ವಿದ್ಯುತ್ ಕಳ್ಳತನ, ಸೋರಿಕೆಗಳನ್ನು ತಡೆಗಟ್ಟಿ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಂದ ಬಾಕಿ 1300 ಕೋಟಿ ರೂ. ವಸೂಲು ಮಾಡುವ ಮೂಲಕ ಕಂಪನಿಯು ನಷ್ಟ ಭರಿಸಬೇಕೇ ಹೊರತು, ಅದನ್ನು ಗ್ರಾಹಕರ ಮೇಲೇರುವುದು ಸರಿ ಯಲ್ಲ ಎಂದೂ ಸುರೇಶ್ ಕುಮಾರ್ ಜೈನ್ ತಿಳಿಸಿದರು.

ಕೊಡಗಿನ ಕಾಫಿ ಬೆಳೆಗಾರರ ಸಂಘದ ಚೆಂಗಪ್ಪ ಮತ್ತು ಪೊನ್ನಪ್ಪ ಅವರು, ಈ ವರ್ಷ ಸಂಭವಿಸಿದ ಪ್ರಕೃತಿ ವಿಕೋಪ ದಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವುದರಿಂದ ತಮ್ಮಿಂದ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಿಕೊಡಬೇಕು ಎಂದರಲ್ಲದೆ, ತಮಗೆ ವಿದ್ಯುತ್ ದರದಲ್ಲಿ ವಿಶೇಷ ರಿಯಾಯಿತಿ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೂ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.

ಜೆಎಸ್‍ಎಸ್ ಸಂಸ್ಥೆಗಳ ಪ್ರತಿನಿಧಿಯಾಗಿ ಹಾಜರಿದ್ದ ಎಂ.ಪಿ. ನಾಗರಾಜ್ ಅವರು, ಸಂಸ್ಥೆಯಿಂದ ಆಸ್ಪತ್ರೆ, ಉಚಿತ ವಸತಿ ಶಾಲೆ, ಚಾರಿಟಿ ಕಾರ್ಯ ನಡೆಯುತ್ತಿರುವು ದರಿಂದ ಸೇವಾ ವಲಯ ಎಂದು ಪರಿ ಗಣಿಸಿ ವಿದ್ಯುತ್ ದರ ಕಡಿಮೆ ಮಾಡ ಬೇಕೆಂದು ಮನವಿ ಮಾಡಿದರು.

ಸುಮಾರು 100ಕ್ಕೂ ಹೆಚ್ಚು ಮಂದಿ ಗ್ರಾಹಕರು ವಿಚಾರಣೆಗೆ ಹಾಜರಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಿಸಬಾರದೆಂದು ಆಗ್ರಹಿಸಿದರು. ಆಯೋಗದ ಸದಸ್ಯರಾದ ಹೆಚ್.ಡಿ. ಅರುಣ್ ಕುಮಾರ್, ಹೆಚ್.ಎಂ. ಮಂಜು ನಾಥ್, ಕಾರ್ಯದರ್ಶಿ ಪಾಂಡುರಂಗ ಜಿ. ನಾಯಕ್, ಸಹಾಯಕ ಕಾರ್ಯದರ್ಶಿ ಜಿ. ಕಲ್ಪನಾ, ಉಪನಿರ್ದೇಶಕ ಹೆಚ್.ಎಂ. ಉಮಾ ಅವರು ಭಾಗವಹಿಸಿದ್ದರು.

ಚೆಸ್ಕಾಂ ನಿರ್ದೇಶಕ (ತಾಂತ್ರಿಕ) ನರಸಿಂಹೇ ಗೌಡ, ಮುಖ್ಯ ಹಣಕಾಸು ಅಧಿಕಾರಿ ಶಿವಣ್ಣ, ಮುಖ್ಯ ಇಂಜಿನಿಯರ್ ಅಫ್ತಬ್ ಅಹಮದ್, ಪ್ರಧಾನ ವ್ಯವಸ್ಥಾಪಕರಾದ ರಾಜಪ್ಪ (ವಾಣಿಜ್ಯ), ಪ್ರಕಾಶ್ (ತಾಂತ್ರಿಕ), ಸೂಪರಿಂಟೆಂಡಿಂಗ್ ಇಂಜಿನಿಯರ್ ಮುನಿಗೋಪಾಲರಾಜು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »